Category: ರಾಜ್ಯ

  • ಪೊಲೀಸರೆಂದು ನಂಬಿಸಿ ₹20 ಲಕ್ಷ ದೋಚಿದ ಗ್ಯಾಂಗ್; ಸೂತ್ರಧಾರ ಸಿಐಡಿ ಇನ್ಸ್‌ಪೆಕ್ಟರ್
    , ,

    ಪೊಲೀಸರೆಂದು ನಂಬಿಸಿ ₹20 ಲಕ್ಷ ದೋಚಿದ ಗ್ಯಾಂಗ್; ಸೂತ್ರಧಾರ ಸಿಐಡಿ ಇನ್ಸ್‌ಪೆಕ್ಟರ್

    ಬೆಂಗಳೂರು: ಬೆಂಗಳೂರಿನಲ್ಲಿ ರಕ್ಷಕರೇ ಭಕ್ಷಕರಾದ ಆಘಾತಕಾರಿ ಘಟನೆಯೊಂದು ನಡೆದಿದೆ. ಸಿಐಡಿ ವಿಭಾಗದ ಇನ್ಸ್‌ಪೆಕ್ಟರ್ ಒಬ್ಬರು ಸ್ವತಃ ತಾವೇ ಗ್ಯಾಂಗ್ ಕಟ್ಟಿಕೊಂಡು, ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕೇರಳ ಮೂಲದ ವ್ಯಕ್ತಿಗಳನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಸಿಐಡಿ ಇನ್ಸ್‌ಪೆಕ್ಟರ್ ದರೋಡೆಯ ಮಾಸ್ಟರ್ ಮೈಂಡ್ ಆಗಿದ್ದು, ಸದ್ಯ ಪೊಲೀಸರ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾರೆ. ಈ ಕುರಿತು ನಗರ ಪೊಲೀಸ್ ಆಯುಕ್ತ (CP) ಸಿಮಂತ್ ಕುಮಾರ್ ಅವರು ಅಧಿಕೃತ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಪಾತ್ರ ಇರುವುದು…

    Continue Reading

  • ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಯುವಕ ಅಹ್ಮದ್ ಅಸೀರ್ ನಿಧನ
    , ,

    ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಯುವಕ ಅಹ್ಮದ್ ಅಸೀರ್ ನಿಧನ

    ಬಂಟ್ವಾಳ : ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಜಿಪನಡು ಸಮೀಪದ ದೇರಾಜೆ ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಸಜಿಪನಡು ಸಮೀಪದ ಮಡ್ಯಲಚ್ಚಿಲ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಹ್ಮದ್ ಅಸೀರ್ (22) ಮೃತಪಟ್ಟ ದುರ್ದೈವಿ ಸವಾರ. ಗುರುವಾರ ಸಂಜೆ ವೇಳೆ ಅಹ್ಮದ್ ಅಸೀರ್ ಅವರು ತಮ್ಮ ಆಕ್ಟಿವಾ ಸ್ಕೂಟರ್‌ನಲ್ಲಿ ಸಜಿಪ ಕಡೆಯಿಂದ ಬೇಂಕೆ ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ದೇರಾಜೆ ತಲುಪುತ್ತಿದ್ದಂತೆ ಎದುರಿನಿಂದ ಅತಿ…

    Continue Reading

  • ಉಡುಪಿ ನಗರಸಭೆಗೆ ಲೋಕಾಯುಕ್ತ ದಿಢೀರ್ ದಾಳಿ: ಬಾಕಿ ಅರ್ಜಿಗಳ ಬಗ್ಗೆ ಅಧಿಕಾರಿಗಳಿಗೆ ಶಾಕ್
    , ,

    ಉಡುಪಿ ನಗರಸಭೆಗೆ ಲೋಕಾಯುಕ್ತ ದಿಢೀರ್ ದಾಳಿ: ಬಾಕಿ ಅರ್ಜಿಗಳ ಬಗ್ಗೆ ಅಧಿಕಾರಿಗಳಿಗೆ ಶಾಕ್

    ಉಡುಪಿ: ಸಾರ್ವಜನಿಕ ಅರ್ಜಿಗಳನ್ನು ದೀರ್ಘಕಾಲದವರೆಗೆ ವಿಲೇವಾರಿ ಮಾಡದೆ ಬಾಕಿ ಇರಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಗುರುವಾರ ಉಡುಪಿ ನಗರ ಪುರಸಭೆ (ಸಿಎಂಸಿ) ಕಚೇರಿಯಲ್ಲಿ ದಿಢೀರ್‌ ದಾಳಿ ನಡೆಸಿದರು.ಉಡುಪಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜುನಾಥ್ ಮತ್ತು ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯ ನೇತೃತ್ವವಹಿಸಿದ್ದರು. ಪರಿಶೀಲನೆಯ ಸಮಯದಲ್ಲಿ, ತಂಡವು ಪುರಸಭೆಯ ಕಚೇರಿಯ ವಿವಿಧ ಪ್ರಮುಖ ವಿಭಾಗಗಳು ಮತ್ತು ಇಲಾಖೆಗಳಿಗೆ ಭೇಟಿ ನೀಡಿ ಬಾಕಿ ಇರುವ ಸಾರ್ವಜನಿಕ ಅರ್ಜಿಗಳ ಸ್ಥಿತಿ, ಕಡತ ವಿಲೇವಾರಿಯ ವೇಗ ಮತ್ತು ಒಟ್ಟಾರೆ ಆಡಳಿತಾತ್ಮಕ…

    Continue Reading

  • ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಎಲ್ಲಾ ಕಾರ್ಯನಿರ್ವಾಹಕ ( Filed officer) ಅಧಿಕಾರಿಗಳು ಚಲನ ವಲನ ವಹಿಯಲ್ಲಿ ದಾಖಲಿಸಬೇಕು
    , , ,

    ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಎಲ್ಲಾ ಕಾರ್ಯನಿರ್ವಾಹಕ ( Filed officer) ಅಧಿಕಾರಿಗಳು ಚಲನ ವಲನ ವಹಿಯಲ್ಲಿ ದಾಖಲಿಸಬೇಕು

    ಮಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನೌಕರರು ಕಚೇರಿಗೆ ಗೈರಾಗಿದ್ದರೂ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ಪದ್ಧತಿಗೆ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ. ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಎಲ್ಲಾ ಕಾರ್ಯನಿರ್ವಾಹಕ ( Filed officer) ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚಲನ ವಲನ ವಹಿಯಲ್ಲಿ ದಾಖಲಿಸಬೇಕು. ಕಛೇರಿಗೆ ಪ್ರವೇಶಿಸುವಾಗ ಮತ್ತು ಹೊರಗಡೆ ತೆರಲುವಾಗ ಮತ್ತೆ ಕಛೇರಿಗೆ ಭೇಟಿ ನೀಡಿದಾಗ ತಮ್ಮಲ್ಲಿ ಎಷ್ಟು ಮೊತ್ತವಿದೆ ಎಂದು ತಿಳಿಯಲು…

    Continue Reading

  • ಎರಡು ಕಾರು–ಬೈಕ್ ನಡುವೆ ಡಿಕ್ಕಿ; ಅಪಘಾತದ ರಭಸಕ್ಕೆ ಕಾರು ಪಲ್ಟಿ
    , ,

    ಎರಡು ಕಾರು–ಬೈಕ್ ನಡುವೆ ಡಿಕ್ಕಿ; ಅಪಘಾತದ ರಭಸಕ್ಕೆ ಕಾರು ಪಲ್ಟಿ

    ಬೆಳ್ತಂಗಡಿ: ಎರಡು ಕಾರುಗಳು ಮತ್ತು ಬೈಕ್‌ ನಡುವೆ ಅಪಘಾತವಾಗಿ ಬೈಕ್‌ ಸವಾರ ಗಾಯಗೊಂಡ ಘಟನೆ ಗುರುವಾಯನಕೆರೆ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.ಮಂಗಳೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಮದ್ದಡ್ಕ ಬಳಿ ಈ ಅಪಘಾತ ಸಂಭವಿಸಿದ್ದು, ಮಂಗಳೂರಿನಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ, ಎದುರುಗಡೆ ಬರುತ್ತಿದ್ದ ಕಾರು ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಉರುಳಿ ಬಿದ್ದು ಗಾಯಗೊಂಡರು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಡಿಕ್ಕಿಯ ಬಲಕ್ಕೆ ಒಂದು ಕಾರು…

    Continue Reading

  • ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ವಿದೇಶಿ ಮಹಿಳೆ ಸೇರಿ ಮೂವರ ಬಂಧನ
    , ,

    ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ವಿದೇಶಿ ಮಹಿಳೆ ಸೇರಿ ಮೂವರ ಬಂಧನ

    ಬೆಂಗಳೂರು: ಮಾದಕ ದ್ರವ್ಯ ಜಾಲದ ವಿರುದ್ಧ ಬೆಂಗಳೂರು ಪೊಲೀಸರು ಮತ್ತು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 5.67 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹಾಗೂ ಕೊಕೇನ್ ಜಪ್ತಿಯಾಗಿದೆ. ಈ ಸಂಬಂಧ ಉಗಾಂಡಾ ಮೂಲದ ಮಹಿಳಾ ಡ್ರಗ್ ಪೆಡ್ಲರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.ನಗರದ ವಿವಿಧ ಭಾಗಗಳಲ್ಲಿ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಡ್ರಗ್ಸ್ ಸಾಗಾಟ ಮತ್ತು ಮಾರಾಟ ಜಾಲವನ್ನು ಪತ್ತೆಹಚ್ಚಿರುವ ಅಧಿಕಾರಿಗಳು, ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಸಂಪರ್ಕಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.ಹೆಬ್ಬಾಳ ಪೊಲೀಸ್ ಠಾಣೆ…

    Continue Reading

  • ಮೆಡಿಕಲ್ ಶಾಪ್‌ಗಳಲ್ಲಿ ಬಿಗಿ ನಿಯಮ: ಸಿರಪ್ ಮಾರಾಟಕ್ಕೆ ವೈದ್ಯರ ಅನುಮತಿ ಅಗತ್ಯ
    , ,

    ಮೆಡಿಕಲ್ ಶಾಪ್‌ಗಳಲ್ಲಿ ಬಿಗಿ ನಿಯಮ: ಸಿರಪ್ ಮಾರಾಟಕ್ಕೆ ವೈದ್ಯರ ಅನುಮತಿ ಅಗತ್ಯ

    ನವದೆಹಲಿ: ಮೆಡಿಕಲ್ ಶಾಪ್‌ಗಳಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್ ಖರೀದಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ನಿರ್ದೇಶಿಸಿದೆ.ವೈದ್ಯರ ಶಿಫಾರಸು ಇಲ್ಲದೇ ಯಾವುದೇ ಸಿರಪ್‌ಗಳನ್ನು ಖರೀದಿಸುವಂತಿಲ್ಲ. ಎಲ್ಲಾ ಸಿರಪ್‌ಗಳಿಗೆ ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯ. ಕೆಮ್ಮಿನ ಸಿರಪ್‌ಗೂ ವೈದ್ಯರ ಶಿಫಾರಸು ಅಗತ್ಯ ಎಂದು ಇಲಾಖೆ ಆದೇಶಿಸಿದೆ.ಕೇಂದ್ರವು 1945 ರ ಔಷಧ ನಿಯಮಗಳನ್ನು ತಿದ್ದುಪಡಿ ಮಾಡಿದೆ. ವೇಳಾಪಟ್ಟಿ ಏ ಅಡಿಯಲ್ಲಿ ಪಟ್ಟಿ ಮಾಡಲಾದ ವಿನಾಯಿತಿ ಪಡೆದ ಔಷಧಿಗಳ ವರ್ಗದಿಂದ ಸಿರಪ್‌ಗಳು ಎಂಬ ಪದವನ್ನು ತೆಗೆದುಹಾಕಿದೆ. ಹೀಗಾಗಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮು…

    Continue Reading

  • 14 ಕಡೆ ಲೋಕಾ ಶೋಧ: ಕೆಎಸ್ಆರ್‌ಟಿಸಿ ಅಧಿಕಾರಿ ಮನೆಯಲ್ಲೇ ಸಿಕ್ಕಿತು 40 ಲಕ್ಷ ನಗದು
    , ,

    14 ಕಡೆ ಲೋಕಾ ಶೋಧ: ಕೆಎಸ್ಆರ್‌ಟಿಸಿ ಅಧಿಕಾರಿ ಮನೆಯಲ್ಲೇ ಸಿಕ್ಕಿತು 40 ಲಕ್ಷ ನಗದು

    ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಮತ್ತೊಂದು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (Disproportionate Assets) ಆರೋಪದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಮೂವರು ಪ್ರಮುಖ ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿ ಸೇರಿದಂತೆ ಒಟ್ಟು 14ಕ್ಕೂ ಹೆಚ್ಚು ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾವಣಗೆರೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ (SP) ಎಂ. ಎಸ್. ಕೌಲಾಪುರೆ ಅವರ ನೇತೃತ್ವದಲ್ಲಿ 12 ಪ್ರತ್ಯೇಕ ತಂಡಗಳು ಈ ಮಹತ್ವದ ರೇಡ್ ಕೈಗೊಂಡಿವೆ. ದಾಳಿ…

    Continue Reading

  • ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
    ,

    ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

     ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಬೇಟೆ ಮುಂದುವರಿದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ, ಇಂದು ಮುಂಜಾನೆಯೇ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ಭರ್ಜರಿ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ. ಬೆಂಗಳೂರು, ಕಲಬುರಗಿ, ಚಿಕ್ಕಮಗಳೂರು ಹಾಗೂ ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರು ಬೀಡುಬಿಟ್ಟಿದ್ದು, ತೀವ್ರ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ರಾಜಧಾನಿ ಬೆಂಗಳೂರಿನ ಎರಡು ಪ್ರಮುಖ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಕ್ರಮ ಆಸ್ತಿ ಗಳಿಕೆ ದೂರಿನ…

    Continue Reading

  • ಮಜಾಭಾರತ ಕಲಾವಿದ ಸಿದ್ದಾರ್ಥ ಪರಶನೂರ ಅನುಮಾನಾಸ್ಪದ ಸಾವು; ಅರಣ್ಯ ಪ್ರದೇಶದಲ್ಲಿ ಶವ ಪತ್ತೆ
    , ,

    ಮಜಾಭಾರತ ಕಲಾವಿದ ಸಿದ್ದಾರ್ಥ ಪರಶನೂರ ಅನುಮಾನಾಸ್ಪದ ಸಾವು; ಅರಣ್ಯ ಪ್ರದೇಶದಲ್ಲಿ ಶವ ಪತ್ತೆ

    ಬೀದರ್: ಅನುಮಾನಾಸ್ಪದ ರೀತಿಯಲ್ಲಿ `ಮಜಾಭಾರತ ಕಾಮಿಡಿ ರಿಯಾಲಿಟಿ ಶೋ ಕಲಾವಿದ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಘಟನೆಯಾಗಿದೆ.ಹುಮ್ನಾಬಾದ್ ನಗರದ ಟೀಚರ್ಸ್ ಕಾಲೊನಿ‌ಯಲ್ಲಿ ವಾಸವಿದ್ದ ಸಿದ್ದಾರ್ಥ ಪರಶನೂರ (36) ಜೂನ್ 13 ರಂದು ಸ್ನೇಹಿತರೊಂದಿಗೆ ಮನೆಯಿಂದ ಹೋಗಿದ್ದು, ಇಂದು ಶವವಾಗಿ ಪತ್ತೆಯಾಗಿದ್ದಾನೆ.3 ದಿನವಾದರೂ ಮನೆಗೆ ಬಾರದ ಸಿದ್ದಾರ್ಥ, ಸೋಮವಾರ ಮಧ್ಯಾಹ್ನ ಶವವಾಗಿ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆಯಷ್ಟೇ ಹುಮ್ನಾಬಾದ್ ಪೊಲೀಸ್ ಠಾಣೆಗೆ ಕುಟುಂಬಸ್ಥರು ಮಿಸ್ಸಿಂಗ್‌ ದೂರು ದಾಖಲಿಸಲು ಹೋಗಿದ್ದರು. ಮೊಬೈಲ್…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed