Category: ಬ್ರೇಕಿಂಗ್ ನ್ಯೂಸ್
-

ವಿಟ್ಲ: ಲೈಸನ್ಸ್ ಇಲ್ಲದೆ ಕೇರಳದಿಂದ ಕೆಂಪು ಕಲ್ಲುಗಳ ಸಾಗಾಟ- ಚಾಲಕರ ಸಮೇತ ಲಾರಿಗಳು ಪೊಲೀಸರ ವಶಕ್ಕೆ
ವಿಟ್ಲ: ಲೈಸನ್ಸ್ ಇಲ್ಲದೆ ಕೇರಳದಿಂದ ಕೆಂಪು ಕಲ್ಲುಗಳ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೆರುವಾಯಿ ಮಾರ್ಗವಾಗಿ ಕೇರಳದಿಂದ ಲಾರಿಗಳ ಮೂಲಕ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಬಂಟ್ವಾಳ ಬೆರಿಪದವು ಪ್ರದೇಶದಲ್ಲಿ ಕಲ್ಲಿನ ಲೋಡ್ ತುಂಬಿದ್ದ ಲಾರಿಗಳನ್ನು ಪರಿಶೀಲನೆ ನಡೆಸಿ, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕರಾದ ವಿಟ್ಲದ ಸಾಧಿಕ್ ಮತ್ತು ಮೊಹಮ್ಮದ್ ಅವರನ್ನು ವಿಚಾರಣೆ ನಡೆಸಲಾಗಿದ್ದು, ಕೇರಳದ ಧರ್ಮತ್ತಡ್ಕದಿಂದ ಕಲ್ಲುಗಳನ್ನು ತುಂಬಿ ವೇಣು ಎಂಬವರು…
-

ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ತಂಗ್ಲಿ ಗ್ರಾಮ ಪಂಚಾಯತ್‌ನ ಪಿಡಿಓ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ನಂಜುಂಡಮ್ಮ ಎಂದು ತಿಳಿದು ಬಂದಿದೆ. ಸರಸ್ವತಿಪುರದ ತಿಮ್ಮಶೆಟ್ಟಿ ಎಂಬವರಿಂದ ಸೈಟ್‌ಗೆ ದೃಢೀಕರಣ ಪತ್ರ ನೀಡಲು ಲಂಚದ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಗ್ರಾಮ ಪಂಚಾಯತ್ ಕಚೇರಿಯಲ್ಲೇ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಹಿಡಿದಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಯನ್ನು ವಶಕ್ಕೆ…
-

ಮಂಗಳೂರು: ಮುಂಬೈ ಸಿಸಿಬಿ ಪೊಲೀಸ್ ಎಂದು ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ 41 ಲಕ್ಷ ವಸೂಲಿ
ಮಂಗಳೂರು : ಮುಂಬೈ ಸಿಸಿಬಿ ಪೊಲೀಸ್ ಎಂದು ಹೇಳಿ ವ್ಯಕ್ತಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 41 ಲಕ್ಷಹಣವನ್ನು ವಸೂಲಿ ಮಾಡಿದ ಘಟನೆ ನಡೆದಿದ್ದು, ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ ಸಂತ್ರಸ್ತ ವ್ಯಕ್ತಿಗೆ ದಿನಾಂಕ 31-01-2026 ರಂದು ಯಾರೋ ಅಪರಿಚಿತ ವ್ಯಕ್ತಿ ದೆಹಲಿಯಿಂದ 8796142545 ಈ ನಂಬರ್ ನಿಂದ ಕರೆ ಮಾಡಿ ಮುಂಬೈ ಸಿಸಿಬಿ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದಾರೆ. ವೇಳೆ ವ್ಯಕ್ತಿಗೆ ನಿಮ್ಮ ಗುರುತಿನ ಚೀಟಿ ಬಳಸಿಕೊಂಡು ಮುಂಬೈನಲ್ಲಿ ಕೆನರಾ ಬ್ಯಾಂಕ್ ನಲ್ಲಿ…
-

ಮಂಗಳೂರು : ರೈಲ್ವೇ ಟ್ರ್ಯಾಕ್ ನಲ್ಲಿ ಕುಳಿತ್ತಿದ್ದ ವಿಧ್ಯಾರ್ಥಿಗಳ ವಿಡಿಯೋ ತೆಗೆದು ನೈತಿಕ ಪೋಲಿಸ್ ಗಿರಿ- ಇಬ್ಬರ ಬಂಧನ
ಮಂಗಳೂರು : ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಮಂಗಳೂರು ನಗರ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರ ರೈಲು ನಿಲ್ದಾಣದಲ್ಲಿ ಫೆ.24 ರಂದು ಕೇಂದ್ರ ರೈಲ್ವೆ ನಿಲ್ದಾಣದ ರೈಲ್ವೆ ಟ್ರ್ಯಾಕ್ ನಲ್ಲಿ ಮಂಗಳೂರು ನಗರದ ಕಾಸ್ಸಿಯಾ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ರೈಲ್ವೆ ಟ್ರ್ಯಾಕ್ ನಲ್ಲಿ ಕುಳಿತು ಕೊಂಡು ಇದ್ದು, ಕುಳಿತಿದ್ದನ್ನು ವಿಚಾರಿಸಿ ಅಲ್ಲಿಗೆ ಇಬ್ಬರು ಸ್ಟೀಫನ್ ಮೊಂತೆರೋ (56 ವರ್ಷ) ಮತ್ತು ಆತನ ಮಗ…
-

ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ ಪೂರ್ಣಗೊಂಡರು ಚುನಾವಣೆ ನಡೆಯುವ ಯಾವುದೇ ಲಕ್ಷಣ ಇಲ್ಲ..!!
ಮಂಗಳೂರು : ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಪೂರ್ಣಗೊಂಡು ಫೆ. 27ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಸದ್ಯಕ್ಕೆ ಚುನಾವಣೆ ನಡೆಯುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಕೆಲವು ವಾರಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಮಾರ್ಚ್ ತಿಂಗಳಲ್ಲಿ ಸ್ಥಳೀಯ ಚುನಾವಣೆಯ ಪ್ರಸ್ತಾವ ಮಾಡಿದ್ದರು. ಆದರೆ ಪೂರಕ ತಯಾರಿ ಇನ್ನೂ ಆರಂಭಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ. ಇನ್ನೇನು ಚುನಾವಣೆ ದಿನಾಂಕ ನಿಗದಿ ಆಗಬೇಕು. ವಾರ್ಡ್ ಮೀಸಲಾತಿ ಪ್ರಕಟಗೊಳ್ಳಬೇಕು. ಬಳಿಕ ನಾಮಪತ್ರ…
-

ಮಂಗಳೂರು: ನಂದಿಗುಡ್ಡೆ ವೃತ್ತದ ಬಳಿ ಇರುವ ನಂದಿ ಹಿಲ್ಸ್ ಬಹುಮಹಡಿ ಕಟ್ಟಡದ ಕರ್ಮಕಾಂಡ..!!
ಮಂಗಳೂರು: ನಂದಿಗುಡ್ಡೆ ವೃತ್ತದ ಬಳಿ ಇರುವ ನಂದಿ ಹಿಲ್ಸ್ ಬಹುಮಹಡಿ ಕಟ್ಟಡವು ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ. ಪಾಲಿಕೆಯಿಂದ ಯಾವುದೇ ಪ್ರವೇಶ ಪತ್ರ ಇಲ್ಲದೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಅರೋಗ್ಯ ಇಲಾಖೆ ಅಧಿಕಾರಿಗಳು ಅ ಕಟ್ಟಡದ ವ್ಯಾಪಾರ ಮಾಡುವ ಪ್ರತಿ ಶಾಪ್ ಗಳಿಗೆ ದಾಳಿ ನಡೆಸಿ 50 ಸಾವಿರ ದಂಡ ವಿಧಿಸಿದ್ದಾರೆ. ಪಾಲಿಕೆಯಿಂದ ಕಟ್ಟಡಕ್ಕೆ ಪ್ರವೇಶ ಪತ್ರ ಪಡೆಯದೆ ಡೋರ್ ನಂಬ್ರ ಕೊಡ ಆಗದೆ ಕಟ್ಟಡವು ವಾಣಿಜ್ಯ ವ್ಯವಹಾರಕ್ಕೆ ಹಲವಾರು ಶಾಪ್ ಗಳನ್ನು ಈಗಾಗಲೇ ನೀಡಲಾಗಿದ್ದು, ಹೋಟೆಲ್,…
-

ಬಂಟ್ವಾಳ: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಬಂಟ್ವಾಳ: 2014ರಲ್ಲಿ ದಾಖಲಾಗಿದ್ದ ವಿದೇಶೀಯರ ಕಾಯ್ದೆ ಸಂಬಂಧಿತ ಪ್ರಕರಣದಲ್ಲಿ ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 152/2014ರಲ್ಲಿ FOREIGNERS ACT ಕಲಂ 14(a)(b)(c) ಹಾಗೂ 34 IPC ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಉಡುಪಿ ಮೂಲದ ತಾಜ್ ಮೊಹಮ್ಮದ್ ಯುಸೂಫ್ (59) ಆರೋಪಿ ಆಗಿದ್ದು, ದೀರ್ಘಕಾಲದಿಂದ ಪತ್ತೆಯಾಗದೆ ತಪ್ಪಿಸಿಕೊಂಡಿದ್ದನು. ಆರೋಪಿಯ ಸುಳಿವು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಕಳ ಭಾಗದಲ್ಲಿ ದಾಳಿ ನಡೆಸಿ…
-

ಮಣಿಪಾಲ: ಅಂತರ್ ಜಿಲ್ಲಾ ಬೈಕ್ ಕಳ್ಳರಿಬ್ಬರ ಬಂಧನ
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣವನ್ನು ಪೊಲೀಸರು ಚಾಕಚಕ್ಯತೆಯಿಂದ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಡಗುಬೆಟ್ಟು ಗ್ರಾಮದ ರಾಹುಲ್‌ನಗರದಲ್ಲಿ ಬೈಕ್ ಕಳ್ಳತನ ನಡೆದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2026, ಕಲಂ 303(2) ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಶರತ್ (26) ಹಾಗೂ ಗಣೇಶ್ (31) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು…
-

ಉಡುಪಿ: ಸಂಸ್ಥೆಯ ಮುಖ್ಯಸ್ಥರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಆರೋಪಿ ಬಂಧನ
ಉಡುಪಿ: ಶಾಲಾ ಮಕ್ಕಳಿಗೆ ಸಂವಹನ ಕೌಶಲ ತರಬೇತಿ ನೀಡುವ ನಗರದ ಸಂಸ್ಥೆಯೊಂದರ ಮುಖ್ಯಸ್ಥರನ್ನು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಖಾಸಗಿ ವೀಡಿಯೋ ಇದೆ ಎಂಬುದಾಗಿ ಬ್ಲ್ಯಾಕ್ ಮೇಲ್ ಮಾಡಿ, ಈಗ ಆತ ಪೊಲೀಸರ ವಶದಲ್ಲಿದ್ದಾನೆ. ಉಡುಪಿಯ ಕಾಪುವಿನ ಅಭಿಷೇಕ್ ಸುರೇಂದ್ರ ಪೂಜಾರಿ ಬಂಧಿತ ಆರೋಪಿ. ಮಾರ್ಫ್ ಮಾಡಲಾದ ವೀಡಿಯೋ ಇರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ಸಂಸ್ಥೆ ಮಾಲಕರ ಪುತ್ರಿ ನೀಡಿದ ದೂರಿನನ್ವಯ ಉರ್ವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ…
-

ಮಂಗಳೂರು: ಹೂಡಿಕೆ ಲಾಭ ನಂಬಿ 19 ಲಕ್ಷ ರೂ. ಕಳೆದುಕೊಂಡ ಮಹಿಳೆ!!
ಮಂಗಳೂರು: ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸುವ ಆಸೆಗೆ ಬಿದ್ದ ಮಹಿಳೆಯೊಬ್ಬರು ಬರೋಬ್ಬರಿ 19 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಹಿಳೆಯೇ ಸ್ವತಹ ಮೊಬೈಲ್‌ನಲ್ಲಿ ಗೂಗಲ್ ಮೂಲಕ ಸಾಫ್ಟೋನಿಕ್ ವೆಬ್‌ಸೈಟ್ ಹುಡುಕಾಡಿ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಬಳಿಕ ಸಾಫ್ಟೋನಿಕ್ ಆ್ಯಪ್ ಬಳಸಿ ಬ್ಯಾಂಕ್ ಖಾತೆಯ ವಿವರ ನೀಡಿದ್ದರು. ಹೆಚ್ಚಿನ ಲಾಭದ ಆಶೆಯಿಂದ ಈ ಆ್ಯಪ್‌ನಲ್ಲಿರುವ ನಾನಾ ಕಂಪನಿಗಳಿಗೆ ಒಟ್ಟು 19,06,166 ಲಕ್ಷ ರೂ. ಹೂಡಿಕೆ ಮಾಡಿದ್ದರು. ಜನವರಿಯಲ್ಲಿ 1 ಲಕ್ಷ ರೂ. ಲಾಭ ಅವರಿಗೆ ಸಿಕ್ಕಿತ್ತು. ಬಳಿಕ ಅವರನ್ನು…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











