,

ಮನೆಯಲ್ಲಿ ಗುಂಡು ಹಾರಿಸಿಕೊಂಡು ವೈದ್ಯ ದಿನೇಶ್ ಭಟ್ಕಳ್ ಆತ್ಮಹತ್ಯೆ!!

ಬೆಳಗಾವಿ: ಇಲ್ಲಿನ ಪ್ರಸಿದ್ಧ ಕೆಎಲ್‌ಇ (KLE) ಆಸ್ಪತ್ರೆಯಲ್ಲಿ ಕಳೆದ 40 ವರ್ಷಗಳಿಂದ ವೈದ್ಯಾಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಹಿರಿಯ ವೈದ್ಯ ಡಾ. ದಿನೇಶ್ ಭಟ್ಕಳ್ (60+) ಅವರು ಶ್ವಾಸಕೋಶ ಕ್ಯಾನ್ಸರ್‌ನ ತೀವ್ರ ನೋವು ತಡೆಯಲಾರದೆ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಟಿಳಕವಾಡಿಯ ಮಂಡೋಲಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ರಿವಾಲ್ವಾರ್‌ನಿಂದ ತಲೆಗೆ ಶೂಟ್ ಮಾಡಿಕೊಳ್ಳುವ ಮೂಲಕ ಅವರು ಜೀವನ ಕೊನೆಗಾಣಿಸಿದ್ದಾರೆ. ಕ್ಯಾನ್ಸರ್ ನೋವಿನಿಂದ ಬಳಲಿಕೆ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾದ ಡಾ. ದಿನೇಶ್…

ಬೆಳಗಾವಿ: ಇಲ್ಲಿನ ಪ್ರಸಿದ್ಧ ಕೆಎಲ್‌ಇ (KLE) ಆಸ್ಪತ್ರೆಯಲ್ಲಿ ಕಳೆದ 40 ವರ್ಷಗಳಿಂದ ವೈದ್ಯಾಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಹಿರಿಯ ವೈದ್ಯ ಡಾ. ದಿನೇಶ್ ಭಟ್ಕಳ್ (60+) ಅವರು ಶ್ವಾಸಕೋಶ ಕ್ಯಾನ್ಸರ್‌ನ ತೀವ್ರ ನೋವು ತಡೆಯಲಾರದೆ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ಟಿಳಕವಾಡಿಯ ಮಂಡೋಲಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ರಿವಾಲ್ವಾರ್‌ನಿಂದ ತಲೆಗೆ ಶೂಟ್ ಮಾಡಿಕೊಳ್ಳುವ ಮೂಲಕ ಅವರು ಜೀವನ ಕೊನೆಗಾಣಿಸಿದ್ದಾರೆ.

ಕ್ಯಾನ್ಸರ್ ನೋವಿನಿಂದ ಬಳಲಿಕೆ

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾದ ಡಾ. ದಿನೇಶ್ ಭಟ್ಕಳ್, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ವೈದ್ಯರಾಗಿ ಪರಿಚಿತರಾಗಿದ್ದರು. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಇವರಿಗೆ ಶ್ವಾಸಕೋಶದ ಕ್ಯಾನ್ಸರ್ (Lung Cancer) ಇರುವುದು ಪತ್ತೆಯಾಗಿತ್ತು. ಕ್ಯಾನ್ಸರ್ ಚಿಕಿತ್ಸೆ ಪಡೆಯುವ ಉದ್ದೇಶದಿಂದಲೇ ಅವರು ಬೆಳಗಾವಿಯ ಟಿಳಕವಾಡಿ ಬಳಿ ಬಾಡಿಗೆ ಮನೆ ಮಾಡಿಕೊಂಡು ಕುಟುಂಬದೊಂದಿಗೆ ವಾಸವಿದ್ದರು. ಆದರೆ, ಕಾಯಿಲೆಯ ತೀವ್ರತೆಯಿಂದಾಗಿ ಅವರು ಸಹಿಸಲಾಗದ ದೈಹಿಕ ನೋವನ್ನು ಅನುಭವಿಸುತ್ತಿದ್ದರು ಎನ್ನಲಾಗಿದೆ.

ಗ್ಯಾಲರಿಯಲ್ಲಿ ತಲೆಗೆ ಶೂಟ್

ಇಂದು ಮುಂಜಾನೆ ಎದ್ದ ತಕ್ಷಣ ದಿನೇಶ್ ಅವರಿಗೆ ಎದೆಯಲ್ಲಿ ಅತಿಯಾದ ನೋವು ಕಾಣಿಸಿಕೊಂಡಿದೆ. ನೋವಿನಿಂದ ಕಂಗಾಲಾದ ಅವರು ತಕ್ಷಣ ತಮ್ಮಲ್ಲಿದ್ದ ಪರವಾನಗಿ ಹೊಂದಿದ ರಿವಾಲ್ವಾರ್ ತೆಗೆದುಕೊಂಡು ಮನೆಯ ಗ್ಯಾಲರಿ ಬಳಿ ತೆರಳಿದ್ದಾರೆ. ಅಲ್ಲಿಯೇ ತಮ್ಮ ತಲೆಗೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಆತ್ಮಹತ್ಯೆ ಮುನ್ನ ಡಾ. ಪ್ರಭಾಕರ್ ಕೋರೆಗೆ ವಾಟ್ಸಪ್ ಸಂದೇಶ

ವೈದ್ಯ ದಿನೇಶ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ನಿಮಿಷಗಳ ಮುನ್ನ ತಮ್ಮ ಹಿತೈಷಿಗಳು ಹಾಗೂ ಮಾರ್ಗದರ್ಶಕರಿಗೆ ವಾಟ್ಸಪ್‌ನಲ್ಲಿ ಆಘಾತಕಾರಿ ಸಂದೇಶ ರವಾನಿಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರಿಗೂ ಸಂದೇಶ ಕಳುಹಿಸಿರುವ ಅವರು, “ನನಗೆ ನೀವು ಇಷ್ಟು ವರ್ಷಗಳ ಕಾಲ ತುಂಬ ಸಹಾಯ ಮಾಡಿದ್ದೀರಿ. ಆದರೆ ಪ್ರಸ್ತುತ ನನಗೆ ತೀವ್ರವಾದ ಎದೆ ನೋವಿದ್ದು, ಅದನ್ನು ಭರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾನು ಈ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ನಂತರ ನನ್ನ ಕುಟುಂಬಕ್ಕೆ ಸಹಾಯ ಮಾಡಿ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೂ ಮಾಹಿತಿ ನೀಡಿ” ಎಂದು ಬರೆದುಕೊಂಡಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಡಿಸಿಪಿ ನಾರಾಯಣ ಭರಮಣಿ ಹಾಗೂ ಟಿಳಕವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ರವಾನಿಸಲಾಗಿದೆ. ಹಿರಿಯ ವೈದ್ಯರ ಹಠಾತ್ ನಿಧನಕ್ಕೆ ಬೆಳಗಾವಿ ವೈದ್ಯಕೀಯ ವಲಯ ತೀವ್ರ ಕಂಬನಿ ಮಿಡಿದಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed