Category: ಬ್ರೇಕಿಂಗ್ ನ್ಯೂಸ್
-

ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪೋಸ್ಟ್- ಕೇಸ್ ದಾಖಲು
ಮಂಗಳೂರಿನ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪ್ರಚೋದನಕಾರಿ ಸಾಮಾಜಿಕ ಜಾಲತಾಣ ಪೋಸ್ಟ್‌ಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಪೋಸ್ಟ್ ಮಾಡಿದ ಕಿಡಿಗೇಡಿಗಾಗಿ ಶೋಧ ನಡೆಸುತ್ತಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಘಟನೆ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿರುವ ಉಳ್ಳಾಲ ಪೊಲೀಸರು, ಕಮೆಂಟ್ ಹಾಕಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಲು ಶೋಧ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಧಾರ್ಮಿಕ ದ್ವೇಷ ಹುಟ್ಟಿಸುವ, ಭಯ ಹುಟ್ಟಿಸುವ ರೀತಿಯ ಪೋಸ್ಟ್‌ಗಳಿಗೆ ಕಡಿವಾಣ ಹಾಕಲು…
-

ಬೆಳ್ತಂಗಡಿ: ರಸ್ತೆಯಲ್ಲಿ ಅಪಾಯಕಾರಿಯಾಗಿ ವೀಲಿಂಗ್- ಯುವಕ ಪೊಲೀಸರ ವಶಕ್ಕೆ
ಬೆಳ್ತಂಗಡಿ: ಹಲವು ಸಮಯಗಳಿಂದ ಉಜಿರೆ-ಬೆಳ್ತಂಗಡಿಯ ರಸ್ತೆಗಳಲ್ಲಿ ವಿವಿಧ ಭಂಗಿಗಳಲ್ಲಿ ಅಪಾಯಕಾರಿ ಹಾಗೂ ನಿರ್ಲಕ್ಷ್ಯತನದಿಂದ ವೀಲಿಂಗ್ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಯುವಕನನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆ ಜಂಕ್ಷನ್ ರಸ್ತೆಯಲ್ಲಿ ಫೆ.8 ರಂದು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಡ್ಯಾನಿ ಫ್ರಾನ್ಸಿಸ್ ತಾವ್ರೋ ಎಂಬವರು ಕರ್ತವ್ಯದ ವೇಳೆ ಹೆಲ್ಮೆಟ್ ಧರಿಸದೆ ಆಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಯ ಪ್ರಾಣಕ್ಕೆ ಹಾನಿಯಾಗುವಂತೆ ವೀಲಿಂಗ್ ಮಾಡಿಕೊಂಡು ಧರ್ಮಸ್ಥಳ ರಸ್ತೆಯ…
-

ಮಂಗಳೂರು: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ SDA ಅಧಿಕಾರಿ
ಮಂಗಳೂರು: ಸರ್ಕಾರಿ ಕಾಮಗಾರಿಯ ಬಿಲ್ ಪಾವತಿಗೆ ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ, ವಿದ್ಯುತ್ ಉಪವಿಭಾಗ, ಲೋಕೋಪಯೋಗಿ ಇಲಾಖೆ, ಮಂಗಳೂರು ಕಚೇರಿಯ ಎಸ್‌ಡಿಎ ಸಂಪತ್ ಅವರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದ್ದಾರೆ. ಫಿರ್ಯಾದುದಾರರು ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಪ್ರಥಮ ದರ್ಜೆ ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದು, 2025ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದರು. ಈ ಕಾಮಗಾರಿಗಳ ಬಿಲ್ ಪಾವತಿಗಾಗಿ ಶೇ.4ರಂತೆ ಒಟ್ಟು…
-

ರಸ್ತೆ ಕಾಮಗಾರಿ ವಿಳಂಬ: ಅಜ್ಜಾವರ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್
ಸುಳ್ಯ: ರಸ್ತೆ ಅಭಿವೃದ್ಧಿ ಕಾಮಗಾರಿಗಳು ದೀರ್ಘಕಾಲದಿಂದ ವಿಳಂಬವಾಗುತ್ತಿವೆ ಎಂದು ಆರೋಪಿಸಿ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡುವ ಬ್ಯಾನರ್ ಹಾಕಲಾಗಿದೆ. ಅಜ್ಜಾವರ ಗ್ರಾಮದ ಶಿರಾಜೆ 2ನೇ ವಾರ್ಡ್‌ನ ಅಡ್ಡ ರಸ್ತೆಯಿಂದ ಬೆಳ್ಯ 4ನೇ ವಾರ್ಡ್‌ನ ಬೀನಡ್ಕವರೆಗಿನ ಸುಮಾರು 3 ಕಿಲೋಮೀಟರ್ ರಸ್ತೆಯನ್ನು ಡಾಂಬರೀಕರಣಗೊಳಿಸುವಲ್ಲಿ ಅತಿಯಾದ ವಿಳಂಬವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಪ್ರಕಾರ, ಶಿರಾಜೆ 2ನೇ ವಾರ್ಡ್ ಅಡ್ಡ ರಸ್ತೆಯಿಂದ ಬೆಳ್ಯ 4ನೇ ವಾರ್ಡ್ ಬೀನಡ್ಕವರೆಗಿನ ರಸ್ತೆಯನ್ನು ಡಾಂಬರೀಕರಣಗೊಳಿಸುವಂತೆ ಕಳೆದ ಸುಮಾರು 40…
-

ಮಂಗಳೂರು: ವಿಮಾನ ನಿಲ್ದಾಣದಲ್ಲಿ 80 ಲಕ್ಷ ರೂಪಾಯಿ ವಿದೇಶಿ ಕರೆನ್ಸಿ ವಶ- ಮೂವರ ಬಂಧನ
ಮಂಗಳೂರು : ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ನಡೆದ ಅತಿದೊಡ್ಡ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳುವಿಕೆಯಲ್ಲಿ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 80 ಲಕ್ಷ ರೂ.ಗೆ ಸಮಾನವಾದ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಮಂಗಳೂರು ಪ್ರಾದೇಶಿಕ ಘಟಕದ ಅಧಿಕಾರಿಗಳು, ನಿರ್ಗಮನ ಹಾಲ್‌ಗೆ ಆಗಮಿಸಿದಾಗ ಒಬ್ಬ ಪುರುಷ ಪ್ರಯಾಣಿಕ ಮತ್ತು ಇಬ್ಬರು ಮಹಿಳಾ ಪ್ರಯಾಣಿಕರನ್ನು ತಡೆದರು. ಈ ಮೂವರು ಫೆಬ್ರವರಿ 27 ರಂದು ಇಂಡಿಗೋ ವಿಮಾನ 6E 1438 ಮೂಲಕ ಅಬುಧಾಬಿಗೆ…
-

ಮಂಗಳೂರು: ಮ.ನ.ಪಾ ಪರಿಸರ ಅಭಿಯಂತರರಾಗಿದ್ದ ಸುಶಾಂತ್ ನಿಧನ
ಮಂಗಳೂರು ಮಹಾನಗರ ನಗರ ಪಾಲಿಕೆಯ ಕದ್ರಿ ಕಛೇರಿಯಲ್ಲಿ ಪರಿಸರ ಅಭಿಯಂತರ ಇಲಾಖೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಶಾಂತ್ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಇವರು ಕಳೆದ ಶುಕ್ರವಾರದ ವರೆಗೆ ಕರ್ತವ್ಯಕ್ಕೆ ಹಾಜರಾಗಿದ್ದು ಅವರ ಈ ಹಠಾತ್ ಸಾವಿನ ಸುದ್ದಿ ಅವರ ಆತ್ಮಿಯರ ಬಳಗೆಕ್ಕೆ ತೀವ್ರ ಬೇಸರ ತಂದಿದೆ. ಮ.ನ.ಪಾ ವ್ಯಾಪ್ತಿಯ ಬಳ್ಳಾಲ್ ಬಾಗ್ ನಲ್ಲಿ ಆರೋಗ್ಯ ಇಲಾಖಾ ಅಧಿಕಾರಿಯಾಗಿ ಮುಂದೆ ಸುರತ್ಕಲ್ ಗೆ ಕಂದಾಯ ಇಲಾಖಾ ಅಧಿಕಾರಿಯಾಗಿ ಮುಂಬಡ್ತಿ ಹೂಂದಿದರು. ಎಲ್ಲರೊಂದಿಗೆ ಬಹಳ ಆತ್ಮೀಯವಾಗಿ ಬೆರೆಯುತ್ತಿದ್ದ ಅವರದ್ದು ಸರಳ…
-

ವಿದ್ಯುತ್ ಬಿಲ್ ಕಲೆಕ್ಟರ್ ಸೋಗಿನಲ್ಲಿ ಹಣ ವಸೂಲಿ : ನಕಲಿ ಬಿಲ್ ಕಲೆಕ್ಟರ್ ಗೆ ಸಾರ್ವಜನಿಕರಿಂದ ಧರ್ಮದೇಟು
ವಿದ್ಯುತ್ ಬಿಲ್ ಕಲೆಕ್ಟರ್ ಎಂದು ಸುಳ್ಳು ಹೇಳಿ ಮನೆಮನೆಗೆ ತೆರಳಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ವಂಚಕನೊಬ್ಬ ಸಿಕ್ಕಿಬಿದ್ದಿರುವ ಘಟನೆ ನಗರದ ಆನಂದನಗರದಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಡೆದಿದ್ದೇನು? ಆರೋಪಿಯು ಹೆಸ್ಕಾಂ (HESCOM) ಸಿಬ್ಬಂದಿಯಂತೆ ಸಮವಸ್ತ್ರ ಧರಿಸಿ, ತಾನು ವಿದ್ಯುತ್ ಬಿಲ್ ಕಲೆಕ್ಟರ್ ಎಂದು ಪರಿಚಯಿಸಿಕೊಳ್ಳುತ್ತಿದ್ದನು. ಮನೆಮನೆಗೆ ತೆರಳಿ ಕರೆಂಟ್ ಬಿಲ್ ಪಾವತಿಸುವಂತೆ ಹೇಳಿ, ಪ್ರತಿ ಮನೆಯಿಂದ ಅಂದಾಜು 1,000 ದಿಂದ 2,000 ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದನು. ವಂಚಕನ ಕಾರ್ಯವೈಖರಿ…
-

ಬೆಳ್ತಂಗಡಿ: ಚಿನ್ನ ಪಾಲೀಶ್ ಮಾಡುವ ನೆಪದಲ್ಲಿ ವಂಚನೆ- ಆರೋಪಿಯ ಬಂಧನ
ಬೆಳ್ತಂಗಡಿ: ಚಿನ್ನದ ಒಡವೆಗಳನ್ನು ಪಾಲೀಶ್ ಮಾಡಿ ತೊಳೆದು ಕೊಡುತ್ತೇನೆ ಎಂದು ನಂಬಿಸಿ ವಂಚನೆ ನಡೆಸಿದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಪಣಿಲಾಜೆ ಪ್ರದೇಶದಲ್ಲಿ ಫೆಬ್ರವರಿ 10, 2026 ರಂದು ಘಟನೆ ನಡೆದಿದೆ. ಸೇಲ್ಸ್‌ಮ್ಯಾನ್ ರೂಪದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಮನೆಮಂದಿಗೆ ಚಿನ್ನದ ಒಡವೆಗಳನ್ನು ತೊಳೆಯುವ ಹಾಗೂ ಪಾಲೀಶ್ ಮಾಡುವುದಾಗಿ ನಂಬಿಸಿ ಪಡೆದುಕೊಂಡು, ಯಾವುದೋ ರಾಸಾಯನಿಕ ದ್ರಾವಣ ಬಳಸಿ ಚಿನ್ನವನ್ನು ಕರಗಿಸಿ ವಂಚನೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.…
-

ಕಾಡಾನೆ ದಾಳಿ : ಮಡಿಕೇರಿಯಲ್ಲಿ PU ವಿದ್ಯಾರ್ಥಿನಿ ಸಾವು
ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ ಎನ್ನುವಂತೆ ಮಡಿಕೇರಿಯಲ್ಲಿ ವಿದ್ಯಾರ್ಥಿನಿಯೊಬ್ಬರನ್ನು ಕಾಡಾನೆ ತುಳಿದು ಸಾಯಿಸಿದೆ. ಮಡಿಕೇರಿ ತಾಲ್ಲೂಕಿನ ಬೆಟ್ಟತೂರು ಗ್ರಾಮದಲ್ಲಿ ಗಿರೀಶ್ ಎಂಬುವರ ಪುತ್ರಿ ಪೂಜಾ(17) ಎಂಬ ವಿದ್ಯಾರ್ಥಿನಿಯನ್ನು ಕಾಡಾನೆ ಹತ್ಯೆ ಮಾಡಿದೆ. ಮೃತ ಪೂಜಾ ಮಡಿಕೇರಿಯ ಸಂತ ಮೈಕಲ್ ಶಾಲೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ಸಂಜೆ 5.30ಕ್ಕೆ ಕಾಲೇಜು ಮುಗಿಸಿಕೊಂಡು ಪೂಜಾ ತಮ್ಮ ಊರು ಬೆಟ್ಟತೂರಿಗೆ ಬಸ್ಸಿನಿಂದ ಬಂದಿಳಿದು, ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಏಕಾಏಕಿ ಕಾಡಾನೆ ಪೂಜಾ ಮಾಲೆ ದಾಳಿ…
-

ಸೇಡು ತೀರಿಸಿಕೊಳ್ಳುವ ಸಮಯ ಹತ್ತಿರದಲ್ಲಿದೆ: ಖಮೇನಿ ಸಾವು ಪ್ರಕಟಿಸುತ್ತಾ ಲೈವ್ ಟಿವಿಯಲ್ಲೇ ಕಣ್ಣೀರಿಟ್ಟ ನಿರೂಪಕಿ
ಇರಾನ್‌ನ ಸರ್ಕಾರಿ ಪ್ರಸಾರಕ ಪ್ರೆಸ್ ಟಿವಿ ಟೆಹ್ರಾನ್‌ನ ನಿರೂಪಕಿ, ಅಮೆರಿಕ-ಇಸ್ರೇಲಿ ಜಂಟಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಂದು ವರದಿಯಾಗಿರುವ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮರಣವನ್ನು ಘೋಷಿಸುವಾಗ ನೇರ ದೂರದರ್ಶನದಲ್ಲಿ ದುಃಖಿತರಾದರು. ಲೈವ್ ಟೆಲಿವಿಷನ್‌ನಲ್ಲಿ ನಿರೂಪಕಿ ದುಃಖತಪ್ತರಾದರು ಪ್ರಸಾರದ ಸಮಯದಲ್ಲಿ ತುಂಬಾ ಭಾವುಕರಾಗಿ ಧ್ವನಿಸುತ್ತಿದ್ದ ಮರ್ಯಮ್ ಅಜರ್ಚೆರ್, ಸುದ್ದಿ ನೀಡುವಾಗ ಕಣ್ಣೀರನ್ನು ತಡೆದುಕೊಳ್ಳಲು ಹೆಣಗಾಡಿದರು. “ಸೇಡು ತೀರಿಸಿಕೊಳ್ಳಲು ಬರುತ್ತಿದೆ. ಸೇಡು ತೀರಿಸಿಕೊಳ್ಳಲು ಶೀಘ್ರದಲ್ಲೇ ಬರಲಿದೆ. ಅವರು ಏನು ಮಾಡಿದ್ದಾರೆಂದು ಅವರು ನೋಡುತ್ತಾರೆ,” ಎಂದು ಅವರು…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











