,

ಉಡುಪಿ ನಗರಸಭೆ ಆಸ್ತಿತೆರಿಗೆ ಪಾವತಿ ವೇಳೆ ಬ್ಯಾಂಕ್ ನಕಲಿ ಸೀಲ್ ದುರ್ಬಳಕೆ: ಮಹಿಳೆ ಸಹಿತ ಇಬ್ಬರ ಬಂಧನ

ಉಡುಪಿ: ನಗರಸಭೆಯ ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ನಕಲಿ ಸೀಲ್ ಬಳಸಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಉಡುಪಿಯ 76 ಬಡಗುಬೆಟ್ಟು ಕಸ್ತೂರ್ಬಾನಗರದ ನಿವಾಸಿ ಸುಪೇಶ್ (25) ಹಾಗೂ ಮೂಡುಅಲೆವೂರಿನ ಕುಂತಲನಗರ ನಿವಾಸಿ ಶಾಂತಾ (43) ಬಂಧಿತ ಆರೋಪಿಗಳು. ಈ ಇಬ್ಬರನ್ನು ಉಡುಪಿ ಕೃಷ್ಣಮಠದ ರಾಜಾಂಗಣ ಬಳಿ ವಶಕ್ಕೆ ಪಡೆದು, ಅವರಿಂದ ವಂಚನೆಗೆ ಬಳಸಿದ ಸೀಲ್ ಮತ್ತು ದಾಖಲೆ ಪತ್ರದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ನಗರಸಭೆ ಕಚೇರಿಯಲ್ಲಿ…

ಉಡುಪಿ: ನಗರಸಭೆಯ ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ನಕಲಿ ಸೀಲ್ ಬಳಸಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಉಡುಪಿಯ 76 ಬಡಗುಬೆಟ್ಟು ಕಸ್ತೂರ್ಬಾನಗರದ ನಿವಾಸಿ ಸುಪೇಶ್ (25) ಹಾಗೂ ಮೂಡುಅಲೆವೂರಿನ ಕುಂತಲನಗರ ನಿವಾಸಿ ಶಾಂತಾ (43) ಬಂಧಿತ ಆರೋಪಿಗಳು. ಈ ಇಬ್ಬರನ್ನು ಉಡುಪಿ ಕೃಷ್ಣಮಠದ ರಾಜಾಂಗಣ ಬಳಿ ವಶಕ್ಕೆ ಪಡೆದು, ಅವರಿಂದ ವಂಚನೆಗೆ ಬಳಸಿದ ಸೀಲ್ ಮತ್ತು ದಾಖಲೆ ಪತ್ರದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.

ನಗರಸಭೆ ಕಚೇರಿಯಲ್ಲಿ ಆಸ್ತಿತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜಿಸಿ ಯೂನಿಯನ್ ಬ್ಯಾಂಕ್‌ನಲ್ಲಿ ನಗರಸಭೆಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಇದೆ. ಫೆಬ್ರವರಿ 3ರಂದು ಆಸ್ತಿತೆರಿಗೆ ಪಾವತಿಗಳ ತುಲನೆಯಲ್ಲಿ, ಜನವರಿ 28ರಂದು ಪಾವತಿಯಾಗಿದೆಯೆಂದು ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಚಲನ್ ಪತ್ತೆಯಾದರೂ, ಅದೇ ದಿನಾಂಕದ ಬ್ಯಾಂಕ್ ವಿವರ ಪಟ್ಟಿಯಲ್ಲಿ ಪಾವತಿ ದಾಖಲಾಗಿರಲಿಲ್ಲ ಎಂಬುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಇದೇ ರೀತಿ ಫೆಬ್ರವರಿ 4ರಂದು ಪರಿಶೀಲನೆ ನಡೆಸಿದಾಗ, ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಕೆಲವು ಚಲನ್‌ಗಳು ಈಗಾಗಲೇ ಜನವರಿ 28ರಂದು ಜನರೇಟ್ ಆಗಿದ್ದ ಅದೇ ಚಲನ್ ಸಂಖ್ಯೆಯನ್ನು ಹೊಂದಿರುವುದು ಪತ್ತೆಯಾಗಿದೆ. ಒಂದೇ ಚಲನ್ ಸಂಖ್ಯೆಗೆ ಎರಡು ಬೇರೆ ಬೇರೆ ದಿನಾಂಕಗಳಲ್ಲಿ ಸೀಲ್ ಹೊಂದಿದ ಚಲನ್‌ಗಳು ದೊರೆತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಯಾರೋ ಆರೋಪಿಗಳು ಯೂನಿಯನ್‌ ಬ್ಯಾಂಕ್ ಸೀಲ್ ಅನ್ನು ದುರ್ಬಳಕೆ ಮಾಡಿ ಆಸ್ತಿತೆರಿಗೆ ಪಾವತಿಸಿದ ಹಣವನ್ನು ವಂಚನೆ ಮಾಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೌರಾಯುಕ್ತ ಮಹಾಂತೇಶ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ವಿಶೇಷ ತಂಡವು ಇಬ್ಬರು‌ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed