Category: ಬ್ರೇಕಿಂಗ್ ನ್ಯೂಸ್

  • ಮಂಗಳೂರು ಕೃತಕ ನೆರೆ ಸಮಸ್ಯೆ: ರಾಜಕಾಲುವೆ ಮುಚ್ಚಿದ ಭೂ ಮಾಫಿಯಾ ವಿರುದ್ಧ ಜನರ ಆಕ್ರೋಶ

    ಮಂಗಳೂರು ಕೃತಕ ನೆರೆ ಸಮಸ್ಯೆ: ರಾಜಕಾಲುವೆ ಮುಚ್ಚಿದ ಭೂ ಮಾಫಿಯಾ ವಿರುದ್ಧ ಜನರ ಆಕ್ರೋಶ

    ಮಂಗಳೂರು: ಮಂಗಳೂರು ರಾಜಕಾಲುವೆ ಅಂದಾಜು ಪಂಪವೆಲ್‌ನಿಂದ ಹಿಡಿದು ಬಂದರಿನ ನದಿವರೆಗೆ ಅಡ್ಡಿಯಾಗಿ ಬಿಲ್ಡರ್ಸ್‌ಗಳು ಬಿಲ್ಡಿಂಗ್‌ಗಳನ್ನು ಕಟ್ಟಿ ಮಳೆ ನೀರು ಹರಿದು ಹೋಗದಂತಾಗಿ ಕೃತಕ ನೆರೆ ಸೃಷ್ಟಿಯಾಗುವಂತಾಗಿದೆ. ಹಾಗಾಗಿ ಪಾಂಡೇಶ್ವರ್, ಶಿವನಗರ, ಜಪ್ಪು, ನೆಹರು ಮೈದಾನ, ಪಂಪವೆಲ್, ಕಂಕನಾಡಿ, ಹಂಪನಿಕಟ್ಟೆ, ಕೆ ಎಸ್ ರಾವ್ ರೋಡ್ ಇಲ್ಲಿಯೆಲ್ಲಾ ಕೃತಕ ನೆರೆ ಸೃಷ್ಟಿಯಾಗಲು ಕಾರಣ ರಾಜಕಾಲುವೆಗೆ ಅಡ್ಡಿಯಾಗಿರುವ ಅತೀ ಎತ್ತರದ ಬಿಲ್ಡಿಂಗ್‌ಗಳು ಎನ್ನುವ ಗಂಭೀರ ಆರೋಪಗಳು ವರದಿಯಾಗಿದೆ. ರಾಜಕಾಲುವೆಯ ಸ್ವಾಭಾವಿಕ ನೀರಿನ ಹರಿವಿಗೆ ಅಡ್ಡಿಯಾಗಿರುವ ಕಟ್ಟಡಗಳು ಹಾಗೂ ಅನಧಿಕೃತ ನಿರ್ಮಾಣಗಳಿಂದ…

    Continue Reading

  • ಬೆಳ್ತಂಗಡಿ :ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯ ದಾರುಣ ಅಂತ್ಯ
    ,

    ಬೆಳ್ತಂಗಡಿ :ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯ ದಾರುಣ ಅಂತ್ಯ

    ಬೆಳ್ತಂಗಡಿ: ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆಯೊಬ್ಬರು ದುರ್ಮರಣ ಹೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಕನ್ನಡಿಕಟ್ಟೆ ಬಳಿ ನಡೆದಿದೆ. ಬಳಂಜದ ಪ್ರಸಿದ್ದ ಅನಿಲ್ ಪಾರ್ಮ್ ನ ಅನಿಲ್ ಭಟ್ ಅವರ ಪತ್ನಿ ಶೈಲಜಾ (30) ಅಪಘಾತದಲ್ಲಿ ಸಾವೀಗೀಡಾದ ಮಹಿಳೆ.ಅನಿಲ್ ಭಟ್ ಮತ್ತು ಅವರ ಪತ್ನಿ ಶೈಲಜಾ ಅವರು ತಮ್ಮ ಪಾರ್ಮ್ ನ ಕೆಲಸ ಮುಗಿಸಿ ಅವರ ಸೈಟ್ ಗೆ ಬೈಕ್ ನಲ್ಲಿ ತೆರಳುದಿದ್ದಾಗ ಕನ್ನಡಿಕಟ್ಟೆ ಬಳಿ ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಸ್ಥಳಕ್ಕೆ ಪೋಲಿಸರು…

    Continue Reading

  • 50 ಕೋಟಿ ಅವ್ಯವಹಾರ ಆರೋಪ: ನೀಲಣ್ಣವರ್ ಕೇಸ್ ತನಿಖೆ ಸಿಐಡಿ ವಶಕ್ಕೆ
    ,

    50 ಕೋಟಿ ಅವ್ಯವಹಾರ ಆರೋಪ: ನೀಲಣ್ಣವರ್ ಕೇಸ್ ತನಿಖೆ ಸಿಐಡಿ ವಶಕ್ಕೆ

    ಬೆಳಗಾವಿ: ಸಾವಿರಾರು ಕೋಟಿ ಒಡೆಯ ಅಂತೆಲ್ಲಾ ಬಿಲ್ಡಪ್ ಕೊಡುತ್ತಿದ್ದ ಶಿವಾನಂದ ನೀಲಣ್ಣ ಅರೆಸ್ಟ್ ಆಗಿದ್ದಾನೆ. 4,500 ಕೋಟಿ ರೂ ವಂಚನೆ ಆರೋಪದಡಿ ಬೆಳಗಾವಿ ಪೊಲೀಸರು ಶಿವಾನಂದನನ್ನ ಲಾಕ್ ಮಾಡಿದ್ದಾರೆ. ಸದ್ಯ ಪೊಲೀಸರು 5 ದಿನ ಕಸ್ಟಡಿಗೆ ಪಡೆದು ತನಿಖೆ ನಡೆಸಿದ್ದಾರೆ. ಇನ್ನು ಶಿವಾನಂದ ನೀಲಣ್ಣವರ್ ಬಳಸುತ್ತಿದ್ದ ನಾಲ್ಕು ಬ್ಯಾಂಕ್​​ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಒಂದೊಂದು ಅಕೌಂಟ್​ನಲ್ಲಿ ನೂರಾರು ಕೋಟಿ ರೂ ಪತ್ತೆಯಾಗಿದೆ. ನೂರಾರು ಕೋಟಿ ರೂ ಅಕೌಂಟ್​ನಲ್ಲಿ ಇದ್ದರೂ ಇ.ಡಿ ಮತ್ತು ಐಟಿ ಗಮನಕ್ಕೆ ತರಬೇಕಿದ್ದ ಬ್ಯಾಂಕ್ ಅಧಿಕಾರಿಗಳು…

    Continue Reading

  • ಟೀ ಅಂಗಡಿ ಜಗಳದಲ್ಲಿ ರಕ್ತಪಾತ: 40 ವರ್ಷದ ವ್ಯಕ್ತಿಯ ಹತ್ಯೆ
    ,

    ಟೀ ಅಂಗಡಿ ಜಗಳದಲ್ಲಿ ರಕ್ತಪಾತ: 40 ವರ್ಷದ ವ್ಯಕ್ತಿಯ ಹತ್ಯೆ

    ಬೆಂಗಳೂರು: ಸಮಾಜದಲ್ಲಿ ಹಳೆಯ ದ್ವೇಷಕ್ಕೆ, ರೋಷಕ್ಕೆ ಕೊಲೆ ನಡೆದ ಉದಾಹರಣೆಗಳಿವೆ. ಹೆಣ್ಣಿಗಾಗಿ, ಹಣಕ್ಕಾಗಿಯೂ ಕೊಲೆ, ಸುಲಿಗೆಗಳು ನಡೆಯುತ್ತವೆ. ಆದರೆ ಕೇವಲ 200 ರೂ. ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ ಪ್ರಕರಣ ಇದೇ ಮೊದಲಿರಬಹುದು. ಹೌದು, ಟೀ ಅಂಗಡಿ ಮಾಲೀಕ ಬಾಕಿ ಇರುವ ಹಣ ನೀಡುವಂತೆ ಕೇಳಿದ ಕಾರಣಕ್ಕೇ ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್​ನಲ್ಲಿ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಇನ್ನು ಮುಂದೆ ಸಾಲ ಕೊಡುವುದಿಲ್ಲ ಎಂದಿದ್ದ ಮಾಲೀಕ ದ್ಯಾವಸಂದ್ರ ಗ್ರಾಮದ ಮಂಜುನಾಥ (40) ಕೊಲೆಯಾದ ದುರ್ದೈವಿ. ಮೇ 12…

    Continue Reading

  • ಮಂಗಳೂರು: ಲಿಫ್ಟ್‌ನಲ್ಲಿ ಸಿಲುಕಿ 28 ವರ್ಷದ ಯುವಕನ ಸಾವು
    ,

    ಮಂಗಳೂರು: ಲಿಫ್ಟ್‌ನಲ್ಲಿ ಸಿಲುಕಿ 28 ವರ್ಷದ ಯುವಕನ ಸಾವು

    ಮಂಗಳೂರು:  ಲಿಫ್ಟ್ ನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟ ಮಂಗಳೂರಿನಲ್ಲಿ ಶನಿವಾರ ನಡೆದಿದೆ. ನಗರದ ಕುಂಟಿಕಾನ ಬಳಿಯ ಆನ್‌ಲೈನ್ ಡೆಲಿವರಿ ಸಂಸ್ಥೆಯೊಂದರ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ (28) ಎಂದು ಗುರುತಿಸಲಾಗಿದೆ.  ಶನಿವಾರ ಸಂಜೆ ನೌಫಾಲ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಲಿಫ್ಟ್‌ನಲ್ಲಿ ಅವಘಡ ಸಂಭವಿಸಿದೆ. ಲಿಪ್ಟ್ ಗೆ ಸಾಮಾಗ್ರಿಗಳನ್ನು ತುಂಬಿ ಕೆಳಕ್ಕೆ ತೆರಳುವ ವೇಳೆ ಲಿಪ್ಟ್ ಏಕಾಏಕಿ ಮಧ್ಯೆ ನಿಂತಿದೆ. ಈ ವೇಳೆ ಸಹದ್ಯೋಗಿಗಳನ್ನು…

    Continue Reading

  • ಮೊಬೈಲ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ಕಳೆದುಕೊಂಡ ವ್ಯಕ್ತಿ
    , ,

    ಮೊಬೈಲ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ಕಳೆದುಕೊಂಡ ವ್ಯಕ್ತಿ

    ಮಂಗಳೂರು: ಯಾರೋ ಅಪರಿಚಿತ ವಂಚಕರು ಮೊಬೈಲ್‌ಗೆ ಲಿಂಕ್ ಇರುವ ಎಸ್‌ಎಂಎಸ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಮೂಲಕ ವ್ಯಕ್ತಿಯೊಬ್ಬರ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ₹6,91,534 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಕಾವೂರು ಮತ್ತು ಕುಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತರು ಯೂನಿಯನ್ ಬ್ಯಾಂಕ್‌ನ ಕಾವೂರು ಶಾಖೆಗೆ ತೆರಳಿ ಖಾತೆಯ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ, ಮೇ 3 ರಂದು ಯುಪಿಐ (UPI) ಮೂಲಕ ಅವರ ಖಾತೆಯಿಂದ ಪೇಮೆಂಟ್ಸ್ ಬ್ಯಾಂಕ್‌ನ ಖಾತೆಯೊಂದಕ್ಕೆ ಹಂತ ಹಂತವಾಗಿ…

    Continue Reading

  • ಬ್ಯಾಗ್ ಆರ್ಡರ್ ಮಾಡಲು ಹೋಗಿ ಸೈಬರ್ ಖದೀಮರ ಬಲೆಗೆ ಬಿದ್ದ ಮಹಿಳೆ
    , ,

    ಬ್ಯಾಗ್ ಆರ್ಡರ್ ಮಾಡಲು ಹೋಗಿ ಸೈಬರ್ ಖದೀಮರ ಬಲೆಗೆ ಬಿದ್ದ ಮಹಿಳೆ

    ಉಡುಪಿ: ಇನ್‌ಸ್ಟಾಗ್ರಾಮ್‌ ಜಾಹೀರಾತು ನಂಬಿ ಹ್ಯಾಂಡ್ ಬ್ಯಾಗ್ ಆರ್ಡರ್ ಮಾಡಲು ಹೋದ ಮಹಿಳೆಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಹಂತ ಹಂತವಾಗಿ ಬರೋಬ್ಬರಿ ₹9,00,442 ಕಳೆದುಕೊಂಡಿರುವ ದಾರುಣ ಘಟನೆ ಸಂತೆಕಟ್ಟೆ ಸಮೀಪ ನಡೆದಿದೆ. ಸಂತೆಕಟ್ಟೆಯ ಶಾಂತಿವನ ನಿವಾಸಿ ವಂಚನೆಗೊಳಗಾದ ಮಹಿಳೆ. ಇವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ bagvogue.co__ ಎಂಬ ಐಡಿಯಿಂದ ಬಂದಿದ್ದ ಹ್ಯಾಂಡ್ ಬ್ಯಾಗ್ ಮಾರಾಟದ ಜಾಹೀರಾತನ್ನು ನೋಡಿ, ಬ್ಯಾಗ್ ಖರೀದಿಸಲು ಮೆಸೇಜ್ ಮಾಡಿದ್ದರು. ವಂಚಕರು ಬ್ಯಾಗ್ ಬೆಲೆ ₹899 ಮತ್ತು ಡೆಲಿವರಿ ಚಾರ್ಜ್ ₹1950 ಸೇರಿ…

    Continue Reading

  • ಶ್ರೀಮಂತ ಯುವಕರನ್ನು ಗುರಿಯಾಗಿಸಿದ್ದ ಗ್ಯಾಂಗ್‌ ಪೊಲೀಸರ ಬಲೆಗೆ
    ,

    ಶ್ರೀಮಂತ ಯುವಕರನ್ನು ಗುರಿಯಾಗಿಸಿದ್ದ ಗ್ಯಾಂಗ್‌ ಪೊಲೀಸರ ಬಲೆಗೆ

    ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ದಾವಣಗೆರೆಯಲ್ಲಿ ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸಿ ಹಣ, ಒಡವೆ ಸುಲಿಗೆ ಮಾಡುತ್ತಿದ್ದ ಐದು ಮಂದಿ ಕಿಲಾಡಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಹಣ ಹಾಗೂ ಕೌಟುಂಬಿಕ ದ್ವೇಷದ ಹಿನ್ನೆಲೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹನಿಟ್ರ್ಯಾಪ್ ಪ್ರಕರಣದ ವಿವರ ಪಂಚಮಿ (34), ಜಗದೀಶ (35), ಗಂಗಾ ಮಲ್ಲೇಶ್ ನಾಯ್ಕ (25) ಹಾಗೂ ವೆಂಕಟೇಶ್ (30) ಎಂಬವರೇ ಹನಿಟ್ರ್ಯಾಪ್ ಕೇಸ್​ನಲ್ಲಿ…

    Continue Reading

  • ಮಚ್ಚಿನಿಂದ ಕೊಚ್ಚಿ ಮಾಜಿ ಪಂಚಾಯತ್ ಸದಸ್ಯನ ಕೊಲೆ
    ,

    ಮಚ್ಚಿನಿಂದ ಕೊಚ್ಚಿ ಮಾಜಿ ಪಂಚಾಯತ್ ಸದಸ್ಯನ ಕೊಲೆ

    ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ತಡರಾತ್ರಿ ಭೀಕರ ಕೊಲೆಯೊಂದು ಸಂಭವಿಸಿದೆ. ಹಳೆ ದ್ವೇಷ ಅಥವಾ ಯುವತಿಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಗ್ರಾಮ ಪಂಚಾಯತಿ ಸದಸ್ಯನನ್ನು ತಂದೆ ಮತ್ತು ಮಗ ಸೇರಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಚನ್ನಗಿರಿ ತಾಲೂಕಿನ ನಲ್ಲೂರು ಕ್ಯಾಂಪ್ ನಿವಾಸಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಆತಾಉಲ್ಲಾ (43) ಕೊಲೆಯಾದ ದುರ್ದೈವಿ. ಬುಧವಾರ ತಡರಾತ್ರಿ ಆತಾಉಲ್ಲಾ ಅವರು ಸ್ಥಳೀಯ ಬೇಕರಿಯೊಂದರ ಬಳಿ ನಿಂತಿದ್ದಾಗ, ಹಿಂಬದಿಯಿಂದ ಬಂದ ಆರೋಪಿಗಳು ಏಕಾಏಕಿ ಮಚ್ಚಿನಿಂದ ದಾಳಿ ನಡೆಸಿದ್ದಾರೆ. ಮೈಮೇಲೆ…

    Continue Reading

  • 2016ರ ಮಾನಭಂಗ ಯತ್ನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸೆರೆ
    ,

    2016ರ ಮಾನಭಂಗ ಯತ್ನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸೆರೆ

    ಉಡುಪಿ: ಕಳೆದ ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಹಾಗೂ ವಾರಂಟ್ ಆರೋಪಿಯನ್ನು ಕಾಪು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಭಿಜಿತ್ (34) ಎಂದು ಗುರುತಿಸಲಾಗಿದ್ದು, ಈತನನ್ನು ಪುಂಜಾಲಕಟ್ಟೆಯಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ.ಆರೋಪಿಯು 2016ರಲ್ಲಿ ಮಲ್ಲಾರು ಪಕೀರಣಕಟ್ಟೆಯ ಬಳಿ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ್ದ. ಈ ಪ್ರಕರಣದ ವಿಚಾರಣೆ ಹಂತದಲ್ಲಿರುವಾಗ ಆತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಕಳೆದ ಆರು ವರ್ಷಗಳಿಂದ ಕಾಪು ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು.ಸದ್ಯ ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 25ರವರೆಗೆ…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed