,

ಆಸ್ಪತ್ರೆ ಬಿಲ್‌ ನಲ್ಲಿ ಔಷಧಗಳ ಖರೀದಿ ಬೆಲೆ ನಮೂದು ಕಡ್ಡಾಯ: ಸರ್ಕಾರ ಆದೇಶ

ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಹಾಗೂ ರೋಗಿಗಳ ಮೇಲಾಗುವ ಆರ್ಥಿಕ ಹೊರೆಯನ್ನು ನಿಯಂತ್ರಿಸಲು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ಕಟ್ಟುನಿಟ್ಟಿನ ಹೆಜ್ಜೆ ಇಟ್ಟಿದೆ. ಖಾಸಗಿ ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳು ಔಷಧ ಹಾಗೂ ಉಪಕರಣಗಳ ಮೇಲೆ ಬೇಕಾಬಿಟ್ಟಿ ದರ ವಿಧಿಸುವುದಕ್ಕೆ ಕಡಿವಾಣ ಹಾಕಲು ಎಫ್‌ಡಿಎ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸರ್ಕಾರಿ, ಖಾಸಗಿ, ಟ್ರಸ್ಟ್ ಹಾಗೂ ನರ್ಸಿಂಗ್ ಹೋಮ್‌ಗಳು ಸೇರಿದಂತೆ ರಾಜ್ಯದ ಎಲ್ಲಾ ವೈದ್ಯಕೀಯ ಸಂಸ್ಥೆಗಳು ಇನ್ನುಮುಂದೆ ರೋಗಿಗಳಿಗೆ ನೀಡುವ ಬಿಲ್‌ಗಳಲ್ಲಿ ಔಷಧಗಳ ಮೂಲ…

ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಹಾಗೂ ರೋಗಿಗಳ ಮೇಲಾಗುವ ಆರ್ಥಿಕ ಹೊರೆಯನ್ನು ನಿಯಂತ್ರಿಸಲು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ಕಟ್ಟುನಿಟ್ಟಿನ ಹೆಜ್ಜೆ ಇಟ್ಟಿದೆ.

ಖಾಸಗಿ ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳು ಔಷಧ ಹಾಗೂ ಉಪಕರಣಗಳ ಮೇಲೆ ಬೇಕಾಬಿಟ್ಟಿ ದರ ವಿಧಿಸುವುದಕ್ಕೆ ಕಡಿವಾಣ ಹಾಕಲು ಎಫ್‌ಡಿಎ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸರ್ಕಾರಿ, ಖಾಸಗಿ, ಟ್ರಸ್ಟ್ ಹಾಗೂ ನರ್ಸಿಂಗ್ ಹೋಮ್‌ಗಳು ಸೇರಿದಂತೆ ರಾಜ್ಯದ ಎಲ್ಲಾ ವೈದ್ಯಕೀಯ ಸಂಸ್ಥೆಗಳು ಇನ್ನುಮುಂದೆ ರೋಗಿಗಳಿಗೆ ನೀಡುವ ಬಿಲ್‌ಗಳಲ್ಲಿ ಔಷಧಗಳ ಮೂಲ ಖರೀದಿ ಬೆಲೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ನವೆಂಬರ್ 1ರಿಂದ ಈ ನಿಯಮ ರಾಜ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲಿದೆ.

ಬಿಲ್‌ನಲ್ಲಿ ಕಡ್ಡಾಯವಾಗಿರಬೇಕಾದ ವಿವರಗಳು

ಔಷಧ ಮತ್ತು ಬ್ರ್ಯಾಂಡ್‌ ಹೆಸರು

ಬ್ಯಾಚ್ ಸಂಖ್ಯೆ (Batch Number)

ಉತ್ಪಾದನಾ ದಿನಾಂಕ ಹಾಗೂ ಅವಧಿ ಮುಕ್ತಾಯದ ದಿನಾಂಕ (Expiry Date)

ಆಸ್ಪತ್ರೆಯ ಖರೀದಿ ಬೆಲೆ ಹಾಗೂ ಎಂಆರ್‌ಪಿ ವಿವರ

ಯಾವುದೇ ಕಾರಣಕ್ಕೂ ಮುದ್ರಿತ ಗರಿಷ್ಠ ಚಿಲ್ಲರೆ ಬೆಲೆಗಿಂತ (MRP) ಹೆಚ್ಚಿನ ಮೊತ್ತ ವಸೂಲಿ ಮಾಡುವಂತಿಲ್ಲ ಎಂದು ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed