ಮಂಗಳೂರು ಮಹಾನಗರ ನಗರ ಪಾಲಿಕೆಯ ಕದ್ರಿ ಕಛೇರಿಯಲ್ಲಿ ಪರಿಸರ ಅಭಿಯಂತರ ಇಲಾಖೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಶಾಂತ್ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಇವರು ಕಳೆದ ಶುಕ್ರವಾರದ ವರೆಗೆ ಕರ್ತವ್ಯಕ್ಕೆ ಹಾಜರಾಗಿದ್ದು ಅವರ ಈ ಹಠಾತ್ ಸಾವಿನ ಸುದ್ದಿ ಅವರ ಆತ್ಮಿಯರ ಬಳಗೆಕ್ಕೆ ತೀವ್ರ ಬೇಸರ ತಂದಿದೆ.
ಮ.ನ.ಪಾ ವ್ಯಾಪ್ತಿಯ ಬಳ್ಳಾಲ್ ಬಾಗ್ ನಲ್ಲಿ ಆರೋಗ್ಯ ಇಲಾಖಾ ಅಧಿಕಾರಿಯಾಗಿ ಮುಂದೆ ಸುರತ್ಕಲ್ ಗೆ ಕಂದಾಯ ಇಲಾಖಾ ಅಧಿಕಾರಿಯಾಗಿ ಮುಂಬಡ್ತಿ ಹೂಂದಿದರು.
ಎಲ್ಲರೊಂದಿಗೆ ಬಹಳ ಆತ್ಮೀಯವಾಗಿ ಬೆರೆಯುತ್ತಿದ್ದ ಅವರದ್ದು ಸರಳ ಹಾಗೂ ಸಜ್ಜನ ವ್ಯಕ್ತಿತ್ವ, ನಮ್ಮ ಸುದ್ದಿವಾಹಿನಿಯ ಜೊತೆ ಉತ್ತಮ ಬಾಂಧವ್ಯದಿಂದ ಇದ್ದ ಅವರ ಅಗಲಿಕೆಯು ಅತೀವ ಬೇಸರ ತಂದಿದ್ದು ಭಗವಂತ ಅವರ ಕುಟುಂಬ ವರ್ಗಕ್ಕೆ, ಅಪಾರ ಬಂಧು ಮಿತ್ರರಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಕರುಣಿಸಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲೆಂದು ಪ್ರಾರ್ಥಿಸುತ್ತೇವೆ.















