Category: ಕರಾವಳಿ

  • ಅಪಘಾತದಲ್ಲಿ ಗಾಯಗೊಂಡು 6 ತಿಂಗಳು ಕೋಮಾದಲ್ಲಿದ್ದ ಯುವಕ ವಿಧಿವಶ
    , ,

    ಅಪಘಾತದಲ್ಲಿ ಗಾಯಗೊಂಡು 6 ತಿಂಗಳು ಕೋಮಾದಲ್ಲಿದ್ದ ಯುವಕ ವಿಧಿವಶ

    ಪುತ್ತೂರು: ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿ ಜೂನ್ 14ರಂದು ನಿಧನರಾಗಿದ್ದಾರೆ.ಮೃತರು ಮೂಲತಃ ಮಠ ಗ್ರಾಮದ ನಿವಾಸಿಯಾಗಿದ್ದು, ಸದ್ಯ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಬದ್ರುದ್ದೀನ್ ಮಠ ಎಂದು ಗುರುತಿಸಲಾಗಿದೆ. ಇವರು ಕೂಟೇಲ್‌ನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.ಘಟನೆಯ ಹಿನ್ನೆಲೆ:2025ರ ಡಿಸೆಂಬರ್ 11ರ ರಾತ್ರಿ ಬದ್ರುದ್ದೀನ್ ಅವರು ಉಪ್ಪಿನಂಗಡಿಯಿಂದ ನೆಕ್ಕಿಲಾಡಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಎದುರಿನಿಂದ ಬಂದ ಕಾರು ಅವರ…

    Continue Reading

  • ಮೆಸೇಜ್ ಕಳುಹಿಸಿದ ಬಳಿಕ ನಾಪತ್ತೆಯಾದ ಉದ್ಯಮಿ; ಪ್ರಕರಣ ದಾಖಲು
    , ,

    ಮೆಸೇಜ್ ಕಳುಹಿಸಿದ ಬಳಿಕ ನಾಪತ್ತೆಯಾದ ಉದ್ಯಮಿ; ಪ್ರಕರಣ ದಾಖಲು

    ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ಔಷಧಕ್ಕೆ ಸಂಬಂಧಿತ ಕಚೇರಿಯನ್ನುನಡೆಸುತ್ತಿದ್ದ ಉದ್ಯಮಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಪತ್ತೆಯಾದ ವ್ಯಕ್ತಿಯನ್ನು ಸುನೀಲ್ ಬಿ. ಎಸ್. (36) ಎಂದು ಗುರುತಿಸಲಾಗಿದೆ. ಅವರು ಬಿಜೈನಲ್ಲಿರುವ ಪಿಜಿ ಯೊಂದರಲ್ಲಿ ವಾಸಿಸುತ್ತಿದ್ದರು.ಕುಟುಂಬದವರು ನೀಡಿರುವ ದೂರಿನ ಪ್ರಕಾರ, ಸುನೀಲ್ ಜೂನ್ 12 ರ ಸಂಜೆ ತಮ್ಮ ಕಚೇರಿಯ ಕೆಲಸವನ್ನು ಮುಗಿಸಿ, ರಾತ್ರಿ ಸುಮಾರು 9 ಗಂಟೆಗೆ ತಮ್ಮ ಸಹೋದರಿಯ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದರು.ಆ ಸಂದೇಶ ಕಳುಹಿಸಿದ ತಕ್ಷಣವೇ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.…

    Continue Reading

  • ಮುಂಗಾರು ಎಫೆಕ್ಟ್: ಗಡಾಯಿಕಲ್ಲು ಚಾರಣಕ್ಕೆ ಮತ್ತೆ ಬ್ರೇಕ್, ಪ್ರವಾಸಿಗರಿಗೆ ನಿರ್ಬಂಧ
    , ,

    ಮುಂಗಾರು ಎಫೆಕ್ಟ್: ಗಡಾಯಿಕಲ್ಲು ಚಾರಣಕ್ಕೆ ಮತ್ತೆ ಬ್ರೇಕ್, ಪ್ರವಾಸಿಗರಿಗೆ ನಿರ್ಬಂಧ

    ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಜಮಲಾಬಾದ್ ಕೋಟೆ ಗಡಾಯಿಕಲ್ಲು ಚಾರಣಕ್ಕೆ ಅರಣ್ಯ ಇಲಾಖೆ ಮತ್ತೆ ನಿರ್ಬಂಧ ಹೇರಿದೆ. ಮಳೆಯ ಕಾರಣ ಕಲ್ಲುಗಳು ಜಾರುವ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಜೂನ್ 14ರಿಂದ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಕುರಿತು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗ ಪ್ರಕಟಣೆ ಹೊರಡಿಸಿದ್ದು, ಸುರಕ್ಷತಾ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಗಡಾಯಿಕಲ್ಲು ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದೆ.ಈ ಹಿಂದೆ ಬೇಸಿಗೆ ಅವಧಿಯಲ್ಲಿ ಕಾಡ್ಗಿಚ್ಚು ಹಾಗೂ ಇತರ ಅನಾಹುತಗಳನ್ನು ತಡೆಗಟ್ಟುವ…

    Continue Reading

  • ಮಹಜರಿಗೆ ತೆರಳಿದ ವೇಳೆ ಹೈಡ್ರಾಮಾ: ಹಲ್ಲೆ ಮಾಡಿದ ಆರೋಪಿಗೆ ಪೊಲೀಸ್ ಫೈರಿಂಗ್
    , ,

    ಮಹಜರಿಗೆ ತೆರಳಿದ ವೇಳೆ ಹೈಡ್ರಾಮಾ: ಹಲ್ಲೆ ಮಾಡಿದ ಆರೋಪಿಗೆ ಪೊಲೀಸ್ ಫೈರಿಂಗ್

    ಶಿವಮೊಗ್ಗ: ತಾಲೂಕಿನ ಹೊಳೆಬೆನವಳ್ಳಿ ಸಮೀಪದ ರಿಂಗ್ ರೋಡ್‌ನಲ್ಲಿ ಮಹಜರಿಗೆ ಕರೆದೊಯ್ಯುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ನರಸಿಂಹ ಕೊಲೆ ಕೇಸ್ ಆರೋಪಿ ಮಧು ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ನಡೆದಿದೆ.ಶಿವಮೊಗ್ಗದಲ್ಲಿ ರೌಡಿಶೀಟರ್ ನರಸಿಂಹ ಕೊಲೆ ಕೇಸ್ ಸಂಬಂಧ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಕೋಟೆ ಠಾಣೆ ಕ್ರೈಮ್ ಸಿಬ್ಬಂದಿ ಅಂಜನಪ್ಪ ಮೇಲೆ ಆರೋಪಿ ಮಧು ಹಲ್ಲೆ ಮಾಡಿದ್ದಾನೆ. ಏರ್ ಫೈರ್ ಮಾಡಿ ವಾರ್ನ್ ಮಾಡಿದರೂ ಮಾತು ಕೇಳದ ಹಿನ್ನೆಲೆ ಕೋಟೆ…

    Continue Reading

  • 99 ವರ್ಷದ ವೃದ್ಧೆ ಬಾವಿಗೆ ಬಿದ್ದು ಸಾವು; ಇಣುಕಿ ನೋಡುತ್ತಿದ್ದಾಗ ಜಾರಿ ಬಿದ್ದ ದುರಂತ
    , ,

    99 ವರ್ಷದ ವೃದ್ಧೆ ಬಾವಿಗೆ ಬಿದ್ದು ಸಾವು; ಇಣುಕಿ ನೋಡುತ್ತಿದ್ದಾಗ ಜಾರಿ ಬಿದ್ದ ದುರಂತ

    ಮೂಡುಬಿದಿರೆ: ವೃದ್ಧೆಯೋವ೯ರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮೂಡುಬಿದಿರೆ ತಾಲೂಕಿನ ಒಂಟಿಕಟ್ಟೆಯಲ್ಲಿ ಶನಿವಾರ ನಡೆದಿದೆ.ಮೂಡಬಿದ್ರೆ ಮಾರ್ಪಾಡಿ ಗ್ರಾಮದ ಒಂಟಿಕಟ್ಟೆಯ ಕಮಲ (99) ಮೃತಪಟ್ಟವರು. ಶನಿವಾರ ಬಾವಿಗೆ ಇಣುಕಿ ನೋಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಗಂಭೀರ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಮೂಡಬಿದ್ರೆಯ ಅಗ್ನಿಶಾಮಕ ದಳದ ಸಿಬಂದಿ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ. ಮೂಡಬಿದ್ರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

  • ಸಂಜೆಯಿಂದ ಮನೆಗೆ ಮರಳದ ಇಬ್ಬರು ಬಾಲಕರು ; ಸುಳಿವು ನೀಡುವಂತೆ ಮನವಿ
    , ,

    ಸಂಜೆಯಿಂದ ಮನೆಗೆ ಮರಳದ ಇಬ್ಬರು ಬಾಲಕರು ; ಸುಳಿವು ನೀಡುವಂತೆ ಮನವಿ

    ಮಂಜೇಶ್ವರ: ಇಬ್ಬರು ಬಾಲಕರು ನಾಪತ್ತೆಯಾದ ಘಟನೆ ಕಾಸರಗೋಡಿನ ಮಂಜೇಶ್ವರ ಸಮೀಪದ ಕುಂಜತ್ತೂರಿನಲ್ಲಿ ನಡೆದಿದೆ.ಕುಂಜತ್ತೂರು ಸ್ವಾಗತ್ ಹೊಟೇಲ್ ಸಮೀಪದ ಯಾಸಿನ್ ( 13) ಮತ್ತು ಸುಲ್ತಾನ್ (14) ನಾಪತ್ತೆಯಾದವರು. ಶನಿವಾರ ಸಂಜೆ ಐದು ಗಂಟೆ ಬಳಿಕ ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಾಲಕರ ಬಗ್ಗೆ ಗುರುತು, ಸುಳಿವು ಲಭಿಸಿದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

    Continue Reading

  • ಕುತ್ತಿಗೆ ಕೊಯ್ದು ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಜೋಕಟ್ಟೆಯಲ್ಲಿ ಇಬ್ಬರು ಆರೋಪಿಗಳ ಬಂಧನ
    , ,

    ಕುತ್ತಿಗೆ ಕೊಯ್ದು ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಜೋಕಟ್ಟೆಯಲ್ಲಿ ಇಬ್ಬರು ಆರೋಪಿಗಳ ಬಂಧನ

    ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಅರಿಕೆರೆ ಪ್ರದೇಶದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರವನ್ನು ಪಣಂಬೂರು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜೂನ್‌ 10 ರಂದು ಬೆಳಗ್ಗೆ ಜೋಕಟ್ಟೆ ಅರಿಕೆರೆ ಸಮೀಪದ ಎಂಎಸ್‌ಇಝಡ್‌ಗೆ ಸೇರಿದ ನೀರು ಹರಿಯುವ ತೋಡಿನಲ್ಲಿ ಸುಮಾರು 35-40 ವರ್ಷದ ಅಪರಿಚಿತ ಗಂಡಸಿನ ಮೃತದೇಹವು ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಈ ಕುರಿತು ಕಿಶೋರ್ ಎಂಬವರು ನೀಡಿದ ದೂರಿನ ಮೇರೆಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು. ತನಿಖೆಯ…

    Continue Reading

  • ಬಜಪೆ: ನೆರೆಮನೆಯವನಿಂದ ಅಪ್ರಾಪ್ತ ಬಾಲಕಿಗೆ ನಿರಂತರ ಅತ್ಯಾಚಾರ, ಬೆದರಿಕೆ!! ಪೋಕ್ಸೋ ಪ್ರಕರಣ ದಾಖಲು
    , ,

    ಬಜಪೆ: ನೆರೆಮನೆಯವನಿಂದ ಅಪ್ರಾಪ್ತ ಬಾಲಕಿಗೆ ನಿರಂತರ ಅತ್ಯಾಚಾರ, ಬೆದರಿಕೆ!! ಪೋಕ್ಸೋ ಪ್ರಕರಣ ದಾಖಲು

    ಬಜಪೆ : ಗಂಜಿಮಠ ನಾರ್ಲಪದವು ಎಂಬಲ್ಲಿ ಹತ್ತನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬಾಲಕಿ ಮೇಲೆ ನಿರಂತರ ಅತ್ಯಾಚಾರಗೈದ ನೆರೆಮನೆಯ ಆರೋಪಿ ಜಲೀಲ್ ಎಂಬಾತನ ಮೇಲೆ ಪೋಸ್ಕೋ ಪ್ರಕರಣ ದಾಖಲಾಗಿದೆ.ತಂದೆ ತಾಯಿ ಇಲ್ಲದ ಅಪ್ರಾಪ್ತ ಬಾಲಕಿ ಚಿಕ್ಕಮ್ಮ ಯೊಂದಿಗೆ ಗಂಜಿಮಠ ಸಮೀಪದ ನಾರ್ಲಪದವು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅಪ್ರಾಪ್ತ ಬಾಲಕಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಬೆಳಿಗ್ಗಿನ ಹೊತ್ತು ತನ್ನ ಚಿಕ್ಕಮ್ಮಳ ಮಕ್ಕಳನ್ನು ಮದರಸಕ್ಕೆ…

    Continue Reading

  • ಪುತ್ತೂರು: ಕೃಷ್ಣ ಜೆ.ರಾವ್ ಯುವತಿಗೆ ವಂಚನೆ ಪ್ರಕರಣ- ರಾಜಿ ಸಂಧಾನಕ್ಕೆ ವಕೀಲೆ ಎಸ್. ಸುಶೀಲಾ ಮಧ್ಯಸ್ಥಿಕೆದಾರರಾಗಿ ನೇಮಕ
    , ,

    ಪುತ್ತೂರು: ಕೃಷ್ಣ ಜೆ.ರಾವ್ ಯುವತಿಗೆ ವಂಚನೆ ಪ್ರಕರಣ- ರಾಜಿ ಸಂಧಾನಕ್ಕೆ ವಕೀಲೆ ಎಸ್. ಸುಶೀಲಾ ಮಧ್ಯಸ್ಥಿಕೆದಾರರಾಗಿ ನೇಮಕ

    ಪುತ್ತೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಮಗು ಕರುಣಿಸಿ ವಂಚಿಸಿರುವ ಆರೋಪದಲ್ಲಿ ಕೃಷ್ಣಜೆ.ರಾವ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ವಿವಾದವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ಪುರಸ್ಕರಿಸಿದ್ದ ಹೈಕೋರ್ಟ್‌ ಇದೀಗ ರಾಜಿ ಸಂಧಾನದ ಮಧ್ಯಸ್ಥಿಕೆದಾರರಾಗಿ ಪದಾಂಕಿತ ಹಿರಿಯ ವಕೀಲೆ ಎಸ್.ಸುಶೀಲಾ ಅವರನ್ನು ನೇಮಕಗೊಳಿಸಿದೆ.ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆ ನಡೆದಾಗ ಅರ್ಜಿದಾರರ ಪರ…

    Continue Reading

  • ಬಂಟ್ವಾಳದಲ್ಲಿ ಸಬ್ಸಿಡಿಯ ಯೂರಿಯಾ ದಂಧೆ ಪತ್ತೆ: ಲಕ್ಷಾಂತರ ಮೌಲ್ಯದ ಗೊಬ್ಬರ, ಟ್ರಕ್ ವಶ; ಓರ್ವ ಬಂಧನ
    , ,

    ಬಂಟ್ವಾಳದಲ್ಲಿ ಸಬ್ಸಿಡಿಯ ಯೂರಿಯಾ ದಂಧೆ ಪತ್ತೆ: ಲಕ್ಷಾಂತರ ಮೌಲ್ಯದ ಗೊಬ್ಬರ, ಟ್ರಕ್ ವಶ; ಓರ್ವ ಬಂಧನ

    ಬಂಟ್ವಾಳ: ರೈತರಿಗೆ ನೀಡಲಾಗಿದ್ದ ಸಬ್ಸಿಡಿ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಬೇರೆಡೆಗೆ ಸಾಗಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ರಾಜ್ಯ ಮಟ್ಟದ ಸಂಘಟಿತ ಜಾಲವನ್ನು ವಿಟ್ಲ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆಯಲ್ಲಿ ಬಯಲಿಗೆಳೆದಿದ್ದಾರೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ರಸಗೊಬ್ಬರ ಮತ್ತು ಸಾಗಣೆಗೆ ಬಳಸಲಾಗುತ್ತಿದ್ದ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಕೊಲ್ನಾಡು ಗ್ರಾಮದ ಖಂಡಿಗ ಸರ್ಕಾರಿ ಶಾಲೆಯ ಬಳಿಯ ನಿವಾಸಿ ಮೊಹಮ್ಮದ್ ಅಶ್ರಫ್ (40) ಎಂದು…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed