Category: ಬ್ರೇಕಿಂಗ್ ನ್ಯೂಸ್
-

ನಿಷೇಧಾಜ್ಞೆ ನಡುವೆಯೇ ಕಂಬಳಕರೆಗೆ ಗುದ್ದಲಿ ಪೂಜೆ: ಸಂಸದ ಶಾಸಕರು ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲು
ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ, 80 ಬಡಗಬೆಟ್ಟು ಗ್ರಾಮದ ಸ.ನಂ 11/1 ರಲ್ಲಿ 6.30 ಎಕ್ರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಮೀನಿನಲ್ಲಿ ಉಡುಪಿ ಕಂಬಳ ಕೆರೆ ಶಂಕುಸ್ಥಾಪನೆ ವಿಚಾರದಲ್ಲಿ ಗೊಂದಲವಿದ್ದು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಫೆಬ್ರವರಿ 28 ರಂದು ಬೆಳಿಗ್ಗೆ 06.00 ಗಂಟೆಯಿಂದ ರಾತ್ರಿ 10.00 ಗಂಟೆವರೆಗೆ 80 ಬಡಗಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕಾಗಿ 7 ಮಂದಿ ಶಾಸಕರು, ಸಂಸದರು ಸೇರಿದಂತೆ 38 ಮಂದಿ ಸೇರಿದಂತೆ ಹಲವರ…
-

ಉಡುಪಿ ಪೊಲೀಸ್ ಇಲಾಖೆಯ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು
ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಉಡುಪಿಯಲ್ಲಿ ರವಿವಾರ ಬೆಳಗ್ಗೆ ಹಮ್ಮಿಕೊಳ್ಳಲಾದ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ಕುಂದಾಪುರ ಗ್ರಾಮಾಂತರ ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ. ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಲ್ಲರಿಗೂ ಫಿಟ್ನೆಸ್ ಡಬ್ ಫ್ರೀ ಕರ್ನಾಟಕ ಸೈಬರ್ ಜಾಗೃತಿಗಾಗಿ 5 ಕಿ.ಮೀ ಮ್ಯಾರಥಾನ್ ಓಟವನ್ನು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಎಸ್ಐ ನಾಸೀರ್ ಹುಸೇನ್ ಸೇರಿದಂತೆ ನೂರಾರು ಪೊಲೀಸರು ಪಾಲ್ಗೊಂಡಿದ್ದರು. ಮ್ಯಾರಥಾನ್ ಓಡುತ್ತಿದ್ದ ನಾಸೀರ್ ಹುಸೇನ್ ಒಮ್ಮೆಲೆ ಕುಸಿದು…
-

ಜ್ಯೋತಿಷಿ ಮಾತು ನಂಬಿ ನೇಣು ಬಿಗಿದುಕೊಂಡ ಮದ್ವೆ ತಯಾರಿಯಲ್ಲಿದ್ದ ಯುವತಿ..!!
ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಜ್ಯೋತಿಷಿಯೊಬ್ಬರ ಅಲ್ಪಾಯುಷಿ ಭವಿಷ್ಯವನ್ನು ನಂಬಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಗೆ ಸಿದ್ಧತೆ ನಡೆಸುತ್ತಿದ್ದ 27 ವರ್ಷದ ವಿದ್ಯಾಜ್ಯೋತಿ, 9 ದಿನಗಳ ಪೂಜೆಯ ಕೊನೆಯ ದಿನದಂದು ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾರೆ. ಜ್ಯೋತಿಷಿಯೊಬ್ಬರ ಮಾತು ನಂಬಿ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. 27 ವರ್ಷದ ವಿದ್ಯಾಜ್ಯೋತಿ ಆತ್ಮ*ಹತ್ಯೆಗೆ ಶರಣಾದ ಮಹಿಳಾ ಟೆಕ್ಕಿ. ಬಾಗಲಗುಂಟೆ ನಿವಾಸಿಗಳಾದ ಉಮೇಶ್-ಕವಿತಾ ದಂಪತಿಯ ಎರಡನೇ…
-

ರಾಜ್ಯದಲ್ಲಿ ನಿಲ್ಲದ ಫೈನಾನ್ಸ್ ಕಂಪನಿಗಳ ಕಿರುಕುಳ : 3 ತಿಂಗಳ ಹಸುಗೂಸ ಸಮೇತ ಬೀದಿಗೆ ಬಿದ್ದ ಕುಟುಂಬ
ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು, ಬೆಳಗಾವಿಯಲ್ಲಿ ಫೈನಾನ್ಸ್ ಕಂಪನಿ ಕಿರುಕುಳಕ್ಕೆ ಕುಟುಂಬವೊಂದು ಬೀದಿಗೆ ಬಿದ್ದಿದೆ. ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿ ಮನೆಯನ್ನು ಜಪ್ತಿ ಮಾಡಿದೆ. ಹೀಗಾಗಿ 3 ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದಿದೆ. ಸಾಲ ಕಟ್ಟಿಲ್ಲವೆಂದು ಫೈನಾನ್ಸ್ ಸಿಬ್ಬಂದಿ ಮನೆಯನ್ನು ಸೀಜ್ ಮಾಡಿದ್ದಾರೆ. ರಾಯಭಾಗ ತಾಲೂಕಿನ ಅಲಕನೂರ ಗ್ರಾಮದಲ್ಲಿ ಫೈನಾನ್ಸ್ ಕಂಪನಿ ಸಿಬ್ಬಂದಿಗಳು ಮನೆ ಸೀಜ್ ಮಾಡಿದ ಹಿನ್ನೆಲೆಯಲ್ಲಿ ಕುಟುಂಬ ಬೀದಿಗೆ ಬಿದ್ದಿದೆ. ಮನೆ ಸಾಮಾಗ್ರಿಯನ್ನೂ ತೆಗೆದುಕೊಳ್ಳಲು ಬಿಡದೇ ಸಿಬ್ಬಂದಿ ದರ್ಪ ಮೆರೆದಿದ್ದಾರೆ.…
-

ಮಂಗಳೂರು: ಸೈಬರ್ ವಂಚಕರ ಜಾಲವನ್ನು ಬೇಧಿಸಿದ ಪೊಲೀಸರು- 6 ಮಂದಿ ಆರೋಪಿಗಳ ಬಂಧನ
ಮಂಗಳೂರು: ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈಬರ್ ವಂಚಕರ ಜಾಲವನ್ನು ಬೇಧಿಸಿ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಶೇಖ್ ಕರೀಮುಲ್ಲಾ @ ರಸೂಲ್ (27), ಬುಡಿದಿನ್ನೆ ವಂಶಿ @ ಗುರು (21), ಪಂಡಿತಿ ಕ್ರಾಂತಿ ಕುಮಾರ್ (36), ಬಡೆ ಶ್ರೀನಿವಾಸ್ (38), ಉತ್ಸಲ ಸಂತೋಷ್ ಕೃಷ್ಣ (35) ಬಂಧಿತರು. ಇನ್ನು ವಂಚಕರಿಗೆ ಬ್ಯಾಂಕ್ ಖಾತೆ ನೀಡಿದ ಆರೋಪದ ಮೇಲೆ ಮಂಗಳೂರಿನ ಇಬ್ರಾಹಿಂ (35) ನ್ನು ಅರೆಸ್ಟ್ ಮಾಡಲಾಗಿದೆ. ಪ್ರಕರಣದ ವಿವರ:ಮಂಗಳೂರು ನಗರದ…
-

ಮಂಗಳೂರು: ಪತ್ನಿಯ ಮಾಲೀಕತ್ವದ 3 ವಾಹನ ಪೋರ್ಜರಿ ಸಹಿ ಹಾಕಿ ವರ್ಗಾಯಿಸಿದ ಪತಿ.!!
ಮಂಗಳೂರು: ಹೆಂಡತಿಯ ಮಾಲೀಕತ್ವದಲ್ಲಿದ್ದ ಮೂರು ಘನ ವಾಹನಗಳನ್ನು ಪೋರ್ಜರಿ ಸಹಿ ಹಾಕಿ ಗಂಡ ತನ್ನ ಅಪ್ರಾಪ್ತ ಮಗಳ ಹೆಸರಿಗೆ ವರ್ಗಾಯಿಸಿ ಮೋಸ ಮಾಡಿ ವಂಚಿಸಿರುವ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಎಮ್.ಎಸ್.ಇ.ಝಡ್ ಕಾಲೊನಿ ರಾಮ ನಗರದ ನಿವಾಸಿ ಭವ್ಯ ಶೆಟ್ಟಿ ದೂರು ನೀಡಿರುವ ಮಹಿಳೆಯಾಗಿದ್ದು, ತನ್ನ ಗಂಡ ದಾಮೋದರ ಶೆಟ್ಟಿ ವಂಚನೆ ಮಾಡಿರುವುದಾಗಿ ದೂರು ನೀಡಿದ್ದಾರೆ. ಈಕೆಯ ಗಂಡ ದಾಮೋದರ ಶೆಟ್ಟಿ ಪ್ರತಿಷ್ಠಿತ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್…
-

ಡ್ರಗ್ಸ್, ಮದ್ಯದ ಜೊತೆ ಮತ್ತು ಬರುವ ಮಾತ್ರೆ ಮಿಕ್ಸ್ ಮಾಡಿ, 19ಕ್ಕೂ ಹೆಚ್ಚು ಯುವತಿಯರ ಮೇಲೆ ಗ್ಯಾಂಗ್ ರೇಪ್!
ಇಡೀ ದೇಶವೇ ಬೆಚ್ಚಿ ಬೀಳಿಸುವಂತಹ ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದ್ದು, ಡ್ರಗ್ಸ್ ಬಳಸಿ ಯುವತಿಯರಿಗೆ ಗಾಳ ಹಾಕಿ ಅವರಿಗೆ ಮತ್ತ ಬರುವ ಮಾತ್ರೆ ಮಿಕ್ಸ್ ಮಾಡಿ ಕಾಲೇಜ್ ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಇದೀಗ ವರದಿಯಾಗಿದೆ. ಕಾಲೇಜ್ ಹುಡುಗಿಯರನ್ನು ಟಾರ್ಗೆಟ್ ಮಾಡಿ, ಜೊತೆ ಮೋಜು ಮಸ್ತಿ ಮಾಡಿದ್ದು ಡ್ರಗ್ಸ್ ಮತ್ತು ಮದ್ಯದ ಜೊತೆ ಮತ್ತಿನ ಮಾತ್ರೆ ಮಿಕ್ಸ್ ಮಾಡಿದ್ದಾರೆ ಈ ವೇಳೆ ಆರ್ಯ ಪ್ರಜ್ಞಾವಸ್ಥೆಯಲ್ಲಿರುವ ಯುವತಿಯರು ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಪೊಲೀಸರ ತನಿಖೆಗಳೆ…
-

ಮಂಗಳೂರು : ವೆಕ್ಸನ್- ಬಿಎಂಪಿ ನೆಟ್‌ವರ್ಕಿಂಗ್ ಸಂಸ್ಥೆಯಿಂದ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಹಣ ವಂಚನೆ!!
ಮಂಗಳೂರು : ಮಂಗಳೂರಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಹಣ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕುದ್ರೋಳಿಯ ಅಳಕೆ ಭಾಗದ ಶ್ರೇಯಾ ಸ್ವೀಟ್ಸ್ ಎದುರಿಗಿನ ಕಟ್ಟಡದಲ್ಲಿ ಮೊಕ್ಕಾಂ ಹೂಡಿರುವ ಮಹಾರಾಷ್ಟ್ರ ಮೂಲದ ‘ವೆಕ್ಸನ್’ ಹಾಗೂ ಬಿಎಂಪಿ ಎಂಬ ಹೆಸರಿನ ನೆಟ್‌ವರ್ಕಿಂಗ್ ಸಂಸ್ಥೆಯು ಇಂಟರರ್ನ್‌ಶಿಪ್ ಹೆಸರಿನಲ್ಲಿ ನೂರಾರು ಅಮಾಯಕ ವಿದ್ಯಾರ್ಥಿಗಳನ್ನು ಬಲೆಗೆ ಬೀಳಿಸಿಕೊಂಡು ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸ್ವಸ್ತಿಕ ಕಾಲೇಜಿನ ವಿದ್ಯಾರ್ಥಿಗಳು ಪತ್ರಿಕಾಗೋಷ್ಠಿ ನಡೆಸಿ ಕಂಪೆನಿ ವಿರುದ್ಧ ಗಂಭೀರವಾದ ಆರೋಪ…
-

ವ್ಯಾಜ್ಯ ಬಾಕಿ ಇರುವಾಗ ನಡೆದ ಆಸ್ತಿ ಖರೀದಿ ಅಸಿಂಧು: ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು: ನ್ಯಾಯಾಲಯದಲ್ಲಿ ಆಸ್ತಿ ಹಕ್ಕಿನ ಬಗ್ಗೆ ಕಾನೂನು ಹೋರಾಟ ನಡೆಯುತ್ತಿರುವಾಗ (Pending Litigation), ಆ ಆಸ್ತಿಯನ್ನು ಖರೀದಿಸುವ ಮೂರನೇ ವ್ಯಕ್ತಿಗೆ ಯಾವುದೇ ಕಾನೂನುಬದ್ಧ ಹಕ್ಕು ಲಭಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 52ರ ಅಡಿಯಲ್ಲಿರುವ ‘ಲಿಸ್ ಪೆಂಡೆನ್ಸ್’ (Lis Pendens) ತತ್ವವನ್ನು ಎತ್ತಿಹಿಡಿದಿರುವ ನ್ಯಾಯಾಲಯ, ಮಾಲೀಕತ್ವ ವರ್ಗಾವಣೆಗೆ ನ್ಯಾಯಾಲಯದ ಅನುಮತಿ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ:ಬೆಂಗಳೂರಿನ ಹನುಮಂತನಗರದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ. ಪ್ರಕರಣದ…
-

ಮಂಗಳೂರು: ನಗರದ ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ..!!
ಮಂಗಳೂರು: ನಗರದ ಬಿಜೈ ಪ್ರದೇಶದಲ್ಲಿರುವ ಪ್ರತಿಷ್ಠಿತ ಲೂರ್ಡ್ಸ್ ಸೆಂಟ್ರಲ್ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಅಧಿಕೃತ ಇಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ಮಾಹಿತಿ ಪಡೆದ ಕದ್ರಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರಿನ ನ್ಯಾಯಾಲಯಕ್ಕೆ ಬಾಂಬ್ ಇಡಲಾಗಿದೆ ಎಂದು ಇಮೇಲ್ ಮೂಲಕ ಬೆದರಿಕೆ ಬಂದಿದ್ದರೂ, ಪರಿಶೀಲನೆ ಬಳಿಕ ಅದು ಹುಸಿ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











