Category: ರಾಜ್ಯ
-

23 ದಿನಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಮಹೇಶ್ ತಳವಾರ್; ಕಾಲಿಗೆ ಗುಂಡು ಹಾರಿಸಿ ಸೆರೆ
ವಿಜಯಪುರ: ಭೀಮಾತೀರದಲ್ಲಿ 6 ಜನರ ಹತ್ಯೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಮುಖ್ಯ ಆರೋಪಿ ಮಹೇಶ್ ತಳವಾರ್ ಮೇಲೆ ಫೈರಿಂಗ್ ನಡೆದಿದೆ. ಕಾಲಿಗೆ ಗುಂಡು ಹಾರಿಸಿ ಚಡಚಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇಟ್ಟಿಂಗಿಹಾಳ ಗ್ರಾಮದ ಹೊರವಲಯದಲ್ಲಿ ಮಹೇಶ್ ಕಾಲಿಗೆ ಫೈರಿಂಗ್ ಮಾಡಲಾಗಿದೆ. ಮಹೇಶನನ್ನ ಬಂಧಿಸಲು ಹೋದಾಗ ಓಡಿ ಹೋಗಲು ಯತ್ನಿಸಿದ ಮಹೇಶ್ ತಳವಾರ್ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ಮೇಲೆ ಕೂಡ ದಾಳಿಗೆ ಯತ್ನಿಸಿದ್ದಾನೆ. ಆಗ ಎರಡು…
-

ಫುಟ್‌ಪಾತ್ ವ್ಯಾಪಾರಿಗಳ ಮೇಲೆ ಪಾಲಿಕೆ ದಾಳಿ: ‘ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯವೇ?
ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ವ್ಯಾಪಾರವನ್ನು ಮಹಾನಗರ ಪಾಲಿಕೆ ತೆರವುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಹಾನಗರ ಪಾಲಿಕೆ ತೆರವುಗೊಳಿಸುತ್ತಿರುವುದು ಕೇವಲ ಬಡವರ, ಅಂಗವಿಕಲರ ಹಾಗೂ ಊಟಕ್ಕಾಗಿ ವ್ಯಾಪಾರವನ್ನು ಅವಲಂಬಿಸಿರುವರದ್ದನ್ನೇ.ಯಾಕೆಂದರೆ ಅವರಿಗೆ ಯಾವುದೇ ರಾಜಕೀಯ ಇನ್ಫ್ಲುಯೆನ್ಸ್ ಇಲ್ಲ ಹಾಗೂ ಹಣದ ಬಲವೂ ಇಲ್ಲ. ಇದೇ ವೇಳೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿವೆ.ಕಟ್ಟಡ ಪರವಾನಿಗೆ ರೂಲ್ಸ್ ಬ್ರೇಕ್ ಮಾಡಿ ಫುಟ್‌ಪಾತ್‌ನಲ್ಲಿ ಬಿಲ್ಡಿಂಗ್‌ಗಳನ್ನು, ಮಾರ್ಕೆಟ್ ರೋಡ್ಗಳಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಈ ವಿಚಾರಗಳು ಮಹಾನಗರ ಪಾಲಿಕೆ ಕಮಿಷನರ್…
-

ಮದುವೆ ಸಂಭ್ರಮಕ್ಕೆ ಹೊರಟಿದ್ದ ಯುವಕನಿಗೆ ದುರಂತ ಅಂತ್ಯ: ಅಪಘಾತದಲ್ಲಿ ಸಾವು
ಕಾಸರಗೋಡು: ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ತೋಕೆ ನಿವಾಸಿ ಯುವಕನೋರ್ವ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಮೃತರನ್ನು ತೋಕೆ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಬದ್ರುಲ್ ಹಫೀಝ್(24) ಎಂದು ಗುರುತಿಸಲಾಗಿದೆ.ಮಲಪ್ಪುರಂನಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದ ಹಫೀಝ್, ಸೋಮವಾರ ನಡೆಯಲಿರುವ ಕುಟುಂಬದ ಮದುವೆಯೊಂದರಲ್ಲಿ ಭಾಗಿಯಾಗುವ ಉದ್ದೇಶದಿಂದ ಶನಿವಾರ ಬೈಕಿನಲ್ಲಿ ಊರಿಗೆ ಹೊರಟಿದ್ದರು. ಈ ಸಂದರ್ಭ ಬೈಕ್ ಸ್ಕಿಡ್ ಆಗಿ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಹಫೀಝ್…
-

ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ನೋ ಎಂಟ್ರಿ- ನೀಟ್ ಪರೀಕ್ಷೆಯಲ್ಲಿ ಕಠಿಣ ನಿಯಮ ಜಾರಿ
ಬೆಂಗಳೂರು: ದೇಶಾದ್ಯಂತ ನೀಟ್ ಮರು ಪರೀಕ್ಷೆ ನಡೆಯುತ್ತಿದೆ. ಪೇಪರ್ ಲೀಕ್ ಕಾರಣದಂದ ರದ್ದಾಗಿದ್ದ ನೀಟ್ ಪರೀಕ್ಷೆಯನ್ನು ಭಾರಿ ಬಂದೋಬಸ್ತ್ ಮೂಲಕ ನಡೆಸಲಾಗುತ್ತಿದೆ. ವ್ಯಾಪಕ ಟೀಕೆ ಬಳಿಕ ಈ ಬಾರಿ ನೀಟ್ ಪರೀಕ್ಷೆ ಮೇಲೆ ಕೇಂದ್ರ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ನಿಯಮಗಳನ್ನು ಕಠಿಣಗೊಳಿಸಿದೆ. ಇತ್ತ ಬೆಂಗಳೂರಿನಲ್ಲೂ ಸಹ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಮೂರು ಹಂತದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಜೀನ್ಸ್ ಪ್ಯಾಂಟ್ ಧರಿಸಿ ಬಂದು ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಇನ್ನು ಕೈಗೆ ಕಟ್ಟಲಾಗಿದ್ದ ಧಾರ್ಮಿಕ ಸಂಕೇತದ ದಾರವನ್ನು…
-

ಕುಂಬಳೆ ಸಮೀಪ ಕಟ್ಟಡ ಕಾಮಗಾರಿಯಲ್ಲಿ ದುರಂತ; 47 ವರ್ಷದ ಕಾರ್ಮಿಕ ಮೃತ್ಯು
ಕುಂಬಳೆ: ನಿರ್ಮಾಣ ಹಂತದಲ್ಲಿದ್ದ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಕಾಸರಗೋಡಿನ ಕುಂಬಳೆ ಸಮೀಪದ ನಾಯ್ಕಾಪುವಿನಲ್ಲಿ ನಡೆದಿದೆ. ಬೇಳ ಕೊಳಂಬೆ ಯ ಫ್ರಾನ್ಸಿಸ್ ಡಿ’ಸೋಜ (47) ಮೃತರು.ನಾಯ್ಕಾಪು ಮುಂಜಾಂಗಾವು ಎಂಬಲ್ಲಿ ಮನೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಫ್ರಾನ್ಸಿಸ್ ರವರನ್ನು ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
-

ಕರಾವಳಿಯ ಹೆಗ್ಗುರುತು ಅಂತ್ಯ: ಇತಿಹಾಸ ಸೇರಲಿರುವ ಕಡಲತೀರದ ಭಗವತಿ ಪ್ರೇಮ್ ಹಡಗು
ಸುರತ್ಕಲ್: ಸುರತ್ಕಲ್‌ನ ಗುಡ್ಡೆಕೊಪ್ಲ ಕಡಲತೀರದಲ್ಲಿ ಕಳೆದ ಕೆಲವು ವರ್ಷಗಳಿಂದ ಬಂದು ನಿಂತಿದ್ದ “ಭಗವತಿ ಪ್ರೇಮ್” ಎಂಬ ಬೃಹತ್ ಗಾತ್ರದ ಡ್ರೆಡ್ಜರ್ ಹಡಗನ್ನು ಕತ್ತರಿಸಿ ಒಡೆಯುವ ಕಾರ್ಯ ಭರದಿಂದ ಸಾಗಿದ್ದು, ಇಷ್ಟು ದಿನ ಪ್ರವಾಸಿಗರ ಗಮನ ಸೆಳೆಯುತ್ತಿದ್ದ ಕರಾವಳಿಯ ಪ್ರಸಿದ್ಧ ಸೆಲ್ಫಿ ಪಾಯಿಂಟ್ ಇನ್ಮುಂದೆ ಮಾಯವಾಗಲಿದೆ.ಕೆಲವು ವರ್ಷಗಳ ಹಿಂದೆ ಮಳೆಗಾಲದ ಭೀಕರ ಗಾಳಿ-ಮಳೆಗೆ ಸಿಲುಕಿ ಎನ್‌ಎಂಪಿಟಿ (NMPT) ಬಂದರಿನಲ್ಲಿ ಲಂಗರು ಹಾಕಿದ್ದ ಈ ಡ್ರೆಡ್ಜರ್ ಹಡಗು, ಆ್ಯಂಕರ್ ಕಿತ್ತುಕೊಂಡು ಬಂದು ಸುರತ್ಕಲ್‌ನ ಗುಡ್ಡೆಕೊಪ್ಲ ತೀರದಲ್ಲಿ ಹೂತುಕೊಂಡಿತ್ತು. ತಾಂತ್ರಿಕ ಕಾರಣಗಳಿಂದಾಗಿ…
-

ಮಂಗಳೂರು: ಕಲುಷಿತ ನೀರು ದೂರು ಬೆನ್ನಲ್ಲೇ ಪೈಪ್‌ಲೈನ್ ಸೋರಿಕೆ ಪತ್ತೆ, ದುರಸ್ತಿ ಮಾಡಿದ ಎಂಸಿಸಿ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ವ್ಯಾಪ್ತಿಯ ನಿವಾಸಿಗಳಿಗೆ ಪೂರೈಸಲಾಗುವ ಕುಡಿಯುವ ನೀರನ್ನು ಶುದ್ಧೀಕರಣ ಘಟಕಗಳಲ್ಲಿ ಸಂಸ್ಕರಿಸಿದ ಬಳಿಕವೇ ಮನೆಗಳಿಗೆ ಸರಬರಾಜು ಮಾಡಲಾಗುತ್ತದೆ. ರಿನ ಸುರಕ್ಷತೆ ಮತ್ತು ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವಾರ್ಡ್ಗಳಲ್ಲಿ ಕಾಲಕಾಲಕ್ಕೆ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ ಎಂದು ಎಂಸಿಸಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಾರ್ಡ್ ನಂ. 31ರ ಭಟ್ಟಗುಡ್ಡ 5ನೇ ಕ್ರಾಸ್ ರಸ್ತೆಯ ಕೆಲವು ಮನೆಗಳಿಗೆ ಕಲುಷಿತ ನೀರು ಸರಬರಾಜಾಗುತ್ತಿದೆ ಎಂಬ ದೂರುಗಳು ಎಂಸಿಸಿಗೆ ಬಂದಿದ್ದವು. ಈ ದೂರುಗಳ ಹಿನ್ನೆಲೆಯಲ್ಲಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ…
-

ಪ್ರಿಸ್ಕೂಲ್‌ನಿಂದ ಹೊರಬಂದು ಲಾರಿ ಅಡಿಗೆ ಬೀಳಲಿದ್ದ 2.5 ವರ್ಷದ ಬಾಲಕ -ಕೂದಲೆಳೆಯ ಅಂತರದಲ್ಲಿ ಪಾರು
ಅಲುವಾ: ಪ್ರಿಸ್ಕೂಲ್ ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಎರಡೂವರೆ ವರ್ಷದ ಬಾಲಕನೊಬ್ಬ ಜನನಿಬಿಡ ರಸ್ತೆಗೆ ನಡೆದುಕೊಂಡು ಬಂದು, ಮಿನಿ ಲಾರಿಯೊಂದರ ಅಡಿಗೆ ಬೀಳುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ನಾಟಕೀಯ ಘಟನೆ ಕೇರಳದ ಅಲುವಾ ಸಮೀಪದ ಎಡಯಪ್ಪುರಂನಲ್ಲಿ ನಡೆದಿದೆ. ಈ ಇಡೀ ಘಟನೆ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಕ್ಕಳ ಸುರಕ್ಷತೆಯ ಕುರಿತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.ಇಲ್ಲಿನ ಸ್ಥಳೀಯ ಪ್ರಿಸ್ಕೂಲ್ ಒಂದರಲ್ಲಿ ಎಂದಿನಂತೆ ಮಗು ಇತ್ತು. ಆದರೆ ಶಾಲೆಯ ಆವರಣದಲ್ಲಿ ಪೇಂಟಿಂಗ್ (ಬಣ್ಣ ಬಳಿಯುವ) ಕೆಲಸ ನಡೆಯುತ್ತಿದ್ದ ಕಾರಣ ಮುಖ್ಯ…
-

ಸಾರ್ವಜನಿಕರ ಕೈಗೆ ಸಿಗುವ ಭಯದಲ್ಲಿ ಓಡಿದ ಕಳ್ಳ; ಫುಟ್‌ಪಾತ್ ಮೇಲೆಯೇ ಪ್ರಾಣ ಬಿಟ್ಟ
ಪಾದಚಾರಿಯೊಬ್ಬರ ಮೊಬೈಲ್ ಫೋನ್ ಕಸಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ ಕಳ್ಳನೋರ್ವ, ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಓಡುವಾಗ ಫುಟ್‌ಪಾತ್ ಮೇಲೆಯೇ ಕುಸಿದು ಬಿದ್ದು ಮೃತಪಟ್ಟಿರುವ ಅಪರೂಪದ ಘಟನೆ ನಗರದ ಕಬ್ಬನ್‌ಪೇಟೆ ಸಮೀಪ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಮೃತ ಆರೋಪಿಯನ್ನು ಜುನೈದ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಅರ್ಬಾಜ್ ಎಂಬಾತನನ್ನು ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.ಮೇ 15ರಂದು ಸಂಜೆ ಕಬ್ಬನ್‌ಪೇಟೆಯ 14ನೇ ಕ್ರಾಸ್‌ನಲ್ಲಿ ಪಾದಚಾರಿಯೊಬ್ಬರು ರಸ್ತೆಯಲ್ಲಿ ಮೊಬೈಲ್ ನೋಡುತ್ತಾ ನಡೆದುಕೊಂಡು ಹೋಗುತ್ತಿದ್ದರು. ಈ…
-

ಬಜಪೆ ಠಾಣೆಯಲ್ಲಿ PCC ಅಕ್ರಮ ಪತ್ತೆ; ಕಾನ್‌ಸ್ಟೇಬಲ್‌ಗಳು ಸಸ್ಪೆಂಡ್, ಏಜೆಂಟ್ ಅರೆಸ್ಟ್
ಮಂಗಳೂರು: ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಸಾರ್ವಜನಿಕರು ಸಲ್ಲಿಸಿದ್ದ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC) ಅರ್ಜಿಗಳನ್ನು ಠಾಣಾ ಇನ್‌ಸ್ಪೆಕ್ಟರ್ ಗಮನಕ್ಕೆ ತಾರದೆ, ಅವರ ಕೆಜಿಐಡಿ ಮತ್ತು ಪಾಸ್‌ವರ್ಡ್ ಬಳಸಿ ಅಕ್ರಮವಾಗಿ ವಿಲೇವಾರಿ ಮಾಡಿದ ಬಜಪೆ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಬಜಪೆ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಮಂಜುನಾಥ್ ಮತ್ತು ಆಶಾ ಅಮಾನತುಗೊಂಡ ಸಿಬ್ಬಂದಿಯಾಗಿದ್ದಾರೆ. ಈ ದಂಧೆಗೆ ಸಹಕರಿಸಿದ ಎಕ್ಕಾರಿನ ಭರತ್ ಎಂಬ ಏಜೆಂಟ್‌ನನ್ನು ಪೊಲೀಸರು ಬಂಧಿಸಿದ್ದಾರೆ.ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಪಡೆಯುವ ನಿಟ್ಟಿನಲ್ಲಿ ಒಟ್ಟು 33 ಮಂದಿ ಪೊಲೀಸ್…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











