Category: ಕ್ರೈಂ ಸುದ್ದಿ
Your blog category
-

ಬೆಳ್ತಂಗಡಿ, ಉಪ್ಪಿನಂಗಡಿಯಲ್ಲಿ ಕಳ್ಳರ ಅಟ್ಟಹಾಸ: ಕೇರಳ ಮೂಲದ ಶಂಕಿತನ ಬೆನ್ನತ್ತಿದ ಪೊಲೀಸರು
ಬೆಳ್ತಂಗಡಿ: ಕಳೆದ ಎರಡು ದಿನಗಳಿಂದ ಬೆಳ್ತಂಗಡಿ ಮತ್ತು ಉಪ್ಪಿನಂಗಡಿಯಲ್ಲಿ ನಡೆದ ಮನೆ ಕಳ್ಳತನದ ಸರಣಿಯಲ್ಲಿ ಭಾಗಿಯಾಗಿದ್ದಾನೆಂದು ಶಂಕಿಸಲಾಗಿರುವ ಕೇರಳದ ಕುಖ್ಯಾತ ಶಂಕಿತನ ಬಗ್ಗೆ ಮಾಹಿತಿ ಕೋರಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.ಶಂಕಿತನನ್ನು ಕೇರಳದ ಕಣ್ಣೂರಿನ ತಳಿಪರಂಬು ನಿವಾಸಿ ತಂಗಚ್ಚ, ಅಲಿಯಾಸ್ ಮ್ಯಾಧ್ಯೂ ಅಲಿಯಾಸ್ ಬಶೀರ್ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಶಂಕಿತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಈಗಾಗಲೇ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಜಾರಿಯಲ್ಲಿದೆ.ಕಳೆದ 48 ಗಂಟೆಗಳಲ್ಲಿ ಕಳ್ಳತನ…
-

ಜಯಮಹಲ್ ಹೋಟೆಲ್ನಲ್ಲಿ ಪಿಸ್ತೂಲ್ ಮ್ಯಾಗಜೀನ್ ಪತ್ತೆ; ತನಿಖೆ ತೀವ್ರ
ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್ನಲ್ಲಿ ಅಮೆರಿಕ ನಿರ್ಮಿತ ಜೀವಂತ ಗುಂಡುಗಳಿದ್ದ ಪಿಸ್ತೂಲ್ ಮ್ಯಾಗಜೀನ್ ಪತ್ತೆಯಾಗಿದ್ದು, ಈ ಸಂಬಂಧ ಜೆ.ಸಿ. ನಗರ ಪೊಲೀಸರು ಆರೋಪಿ ಅರ್ಮಾನ್ ಮುತಾಹರ್ ಎಂಬಾತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ಯುವತಿಯೊಬ್ಬಳೊಂದಿಗೆ ಲಾಡ್ಜ್ಗೆ ಬಂದಿದ್ದ ಆರೋಪಿ, ಪಿಸ್ತೂಲ್ ಮ್ಯಾಗಜೀನ್ ಅನ್ನು ರೂಮ್ನಲ್ಲಿಯೇ ಬಿಟ್ಟು ಹೋಗಿದ್ದ. ಅದನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಪದೇ ಪದೇ ಕೇಳಿದರೂ ಸರಿಯಾಗಿ ಸ್ಪಂದಿಸದ ಕಾರಣ ಹೋಟೆಲ್ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಡೆದಿದ್ದೇನು? ಕಳೆದ ಏಪ್ರಿಲ್ 27ರಂದು ರಾತ್ರಿ…
-

ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಜೂಜಾಟದಲ್ಲಿ ತೊಡಗಿದ್ದ 17 ಮಂದಿ ಸೆರೆ
ಬೆಳ್ತಂಗಡಿ : ಕರಿಮಣೇಲು ಗ್ರಾಮದ ಬೋಳಾರಗುತ್ತು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಉಳಾಯಿ -ಪಿದಾಯಿ ಜೂಜಾಟ ಆಡುತ್ತಿದ್ದ ಬಗ್ಗೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಕ್ಷಯ್ ಡವಗಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ.17 ರಂದು ರಾತ್ರಿ 7:30 ಕ್ಕೆ ದಾಳಿ ಮಾಡಿದ್ದಾರೆ. ಜೂಜಾಟ ಆಡುತ್ತಿದ್ದ ಪಡಂಗಡಿಯ ಅಶೋಕ್(37) ,ಪಡಂಗಡಿಯ ವಿತೇಶ್(33), ವೇಣೂರು ಕರಿಮಣೇಲಿನ ರಾಜೇಶ್(35), ವೇಣೂರು ಕತ್ತೋಡಿಬೈಲಿನ ರಮೇಶ್(40) , ಕುಕ್ಕೇಡಿ ಬರ್ನತ್ಯಾರಿನ ರಾಜೇಶ್(42), ಕಾರ್ಕಳ ಮುಗಿರಡ್ಡಸ ಪ್ರಮೀತ್(35), ನಾರಾವಿ ಅರಸಿಕಟ್ಟೆಯ ಕರುಣಾಕರ(38),…
-

ಮಂಗಳೂರು ಕುಂಟಿಕಾನ ಲಿಫ್ಟ್ ದುರಂತ: ಅನಧಿಕೃತ ಕಟ್ಟಡಕ್ಕೆ ಯಾರು ಹೊಣೆ? ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರ ಅಸಮಾಧಾನ
ಮಂಗಳೂರು: ನಗರದ ಕುಂಟಿಕಾನ ಬಳಿಯ ಆನ್ಲೈನ್ ಡೆಲಿವರಿ ಸಂಸ್ಥೆಯೊಂದರ ಸನ್ ರಾಯಲ್ ರೆಸಿಡೆನ್ಸಿ ಕಟ್ಟಡದಲ್ಲಿ ಲಿಫ್ಟ್ನಲ್ಲಿ ಸಿಲುಕಿ ನೌಫಲ್ ಎಂಬಾತ ಸಾವನ್ನಪ್ಪಿದ ದುರ್ಘಟನೆ ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಘಟನೆ ಬಳಿಕ ಕಟ್ಟಡದ ಸುರಕ್ಷತೆ, ಲಿಫ್ಟ್ನ ಮಾನದಂಡಗಳು ಹಾಗೂ ಮಹಾನಗರ ಪಾಲಿಕೆಯ ಮೇಲ್ವಿಚಾರಣೆ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಹಿತಿಯ ಪ್ರಕಾರ, ವಾಣಿಜ್ಯ ಕಟ್ಟಡದ ಹೊರಭಾಗದಲ್ಲಿ ಅನಧಿಕೃತ ಜಾಕ್( Hoist), ಅಂದರೆ ಕಬ್ಬಿಣದ ಸಪೋರ್ಟ್ಗಳು ಮತ್ತು ಲೋಹದ ಶೀಟ್ಗಳನ್ನು ಬಳಸಿ ಕಟ್ಟಡದ ಕಾಮಗಾರಿ ವೇಳೆ ಕಲ್ಲು,…
-

ಕ್ರಿಕೆಟ್ ಪಂದ್ಯದ ಜಗಳ ಕೊಲೆಯಲ್ಲಿ ಅಂತ್ಯ: ಬ್ಯಾಂಕ್ ಕಾವಲುಗಾರ ಹತ್ಯೆ ಪ್ರಕರಣದಲ್ಲಿ ಇಬ್ಬರ ಬಂಧನ
ಕಾಸರಗೋಡು: ಬದಿಯಡ್ಕ ಸಮೀಪದ ಮಾರ್ಪನಡ್ಕದಲ್ಲಿ ನಡೆದ ಬ್ಯಾಂಕ್ ಕಾವಲುಗಾರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಂಬ್ಡಾಜೆಯ ಕಿರಣ್ (30) ಮತ್ತು ಕರುವತ್ತಡ್ಕದ ಅಖಿಲೇಶ್ (25) ಎಂದು ಗುರುತಿಸಲಾಗಿದೆ.ಮಾರ್ಪನಡ್ಕ ಬೆದ್ರಕೂಡ್ಲುವಿನ ನಿವಾಸಿಯಾಗಿದ್ದ ಸುರೇಶ್ (42) ಅವರು ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಬ್ಯಾಂಕ್ ಆವರಣದಲ್ಲೇ ನಡೆದ ಕ್ರಿಕೆಟ್ ಪಂದ್ಯಾಟದ ವಿಚಾರಕ್ಕೆ ಸಂಬಂಧಿಸಿದ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು ಹಲ್ಲೆಗೆ ತಿರುಗಿದೆ ಎನ್ನಲಾಗಿದೆ. ಘಟನೆಯ…
-

ಪೊಲೀಸರು ಮತ್ತು ಪ್ರಭಾವಿಗಳೇ ಈಕೆಯ ಟಾರ್ಗೆಟ್: ಅತ್ಯಾಚಾರ ದೂರು ನೀಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಕಿಲಾಡಿ ಮಹಿಳೆ ಕೊನೆಗೂ ಅರೆಸ್ಟ್!
ಮ್ಯಾಟ್ರಿಮೋನಿ ಆ್ಯಪ್ಗಳನ್ನು ಬಳಸಿಕೊಂಡು ಶ್ರೀಮಂತರು, ಪ್ರಭಾವಿ ವ್ಯಕ್ತಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನೇ ಗುರಿಯಾಗಿಸಿ ಅತ್ಯಾಚಾರ ಮತ್ತು ವಂಚನೆಯ ಸುಳ್ಳು ದೂರುಗಳನ್ನು ನೀಡಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಮಹಿಳೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ರೇಷ್ಮಾ ಶಂಕರ್ ಮುತಾಗರ್ ಎಂದು ಗುರುತಿಸಲಾಗಿದ್ದು, ಈಕೆಯ ಕೃತ್ಯಗಳ ಹಿನ್ನೆಲೆಯಲ್ಲಿ ಪೊಲೀಸರು ಈಗ ಈಕೆಯ ಮೇಲೆ ‘ರೌಡಿಶೀಟರ್’ ದಾಖಲಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ. ರಾಮರಾಜನ್ ತಿಳಿಸಿದ್ದಾರೆ.ಮ್ಯಾಟ್ರಿಮೋನಿಯಲ್ಲಿ ಬಲೆ, ನಕಲಿ ಫೋಟೋ ಅಸ್ತ್ರ! ಈ…
-

ನದಿ ಮತ್ತು ಕಾಲುವೆಗೆ ಎಸೆದ ಕುಟುಂಬದ ನಾಲ್ವರ ದೇಹ ಭಾಗಗಳು: ಕೈಮೂರ್ ಭೀಕರ ಕೊಲೆ ಪ್ರಕರಣ
ಪಾಟ್ನಾ: ಹಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಿರಿಯ ಸಹೋದರನೇ ತನ್ನ ಅಣ್ಣ, ಅತ್ತಿಗೆ ಹಾಗೂ ಅವರ ಇಬ್ಬರು ಮುಗ್ಧ ಮಕ್ಕಳನ್ನು ಉಸಿರುಗಟ್ಟಿಸಿ, ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಸಾಕ್ಷ್ಯ ನಾಶಪಡಿಸಲು ನಾಲ್ವರ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್ಕೇಸ್ ಹಾಗೂ ಚೀಲಗಳಲ್ಲಿ ತುಂಬಿ ವಿವಿಧ ನದಿ, ಕಾಲುವೆಗಳಿಗೆ ಎಸೆದಿದ್ದಾನೆ. ರಹಸ್ಯ ಬಯಲಾಗಿದ್ದು ಹೇಗೆ? ಮೇ…
-

ಮೊಬೈಲ್ಗೆ ಬಂದ ಲಿಂಕ್ ಕ್ಲಿಕ್ ಮಾಡಿ ಲಕ್ಷಾಂತರ ಕಳೆದುಕೊಂಡ ವ್ಯಕ್ತಿ
ಮಂಗಳೂರು: ಯಾರೋ ಅಪರಿಚಿತ ವಂಚಕರು ಮೊಬೈಲ್ಗೆ ಲಿಂಕ್ ಇರುವ ಎಸ್ಎಂಎಸ್ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಮೂಲಕ ವ್ಯಕ್ತಿಯೊಬ್ಬರ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ₹6,91,534 ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಕಾವೂರು ಮತ್ತು ಕುಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ತರು ಯೂನಿಯನ್ ಬ್ಯಾಂಕ್ನ ಕಾವೂರು ಶಾಖೆಗೆ ತೆರಳಿ ಖಾತೆಯ ಸ್ಟೇಟ್ಮೆಂಟ್ ಪರಿಶೀಲಿಸಿದಾಗ, ಮೇ 3 ರಂದು ಯುಪಿಐ (UPI) ಮೂಲಕ ಅವರ ಖಾತೆಯಿಂದ ಪೇಮೆಂಟ್ಸ್ ಬ್ಯಾಂಕ್ನ ಖಾತೆಯೊಂದಕ್ಕೆ ಹಂತ ಹಂತವಾಗಿ…
-

ಬ್ಯಾಗ್ ಆರ್ಡರ್ ಮಾಡಲು ಹೋಗಿ ಸೈಬರ್ ಖದೀಮರ ಬಲೆಗೆ ಬಿದ್ದ ಮಹಿಳೆ
ಉಡುಪಿ: ಇನ್ಸ್ಟಾಗ್ರಾಮ್ ಜಾಹೀರಾತು ನಂಬಿ ಹ್ಯಾಂಡ್ ಬ್ಯಾಗ್ ಆರ್ಡರ್ ಮಾಡಲು ಹೋದ ಮಹಿಳೆಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಹಂತ ಹಂತವಾಗಿ ಬರೋಬ್ಬರಿ ₹9,00,442 ಕಳೆದುಕೊಂಡಿರುವ ದಾರುಣ ಘಟನೆ ಸಂತೆಕಟ್ಟೆ ಸಮೀಪ ನಡೆದಿದೆ. ಸಂತೆಕಟ್ಟೆಯ ಶಾಂತಿವನ ನಿವಾಸಿ ವಂಚನೆಗೊಳಗಾದ ಮಹಿಳೆ. ಇವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ bagvogue.co__ ಎಂಬ ಐಡಿಯಿಂದ ಬಂದಿದ್ದ ಹ್ಯಾಂಡ್ ಬ್ಯಾಗ್ ಮಾರಾಟದ ಜಾಹೀರಾತನ್ನು ನೋಡಿ, ಬ್ಯಾಗ್ ಖರೀದಿಸಲು ಮೆಸೇಜ್ ಮಾಡಿದ್ದರು. ವಂಚಕರು ಬ್ಯಾಗ್ ಬೆಲೆ ₹899 ಮತ್ತು ಡೆಲಿವರಿ ಚಾರ್ಜ್ ₹1950 ಸೇರಿ…
-

ಶ್ರೀಮಂತ ಯುವಕರನ್ನು ಗುರಿಯಾಗಿಸಿದ್ದ ಗ್ಯಾಂಗ್ ಪೊಲೀಸರ ಬಲೆಗೆ
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ದಾವಣಗೆರೆಯಲ್ಲಿ ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸಿ ಹಣ, ಒಡವೆ ಸುಲಿಗೆ ಮಾಡುತ್ತಿದ್ದ ಐದು ಮಂದಿ ಕಿಲಾಡಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಹಣ ಹಾಗೂ ಕೌಟುಂಬಿಕ ದ್ವೇಷದ ಹಿನ್ನೆಲೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹನಿಟ್ರ್ಯಾಪ್ ಪ್ರಕರಣದ ವಿವರ ಪಂಚಮಿ (34), ಜಗದೀಶ (35), ಗಂಗಾ ಮಲ್ಲೇಶ್ ನಾಯ್ಕ (25) ಹಾಗೂ ವೆಂಕಟೇಶ್ (30) ಎಂಬವರೇ ಹನಿಟ್ರ್ಯಾಪ್ ಕೇಸ್ನಲ್ಲಿ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











