ಮಂಗಳೂರು: ಬೇರೊಬ್ಬರ ದಾಖಲೆಗಳನ್ನು ಬಳಸಿ ನಕಲಿ ಪಾಸ್‌ಪೋರ್ಟ್ ಸೃಷ್ಟಿಸಿ ಇಸ್ರೇಲ್‌ಗೆ ತೆರಳಿದ ಪ್ರಕರಣವನ್ನು ಮಂಗಳೂರು ಸಿ.ಎಸ್.ಬಿ. ಪೊಲೀಸರು ಪತ್ತೆಹಚ್ಚಿರುವುದು ಕರಾವಳಿ ಭಾಗದಲ್ಲಿ ಸಂಚಲನ ಮೂಡಿಸಿದೆ. ಆದರೆ ಈ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಹಲವು ಗಂಭೀರ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಉಳ್ಳಾಲದ ಮಹಿಳೆಯೊಬ್ಬರ ಹೆಸರಿನ ದಾಖಲೆಗಳನ್ನು ಬಳಸಿ ಮತ್ತೋರ್ವ ಮಹಿಳೆಗೆ ಪಾಸ್‌ಪೋರ್ಟ್ ಮಾಡಿಕೊಡಲಾಗಿದೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಆದರೆ ಈ ಪ್ರಕರಣ ಕೇವಲ ಒಂದು ಘಟನೆಯೇ, ಅಥವಾ ವರ್ಷಗಳಿಂದ ನಡೆಯುತ್ತಿರುವ ದೊಡ್ಡ ಜಾಲದ ಒಂದು ಸಣ್ಣ ತುಣುಕೇ ಎಂಬ ಅನುಮಾನಗಳು ಈಗ ವ್ಯಕ್ತವಾಗುತ್ತಿವೆ.ಸ್ಥಳೀಯ ಮೂಲಗಳ ಪ್ರಕಾರ, ಉಳ್ಳಾಲ ಭಾಗದಿಂದ ಇದೇ ರೀತಿಯ ವಿಧಾನದಲ್ಲಿ ಹಲವರು ಇಸ್ರೇಲ್‌ಗೆ ತೆರಳಿರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಹಾಗಿದ್ದರೆ, ಈ ಆರೋಪಗಳ ಬಗ್ಗೆ ಈವರೆಗೆ ಸಮಗ್ರ ತನಿಖೆ ಯಾಕೆ ನಡೆದಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.”ಬಾಂಬೆ ಟು ಗೋವಾ” ಎಂದು ಸುತ್ತುತ್ತಿರುವ ಈ ಜಾಲದ ಕಿಂಗ್‌ಪಿನ್ಸ್ಥಳೀಯ ಮಟ್ಟದಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ, ಈ ಜಾಲದ ಪ್ರಮುಖ ಸೂತ್ರಧಾರಿ ಮುಂಬೈ-ಗೋವಾ ಭಾಗದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿಯಾಗಿರುವ ಪ್ರೇಮ್ ಪ್ರಕಾಶ್ ಡಿ’ಸೋಜಾ ನಿರ್ಭಯವಾಗಿ ಮುಂಬೈ ಮತ್ತು ಗೋವಾ ನಡುವೆ ಓಡಾಡುತ್ತಿರುವ ಕುರಿತು ಮಾಹಿತಿ ಇದ್ದರೂ, ಆತನ ವಿರುದ್ಧ ಕಠಿಣ ಕ್ರಮ ಏಕೆ ಕೈಗೊಳ್ಳಲಾಗಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.ರಾಜಕೀಯ ಅಥವಾ ಪ್ರಭಾವಿಗಳ ರಕ್ಷಣೆ ಸ್ಥಳೀಯ ಮಟ್ಟದಲ್ಲಿ ಈ ಪ್ರಕರಣದ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳಿದ್ದರೂ, ದೊಡ್ಡ ಮಟ್ಟದ ತನಿಖೆ ನಡೆದಿರುವ ಉದಾಹರಣೆಗಳು ಕಾಣಿಸುತ್ತಿಲ್ಲ. ಇದರಿಂದಾಗಿ “ಯಾರಾದರೂ ಪ್ರಭಾವಿ ವ್ಯಕ್ತಿಗಳ ರಕ್ಷಣೆ ಈ ಜಾಲಕ್ಕಿದೆಯೇ?” ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಜರ್ಮನಿ ಉದ್ಯೋಗದ ಹೆಸರಲ್ಲೂ ಮೋಸ?ಇಸ್ರೇಲ್ ಮಾತ್ರವಲ್ಲದೆ, ಜರ್ಮನಿ ಸೇರಿದಂತೆ ಯುರೋಪಿಯನ್ ದೇಶಗಳಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿ ವಂಚನೆ ಮಾಡಿರುವ ಆರೋಪಗಳೂ ಕೇಳಿಬರುತ್ತಿವೆ. ಈ ಬಗ್ಗೆ ದೂರುಗಳು ಬಂದಿವೆಯೇ? ಬಂದಿದ್ದರೆ ಯಾವ ಹಂತದಲ್ಲಿವೆ? ಎಂಬುದರ ಬಗ್ಗೆಯೂ ಸ್ಪಷ್ಟತೆ ಅಗತ್ಯವಾಗಿದೆ.ಉಳ್ಳಾಲದಿಂದ ಎಷ್ಟು ಮಂದಿ ಈ ರೀತಿಯ ಪಾಸ್‌ಪೋರ್ಟ್‌ಗಳ ಮೂಲಕ ವಿದೇಶಕ್ಕೆ ತೆರಳಿದ್ದಾರೆ?ಈ ಜಾಲ ಎಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ?ಪಾಸ್‌ಪೋರ್ಟ್ ಪರಿಶೀಲನಾ ವ್ಯವಸ್ಥೆಯನ್ನು ಹೇಗೆ ವಂಚಿಸಲಾಗಿದೆ?ಹಣ ಪಡೆದು ವಿದೇಶಕ್ಕೆ ಕಳುಹಿಸುವ ಏಜೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ?ಪ್ರಕರಣದ ಹಿಂದೆ ಪ್ರಭಾವಿ ವ್ಯಕ್ತಿಗಳ ನೆರಳು ಇದೆಯೇ?ಇದೆಲ್ಲದಕ್ಕೂ ಉತ್ತರ ಸಿಗಬೇಕಾಗಿದೆಪೊಲೀಸರ ತನಿಖೆ ಕೇವಲ ದಾಖಲಾತಿ ಮಟ್ಟದಲ್ಲೇ ಉಳಿಯುತ್ತದೆಯೇ ಅಥವಾ ಇಡೀ ಜಾಲವನ್ನು ಬಯಲಿಗೆಳೆಯುತ್ತದೆಯೇ?ಸದ್ಯ ಬೆಳಕಿಗೆ ಬಂದಿರುವ ಪ್ರಕರಣ ಕೇವಲ ಒಬ್ಬ ವ್ಯಕ್ತಿಯ ಅಕ್ರಮ ವಿದೇಶ ಪ್ರಯಾಣದ ಪ್ರಕರಣವಲ್ಲ. ಇದು ರಾಷ್ಟ್ರೀಯ ಭದ್ರತೆ, ದಾಖಲೆಗಳ ವಿಶ್ವಾಸಾರ್ಹತೆ ಹಾಗೂ ಅಕ್ರಮ ವಲಸೆ ಜಾಲಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ಆದ್ದರಿಂದ ಈ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಲು ಉನ್ನತ ಮಟ್ಟದ ತನಿಖೆ ಅಗತ್ಯವಾಗಿದೆ ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
‘ಯಾರದ್ದೋ ಪಾಸ್‌ಪೋರ್ಟ್, ಯಾರದ್ದೋ ಪ್ರಯಾಣ’ : ಉಳ್ಳಾಲದಲ್ಲಿ ನಡೆದಿರುವ ಭಾರಿ ಹಗರಣದ ಸತ್ಯ ಹೊರಬರುವುದು ಯಾವಾಗ?
ಮಂಗಳೂರು: ಬೇರೊಬ್ಬರ ದಾಖಲೆಗಳನ್ನು ಬಳಸಿ ನಕಲಿ ಪಾಸ್‌ಪೋರ್ಟ್ ಸೃಷ್ಟಿಸಿ ಇಸ್ರೇಲ್‌ಗೆ ತೆರಳಿದ ಪ್ರಕರಣವನ್ನು ಮಂಗಳೂರು ಸಿ.ಎಸ್.ಬಿ. ಪೊಲೀಸರು ಪತ್ತೆಹಚ್ಚಿರುವುದು ಕರಾವಳಿ ಭಾಗದಲ್ಲಿ ಸಂಚಲನ ಮೂಡಿಸಿದೆ. ಆದರೆ ಈ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಹಲವು ಗಂಭೀರ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಉಳ್ಳಾಲದ ಮಹಿಳೆಯೊಬ್ಬರ ಹೆಸರಿನ ದಾಖಲೆಗಳನ್ನು ಬಳಸಿ ಮತ್ತೋರ್ವ ಮಹಿಳೆಗೆ ಪಾಸ್‌ಪೋರ್ಟ್ ಮಾಡಿಕೊಡಲಾಗಿದೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಆದರೆ ಈ ಪ್ರಕರಣ ಕೇವಲ ಒಂದು ಘಟನೆಯೇ, ಅಥವಾ ವರ್ಷಗಳಿಂದ ನಡೆಯುತ್ತಿರುವ ದೊಡ್ಡ…
Previous Post
Next Post
Leave a Reply
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed












