ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಅಡಕೆ ಬಳಸಿ ತಯಾರಿಸುವ ಗುಟ್ಕಾ ಹಾಗೂ ಪಾನ್ ಮಸಾಲ ಉತ್ಪನ್ನಗಳ ಮೇಲೆ ನಿಷೇಧ ಹೇರಲು ಮುಂದಾಗಿರುವುದು ರಾಜ್ಯದ ಅಡಕೆ ಬೆಳೆಗಾರರಲ್ಲಿ ತೀವ್ರ ಕಳವಳ ಮೂಡಿಸಿದೆ. ಈ ನಿರ್ಧಾರದಿಂದ ಅಡಕೆ ಮಾರುಕಟ್ಟೆ ಕುಸಿಯುವ ಭೀತಿ ಎದುರಾಗಿದ್ದು, ಅಡಿಕೆ ಬೆಳೆಗಾರರು ಗುಟ್ಕಾ ನಿಷೇಧ ಕಾಯ್ದೆ ಹಿಂಪಡೆಯಲು ಆರಗ ಜ್ಞಾನೇಂದ್ರ ಸಹಿತ ಡಿ.ಜಿ ಶಾಂತನಗೌಡ ನೇತ್ರತ್ವದ ನೀಯೋಗ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರಿಗೆ ಮನವಿ ಮಾಡಿದ್ದಾರೆ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಯುವಜನರನ್ನು ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ತಂಬಾಕು ಅಥವಾ ನಿಕೋಟಿನ್ ಮಿಶ್ರಿತ ಗುಟ್ಕಾ ಹಾಗೂ ಪಾನ್ ಮಸಾಲಾ ಮಾರಾಟ, ಉತ್ಪಾದನೆ ಮತ್ತು ಸಂಗ್ರಹಣೆಯ ಮೇಲೆ ಒಂದು ವರ್ಷದ ನಿಷೇಧ ಹೇರಿ ಅಧಿಸೂಚನೆ ಹೊರಡಿಸಿದೆ.
ಗುಟ್ಕಾದಲ್ಲಿ ಅಡಿಕೆ ಬಳಕೆಯಾಗುವುದರಿಂದ ಈ ನಿಷೇಧವು ರಾಜ್ಯದ ಲಕ್ಷಾಂತರ ಅಡಿಕೆ ಬೆಳೆಗಾರರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಮುಖಂಡರು ವಾದಿಸಿದ್ದಾರೆ.
ಅದರೆ, ಇಂತಹ ಆರೋಗ್ಯ ಹಾನಿಕಾರಕ ಉತ್ಪನ್ನಗಳನ್ನು ನಿಷೇಧಿಸುವುದು ಸ್ವಾಗರ್ಹ. ಇಂದಿನ ಯುವ ಪೀಳಿಗೆಯು ಇದರಿಂದ ಬಳಿಯಾಗುವುದು ತಪ್ಪುತ್ತದೆ. ಇಂತಹ ನಿರ್ಧಾರಗಳನ್ನು ಸರಕಾರ ಎಂದಿಗೂ ಹಿಂಪಡೆಯ ಬಾರದು ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಯುವ ಜನತೆ ಬಲಿಯಾಗುವುದು ಸರಿಯೇ?















