, ,

‘ಪೆನ್ಷನ್ ಕಾರ್ಡ್’ ಆಮಿಷ; ಕಾರ್ಕಳದ ಹಿರಿಯರಿಗೆ ₹3.73 ಲಕ್ಷ ವಂಚನೆ

ಕಾರ್ಕಳ : ಫೇಸ್‌ಬುಕ್‌ನಲ್ಲಿ ಬಂದ ಲಿಂಕ್ ಒಂದನ್ನು ನಂಬಿ ನಿವೃತ್ತ ಪೆನ್ಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ ಕಾರ್ಕಳದ ಹಿರಿಯ ನಾಗರಿಕರೊಬ್ಬರು ₹3,73,000 ಹಣ ಕಳೆದುಕೊಂಡು ಸೈಬರ್ ವಂಚನೆಗೊಳಗಾಗಿದ್ದಾರೆ. ದಿನಾಂಕ 13-07-2026 ರಂದು ಸಂಜೆ 5:30 ರ ಸುಮಾರಿಗೆ ದೂರುದಾರರ ಫೇಸ್‌ಬುಕ್ ಖಾತೆಗೆ ‘ಕೆನರಾ ರಿಟೈರ್ಡ್ ಪೆನ್ಸನ್ ಕಾರ್ಡ್’ ಹೆಸರಿನ ಖಾತೆಯಿಂದ ಲಿಂಕ್ ಬಂದಿತ್ತು. ಅದನ್ನು ತೆರೆದ ಅವರು ಕಾರ್ಡ್‌ಗಾಗಿ ಅಪ್ಲೈ ಮಾಡಿದ್ದರು. ತಕ್ಷಣವೇ +91 6744250286, 8655389531 ಸಂಖ್ಯೆಗಳಿಂದ ಕರೆ ಮಾಡಿದ ವ್ಯಕ್ತಿ, ತಾನು ‘ಬ್ಯಾಂಕಿನ ಅಸಿಸ್ಟೆಂಟ್…

ಕಾರ್ಕಳ : ಫೇಸ್‌ಬುಕ್‌ನಲ್ಲಿ ಬಂದ ಲಿಂಕ್ ಒಂದನ್ನು ನಂಬಿ ನಿವೃತ್ತ ಪೆನ್ಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ ಕಾರ್ಕಳದ ಹಿರಿಯ ನಾಗರಿಕರೊಬ್ಬರು ₹3,73,000 ಹಣ ಕಳೆದುಕೊಂಡು ಸೈಬರ್ ವಂಚನೆಗೊಳಗಾಗಿದ್ದಾರೆ. ದಿನಾಂಕ 13-07-2026 ರಂದು ಸಂಜೆ 5:30 ರ ಸುಮಾರಿಗೆ ದೂರುದಾರರ ಫೇಸ್‌ಬುಕ್ ಖಾತೆಗೆ ‘ಕೆನರಾ ರಿಟೈರ್ಡ್ ಪೆನ್ಸನ್ ಕಾರ್ಡ್’ ಹೆಸರಿನ ಖಾತೆಯಿಂದ ಲಿಂಕ್ ಬಂದಿತ್ತು. ಅದನ್ನು ತೆರೆದ ಅವರು ಕಾರ್ಡ್‌ಗಾಗಿ ಅಪ್ಲೈ ಮಾಡಿದ್ದರು. ತಕ್ಷಣವೇ +91 6744250286, 8655389531 ಸಂಖ್ಯೆಗಳಿಂದ ಕರೆ ಮಾಡಿದ ವ್ಯಕ್ತಿ, ತಾನು ‘ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM)’ ಎಂದು ಪರಿಚಯಿಸಿಕೊಂಡು ಪೆನ್ಷನ್ ಕಾರ್ಡ್‌ನ ಲಾಭಗಳ ಬಗ್ಗೆ ಮಾಹಿತಿ ನೀಡಿದ್ದ.

ನಂತರ ಮೊಬೈಲ್‌ಗೆ ಆ್ಯಪ್ ಕಳುಹಿಸಿ, ಪಿರ್ಯಾದುದಾರರ ಡೆಬಿಟ್ ಕಾರ್ಡ್ ನಂಬರ್, ಪಿನ್ ಹಾಗೂ ವೈಯಕ್ತಿಕ ವಿವರಗಳನ್ನು ಪಡೆದುಕೊಂಡಿದ್ದ ಸೈಬರ್ ವಂಚಕ, ಅವರ ಬ್ಯಾಂಕ್ ಖಾತೆಯಿಂದ ₹1,24,000 ಹಾಗೂ ಕ್ರೆಡಿಟ್ ಕಾರ್ಡ್‌ನಿಂದ ₹2,49,000 ಸೇರಿ ಒಟ್ಟು ₹3,73,000 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ.
ವಂಚನೆಗೊಳಗಾಗಿರುವುದು ಗೊತ್ತಾಗುತ್ತಿದ್ದಂತೆ ಸಂತ್ರಸ್ತರು ನೀಡಿದ ದೂರಿನನ್ವಯ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅ.ಕ್ರ: 24/2026, ಕಲಂ: 319(2), 318(4) BNS ಮತ್ತು 66(C), 66(D) ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed