ಮಂಗಳೂರು ಕೃತಕ ನೆರೆ ಸಮಸ್ಯೆ: ರಾಜಕಾಲುವೆ ಮುಚ್ಚಿದ ಭೂ ಮಾಫಿಯಾ ವಿರುದ್ಧ ಜನರ ಆಕ್ರೋಶ

ಮಂಗಳೂರು: ಮಂಗಳೂರು ರಾಜಕಾಲುವೆ ಅಂದಾಜು ಪಂಪವೆಲ್‌ನಿಂದ ಹಿಡಿದು ಬಂದರಿನ ನದಿವರೆಗೆ ಅಡ್ಡಿಯಾಗಿ ಬಿಲ್ಡರ್ಸ್‌ಗಳು ಬಿಲ್ಡಿಂಗ್‌ಗಳನ್ನು ಕಟ್ಟಿ ಮಳೆ ನೀರು ಹರಿದು ಹೋಗದಂತಾಗಿ ಕೃತಕ ನೆರೆ ಸೃಷ್ಟಿಯಾಗುವಂತಾಗಿದೆ. ಹಾಗಾಗಿ ಪಾಂಡೇಶ್ವರ್, ಶಿವನಗರ, ಜಪ್ಪು, ನೆಹರು ಮೈದಾನ, ಪಂಪವೆಲ್, ಕಂಕನಾಡಿ, ಹಂಪನಿಕಟ್ಟೆ, ಕೆ ಎಸ್ ರಾವ್ ರೋಡ್ ಇಲ್ಲಿಯೆಲ್ಲಾ ಕೃತಕ ನೆರೆ ಸೃಷ್ಟಿಯಾಗಲು ಕಾರಣ ರಾಜಕಾಲುವೆಗೆ ಅಡ್ಡಿಯಾಗಿರುವ ಅತೀ ಎತ್ತರದ ಬಿಲ್ಡಿಂಗ್‌ಗಳು ಎನ್ನುವ ಗಂಭೀರ ಆರೋಪಗಳು ವರದಿಯಾಗಿದೆ. ರಾಜಕಾಲುವೆಯ ಸ್ವಾಭಾವಿಕ ನೀರಿನ ಹರಿವಿಗೆ ಅಡ್ಡಿಯಾಗಿರುವ ಕಟ್ಟಡಗಳು ಹಾಗೂ ಅನಧಿಕೃತ ನಿರ್ಮಾಣಗಳಿಂದ…

ಮಂಗಳೂರು: ಮಂಗಳೂರು ರಾಜಕಾಲುವೆ ಅಂದಾಜು ಪಂಪವೆಲ್‌ನಿಂದ ಹಿಡಿದು ಬಂದರಿನ ನದಿವರೆಗೆ ಅಡ್ಡಿಯಾಗಿ ಬಿಲ್ಡರ್ಸ್‌ಗಳು ಬಿಲ್ಡಿಂಗ್‌ಗಳನ್ನು ಕಟ್ಟಿ ಮಳೆ ನೀರು ಹರಿದು ಹೋಗದಂತಾಗಿ ಕೃತಕ ನೆರೆ ಸೃಷ್ಟಿಯಾಗುವಂತಾಗಿದೆ. ಹಾಗಾಗಿ ಪಾಂಡೇಶ್ವರ್, ಶಿವನಗರ, ಜಪ್ಪು, ನೆಹರು ಮೈದಾನ, ಪಂಪವೆಲ್, ಕಂಕನಾಡಿ, ಹಂಪನಿಕಟ್ಟೆ, ಕೆ ಎಸ್ ರಾವ್ ರೋಡ್ ಇಲ್ಲಿಯೆಲ್ಲಾ ಕೃತಕ ನೆರೆ ಸೃಷ್ಟಿಯಾಗಲು ಕಾರಣ ರಾಜಕಾಲುವೆಗೆ ಅಡ್ಡಿಯಾಗಿರುವ ಅತೀ ಎತ್ತರದ ಬಿಲ್ಡಿಂಗ್‌ಗಳು ಎನ್ನುವ ಗಂಭೀರ ಆರೋಪಗಳು ವರದಿಯಾಗಿದೆ.

ರಾಜಕಾಲುವೆಯ ಸ್ವಾಭಾವಿಕ ನೀರಿನ ಹರಿವಿಗೆ ಅಡ್ಡಿಯಾಗಿರುವ ಕಟ್ಟಡಗಳು ಹಾಗೂ ಅನಧಿಕೃತ ನಿರ್ಮಾಣಗಳಿಂದ ಮಂಗಳೂರು ನಗರದ ಹಲವು ಪ್ರದೇಶಗಳು ಮಳೆ ಬಂದಾಗ ನೀರಿನಲ್ಲಿ ಮುಳುಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ರಾಜಕಾಲುವೆ ತೆರೆಯಲು ದಾರಿಮಾಡಿಕೊಟ್ಟು, ಅಡ್ಡಿಯಾಗಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ಒತ್ತಾಯ ಜನರಿಂದ ಕೇಳಿಬರುತ್ತಿದೆ.

ಇದೇ ವೇಳೆ, “ಈ ಅನಧಿಕೃತ ಕಟ್ಟಡಗಳಿಂದ ಎಲ್ಲಾ ಮಂಗಳೂರು ತುಂಬೆಲ್ಲ ಕೃತಕ ನೆರೆಯ ನೀರು ತುಂಬುವಂತಾಗಿದೆ. ಈ ರಾಜಕಾಲುವೆ ತೆರೆದು ಕೊಡಲು, ಈ ಭೂ ಮಾಫಿಯಾ ಮಹಾನಗರ ಪಾಲಿಕೆ ಲಂಚದ ಹಣಕ್ಕೆ ಮೌನವಾಗಿರುವ ವಿಚಾರವನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಗಮನಿಸಬೇಕಾಗಿದೆ” ಎಂದು ಸಾರ್ವಜನಿಕರ ಆಗ್ರಹವಾಗಿದೆ.

ರಾಜಕಾಲುವೆ ಮೇಲೆಯೇ ಎತ್ತರದ ಕಟ್ಟಡಗಳು ನಿರ್ಮಾಣವಾಗುವಾಗ ಮಹಾನಗರ ಪಾಲಿಕೆ ಏನು ಮಾಡುತ್ತಿತ್ತು?

ಮಳೆ ನೀರಿನ ಹರಿವಿನ ಮೂಲ ನಕ್ಷೆ ಪರಿಶೀಲನೆ ಇಲ್ಲದೇ ಅನುಮತಿ ನೀಡಲಾಗಿದೆಯೇ?

ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣ ಯಾರು?

ಮಂಗಳೂರು ನಗರದ ಕೃತಕ ನೆರೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ಪರಿಹಾರ ಬೇಕು. ರಾಜಕಾಲುವೆಗಳ ಮೂಲ ಸ್ವರೂಪವನ್ನು ಪುನಃ ಸ್ಥಾಪಿಸಿ, ಅಡ್ಡಿಯಾಗಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ, ಭೂ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed