,

ಹನಿಟ್ರ್ಯಾಪ್ ಸೇರಿದಂತೆ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಬಂಧನ

ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಗುಲ್ವಾಡಿ ಸೌಕೂರು ಆಳ್ವರ ಮನೆಯ ಶಶಾಂಕ್ ಶೆಟ್ಟಿ (32) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 7 ಪ್ರಕರಣ, ಹೆಬ್ರಿ- 1, ಕಲಘಟಕಿ- 1, ಕೋಟ- 1 ಹಾಗೂ ಬೆಂಗಳೂರು ಚಂದ್ರ ಲೇ ಔಟ್-1 ರಂತೆ ಕಳ್ಳತನ, ಸುಲಿಗೆ, ಹನಿಟ್ರ್ಯಾಪ್ ಗಳಂತಹ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ನ್ಯಾಯಾಲಯವು ಈವರೆಗೆ 12 ಬಾರಿ ವಾರೆಂಟ್…

ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಗುಲ್ವಾಡಿ ಸೌಕೂರು ಆಳ್ವರ ಮನೆಯ ಶಶಾಂಕ್ ಶೆಟ್ಟಿ (32) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 7 ಪ್ರಕರಣ, ಹೆಬ್ರಿ- 1, ಕಲಘಟಕಿ- 1, ಕೋಟ- 1 ಹಾಗೂ ಬೆಂಗಳೂರು ಚಂದ್ರ ಲೇ ಔಟ್-1 ರಂತೆ ಕಳ್ಳತನ, ಸುಲಿಗೆ, ಹನಿಟ್ರ್ಯಾಪ್ ಗಳಂತಹ ಒಟ್ಟು 11 ಪ್ರಕರಣಗಳು ದಾಖಲಾಗಿವೆ.

ಈತನ ವಿರುದ್ಧ ನ್ಯಾಯಾಲಯವು ಈವರೆಗೆ 12 ಬಾರಿ ವಾರೆಂಟ್ ಹೊರಡಿಸಿದ್ದು ಈತ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 4 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈತನ ಪತ್ತೆಯ ಬಗ್ಗೆ 4 ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಖಚಿತ ಮಾಹಿತಿಯಂತೆ ಶಶಾಂಕ್ ಶೆಟ್ಟಿಯನ್ನು ಫೆ.15 ರಂದು ಕುಂದಾಪುರ ತಾಲೂಕು ಬಿದ್ಮಲ್ ಕಟ್ಟೆ ಎಂಬಲ್ಲಿ ಬಂದಿಸಲಾಗಿದೆ.

ಕುಂದಾಪುರ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ ಮತ್ತು ಪೊಲೀಸ್‌ ವೃತ್ತ ನಿರೀಕ್ಷಕ ಸಂತೋಷ ಎ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ನಾಸೀರ್ ಹುಸೇನ್ ಹಾಗೂ ಚಂದ್ರಕಲಾ ಮ ಪತ್ತಾರ ಅವರ ನೇತ್ರತ್ವದಲ್ಲಿ ಠಾಣಾ ಸಿಬ್ಬಂದಿ ರಾಜು ಬಿ, ಗುರು ಪ್ರಸಾದ್, ಕಿರಣ್ ಬಿ ಪಾಟೀಲ್ ಹಾಗೂ ಕುಂದಾಪುರ ಠಾಣಾ ಸಿಬಂದಿ ಚಂದ್ರ ಶೆಟ್ಟಿ ಈ ಕಾರ್ಯಾಚರಣೆ ನಡೆಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed