Category: ಬ್ರೇಕಿಂಗ್ ನ್ಯೂಸ್
-

ಜಯಮಹಲ್ ಹೋಟೆಲ್‌ನಲ್ಲಿ ಪಿಸ್ತೂಲ್ ಮ್ಯಾಗಜೀನ್ ಪತ್ತೆ; ತನಿಖೆ ತೀವ್ರ
ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಅಮೆರಿಕ ನಿರ್ಮಿತ ಜೀವಂತ ಗುಂಡುಗಳಿದ್ದ ಪಿಸ್ತೂಲ್ ಮ್ಯಾಗಜೀನ್ ಪತ್ತೆಯಾಗಿದ್ದು, ಈ ಸಂಬಂಧ ಜೆ.ಸಿ. ನಗರ ಪೊಲೀಸರು ಆರೋಪಿ ಅರ್ಮಾನ್ ಮುತಾಹರ್ ಎಂಬಾತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ಯುವತಿಯೊಬ್ಬಳೊಂದಿಗೆ ಲಾಡ್ಜ್ಗೆ ಬಂದಿದ್ದ ಆರೋಪಿ, ಪಿಸ್ತೂಲ್ ಮ್ಯಾಗಜೀನ್ ಅನ್ನು ರೂಮ್ನಲ್ಲಿಯೇ ಬಿಟ್ಟು ಹೋಗಿದ್ದ. ಅದನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಪದೇ ಪದೇ ಕೇಳಿದರೂ ಸರಿಯಾಗಿ ಸ್ಪಂದಿಸದ ಕಾರಣ ಹೋಟೆಲ್ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಡೆದಿದ್ದೇನು? ಕಳೆದ ಏಪ್ರಿಲ್ 27ರಂದು ರಾತ್ರಿ…
-

ಮಂಗಳೂರು: ಬಾವಿಯಲ್ಲಿ ನೀರಲ್ಲ, ಡೀಸೆಲ್ ..!! ನಿವಾಸಿಗಳು ಕಂಗಾಲು
ಮಂಗಳೂರು: ಈ ಭಾಗದಲ್ಲಿ ಇರೋದು ಬಾವಿಗಳಾ ಅಥವಾ ಡೀಸೆಲ್ ಗುಂಡಿಗಳಾ ಅನ್ನೋ ಅನುಮಾನ ಈಗ ಶುರುವಾಗಿದೆ. ಯಾಕಂದ್ರೆ ಬಾವಿಯಿಂದ ನೀರು ಸೇದಿದರೆ ನೀರಿನ ಬದಲು ಡೀಸೆಲ್ ವಾಸನೆ ಮೂಗಿಗೆ ಅಪ್ಪಳಿಸುತ್ತದೆ. ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಕುಳಿತಿದ್ದಾರೆ. ಇಂತಹ ಸಮಸ್ಯೆ ಎದುರಾಗಿರೋದು ಎಲ್ಲಿ ಅಂತಿರಾ ಇಲ್ಲಿದೆ ಈ ಬಗ್ಗೆ ವರದಿ. ಇದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಬಲಿಪಗುರಿ ರಸ್ತೆಯ ನಿವಾಸಿಗಳಿಗೆ ಈಗ ಕುಡಿಯುವ ನೀರಿನದ್ದೇ ದೊಡ್ಡ ಚಿಂತೆಯಾಗಿದೆ. ಕಳೆದ ನವೆಂಬರ್…
-

ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಜೂಜಾಟದಲ್ಲಿ ತೊಡಗಿದ್ದ 17 ಮಂದಿ ಸೆರೆ
ಬೆಳ್ತಂಗಡಿ : ಕರಿಮಣೇಲು ಗ್ರಾಮದ ಬೋಳಾರಗುತ್ತು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಉಳಾಯಿ -ಪಿದಾಯಿ ಜೂಜಾಟ ಆಡುತ್ತಿದ್ದ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ.17 ರಂದು ರಾತ್ರಿ 7:30 ಕ್ಕೆ ದಾಳಿ ಮಾಡಿದ್ದಾರೆ. ಜೂಜಾಟ ಆಡುತ್ತಿದ್ದ ಪಡಂಗಡಿಯ ಅಶೋಕ್(37) ,ಪಡಂಗಡಿಯ ವಿತೇಶ್(33), ವೇಣೂರು ಕರಿಮಣೇಲಿನ ರಾಜೇಶ್(35), ವೇಣೂರು ಕತ್ತೋಡಿಬೈಲಿನ ರಮೇಶ್(40) , ಕುಕ್ಕೇಡಿ ಬರ್ನತ್ಯಾರಿನ ರಾಜೇಶ್(42), ಕಾರ್ಕಳ ಮುಗಿರಡ್ಡಸ ಪ್ರಮೀತ್(35), ನಾರಾವಿ ಅರಸಿಕಟ್ಟೆಯ ಕರುಣಾಕರ(38),…
-

ಮಂಗಳೂರು ಕುಂಟಿಕಾನ ಲಿಫ್ಟ್ ದುರಂತ: ಅನಧಿಕೃತ ಕಟ್ಟಡಕ್ಕೆ ಯಾರು ಹೊಣೆ? ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರ ಅಸಮಾಧಾನ
ಮಂಗಳೂರು: ನಗರದ ಕುಂಟಿಕಾನ ಬಳಿಯ ಆನ್‌ಲೈನ್ ಡೆಲಿವರಿ ಸಂಸ್ಥೆಯೊಂದರ ಸನ್ ರಾಯಲ್ ರೆಸಿಡೆನ್ಸಿ ಕಟ್ಟಡದಲ್ಲಿ ಲಿಫ್ಟ್‌ನಲ್ಲಿ ಸಿಲುಕಿ ನೌಫಲ್ ಎಂಬಾತ ಸಾವನ್ನಪ್ಪಿದ ದುರ್ಘಟನೆ ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಘಟನೆ ಬಳಿಕ ಕಟ್ಟಡದ ಸುರಕ್ಷತೆ, ಲಿಫ್ಟ್‌ನ ಮಾನದಂಡಗಳು ಹಾಗೂ ಮಹಾನಗರ ಪಾಲಿಕೆಯ ಮೇಲ್ವಿಚಾರಣೆ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಹಿತಿಯ ಪ್ರಕಾರ, ವಾಣಿಜ್ಯ ಕಟ್ಟಡದ ಹೊರಭಾಗದಲ್ಲಿ ಅನಧಿಕೃತ ಜಾಕ್( Hoist), ಅಂದರೆ ಕಬ್ಬಿಣದ ಸಪೋರ್ಟ್‌ಗಳು ಮತ್ತು ಲೋಹದ ಶೀಟ್‌ಗಳನ್ನು ಬಳಸಿ ಕಟ್ಟಡದ ಕಾಮಗಾರಿ ವೇಳೆ ಕಲ್ಲು,…
-

ಕ್ರಿಕೆಟ್ ಪಂದ್ಯದ ಜಗಳ ಕೊಲೆಯಲ್ಲಿ ಅಂತ್ಯ: ಬ್ಯಾಂಕ್ ಕಾವಲುಗಾರ ಹತ್ಯೆ ಪ್ರಕರಣದಲ್ಲಿ ಇಬ್ಬರ ಬಂಧನ
ಕಾಸರಗೋಡು: ಬದಿಯಡ್ಕ ಸಮೀಪದ ಮಾರ್ಪನಡ್ಕದಲ್ಲಿ ನಡೆದ ಬ್ಯಾಂಕ್ ಕಾವಲುಗಾರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಂಬ್ಡಾಜೆಯ ಕಿರಣ್ (30) ಮತ್ತು ಕರುವತ್ತಡ್ಕದ ಅಖಿಲೇಶ್ (25) ಎಂದು ಗುರುತಿಸಲಾಗಿದೆ.ಮಾರ್ಪನಡ್ಕ ಬೆದ್ರಕೂಡ್ಲುವಿನ ನಿವಾಸಿಯಾಗಿದ್ದ ಸುರೇಶ್ (42) ಅವರು ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಬ್ಯಾಂಕ್ ಆವರಣದಲ್ಲೇ ನಡೆದ ಕ್ರಿಕೆಟ್ ಪಂದ್ಯಾಟದ ವಿಚಾರಕ್ಕೆ ಸಂಬಂಧಿಸಿದ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು ಹಲ್ಲೆಗೆ ತಿರುಗಿದೆ ಎನ್ನಲಾಗಿದೆ. ಘಟನೆಯ…
-

ಬೆಟ್ಟದ ನೆಲ್ಲಿಕಾಯಿ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗು ಸಾವು
ಕೋಲಾರ: ಆಟವಾಡುವಾಗ ಆಕಸ್ಮಿಕವಾಗಿ ಬೆಟ್ಟದ ನೆಲ್ಲಿಕಾಯಿಯನ್ನು ನುಂಗಿದ ಎರಡು ವರ್ಷದ ಮಗು, ಅದು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಮಾಲೂರು ಪಟ್ಟಣದ ಗಾಂಧಿ ಸರ್ಕಲ್ ಬಳಿ ಸೋಮವಾರ ನಡೆದಿದೆ. ಮಗು ವಿಜಯೇಂದ್ರ ಮನೆಯಲ್ಲಿ ಎಂದಿನಂತೆ ಆಟವಾಡುತ್ತಿದ್ದಾಗ ಅಲ್ಲಿದ್ದ ಬೆಟ್ಟದ ನೆಲ್ಲಿಕಾಯಿಯನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಈ ವೇಳೆ ನೆಲ್ಲಿಕಾಯಿ ಆಕಸ್ಮಿಕವಾಗಿ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಗಾಬರಿಗೊಂಡ ಪೋಷಕರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲೇ…
-

ಅಪ್ರಾಪ್ತರಿಂದ ಬೈಕ್ ಚಾಲನೆ: ವಾಹನ ಮಾಲೀಕರಿಗೆ ತಲಾ ₹25 ಸಾವಿರ ದಂಡ
ಬಂಟ್ವಾಳ:ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ 2 ಪ್ರತ್ಯೇಕ ಪ್ರಕರಣದಲ್ಲಿ ವಾಹನಗಳ ಮಾಲೀಕರಿಗೆ ತಲಾ ರೂ 25,000 ದಂಡವನ್ನು ವಿಧಿಸಿ ನ್ಯಾಯಾಲಯವು ಆದೇಶಿಸಿದೆ. ಏಪ್ರಿಲ್ 06 2026 ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್ ನಲ್ಲಿ KA-19-HT-9694 ನೇ ನೊಂದಣಿಯ ದ್ವಿಚಕ್ರ ವಾಹನವನ್ನು ಹಾಗೂ ಏಪ್ರಿಲ್ 28. 2026 ರಂದು ಬಿಸಿ ರೋಡ್ ನಲ್ಲಿ ಬಳಿ, KA05KG6785 ನೇ ನೊಂದಣಿಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕರು ಚಾಲನೆ ಮಾಡಿರುವುದು ಬಂಟ್ವಾಳ ಸಂಚಾರ ಠಾಣಾ…
-

ಉದ್ಯಮಿಗೆ ಕೊಲೆ ಬೆದರಿಕೆ ಹಾಕಿ 10 ಲಕ್ಷ ರೂ. ಬೇಡಿಕೆ: ಮಹಿಳೆ ವಿರುದ್ಧ ದೂರು ದಾಖಲು
ಬೆಂಗಳೂರು: ಮಹಿಳೆಯೊಬ್ಬಳು ತಾನು ಸಂಘಟನೆಯೊಂದರ ಪ್ರಮುಖ ನಾಯಕಿ ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕಚೇರಿಗೆ ನುಗ್ಗಿ, ಜೀವ ಬೆದರಿಕೆ ಹಾಕಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಗೀತ ರಾಮ್ ಎಂಬ ಮಹಿಳೆ ಹಾಗೂ ಆಕೆಯೊಂದಿಗೆ ಬಂದಿದ್ದ ಇಬ್ಬರು ಪುರುಷರು ಸೇರಿ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ ಈ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿರುವ ವೆಂಕಟರಾಜು ಅವರ ಕಚೇರಿಗೆ ನುಗ್ಗಿದ…
-

ನದಿ ಮತ್ತು ಕಾಲುವೆಗೆ ಎಸೆದ ಕುಟುಂಬದ ನಾಲ್ವರ ದೇಹ ಭಾಗಗಳು: ಕೈಮೂರ್ ಭೀಕರ ಕೊಲೆ ಪ್ರಕರಣ
ಪಾಟ್ನಾ: ಹಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಿರಿಯ ಸಹೋದರನೇ ತನ್ನ ಅಣ್ಣ, ಅತ್ತಿಗೆ ಹಾಗೂ ಅವರ ಇಬ್ಬರು ಮುಗ್ಧ ಮಕ್ಕಳನ್ನು ಉಸಿರುಗಟ್ಟಿಸಿ, ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಸಾಕ್ಷ್ಯ ನಾಶಪಡಿಸಲು ನಾಲ್ವರ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್ ಹಾಗೂ ಚೀಲಗಳಲ್ಲಿ ತುಂಬಿ ವಿವಿಧ ನದಿ, ಕಾಲುವೆಗಳಿಗೆ ಎಸೆದಿದ್ದಾನೆ. ರಹಸ್ಯ ಬಯಲಾಗಿದ್ದು ಹೇಗೆ? ಮೇ…
-

ಅಪ್ರಾಪ್ತ ಬಾಲಕಿಯರ ನಾಪತ್ತೆ ಪ್ರಕರಣಗಳು ಹೆಚ್ಚಳ: 19 ಕೇಸ್ ದಾಖಲು
ರಾಯಚೂರು: ಹದಿಹರೆಯದ ಮಕ್ಕಳಿದ್ದಾಗ ಪೋಷಕರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಸರಿ ತಪ್ಪುಗಳ ಅರಿವಿಲ್ಲದ ಬಾಲಕ-ಬಾಲಕಿಯರು ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರು ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕಿ ನಾಪತ್ತೆಯಾಗುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ. ಈಗಾಗಲೇ 19 ಕೇಸ್ಗಳು ದಾಖಲಾಗಿದ್ದು, ಪಾಲಕರು ಕಂಗಾಲಾಗಿದ್ದಾರೆ. ಈ ಬಗ್ಗೆ ಅರಿವು ಮೂಡಿಸಲು ಪೊಲೀಸ್ ಇಲಾಖೆ ಹಲವು ಪ್ರಯತ್ನಗಳನ್ನು ಕೈಗೊಂಡಿದ್ದು, ಪೋಷಕರು ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದ್ದಾರೆ. ಪರೀಕ್ಷೆ ಮುಗಿದ ಬೆನ್ನಲ್ಲೇ ಎಸ್ಕೇಪ್! ಜಿಲ್ಲೆಯಲ್ಲಿ ಪ್ರತಿ ವರ್ಷ ಎಸ್ಎಸ್ಎಲ್…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed









