Category: ಕರಾವಳಿ
-

ಮಂಗಳೂರು: ಗಾಂಜಾ ಮಾರಾಟ,ಎರಡು ಪ್ರತ್ಯೇಕ ಪ್ರಕರಣ – ಆರೋಪಿಗಳ ಬಂಧನ
ಮಂಗಳೂರು: ನಗರದಲ್ಲಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲಗಳ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಮಂಗಳೂರು ನಗರ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ MDMA ಹಾಗೂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ 1: ಪಂಪ್‌ವೆಲ್‌ನಲ್ಲಿ ಆಟೋದಲ್ಲಿ MDMA ಮಾರಾಟ – ಕೇರಳದ ವ್ಯಕ್ತಿ ಬಂಧನ ಆಗಸ್ಟ್ 18 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್‌ವೆಲ್‌ನಿಂದ ನಂತೂರು ಕಡೆಗೆ ತೆರಳುವ ಸರ್ವಿಸ್ ರಸ್ತೆಯಲ್ಲಿ ಆಟೋ ರಿಕ್ಷಾದಲ್ಲಿ ವ್ಯಕ್ತಿಯೊಬ್ಬ MDMA ಮಾರಾಟ…
-

ಮಂಗಳೂರು: ಪಾಂಡೇಶ್ವರದಲ್ಲಿ ನೀರಿನ ಅಭಾವ: ಎರಡು ದಿನಕ್ಕೊಮ್ಮೆ ನೀರು- ಕುಡಿಯುವ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆ..!!
ಮಂಗಳೂರಿನ ಪಾಂಡೇಶ್ವರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಇಲ್ಲಿನ ಶಿವನಗರದ ನಿವಾಸಿಗಳಿಗೆ ಎರಡು ದಿನಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಜನರು ಪರದಾಡುವಂತಾಗಿದೆ. ಒಂದೆಡೆ ಕುಡಿಯುವ ನೀರಿಗಾಗಿ ಜನರು ಕಾದು ಕುಳಿತಿದ್ದರೆ, ಮತ್ತೊಂದೆಡೆ ಮಹಾನಗರ ಪಾಲಿಕೆಯ ನೀರನ್ನು ವಾಹನ ಸರ್ವಿಸ್ ಸ್ಟೇಷನ್‌ಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜನಸಾಮಾನ್ಯರಿಗೆ ಸಮರ್ಪಕವಾಗಿ ನೀರು ಸಿಗದಿರುವ ಸಂದರ್ಭದಲ್ಲಿ, ವಾಣಿಜ್ಯ ಉದ್ದೇಶಗಳಿಗೆ ಪಾಲಿಕೆ ನೀರು ಬಳಕೆಯಾಗುತ್ತಿರುವುದು ಎಷ್ಟು ಸರಿ?? ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆ ಹೊಂದಿರುವ ಮಂಗಳೂರಿನಲ್ಲಿ…
-

ಬೆಳ್ತಂಗಡಿ: ಬಸ್ ನಿಲ್ದಾಣ ಬಳಿ ವ್ಯಕ್ತಿಯ ಮೃತದೇಹ ಪತ್ತೆ..!!
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಬಸ್ ನಿಲ್ದಾಣದ ಬಳಿಯ ಭೂಷಣ್ ಬಾರ್ ಎದುರುಗಡೆ ವೃದ್ಧರೊಬ್ಬರ ಮೃತದೇಹ ಆ.18 ರಂದು ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚಾಳ ನಿವಾಸಿ ಮರಿಯಪ್ಪ (70ವ) ಎಂದು ಪೊಲೀಸ್ ತನಿಖೆಯಿಂದ ಗುರುತಿಸಲಾಗಿದೆ. ಈ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಸ್ ನಿಲ್ದಾಣದ ಸಮೀಪ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮೂಡಿಸಿತ್ತು. ಘಟನಾ ಸ್ಥಳಕ್ಕೆ ಬೆಳ್ತಂಗಡಿ…
-

ಬಂಟ್ವಾಳ: ವೃದ್ದ ಮಹಿಳೆಯಿಂದ ಚಿನ್ನ ದೋಚಿದ ಆರೋಪಿ ಬಂಧನ
ಬಂಟ್ವಾಳ ಸಮೀಪ ಮನೆಯಲ್ಲಿ ಒಬ್ಬಂಟಿಯಾಗಿದ್ದ 82 ವರ್ಷದ ವೃದ್ಧೆಯ ಮುಖಕ್ಕೆ ಬಟ್ಟೆ ಕಟ್ಟಿ, ಕೈಯಲ್ಲಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಗಳನ್ನು ಬಲಾತ್ಕಾರವಾಗಿ ಎಳೆದು ಸುಲಿಗೆ ಮಾಡಿದ್ದ ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸರು ಭೇದಿಸಿದ್ದು, ಕೃತ್ಯವೆಸಗಿದ ವೃದ್ಧೆಯ ಸ್ವಂತ ಮೊಮ್ಮಗನನ್ನೇ ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ತೆಂಕ ಕಜೆಕಾರು ನಿವಾಸಿ ಶಬೀರ್ (33) ಬಂಧಿತ ಆರೋಪಿ.ಬಂಟ್ವಾಳ ತೆಂಕ ಕಜೆಕಾರು ಉದ್ದದ ಗುಡ್ಡೆ ಎಂಬಲ್ಲಿ ಅವ್ವಮ್ಮ (82) ಎಂಬವರು ಆ.14 ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ವ್ಯಕ್ತಿಯೋರ್ವ ಮುಖಕ್ಕೆ ಬಟ್ಟೆ ಸುತ್ತಿಕೊಂಡು…
-

ಮಂಗಳೂರು ಖಜಾನೆ ಕಚೇರಿ ಎಫ್‌ಡಿಎ ನಾಪತ್ತೆಯಾದ ರೋಹನ್
ಮಂಗಳೂರು: ನಗರದ ಜಿಲ್ಲಾ ಖಜಾನೆ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ (ಎಫ್‌ಡಿಎ) ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರಿನ ನಿವಾಸಿ ರೋಹನ್ ಎಂ. (33) ಎಂಬುವವರು ಆಗಸ್ಟ್ ೧ರಿಂದ ನಾಪತ್ತೆಯಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಬೆಂಗಳೂರಿನ ನಂಜಮ್ಮ ಲೇಔಟ್ ನಿವಾಸಿ ಮುನಿರಾಜ್ ರೆಡ್ಡಿ ಅವರ ಪುತ್ರ ರೋಹನ್, ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಜಿಲ್ಲಾ ಖಜಾನೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹುಣ್ಣಿಮೆಯ ಹಿನ್ನೆಲೆ ಗುಜರಾತ್‌ಗೆ ತೆರಳುವುದಾಗಿ ತಿಳಿಸಿ ರೋಹನ್ ಮನೆಯಿಂದ ಹೊರಟಿದ್ದರು. ಆದರೆ, ಬಳಿಕ ಅವರು ವಾಪಸ್ ಆಗಿಲ್ಲ. ನಾಪತ್ತೆಯಾದ…
-

ದೊಡ್ಡ ಸಂಸ್ಥೆಗಳಿಗೂ ವಿನಾಯಿತಿ ಇಲ್ಲ: ಆಹಾರ ತಪಾಸಣೆ ತೀವ್ರಗೊಳಿಸಿದ ಸರ್ಕಾರ
ಮಂಗಳೂರು: ಆಹಾರ ತಯಾರಿಕೆ ಮತ್ತು ಮಾರಾಟ ಮಾಡುವ ಸಂಸ್ಥೆಗಳು ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಮಂಗಳೂರಿನಲ್ಲಿ ಆಹಾರ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದಿಢೀರ್ ತಪಾಸಣೆ ಹಾಗೂ ದಾಳಿಗಳು ಮುಂದುವರಿಯಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.ಭಾನುವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬೆಂಗಳೂರಿನಲ್ಲಿ ಆಹಾರ ತಯಾರಿಕಾ ಸಂಸ್ಥೆಗಳ ವಿರುದ್ಧ ಈಗಾಗಲೇ ದಾಳಿ ಮತ್ತು ತಪಾಸಣೆ ನಡೆಸಲಾಗುತ್ತಿದ್ದರೂ, ಮಂಗಳೂರಿನಲ್ಲಿ ಇದೇ ರೀತಿಯ ಅಸ್ವಚ್ಛ ಪರಿಸ್ಥಿತಿಗಳು ಕಂಡುಬರುತ್ತಿರುವುದು…
-

ಮಂಗಳೂರಿನಲ್ಲಿ ಮುಂದುವರಿದ ಆಹಾರ ಮಳಿಗೆಗಳ ತಪಾಸಣೆ: ಮೆಕ್‌ಡೊನಾಲ್ಡ್ಸ್ ಪರಿಶೀಲನೆ
ಮಂಗಳೂರು: ನಗರದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಕೈಗೊಂಡಿರುವ ಆಹಾರ ಮಳಿಗೆಗಳ ತಪಾಸಣಾ ಕಾರ್ಯಾಚರಣೆ ಮುಂದುವರಿದಿದ್ದು, ರವಿವಾರ ನಗರದ ಕೆ.ಎಸ್.ರಾವ್ ರಸ್ತೆಯ ಮಾಲ್‌ನಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆ ‘ಮೆಕ್‌ಡೊನಾಲ್ಡ್ಸ್’ (McDonald’s) ಔಟ್‌ಲೆಟ್ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಶನಿವಾರದಂದು ಅದೇ ಮಾಲ್‌ನಲ್ಲಿರುವ ಕೆಎಫ್‌ಸಿ (KFC) ಮಳಿಗೆಯ ಮೇಲೆ ದಾಳಿ ನಡೆಸಿ ಕಲುಷಿತ ಆಹಾರ ಪೂರೈಕೆಯನ್ನು ಪತ್ತೆ ಹಚ್ಚಿದ್ದ ಅಧಿಕಾರಿಗಳ ತಂಡ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದಂತೆ ಎರಡನೇ ದಿನವೂ ತಮ್ಮ ಜಾಗೃತಿ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಜಿಲ್ಲಾ…
-

ಕಡಬ: ಕುಟುಂಬದ ಮೇಲೆ ಅನೈತಿಕ ಪೊಲೀಸ್‌ಗಿರಿ ಆರೋಪ- 9 ಮಂದಿ ವಿರುದ್ಧ ಎಫ್‌ಐಆರ್ ದಾಖಲು
ಕಡಬ ತಾಲೂಕಿನ ಕೋಲ್ಪೆಯಲ್ಲಿ ಯುವತಿ ಹಾಗೂ ಆಕೆಯ ಕುಟುಂಬದ ಸದಸ್ಯರ ಮೇಲೆ ಗುಂಪೊಂದು ನೈತಿಕ ಪೊಲೀಸ್‌ಗಿರಿ ನಡೆಸಿ, ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 12ರ ರಾತ್ರಿ ಈ ಕೃತ್ಯ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ನೀಡಿದ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಮೆಲ್ಕಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೋಲ್ಪೆಯ 18 ವರ್ಷದ ಯುವತಿ, ಆಗಸ್ಟ್ 12ರಂದು ಕೆಲಸ ಮುಗಿದ ಬಳಿಕ ತಮ್ಮ ಅಂಗಡಿ…
-

ಮಂಗಳೂರು KFC ವಿರುದ್ಧ ಗಂಭೀರ ಆರೋಪ: ಹಳೆಯ ಚಿಕನ್ ಬಳಕೆ ಶಂಕೆ, FSSAI ನವೀಕರಣಕ್ಕೆ ವಿರೋಧ
ಮಂಗಳೂರು: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಚಿಕನ್‌ನಿಂದ ದುರ್ವಾಸನೆ ಬರುತ್ತಿದೆ ಎಂಬ ಗ್ರಾಹಕರ ದೂರಿನ ಬೆನ್ನಲ್ಲೇ, ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ KFC ಮಳಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಶನಿವಾರ ದಿಢೀರ್ ಪರಿಶೀಲನೆ ನಡೆಸಿದರು. ತಪಾಸಣೆ ವೇಳೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಚಿಕನ್ ಉತ್ಪನ್ನಗಳ ದಾಸ್ತಾನು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಉತ್ಪನ್ನಗಳಿಗೆ ಆರು ತಿಂಗಳಿಗಿಂತ ಹೆಚ್ಚಿನ ಶೆಲ್ಫ್ ಲೈಫ್ ಇದೆ ಎಂದು ಮಳಿಗೆ ಸಿಬ್ಬಂದಿ ಅಧಿಕಾರಿಗಳಿಗೆ…
-

ಮಂಗಳೂರು ಸಿಟಿ ಸೆಂಟರ್‌ನ KFC ಮೇಲೆ ಆರೋಗ್ಯ ಇಲಾಖೆ ದಾಳಿ- ಕೊಳೆತ ಚಿಕನ್ ಮಾಂಸ ಪತ್ತೆ
ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿರುವ KFC ಔಟ್‌ಲೆಟ್‌ನಲ್ಲಿ ಕೊಳೆತ ಚಿಕನ್ ನೀಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಹಲವು ತಿಂಗಳ ಹಿಂದೆ ಪ್ಯಾಕ್ ಮಾಡಲಾಗಿದ್ದ ಚಿಕನ್ ಮಾಂಸ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಅಧಿಕಾರಿಗಳು ಮೂರು ಮಾದರಿಯ ಚಿಕನ್ ಹಾಗೂ ಬಳಸಲಾಗುತ್ತಿದ್ದ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪರಿಶೀಲನೆಯ ಬಳಿಕ KFC ಔಟ್‌ಲೆಟ್‌ನ್ನು ಬಂದ್ ಮಾಡಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











