Category: ಬ್ರೇಕಿಂಗ್ ನ್ಯೂಸ್
-

SSLC ವಿದ್ಯಾರ್ಥಿಯ ಬರ್ಬರ ಹತ್ಯೆ ಕೇಸ್ : ಐವರು ಅಪ್ರಾಪ್ತರು ಅರೆಸ್ಟ್!
ಜಗಳ ಬಿಡಿಸಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಒಬ್ಬನನ್ನು ನಾಲ್ವರು ಆತನ ಮೇಲೆ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಸೂಳೆಬೈಲು ಬಡಾವಣೆಯಲ್ಲಿ ನಡೆದಿದೆ. ಈ ಒಂದು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಅಪರಾಪ್ತರನ್ನು ಅರೆಸ್ಟ್ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ (16) ಕೊಲೆಯಾಗಿದ್ದಾನೆ. ಸೂಳೆಬೈಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಂಕೇತ್ ಸೋಮವಾರ ಸ್ಪೆಷಲ್ ಕ್ಲಾಸ್ ಮುಗಿಸಿ ಹೊರಬಂದಾಗ ಇತರ ಕೆಲ ವಿದ್ಯಾರ್ಥಿಗಳ ನಡುವೆ ಜಗಳವಾಗುತ್ತಿತ್ತು. ಅವರ ಜಗಳವನ್ನು ಬಿಡಿಸಲು ಹೋದಾಗ ಸಂಕೇತ್ ಮೇಲೆ ನಾಲ್ವರು…
-

ಉಡುಪಿ: ಸನ್ಯಾಸಿ ವೇಷ ಧರಿಸಿ ನಕಲಿ ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದಾತನ ಬಂಧನ
ಉಡುಪಿ: ಸನ್ಯಾಸಿ ವೇಷ ಧರಿಸಿಕೊಂಡು ನಕಲಿ ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ವಂಚಕನೋರ್ವನನ್ನು ಉಡುಪಿ ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ನೆರವಾಗಿದ್ದರು. ವಂಚಕ ನಕಲಿ ಹುಲಿ ಉಗುರನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಸಾರ್ವಜನಿಕರು ನಾಗರಿಕ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು, ಆತ ಪರಾರಿಯಾಗಲು ಯತ್ನಿಸಿದಾಗ ನಗರ ಪೋಲಿಸ್ ಠಾಣೆಯ ಪೋಲಿಸರು ನಗರದ ಹಳೆ ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆದು…
-

ಅಕ್ರಮ ಕಾರ್ಖಾನೆ ಮೇಲೆ ದಾಳಿ ನಡೆಸಿದ ಪೊಲೀಸರು -ನಕಲಿ ಔಷಧ, ಮಾದಕ ವಸ್ತು ವಶ
ಹೊಸದಿಲ್ಲಿ: ಪಾಟ್ನಾದ ಸಮೀಪ ನಕಲಿ ಔಷಧಗಳು, ಮಾದಕ ದ್ರವ್ಯವನ್ನು ಉತ್ಪಾದಿಸುವ ಹಾಗೂ ಮರು ಪ್ಯಾಕ್ ಮಾಡುವ ಅಕ್ರಮ ಕಾರ್ಖಾನೆಯ ಮೇಲೆ ದಿಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.ಕ್ರೈಮ್ ಬ್ರಾಂಚ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಿಹಾರದಲ್ಲಿ ಇದೇ ರೀತಿಯ ಎರಡು ಅಕ್ರಮ ಔಷಧ ಘಟಕಗಳು ಪತ್ತೆಯಾದ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಈ ಹಿಂದೆ ಬಂಧಿತರಾದವರು ನೀಡಿದ ಮಾಹಿತಿಯ ಆಧಾರದಲ್ಲಿ ಈ…
-

ಮಂಗಳೂರು: ನಗರದ ಜನವಸತಿ ಪ್ರದೇಶದಲ್ಲಿ ಚಿರತೆ ಓಡಾಟ- ಸ್ಥಳೀಯರ ಆತಂಕ
ಮಂಗಳೂರು: ನಗರದ ಮರೋಳಿ ಮತ್ತು ಶಕ್ತಿನಗರ ಪರಿಸರದಲ್ಲಿ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಭಾನುವಾರ ಬೆಳಗ್ಗೆಯೂ ಚಿರತೆ ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಫೆಬ್ರವರಿ 17ರಿಂದ ಶಕ್ತಿನಗರ, ಮರೋಳಿ ಮತ್ತು ಹತ್ತಿರದ ರೈಲ್ವೆ ಹಳಿ ಬಳಿ ಪ್ರತಿದಿನ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಶಕ್ತಿನಗರದ ಮನೆಯೊಂದರ ಕಾಂಪೌಂಡ್ ಒಳಗೆ ಚಿರತೆಯು ಗೇಟ್ ಮೂಲಕ ಪ್ರವೇಶಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಸತಿ ಪ್ರದೇಶದಲ್ಲಿ ಚಿರತೆ ಇರುವುದು ಖಚಿತವಾಗಿದೆ. ಮುಂಜಾನೆ ಕುಲಶೇಖರ…
-

ಚಿನ್ನಾಭರಣ ಕಳವು ಆರೋಪ, ಅಪಮಾನ ತಾಳಲಾರದೆ ಯುವತಿ ಆತ್ಮಹತ್ಯೆ – ತಾನು ನಿರಪರಾಧಿ ಎಂದು ವಿಡಿಯೋ ಮಾಡಿದ ಬಳಿಕ ವಿಷ ಸೇವಿಸಿದ್ದ ಜಸೀಲಾ
ಕಾಸರಗೋಡು: ಚಿನ್ನಾಭರಣ ಕಳವು ಮಾಡಿದ ಆರೋಪದ ಮೇಲೆ ನೆರೆಹೊರೆಯವರು ಹಾಗೂ ಪೊಲೀಸರಿಂದ ಮಾನಸಿಕ ಕಿರುಕುಳ ಅನುಭವಿಸಿದ ಯುವತಿಯೊಬ್ಬಳು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಆದೂರು ಸಮೀಪದ ನೆಲ್ತಡ್ಕದಲ್ಲಿ ನಡೆದಿದೆ.ಮೃತ ಯುವತಿಯನ್ನು ನೆಲ್ತಡ್ಕ ನಿವಾಸಿ ಜಸೀಲಾ (24 ವರ್ಷ) ಎಂದು ಗುರುತಿಸಲಾಗಿದೆ. ಇವರು ಇಬ್ಬರು ಮಕ್ಕಳ ತಾಯಿಯಾಗಿದ್ದರು. ಪತಿ ಮನೆಯ ಸಮೀಪದ ಯುವಕ ಹಾಗೂ ಆತನ ಕುಟುಂಬಸ್ಥರು ಜಸೀಲಾ ವಿರುದ್ಧ ಚಿನ್ನಾಭರಣ ಕಳವು ಮಾಡಿರುವ ಆರೋಪ ಹೊರಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ…
-

ಮಂಗಳೂರು ದಕ್ಕೆಯಲ್ಲಿ ಲೈಟ್ ಕಂಬ ಮೈಮೇಲೆ ಬಿದ್ದು ಕಾರ್ಮಿಕ ಮೃತ್ಯು- ಧಕ್ಕೆಯ ಅವ್ಯವಸ್ಥೆ ಬಗ್ಗೆ ಕಾರ್ಮಿಕರ ಆಕ್ರೋಶ
ಮಂಗಳೂರು: ಲೈಟ್ ಕಂಬವೊಂದು ಮುರಿದು ಮೈಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಗರದ ದಕ್ಕೆಯಲ್ಲಿ ನಿನ್ನೆ ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೃತರನ್ನು ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಮಿಳ್ನಾಡು ಮೂಲದ ಮುರುಗನ್ (35) ಎಂದು ಗುರುತಿಸಲಾಗಿದೆ. ಧಕ್ಕೆಯ ಅವ್ಯವಸ್ಥೆ ಬಗ್ಗೆ ಕಾರ್ಮಿಕರ ಆಕ್ರೋಶ: ಧಕ್ಕೆಯ ಅವ್ಯವಸ್ಥೆ ಅಲ್ಲಿನ ಸ್ಥಿತಿಗತಿ ಮತ್ತೆ ಎದ್ದು ತೋರಿಸುತ್ತಾ ಇದೆ. ದಕ್ಕೆಗೆ ಪ್ರವೇಶಿಸಿವ ದ್ವಿಚಕ್ರ ವಾಹನದಿಂದ ಹಿಡಿದು ದೊಡ್ಡ ದೊಡ್ಡ ಮೀನಿನ ಲಾರಿಗಳಿಂದ ಪ್ರವೇಶ ಶುಲ್ಕ ಪಡೆಯುವಾಗ ದಕ್ಕೆಯಲ್ಲಿರುವ ಹಲವಾರು ಸಮಸ್ಯೆ ಗಳಿಗೆ…
-

ಅನಧಿಕೃತ ರಕ್ತ ಪರೀಕ್ಷೆ ಕೇಂದ್ರಕ್ಕೆ ಆರೋಗ್ಯ ಇಲಾಖೆಯಿಂದ ಬೀಗ..!!
ವಿಟ್ಲ: ಅನಧಿಕೃತ ರಕ್ತ ಪರೀಕ್ಷೆ ಕೇಂದ್ರದ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಲ್ಯಾಬ್‌ಗೆ ಬೀಗ ಜಡಿದಿದ್ದಾರೆ. ಶರತ್ ಶೆಟ್ಟಿ ಎಂಬವರು ವಿಟ್ಲದಲ್ಲಿರುವ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಇಲ್ಲಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು, ಲ್ಯಾಬ್‍ನಲ್ಲಿ ಬಂದಿರುವ ವರದಿಯಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಬೇರೆಡೆ ರಕ್ತ ಪರೀಕ್ಷೆ ಮಾಡಿಸಿಕೊಂಡಿರುತ್ತಾರೆ. ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಸಂಸ್ಥೆಯವರು ಸಹಿ ಮಾಡದೆ ವರದಿ ನೀಡಿದ್ದು, ಆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ…
-

ಉಡುಪಿ: ಆಸ್ತಿ ತೆರಿಗೆ ಹಣ ದುರ್ಬಳಕೆ ಮಾಡಿ ಸರ್ಕಾರಕ್ಕೆ ವಂಚನೆ ಪ್ರಕರಣ – ಇಬ್ಬರ ಬಂಧನ
ಉಡುಪಿ: ಆಸ್ತಿ ತೆರಿಗೆ ಹಣ ದುರ್ಬಳಕೆ ಮಾಡಿ ಸರ್ಕಾರಕ್ಕೆ ವಂಚನೆ ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 16/02/2026 ರಂದು ಆನಂದ ಸುವರ್ಣ ಅವರು ಉಡುಪಿ ನಗರಸಭೆಗೆ ತೆರಳಿ, ಕಲ್ಮಾಡಿಯಲ್ಲಿರುವ ಕಟ್ಟಡ ನಂ. 17-5ಕ್ಕೆ ಸಂಬಂಧಿಸಿದಂತೆ 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ರೂ.34,730ನ್ನು ಕಚೇರಿಯ ಹೊರಗಡೆ ಕೆಲಸ ಮಾಡುತ್ತಿದ್ದ ಶಾಲಿನಿ ಅವರಿಗೆ ನೀಡಿದ್ದರು. ಸಂಬಂಧಿಸಿದಂತೆ ಶಾಲಿನಿ ಅವರು 16/10/2025 ದಿನಾಂಕದ ಸ್ವೀಕೃತಿಯನ್ನು ನೀಡಿದ್ದರು. ಆದರೆ ನಗರಸಭೆ ವೆಬ್‌ಸೈಟ್‌ನಲ್ಲಿ ಆಸ್ತಿ ತೆರಿಗೆ ಪಾವತಿ…
-

ಏ.1ರಿಂದ ಟೋಲ್ ಗೇಟ್ಗಳಲ್ಲಿ ನಗದು ಪಾವತಿಯಿಲ್ಲ: FASTag, ಯುಪಿಐ ಮೂಲಕವೇ ಪಾವತಿ
ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಝಾಗಳಲ್ಲಿ ಏ.1ರಿಂದ ನಗದು ಪಾವತಿಗೆ ಅವಕಾಶವಿಲ್ಲ. ವಾಹನ ಚಾಲಕರು ಕಡ್ಡಾಯವಾಗಿ ಮೊತ್ತವನ್ನು ಡಿಜಿಟಲ್ ವಿಧಾನವಾದ ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಪಾವತಿಸಬೇಕಾಗುತ್ತದೆ. ದೇಶಾದ್ಯಂತ ನೂತನ ವ್ಯವಸ್ಥೆ ಹೊಸ ಹಣಕಾಸು ವರ್ಷದ ಆರಂಭದ ದಿನ ಜಾರಿಗೆ ಬರಲಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ನಿಯಮಗಳ ಪ್ರಕಾರ, FASTag ಇಲ್ಲದೆ ಟೋಲ್ ಪ್ರವೇಶಿಸುವವರು ನಗದು ನೀಡಿದರೆ ದುಪ್ಪಟ್ಟು ಹಣ ನೀಡಬೇಕು. ಆದರೆ ಹೊಸ ನಿಯಮದಂತೆ ನಗದು ಪಾವತಿಗೆ ಅವಕಾಶವಿರುವುದಿಲ್ಲ, ಅಂತಹವರು…
-

5 ಲಕ್ಷ ಕಮೀಷನ್ ಪಡೆಯುವಾಗಲೇ ಬಿಜೆಪಿ ಶಾಸಕ, ಇಬ್ಬರು ಪಿಎ ಲೋಕಾಯುಕ್ತ ಬಲೆಗೆ
ರಾಜ್ಯದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಗುತ್ತಿಗೆದಾರರೊಬ್ಬರಿಂದ 5 ಲಕ್ಷ ಲಂಚ ಪಡೆಯುತ್ತಿದ್ದಾಗಲೇ ಬಿಜೆಪಿ ಶಾಸಕ ಹಾಗೂ ಅವರ ಇಬ್ಬರು ಪಿಎಗಳು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿಯ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ರಸ್ತೆ ತಡೆಗೋಡೆ ನಿರ್ಮಿಸಿದ್ದಂತ ಕಾಮಗಾರಿ ಬಿಲ್ ನಲ್ಲಿ ಕಮೀಷನ್ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕ್ಲಾಸ್-1 ಗುತ್ತಿಗೆದಾರ ವಿಜಯ್ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು 1 ಲಕ್ಷ ಕಮೀಷನ್ ಅನ್ನು…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











