, ,

ಬಜಪೆ: ನೆರೆಮನೆಯವನಿಂದ ಅಪ್ರಾಪ್ತ ಬಾಲಕಿಗೆ ನಿರಂತರ ಅತ್ಯಾಚಾರ, ಬೆದರಿಕೆ!! ಪೋಕ್ಸೋ ಪ್ರಕರಣ ದಾಖಲು

ಬಜಪೆ : ಗಂಜಿಮಠ ನಾರ್ಲಪದವು ಎಂಬಲ್ಲಿ ಹತ್ತನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬಾಲಕಿ ಮೇಲೆ ನಿರಂತರ ಅತ್ಯಾಚಾರಗೈದ ನೆರೆಮನೆಯ ಆರೋಪಿ ಜಲೀಲ್ ಎಂಬಾತನ ಮೇಲೆ ಪೋಸ್ಕೋ ಪ್ರಕರಣ ದಾಖಲಾಗಿದೆ.ತಂದೆ ತಾಯಿ ಇಲ್ಲದ ಅಪ್ರಾಪ್ತ ಬಾಲಕಿ ಚಿಕ್ಕಮ್ಮ ಯೊಂದಿಗೆ ಗಂಜಿಮಠ ಸಮೀಪದ ನಾರ್ಲಪದವು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅಪ್ರಾಪ್ತ ಬಾಲಕಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಬೆಳಿಗ್ಗಿನ ಹೊತ್ತು ತನ್ನ ಚಿಕ್ಕಮ್ಮಳ ಮಕ್ಕಳನ್ನು ಮದರಸಕ್ಕೆ…

ಬಜಪೆ : ಗಂಜಿಮಠ ನಾರ್ಲಪದವು ಎಂಬಲ್ಲಿ ಹತ್ತನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಬಾಲಕಿ ಮೇಲೆ ನಿರಂತರ ಅತ್ಯಾಚಾರಗೈದ ನೆರೆಮನೆಯ ಆರೋಪಿ ಜಲೀಲ್ ಎಂಬಾತನ ಮೇಲೆ ಪೋಸ್ಕೋ ಪ್ರಕರಣ ದಾಖಲಾಗಿದೆ.
ತಂದೆ ತಾಯಿ ಇಲ್ಲದ ಅಪ್ರಾಪ್ತ ಬಾಲಕಿ ಚಿಕ್ಕಮ್ಮ ಯೊಂದಿಗೆ ಗಂಜಿಮಠ ಸಮೀಪದ ನಾರ್ಲಪದವು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಅಪ್ರಾಪ್ತ ಬಾಲಕಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಸಂದರ್ಭದಲ್ಲಿ ಬೆಳಿಗ್ಗಿನ ಹೊತ್ತು ತನ್ನ ಚಿಕ್ಕಮ್ಮಳ ಮಕ್ಕಳನ್ನು ಮದರಸಕ್ಕೆ ಕರೆದುಕೊಂಡು ಹೋಗುತ್ತಿದ್ದು, ಆ ಸಂದರ್ಭದಲ್ಲಿ ನೆರೆಮನೆಯ ಜಲೀಲ್ ಎಂಬಾತ ಬಾಲಕಿಯನ್ನು ಪುಸಲಾಯಿಸಿ ಪ್ರತಿದಿನ ಮಾತನಾಡಿಸುತ್ತಿದ್ದು, ತಿನ್ನಲು ಚಾಕಲೇಟ್ ನೀಡುತ್ತಿದ್ದನು. ಈ ವಿಷಯವನ್ನು ಬಾಲಕಿ ತನ್ನ ಚಿಕ್ಕಮ್ಮಳೊಂದಿಗೆ ಹೇಳಿದ್ದು ಜಲೀಲ್ ನಿಗೆ ಎಚ್ಚರಿಕೆ ಕೂಡ ನೀಡಿದ್ದರು.

ಜಲೀಲ್ ನಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗು ಇದೆ. 2025 ಅಗಸ್ಟ್ 5 ರಂದು ಎಂದಿನಂತೆ ಚಿಕ್ಕಮ್ಮಳ ಮಕ್ಕಳನ್ನು ಮದರಸಕ್ಕೆ ಬಿಟ್ಟು ಬರುವ ಸಂದರ್ಭದಲ್ಲಿ ಬಾಲಕಿಯನ್ನು ತಡೆದು ಕಿಸ್ ನೀಡಿದ್ದು ಈ ವಿಚಾರವನ್ನು ಮನೆಯವರಿಗೆ ತಿಳಿಸದಂತೆ ಬೆದರಿಸಿದ್ದಾನೆ. ಮಾತ್ರವಲ್ಲ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ತೆರಳಿ ಬಾಲಕಿಯನ್ನು ಬಲವಂತವಾಗಿ ಬಟ್ಟೆ ಬಿಚ್ಚಿಸಿ ಆಕೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದು, ಇದೇ ರೀತಿ ಅನೇಕ ಬಾರಿ ಬೇರೇ ಕಡೆಗಳಲ್ಲಿ ಆಕೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಲೈಂಗಿಕ ಕ್ರಿಯೆ ನಡೆಸುವ ಮೊದಲು ಬಾಲಕಿಗೆ ವಯಾಗ್ರ ಮಾತ್ರೆ ನೀಡುತ್ತಿದ್ದ. ಲೈಂಗಿಕ ಕ್ರಿಯೆ ನಡೆದ ನಂತರ ನೀರಿನ ಬಾಟಲಿಯಲ್ಲಿ I PEEL ಮಾತ್ರೆಯನ್ನು ಹಾಕಿ ಬಾಲಕಿಗೆ ಕುಡಿಯಲು ನೀಡುತ್ತಿದ್ದ. ನಂತರ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ 7-8 ತಿಂಗಳಿನಿಂದ ಅತ್ಯಾಚಾರ ನಡೆಸಿರುವುದಾಗಿ ಬಾಲಕಿ ಇದೀಗ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಪ್ರಕರಣ ದಾಖಲಾಗಿದೆ. ಬಜಪೆ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣ ರವರ ನೇತ್ರತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿ ಜಲೀಲ್ ನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed