Category: ಕರಾವಳಿ

  • ಬೆಳ್ಳಂ ಬೆಳಗ್ಗೆ ಉಡುಪಿಯಲ್ಲಿ ಫೈರಿಂಗ್​, ನಡುರಸ್ತೆಯಲ್ಲೇ ಗುಂಡಿಕ್ಕಿ ಬರ್ಬರ ಹತ್ಯೆ!!
    , ,

    ಬೆಳ್ಳಂ ಬೆಳಗ್ಗೆ ಉಡುಪಿಯಲ್ಲಿ ಫೈರಿಂಗ್​, ನಡುರಸ್ತೆಯಲ್ಲೇ ಗುಂಡಿಕ್ಕಿ ಬರ್ಬರ ಹತ್ಯೆ!!

    ಕುಂದಾಪುರ: ವ್ಯಕ್ತಿಯೊಬ್ಬರನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಕುಂದಾಪುರದ ಚರ್ಚ್ ರಸ್ತೆಯಲ್ಲಿರುವ ಹೋಲಿ ರೋಸರಿ ಚರ್ಚ್ ಎದುರು ನಡೆದಿದೆ. ಬಾರ್ಕೂರು-ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಗುಂಡೇಟಿಗೆ ಬಲಿಯಾದವರು. ಐವನ್ ರಿಚರ್ಡ್ ಅವರು ಕೆಲವು ವ್ಯವಹಾರಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಅವರು ತಮ್ಮ ಮೊದಲ ಪತ್ನಿ ಸೆಲ್ಮಾ ಮಸ್ಕರೇನಸ್ ಅವರನ್ನು ತೊರೆದು, ಬಾರ್ಕೂರು ಮೂಲದ ಮಹಿಳೆಯೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಶುಕ್ರವಾರ ಮುಂಜಾನೆ ಮಹಿಳೆಯೊಂದಿಗೆ ಕಾರಿನಲ್ಲಿ ಕುಂದಾಪುರದ ಚರ್ಚ್ ರಸ್ತೆಗೆ ಬಂದಿದ್ದ…

    Continue Reading

  • ಹಣಕ್ಕೆ ಬೇಡಿಕೆ ಆರೋಪ: ಕಾರ್ಕಳ ಡಿವೈಎಸ್ಪಿ ಸೇರಿ ಮೂವರು ಪೊಲೀಸರು ಸಸ್ಪೆಂಡ್
    ,

    ಹಣಕ್ಕೆ ಬೇಡಿಕೆ ಆರೋಪ: ಕಾರ್ಕಳ ಡಿವೈಎಸ್ಪಿ ಸೇರಿ ಮೂವರು ಪೊಲೀಸರು ಸಸ್ಪೆಂಡ್

    ಕಾರ್ಕಳ: ಪೊಲೀಸ್‌ ಇಲಾಖೆ ಕಚೇರಿಯಲ್ಲಿ ಹಣದ ಬೇಡಿಕೆ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಕಾರ್ಕಳ ಡಿವೈಎಸ್‌ಪಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ಪ್ರತಿಕ್ರಿಯಿಸಿ, “ವಿಡಿಯೋಗಳು ಹಾಗೂ ಆರೋಪಗಳ ಆಧಾರದ ಮೇಲೆ ಹೆಚ್ಚುವರಿ ಎಸ್‌ಪಿ ಅವರಿಂದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ತನಿಖಾ ವರದಿಯ ಮೇರೆಗೆ ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಸಂದೀಪ್‌ ಹಾಗೂ…

    Continue Reading

  • ಸಿಎಂ ಡಿಕೆ ಶಿವಕುಮಾರ್ ಪಿಎ ಎಂದು 15 ಲಕ್ಷ ರೂಪಾಯಿ ಪಡೆದು ವಂಚನೆ : ಓರ್ವ ಅರೆಸ್ಟ್
    , ,

    ಸಿಎಂ ಡಿಕೆ ಶಿವಕುಮಾರ್ ಪಿಎ ಎಂದು 15 ಲಕ್ಷ ರೂಪಾಯಿ ಪಡೆದು ವಂಚನೆ : ಓರ್ವ ಅರೆಸ್ಟ್

    ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ (ಪಿಎ) ಎಂದು ಸುಳ್ಳು ಹೇಳಿ, ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ (30) ಎಂದು ಗುರುತಿಸಲಾಗಿದೆ. ವಂಚನೆಗೆ ಒಳಗಾದ ಮಂಜುನಾಥ್ ಹಂಜಿ ನೀಡಿದ ದೂರಿನನ್ವಯ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದೂರುದಾರ ಮಂಜುನಾಥ್ ಹಂಜಿ ಅವರೊಂದಿಗೆ ಆರಂಭದಲ್ಲಿ ಸಲುಗೆ ಬೆಳೆಸಿಕೊಂಡಿದ್ದ ಹೇಮಂತ್ ಕುಮಾರ್,…

    Continue Reading

  • ಮಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ, ಬ್ರಿಟನ್‌ನಿಂದ ಪಾರ್ಸೆಲ್ ಬಂದಿದೆ ಎಂದು ನಂಬಿಸಿ ಮಹಿಳೆಗೆ ವಂಚನೆ!!
    , ,

    ಮಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ, ಬ್ರಿಟನ್‌ನಿಂದ ಪಾರ್ಸೆಲ್ ಬಂದಿದೆ ಎಂದು ನಂಬಿಸಿ ಮಹಿಳೆಗೆ ವಂಚನೆ!!

    ಮಂಗಳೂರು : ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬ ಬ್ರಿಟನ್‌ನಿಂದ ಕಳುಹಿಸಿದ್ದಾನೆ ಎನ್ನಲಾದ ‘ಉಡುಗೊರೆ ಪಾರ್ಸೆಲ್’ ಬಿಡುಗಡೆಗೊಳಿಸುವ ನೆಪದಲ್ಲಿ, ಕಸ್ಟಮ್ಸ್ ಅಧಿಕಾರಿಯಂತೆ ನಟಿಸಿ ಗೃಹಣಿಯೊಬ್ಬರಿಂದ ಬರೋಬ್ಬರಿ ₹2,67,000 ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ. ಗೃಹಣಿ ಶ್ರೀಮತಿ (46) ಅವರಿಗೆ ಸುಮಾರು ಎರಡು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ “ಡಾ. ವಿಲಿಯಮ್ಸ್ ಹೆರ್ಬರ್ಟ್” ಎಂಬ ಪ್ರೊಫೈಲ್‌ನಿಂದ ಪರಿಚಯವಾಗಿತ್ತು. ತಾನು ಯುನೈಟೆಡ್ ಕಿಂಗ್ಡಮ್ (UK) ಮೂಲದವನೆಂದು ಪರಿಚಯಿಸಿಕೊಂಡಿದ್ದ ಈತ, ವಾಟ್ಸಾಪ್ ಹಾಗೂ ಫೇಸ್‌ಬುಕ್ ಮೆಸೆಂಜರ್ ಮೂಲಕ ನಿರಂತರ ಸಂಪರ್ಕದಲ್ಲಿದ್ದು ದೂರುದಾರರ ವಿಶ್ವಾಸ ಗಳಿಸಿದ್ದ.…

    Continue Reading

  • ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ ಪರೀಕ್ಷೆ – ವಿದ್ಯಾರ್ಥಿಗೆ ಪಾಸಿಟಿವ್
    , ,

    ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ ಪರೀಕ್ಷೆ – ವಿದ್ಯಾರ್ಥಿಗೆ ಪಾಸಿಟಿವ್

    ಮಂಗಳೂರು: ಯುವಜನರಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸರು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ದಿಢೀರ್ ಡ್ರಗ್ ಪರೀಕ್ಷೆ ನಡೆಸಿದರು. ನಗರದ ಕೊಟೆಕಾರ್ ಬೀರಿ ಹಾಗೂ ಕೊಣಾಜೆ ಬಂಟ್ಸ್ ಭವನ ಸಮೀಪ ಈ ವಿಶೇಷ ಕಾರ್ಯಾಚರಣೆ ನಡೆಯಿತು. ದಕ್ಷಿಣ ಹಾಗೂ ಕೇಂದ್ರ ಉಪವಿಭಾಗಗಳ ಸಹಾಯಕ ಪೊಲೀಸ್ ಆಯುಕ್ತರ (ACP) ನೇತೃತ್ವದಲ್ಲಿ, ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಸಂಜೆ 4.30ರಿಂದ 6.00 ಗಂಟೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿ ಖಾಸಗಿ ಹಾಗೂ ಕಾಲೇಜು…

    Continue Reading

  • ಮಂಗಳೂರು: ಗಂಗಾಧರ ಪಾಂಗಾಳ ಕೊಲೆ ಪ್ರಕರಣ- 12 ವರ್ಷಗಳ ಬಳಿಕ ಐತಿಹಾಸಿಕ ತೀರ್ಪು..!
    , ,

    ಮಂಗಳೂರು: ಗಂಗಾಧರ ಪಾಂಗಾಳ ಕೊಲೆ ಪ್ರಕರಣ- 12 ವರ್ಷಗಳ ಬಳಿಕ ಐತಿಹಾಸಿಕ ತೀರ್ಪು..!

    ಮಂಗಳೂರು: 2014ರಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳಿಯಾ ಗಣೇಶ್ ಶಿಪ್ಪಿಂಗ್ ಗೋಡೌನ್ ಸಮೀಪ ನಡೆದ ಗಂಗಾಧರ ಪಾಂಗಾಳ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿದಂತೆ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿರುವ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2014ರ ಮೇ 15ರಂದು ಗಂಗಾಧರ ಪಾಂಗಾಳ ಅವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳಾದ ಸತೀಶ್ ಬೈಕಂಪಾಡಿ, ಪುಷ್ಪರಾಜ್, ಹರೀಶ್ ಬೈಕಂಪಾಡಿ ಹಾಗೂ ಭಾಸ್ಕರ್ ಬೈಕಂಪಾಡಿ ಹಳೆ ದ್ವೇಷದ…

    Continue Reading

  • ಮೊಡಂಕಾಪು: ದೇವಸ್ಥಾನ ಕಳವು ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರು ಆರೋಪಿಗಳ ಬಂಧನ
    , ,

    ಮೊಡಂಕಾಪು: ದೇವಸ್ಥಾನ ಕಳವು ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರು ಆರೋಪಿಗಳ ಬಂಧನ

    ಶ್ರೀಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಹಾಗೂ ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಂಬ್ಳೆ ನಿವಾಸಿ ಸುರೇಶ್ ಹಾಗೂ ಶಾಂತಿಯಂಗಡಿ ನಿವಾಸಿ ಅಬ್ದುಲ್ ರಝಾಕ್ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಕೆಲ ದಿನಗಳ ಹಿಂದೆ ದೇವಸ್ಥಾನದಲ್ಲಿ ಭಕ್ತರು ಸುಮಾರು ನಾಲ್ಕು ದಶಕಗಳಿಂದ ಸಮರ್ಪಿಸಿದ್ದ ತಾಮ್ರ ಹಾಗೂ ಪಿತ್ತಳದ ಪೂಜಾ ಪರಿಕರಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಕಳವಾದ ವಸ್ತುಗಳಲ್ಲಿ ಹಳೆಯ ಕೊಪ್ಪರಿಗೆ, ಆರು ದೀಪಗಳು,…

    Continue Reading

  • ಟೈಮಿಂಗ್ಸ್ ವಿಚಾರಕ್ಕೆ ಚಾಲಕರ ಕಿರಿಕ್; 15 ನಿಮಿಷ ಸಂಚಾರ ಅಸ್ತವ್ಯಸ್ತ,ಬಸ್‌ಗಳು ಪೊಲೀಸ್ ವಶಕ್ಕೆ
    , ,

    ಟೈಮಿಂಗ್ಸ್ ವಿಚಾರಕ್ಕೆ ಚಾಲಕರ ಕಿರಿಕ್; 15 ನಿಮಿಷ ಸಂಚಾರ ಅಸ್ತವ್ಯಸ್ತ,ಬಸ್‌ಗಳು ಪೊಲೀಸ್ ವಶಕ್ಕೆ

    ಕಾಪು : ಉಡುಪಿ ಮತ್ತು ಮಂಗಳೂರು ನಡುವೆ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳ ನಡುವಿನ ಟೈಮಿಂಗ್ಸ್ ಸ್ಪರ್ಧೆ ಮತ್ತೊಮ್ಮೆ ಮಿತಿಮೀರಿದ್ದು, ತುಂಬಿದ ಪ್ರಯಾಣಿಕರಿದ್ದಾಗಲೇ ಬಸ್‌ಗಳನ್ನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ರಸ್ತೆ ತಡೆದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ ಭೀಕರ ಘಟನೆ ಸೋಮವಾರ (ಜುಲೈ 27) ಬೆಳಿಗ್ಗೆ ಕಾಪು ಬಸ್ ನಿಲ್ದಾಣದ ಸರ್ವಿಸ್ ರಸ್ತೆಯಲ್ಲಿ ಸಂಭವಿಸಿದೆ. ಉಡುಪಿಯಿಂದ ಮಂಗಳೂರಿಗೆ ಹೊರಟಿದ್ದ ‘ಸಂದೇಶ್ ಟ್ರಾವೆಲ್ಸ್’ ಹಾಗೂ ‘ಆನಂದ್ ಟ್ರಾವೆಲ್ಸ್’ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರ ನಡುವೆ ಟೈಮಿಂಗ್ಸ್ ವಿಚಾರವಾಗಿ ಉದ್ಯಾವರದಿಂದಲೇ ಜಗಳ ಆರಂಭವಾಗಿತ್ತು.…

    Continue Reading

  • ಶಾಲಾ ವಾಹನದ ಫಿಟ್ನೆಸ್, ವಿಮೆ ಇಲ್ಲದ ಆರೋಪ: ಕಠಿಣ ತನಿಖೆಗೆ SDPI ಒತ್ತಾಯ
    , ,

    ಶಾಲಾ ವಾಹನದ ಫಿಟ್ನೆಸ್, ವಿಮೆ ಇಲ್ಲದ ಆರೋಪ: ಕಠಿಣ ತನಿಖೆಗೆ SDPI ಒತ್ತಾಯ

    ಬಂಟ್ವಾಳ: ತಾಲೂಕಿನ ಬರಿಮಾರ್‌ನಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು 6 ವರ್ಷದ ಎಲ್ ಕೆ ಜಿ ವಿದ್ಯಾರ್ಥಿನಿ ಮೃತಪಟ್ಟಿರುವ ಹಾಗೂ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ದುರಂತ ಅತ್ಯಂತ ಆಘಾತಕಾರಿ ಮತ್ತು ದುಃಖಕರ ಘಟನೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕದ ಆಡಳಿತ ಮಂಡಳಿಯ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ವರದಿಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಮಕ್ಕಳನ್ನು ಸಾಗಿಸುತ್ತಿದ್ದ ಶಾಲಾ ವಾಹನಕ್ಕೆ ಅಗತ್ಯವಿರುವ ಫಿಟ್ನೆಸ್ ಪ್ರಮಾಣಪತ್ರ ಮತ್ತು ವಿಮೆ ಚಾಲ್ತಿಯಲ್ಲಿರಲಿಲ್ಲ ಎಂಬ ಮಾಹಿತಿ…

    Continue Reading

  • ‘ಪೆನ್ಷನ್ ಕಾರ್ಡ್’ ಆಮಿಷ; ಕಾರ್ಕಳದ ಹಿರಿಯರಿಗೆ ₹3.73 ಲಕ್ಷ ವಂಚನೆ
    , ,

    ‘ಪೆನ್ಷನ್ ಕಾರ್ಡ್’ ಆಮಿಷ; ಕಾರ್ಕಳದ ಹಿರಿಯರಿಗೆ ₹3.73 ಲಕ್ಷ ವಂಚನೆ

    ಕಾರ್ಕಳ : ಫೇಸ್‌ಬುಕ್‌ನಲ್ಲಿ ಬಂದ ಲಿಂಕ್ ಒಂದನ್ನು ನಂಬಿ ನಿವೃತ್ತ ಪೆನ್ಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ ಕಾರ್ಕಳದ ಹಿರಿಯ ನಾಗರಿಕರೊಬ್ಬರು ₹3,73,000 ಹಣ ಕಳೆದುಕೊಂಡು ಸೈಬರ್ ವಂಚನೆಗೊಳಗಾಗಿದ್ದಾರೆ. ದಿನಾಂಕ 13-07-2026 ರಂದು ಸಂಜೆ 5:30 ರ ಸುಮಾರಿಗೆ ದೂರುದಾರರ ಫೇಸ್‌ಬುಕ್ ಖಾತೆಗೆ ‘ಕೆನರಾ ರಿಟೈರ್ಡ್ ಪೆನ್ಸನ್ ಕಾರ್ಡ್’ ಹೆಸರಿನ ಖಾತೆಯಿಂದ ಲಿಂಕ್ ಬಂದಿತ್ತು. ಅದನ್ನು ತೆರೆದ ಅವರು ಕಾರ್ಡ್‌ಗಾಗಿ ಅಪ್ಲೈ ಮಾಡಿದ್ದರು. ತಕ್ಷಣವೇ +91 6744250286, 8655389531 ಸಂಖ್ಯೆಗಳಿಂದ ಕರೆ ಮಾಡಿದ ವ್ಯಕ್ತಿ, ತಾನು ‘ಬ್ಯಾಂಕಿನ ಅಸಿಸ್ಟೆಂಟ್…

    Continue Reading

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports