,

ಉಳ್ಳಾಲ: ಆವರಣ ಗೋಡೆ ಕುಸಿದು ಮನೆ ನೆಲಸಮ- ಇಂಜಿನಿಯರ್ ತುಳಸಿ ವಿರುದ್ಧ ಕ್ರಮಕ್ಕೆ ಆಗ್ರಹ

ಉಳ್ಳಾಲ : ತೊಕ್ಕೊಟ್ಟು ಸಮೀಪದ ಕೆರೆಬೈಲ್ ಎಂಬಲ್ಲಿ ಎಸ್ಟೇಟ್ ಒಂದರ ಕಾಂಕ್ರೀಟ್‌ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದಲ್ಲಿದ್ದ ಕಿಶೋರ್ ಎಂಬವರ ಒಂಟಿ ಮನೆ ಸಂಪೂರ್ಣ ನೆಲಸಮಗೊಂಡಿದೆ. ಅಪಾಯದ ಮುನ್ಸೂಚನೆ ಸಿಕ್ಕಿದ್ದರಿಂದ ಆ ಮನೆಯಲ್ಲಿದ್ದ ಕುಟುಂಬದ ಐವರು ಸದಸ್ಯರು ಎರಡು ವಾರಗಳ ಹಿಂದಷ್ಟೆ ಸ್ಥಳಾಂತರಗೊಂಡಿದ್ದರಿಂದ ಅನಾಹುತ ತಪ್ಪಿದೆ. ಕೆರೆಬೈಲ್ ನ ಗುಡ್ಡದ ತುದಿಯಲ್ಲಿ ಡೆಲ್ಟಾ ಇನ್ಫ್ರಾಲಾಜಿಸ್ಟಿಕ್ಸ್ ವರ್ಲ್ಡ್ ವೈಡ್ ಲಿಮಿಟೆಡ್‌ ಕಂಪನಿ ಮಾಲಕರಾದ ಅಹಮ್ಮದ್ ಮೊಯ್ದಿನ್ ಎಂಬವರು ಕೆಲವು ವರುಷಗಳ ಹಿಂದೆ ಬೃಹತ್ ಐಷಾರಾಮಿ ಎಸ್ಟೇಟ್…

ಉಳ್ಳಾಲ : ತೊಕ್ಕೊಟ್ಟು ಸಮೀಪದ ಕೆರೆಬೈಲ್ ಎಂಬಲ್ಲಿ ಎಸ್ಟೇಟ್ ಒಂದರ ಕಾಂಕ್ರೀಟ್‌ ಆವರಣ ಗೋಡೆ ಕುಸಿದು ಬಿದ್ದ ಪರಿಣಾಮ ಪಕ್ಕದಲ್ಲಿದ್ದ ಕಿಶೋರ್ ಎಂಬವರ ಒಂಟಿ ಮನೆ ಸಂಪೂರ್ಣ ನೆಲಸಮಗೊಂಡಿದೆ. ಅಪಾಯದ ಮುನ್ಸೂಚನೆ ಸಿಕ್ಕಿದ್ದರಿಂದ ಆ ಮನೆಯಲ್ಲಿದ್ದ ಕುಟುಂಬದ ಐವರು ಸದಸ್ಯರು ಎರಡು ವಾರಗಳ ಹಿಂದಷ್ಟೆ ಸ್ಥಳಾಂತರಗೊಂಡಿದ್ದರಿಂದ ಅನಾಹುತ ತಪ್ಪಿದೆ.

ಕೆರೆಬೈಲ್ ನ ಗುಡ್ಡದ ತುದಿಯಲ್ಲಿ ಡೆಲ್ಟಾ ಇನ್ಫ್ರಾಲಾಜಿಸ್ಟಿಕ್ಸ್ ವರ್ಲ್ಡ್ ವೈಡ್ ಲಿಮಿಟೆಡ್‌ ಕಂಪನಿ ಮಾಲಕರಾದ ಅಹಮ್ಮದ್ ಮೊಯ್ದಿನ್ ಎಂಬವರು ಕೆಲವು ವರುಷಗಳ ಹಿಂದೆ ಬೃಹತ್ ಐಷಾರಾಮಿ ಎಸ್ಟೇಟ್ ನಿರ್ಮಿಸಿದ್ದರು. ಬೃಹತ್ ವಿಸ್ತೀರ್ಣವುಳ್ಳ ಎಸ್ಟೇಟ್ ಸುತ್ತಲೂ 10–12 ಅಡಿ ಎತ್ತರದ ಕಾಂಕ್ರೀಟ್‌ ಎತ್ತರದ ಆವರಣದ ಗೋಡೆಯನ್ನು ನಿರ್ಮಿಸಲಾಗಿತ್ತು.

ಕಳೆದ ವರ್ಷ ಸುರಿದ ಭಾರೀ ಮಳೆಗೆ ಎಸ್ಟೇಟ್‌ನ ಆವರಣ ಗೋಡೆ ಕಿಶೋರ್ ಅವರ ಮನೆಯ ಕಡೆಗೆ ವಾಲಿ ನಿಂತಿತ್ತು. ಈ ಬಗ್ಗೆ ಕಿಶೋರ್ ಸ್ಥಳೀಯ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರು.ಮಂಗಳವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಎಸ್ಟೇಟ್ ಆವರಣ ಗೋಡೆ ಪೂರ್ತಿ ಕುಸಿದು ಬಿದ್ದಿತ್ತು. ಅನುಮತಿ ಇಲ್ಲದೆ ಆವರಣ ಗೋಡೆ ನಿರ್ಮಿಸಲು ಅವಕಾಶ ಕೊಟ್ಟ ಉಳ್ಳಾಲ ನಗರಸಭೆಯ ಇಂಜಿನಿಯರ್ ತುಳಸಿಯ ವಿರುದ್ಧ ಕ್ರಮ ಜರುಗಿಸಿ, ಕೂಡಲೇ ಅಮಾನತು ಮಾಡಬೇಕು, ಲಂಚದಿಂದ ನಡೆಸಿದ ಈ ಅಕ್ರಮ ಕಾಮಗಾರಿಯು ನೇರ ತುಳಸಿಯವರ ಭೃಷ್ಟಾಚಾರದಿಂದ ನಡೆದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈತನ ಲಂಚದಾಸೆಗೆ ಮತ್ತೊಂದು ಬಡ ಕುಟುಂಬ ಬಲಿ

ಪೆರ್ಮನ್ನೂರು ಗ್ರಾಮ ಕಲ್ಲಪು ಆದೀಶ್ವರ ವಾಣಿಜ್ಯ ಕಟ್ಟಡದ ಬಳಿ ಬೃಹತ್ ಕಟ್ಟದ ತಲೆಎತ್ತಿ ನಿಂತಿದ್ದು, ರಸ್ತೆಯನ್ನು ಮುಚ್ಚಿ ಕಟ್ಟಡ ನಿರ್ಮಿಸಲಾಗಿದೆ, ಇದೀಗ ಅಲ್ಲಿನ ಸ್ಥಳೀಯರಿಗೆ ಸಂಪರ್ಕ ರಸ್ತೆ ಇಲ್ಲದಂತಾಗಿದೆ, ಇದರ ಬಗ್ಗೆ ಮಹಿಳೆಯೊಬ್ಬರು ಎಲ್ಲಾ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬಳಿ ದೂರು ನೀಡಿ ಬೇಸತ್ತಿದ್ದಾರೆ. ಈ ತುಳಸಿ ಬಳಿ ದೂರು ನೀಡಲು ಬಂದಾಗ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಮಾತುಕತೆ ಅಗಿದೆ. ( ಅಂದರೆ ಲಂಚ) ಎಂದು ಉಡಾಫೆ ಉತ್ತರ ನೀಡುತ್ತಾನೆ. ಇದರ ಬಗ್ಗೆ ಕೂಡ ತನಿಖೆ ನಡೆಸಿ ಜಿಲ್ಲಾಧಿಕಾರಿ ಹಾಗೂ ದ.ಕ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed