,

ವಿಟ್ಲ: ಲೈಸನ್ಸ್ ಇಲ್ಲದೆ ಕೇರಳದಿಂದ ಕೆಂಪು ಕಲ್ಲುಗಳ ಸಾಗಾಟ- ಚಾಲಕರ ಸಮೇತ ಲಾರಿಗಳು ಪೊಲೀಸರ ವಶಕ್ಕೆ

ವಿಟ್ಲ: ಲೈಸನ್ಸ್ ಇಲ್ಲದೆ ಕೇರಳದಿಂದ ಕೆಂಪು ಕಲ್ಲುಗಳ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೆರುವಾಯಿ ಮಾರ್ಗವಾಗಿ ಕೇರಳದಿಂದ ‌ಲಾರಿಗಳ ಮೂಲಕ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಬಂಟ್ವಾಳ ಬೆರಿಪದವು ಪ್ರದೇಶದಲ್ಲಿ ಕಲ್ಲಿನ ಲೋಡ್ ತುಂಬಿದ್ದ ಲಾರಿಗಳನ್ನು ಪರಿಶೀಲನೆ ನಡೆಸಿ, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕರಾದ ವಿಟ್ಲದ ಸಾಧಿಕ್ ಮತ್ತು ಮೊಹಮ್ಮದ್ ಅವರನ್ನು ವಿಚಾರಣೆ ನಡೆಸಲಾಗಿದ್ದು, ಕೇರಳದ ಧರ್ಮತ್ತಡ್ಕದಿಂದ ಕಲ್ಲುಗಳನ್ನು ತುಂಬಿ ವೇಣು ಎಂಬವರು…

ವಿಟ್ಲ: ಲೈಸನ್ಸ್ ಇಲ್ಲದೆ ಕೇರಳದಿಂದ ಕೆಂಪು ಕಲ್ಲುಗಳ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೆರುವಾಯಿ ಮಾರ್ಗವಾಗಿ ಕೇರಳದಿಂದ ‌ಲಾರಿಗಳ ಮೂಲಕ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಬಂಟ್ವಾಳ ಬೆರಿಪದವು ಪ್ರದೇಶದಲ್ಲಿ ಕಲ್ಲಿನ ಲೋಡ್ ತುಂಬಿದ್ದ ಲಾರಿಗಳನ್ನು ಪರಿಶೀಲನೆ ನಡೆಸಿ, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲಾರಿ ಚಾಲಕರಾದ ವಿಟ್ಲದ ಸಾಧಿಕ್ ಮತ್ತು ಮೊಹಮ್ಮದ್ ಅವರನ್ನು ವಿಚಾರಣೆ ನಡೆಸಲಾಗಿದ್ದು, ಕೇರಳದ ಧರ್ಮತ್ತಡ್ಕದಿಂದ ಕಲ್ಲುಗಳನ್ನು ತುಂಬಿ ವೇಣು ಎಂಬವರು ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಸಾಗಾಟಕ್ಕೆ ಯಾವುದೇ ಲೈಸನ್ಸ್ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಚಾಲಕರ ಸಮೇತ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed