, ,

ಮಂಗಳೂರು KFC ವಿರುದ್ಧ ಗಂಭೀರ ಆರೋಪ: ಹಳೆಯ ಚಿಕನ್ ಬಳಕೆ ಶಂಕೆ, FSSAI ನವೀಕರಣಕ್ಕೆ ವಿರೋಧ

ಮಂಗಳೂರು: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಚಿಕನ್‌ನಿಂದ ದುರ್ವಾಸನೆ ಬರುತ್ತಿದೆ ಎಂಬ ಗ್ರಾಹಕರ ದೂರಿನ ಬೆನ್ನಲ್ಲೇ, ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ KFC ಮಳಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಶನಿವಾರ ದಿಢೀರ್ ಪರಿಶೀಲನೆ ನಡೆಸಿದರು. ತಪಾಸಣೆ ವೇಳೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಚಿಕನ್ ಉತ್ಪನ್ನಗಳ ದಾಸ್ತಾನು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಉತ್ಪನ್ನಗಳಿಗೆ ಆರು ತಿಂಗಳಿಗಿಂತ ಹೆಚ್ಚಿನ ಶೆಲ್ಫ್ ಲೈಫ್ ಇದೆ ಎಂದು ಮಳಿಗೆ ಸಿಬ್ಬಂದಿ ಅಧಿಕಾರಿಗಳಿಗೆ…

ಮಂಗಳೂರು: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಚಿಕನ್‌ನಿಂದ ದುರ್ವಾಸನೆ ಬರುತ್ತಿದೆ ಎಂಬ ಗ್ರಾಹಕರ ದೂರಿನ ಬೆನ್ನಲ್ಲೇ, ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ KFC ಮಳಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಶನಿವಾರ ದಿಢೀರ್ ಪರಿಶೀಲನೆ ನಡೆಸಿದರು.

ತಪಾಸಣೆ ವೇಳೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಚಿಕನ್ ಉತ್ಪನ್ನಗಳ ದಾಸ್ತಾನು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಉತ್ಪನ್ನಗಳಿಗೆ ಆರು ತಿಂಗಳಿಗಿಂತ ಹೆಚ್ಚಿನ ಶೆಲ್ಫ್ ಲೈಫ್ ಇದೆ ಎಂದು ಮಳಿಗೆ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ಹಳೆಯ ದಿನಾಂಕದ ಮಾಂಸವನ್ನು ಬಳಕೆ ಮಾಡಲಾಗುತ್ತಿದೆಯೇ ಅಥವಾ ಆಹಾರ ತಯಾರಿಕೆಯಲ್ಲಿ ಗುಣಮಟ್ಟದ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಆಫರ್‌ಗಾಗಿ ಹಳೆಯ ಚಿಕನ್ ಬಳಸಲಾಗುತ್ತಿದೆ ಎಂದು ವರದಿಯಾಗಿದೆ

ಇದರ ನಡುವೆ, ಮಳಿಗೆಯಲ್ಲಿ ನೀಡಲಾಗುತ್ತಿರುವ ಆಫರ್‌ಗಳಿಗಾಗಿ ಹಳೆಯ ದಿನಾಂಕದ ಚಿಕನ್ ಅಥವಾ ಬಳಕೆಗೆ ನಿಗದಿಪಡಿಸಿದ ದಿನಾಂಕ ಮೀರಿರುವ ಮಾಂಸವನ್ನು ಬಳಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಆಫರ್‌ಗಳಲ್ಲಿ ಬಳಸುವ ಚಿಕನ್‌ನ ಗುಣಮಟ್ಟ ಹಾಗೂ ಅದರ ಪ್ಯಾಕಿಂಗ್ ದಿನಾಂಕದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆಯೂ ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸಬೇಕಾಗಿದೆ.

FSSAI ಪರವಾನಗಿ ನವೀಕರಣದ ಬಗ್ಗೆಯೂ ಪ್ರಶ್ನೆ

ಕೊಳೆತ ಅಥವಾ ಗುಣಮಟ್ಟಕ್ಕೆ ಯೋಗ್ಯವಲ್ಲದ ಮಾಂಸ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಮಳಿಗೆಯ FSSAI ಪರವಾನಗಿಯನ್ನು ನವೀಕರಿಸಬಾರದು ಎಂಬ ಆಗ್ರಹವೂ ವ್ಯಕ್ತವಾಗಿದೆ. ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಗಂಭೀರವಾಗಿದ್ದರೆ, ಪರವಾನಗಿ ನವೀಕರಣದ ಕುರಿತು ಆಹಾರ ಸುರಕ್ಷತಾ ಇಲಾಖೆ ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ಅದೇ ರೀತಿ, ಮಂಗಳೂರು ಮಹಾನಗರ ಪಾಲಿಕೆಯ ಸಂಬಂಧಪಟ್ಟ ಹೆಲ್ತ್ ಇನ್ಸ್‌ಪೆಕ್ಟರ್ (ಆರೋಗ್ಯ ನಿರೀಕ್ಷಕ) ಕೂಡ ಮಳಿಗೆಯ ಪರವಾನಗಿ ನವೀಕರಣದ ವಿಚಾರದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಮಳಿಗೆಯಲ್ಲಿ ಪತ್ತೆಯಾದ ಮಾಂಸದ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕುರಿತು FSSAI ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.

ಕರ್ನಾಟಕದ ಎಲ್ಲಾ KFC ಮಳಿಗೆಗಳಿಗೆ ದಾಳಿ ನಡೆಸಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು, ಅಧಿಕಾರಿಗಳು ಲಂಚದಾಸೆಗೆ ಯಾವುದೇ ತನಿಖೆಯಲ್ಲಿ ಉಲ್ಲಘಂನೆಯಾಗರದು, ಪಾರದರ್ಶಕ ತನಿಖೆ ನಡೆಸಿ ಗ್ರಾಹಕರ ಆರೋಗ್ಯದ ಜೋತೆ ಆಟವಾಡುವ KFC ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed