,

ಅನುಕಂಪದ ಆಧಾರದ ನೇಮಕಾತಿ ಒಮ್ಮೆಯ ಪರಿಹಾರ, ನಿರಂತರ ಹಕ್ಕಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಅನುಕಂಪದ ಆಧಾರದ ಮೇಲೆ ನೀಡಲಾಗುವ ಸರ್ಕಾರಿ ಉದ್ಯೋಗವು ಕುಟುಂಬದ ತಕ್ಷಣದ ಆರ್ಥಿಕ ಸಂಕಷ್ಟ ನಿವಾರಣೆಗೆ ನೀಡುವ ಒಮ್ಮೆಯ ಪರಿಹಾರವಾಗಿದೆ. ಅದನ್ನು ನಿರಂತರ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನಾಗಿ ಪರಿಗಣಿಸಲು ಯಾವುದೇ ರೀತಿಯಲ್ಲಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟವಾದ ಮಹತ್ವದ ತೀರ್ಪು ನೀಡಿದೆ. ALSO READ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಏಕಾಏಕಿ ಕುಸಿದುಬಿದ್ದು ವ್ಯಕ್ತಿ ಸಾವು!ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗೆ ನೇಮಕಗೊಂಡಿದ್ದ ಇಬ್ಬರು ನೌಕರರನ್ನು, ಅವರ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ ಪ್ರಥಮ ದರ್ಜೆ ಸಹಾಯಕ…

ಅನುಕಂಪದ ಆಧಾರದ ಮೇಲೆ ನೀಡಲಾಗುವ ಸರ್ಕಾರಿ ಉದ್ಯೋಗವು ಕುಟುಂಬದ ತಕ್ಷಣದ ಆರ್ಥಿಕ ಸಂಕಷ್ಟ ನಿವಾರಣೆಗೆ ನೀಡುವ ಒಮ್ಮೆಯ ಪರಿಹಾರವಾಗಿದೆ. ಅದನ್ನು ನಿರಂತರ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನಾಗಿ ಪರಿಗಣಿಸಲು ಯಾವುದೇ ರೀತಿಯಲ್ಲಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟವಾದ ಮಹತ್ವದ ತೀರ್ಪು ನೀಡಿದೆ.

ALSO READ

ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಏಕಾಏಕಿ ಕುಸಿದುಬಿದ್ದು ವ್ಯಕ್ತಿ ಸಾವು!
ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗೆ ನೇಮಕಗೊಂಡಿದ್ದ ಇಬ್ಬರು ನೌಕರರನ್ನು, ಅವರ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ ಪ್ರಥಮ ದರ್ಜೆ ಸಹಾಯಕ (FDA) ಹುದ್ದೆಗೆ ಭಡ್ತಿ ನೀಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಆದೇಶಿಸಿತ್ತು. KAT ನೀಡಿದ್ದ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಕೆಎಟಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ.

ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠವು, ಒಮ್ಮೆ ಅನುಕಂಪದ ಆಧಾರದ ಹುದ್ದೆಯನ್ನು ಸ್ವೀಕರಿಸಿದ ಮೇಲೆ, ಕೇವಲ ಹೆಚ್ಚಿನ ವಿದ್ಯಾರ್ಹತೆ ಇದೆ ಎಂಬ ಕಾರಣಕ್ಕೆ ಉನ್ನತ ಹುದ್ದೆಯನ್ನು ಕೋರಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಉನ್ನತ ಶೈಕ್ಷಣಿಕ ಅರ್ಹತೆಯು ನಿರ್ದಿಷ್ಟ ಹುದ್ದೆಗೆ ಸೂಕ್ತ ಅರ್ಹತೆಯನ್ನು ನೀಡಬಹುದೇ ಹೊರತು, ಅನುಕಂಪದ ಯೋಜನೆಯಡಿ ಆ ಉನ್ನತ ಹುದ್ದೆಯನ್ನೇ ಪಡೆಯಬೇಕು ಎಂಬ ಕಾನೂನಾತ್ಮಕ ಹಕ್ಕನ್ನು ಯಾವತ್ತೂ ಸೃಷ್ಟಿಸುವುದಿಲ್ಲ ಎಂದು ಪೀಠ ಪ್ರತಿಪಾದಿಸಿದೆ.

ಇದಲ್ಲದೆ, ಅರ್ಜಿದಾರರು 2018ರಲ್ಲಿ SDA ಹುದ್ದೆಯನ್ನು ಸ್ವೀಕರಿಸಿದ್ದು, ಸುಮಾರು ಆರು ವರ್ಷಗಳ ಸುದೀರ್ಘ ಅವಧಿಯ ಬಳಿಕ (2024ರಲ್ಲಿ) ಕೆಎಟಿ ಮೆಟ್ಟಿಲೇರಿದ್ದಾರೆ. ಆಡಳಿತಾತ್ಮಕ ನ್ಯಾಯಮಂಡಳಿಗಳ ಕಾಯ್ದೆಯ ಸೆಕ್ಷನ್ 21ರಡಿ ನಿಗದಿತ ಕಾಲಮಿತಿಯನ್ನು ಮೀರಿದ ಅರ್ಜಿಗಳಿಗೆ ಸಮರ್ಪಕ ಕಾರಣವಿಲ್ಲದೇ ಪರಿಹಾರ ನೀಡಲು ಸಾಧ್ಯವಿಲ್ಲ. ಈ ಹಿಂದೆ ಬೇರೆಯವರಿಗೆ ನಿಯಮಬಾಹಿರವಾಗಿ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಹುದ್ದೆ ಬದಲಾಯಿಸಿಕೊಡಲಾಗಿದೆ ಎಂಬ ಕಾರಣಕ್ಕೆ, ಅದನ್ನೇ ಆಧಾರವಾಗಿಸಿಕೊಂಡು ಮತ್ತೊಂದು ಕಾನೂನುಬಾಹಿರ ಕ್ರಮಕ್ಕೆ ಹಕ್ಕು ಸೃಷ್ಟಿಸಲು ಬರುವುದಿಲ್ಲ ಎಂದು ಪೀಠ ತಿಳಿಸಿದೆ.

ಅನುಕಂಪದ ನೇಮಕಾತಿ ವಿಷಯದಲ್ಲಿ ಸರ್ಕಾರವು ಸಂಬಂಧಿತ ನಿಯಮಗಳನ್ನು ಏಕರೂಪವಾಗಿ ಪಾಲಿಸಬೇಕು. ನಿಯಮಗಳಿಂದ ವಿಚಲಿತರಾಗಿ ಕೆಲವರಿಗೆ ಮಾತ್ರ ನೀಡುವ ಕಾನೂನುಬಾಹಿರ ಪ್ರಯೋಜನಗಳು ಮುಂದಿನ ದಿನಗಳಲ್ಲಿ ಅಸಮಾನತೆಗೆ ಹಾಗೂ ಅನಗತ್ಯ ನ್ಯಾಯಾಂಗ ವ್ಯಾಜ್ಯಗಳಿಗೆ ಕಾರಣವಾಗಲಿವೆ. ಅಷ್ಟೇ ಅಲ್ಲದೆ, ಇದು ಆಡಳಿತಾತ್ಮಕ ಗೊಂದಲಗಳಿಗೆ ದಾರಿ ಮಾಡಿಕೊಟ್ಟು ಸಂವಿಧಾನದ ವಿಧಿ 14ರ (ಸಮಾನತೆಯ ಹಕ್ಕು) ಉಲ್ಲಂಘನೆಗೆ ಕಾರಣವಾಗಲಿದೆ ಎಂದು ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed