,

 ಜಿಮ್ ಟ್ರೇನರ್ ಕಿಡ್ನಾಪ್ ಮಾಡಿ, ಹಣಕ್ಕೆ ಬೇಡಿಕೆಯಿಟ್ಟ ಕೇಸ್ : ‘KPCC’ ಪ್ರಧಾನ ಕಾರ್ಯದರ್ಶಿ ಅರೆಸ್ಟ್

ಬೆಂಗಳೂರಿನ ಶಂಕರಪುರದಲ್ಲಿ ಜಿಮ್ ಟ್ರೈನರ್ ಮಿಥುಲ್ ಅಪಹರಣ ಮಾಡಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಸಿಬಿ ಪೊಲೀಸರು ಕಾಂಗ್ರೆಸ್ ಮುಖಂಡ ನಮಿತ್ ಗೌಡ ಅಲಿಯಾಸ್ ಅಭಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ನಮಿತ್ ಗೌಡ ಹೆಬ್ಬಾಳ ಘಟಕದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದು ಸಾರಿಗೆ ಸಚಿವ ಭೈರತಿ ಸುರೇಶ್ ಗೆ ಆಪ್ತನಾಗಿದ್ದಾನೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ…

ಬೆಂಗಳೂರಿನ ಶಂಕರಪುರದಲ್ಲಿ ಜಿಮ್ ಟ್ರೈನರ್ ಮಿಥುಲ್ ಅಪಹರಣ ಮಾಡಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಸಿಬಿ ಪೊಲೀಸರು ಕಾಂಗ್ರೆಸ್ ಮುಖಂಡ ನಮಿತ್ ಗೌಡ ಅಲಿಯಾಸ್ ಅಭಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ನಮಿತ್ ಗೌಡ ಹೆಬ್ಬಾಳ ಘಟಕದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದು ಸಾರಿಗೆ ಸಚಿವ ಭೈರತಿ ಸುರೇಶ್ ಗೆ ಆಪ್ತನಾಗಿದ್ದಾನೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ನಮಿತ್ ಗೌಡ ಬಿಲ್ಡಪ್ ಕೊಡುತ್ತಿದ್ದ. ಸಿಸಿಬಿ ಪೊಲೀಸರಿಂದ ಇದೀಗ ಕಾಂಗ್ರೆಸ್ ಮುಖಂಡ ನಮಿತ್ ಗೌಡನ ಬಂಧನವಾಗಿದೆ. ಪೊಲೀಸರು ಬಂಧಿಸುವಾಗ ನಾನು ಯಾರು ಗೊತ್ತಾ? ಎಂದು ನಮಿತ್ ಅವಾಜ್ ಹಾಕಿದ್ದಾನೆ. 

ಬಂಧನದ ಬಳಿಕ ನಮಿತ್ ಬಿಡುವಂತೆ ಹಲವರಿಂದ ಪೊಲೀಸರಿಗೆ ಒತ್ತಡ ಬಂದಿದೆ. ಸದಾತ್ ರೌಡಿಶೀಟರ್ ಮತ್ತು ನಮಿತ್ ಸೇರಿ ಸಿಸಿಬಿ ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಎಂದು ಹೇಳಿಕೊಂಡು ಜಿಮ್ ಟ್ರೈನರ್ ಮಿಥುಲ್ ನನ್ನು ಈ ಒಂದು ಗ್ಯಾಂಗ್ ಕಿಡ್ನಾಪ್ ಮಾಡಿದ್ದು, ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಾರೆ ಎಂದು ಬೆದರಿಸಿ 40,000 ಹಣ ವಸೂಲಿ ಮಾಡಿದ್ದು ಅಲ್ಲದೆ ಈ ಒಂದು ಗ್ಯಾಂಗ್ ಒಟ್ಟು ಐದು ಲಕ್ಷಕ್ಕೆ ಬೇಡಿಕೆ ಇಟ್ಟಿತ್ತು. ಬಳಿಕ ಅನುಮಾನಗೊಂಡು ಜಿಮ್ ಟ್ರೈನರ್ ಮಿಥುಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಇದೀಗ ಪೊಲೀಸರು ಐವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed