ಉಳ್ಳಾಲ ನಗರಸಭೆಯ ಪೌರಾಯುಕ್ತರಾಗಿದ್ದ ಸಂತೋಷ್ ಅವರನ್ನು ಉಡುಪಿ ನಗರಸಭೆಯ ಪೌರಾಯುಕ್ತರಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹಿಂಪಡೆದು ಉಳ್ಳಾಲ ನಗರಸಭೆಗೆ ಮರು ನೇಮಕ ಮಾಡಿದ್ದು ರಾಜ್ಯ ಸರ್ಕಾರ ಮತ್ತು ಸಚಿವ ಯು.ಟಿ ಖಾದರ್ ರವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.
ಉಳ್ಳಾಲ ನಗರಸಭೆಯ ಪೌರಯುಕ್ತರಾಗಿದ್ದ ಸಂತೋಷ್ ರವರ ವರ್ಗಾವಣೆ ಬಗ್ಗೆ ಜನಾಭಿಪ್ರಾಯ ಪಡೆದು ವಿಸ್ತಾರವಾದ ವರದಿ ಮಾಡಿದ್ದು, ತಕ್ಷಣ ಈ ವರದಿ ಸಚಿವರ ಗಮಕ್ಕೆ ಬಂದು ವರ್ಗಾವಣೆ ಆದೇಶ ಹಿಂಪಡೆದು ಉಳ್ಳಾಲಕ್ಕೆ ಮರು ನೇಮಕ ಮಾಡಿದ್ದಾರೆ. ಈ ಬಗ್ಗೆ ಸಚಿವರ ಈ ನಡೆಗೆ ಸಾರ್ವಜನಿಕರ ಪರವಾಗಿ ಕ್ರೈಂ ವಾರ್ತೆ ಧನ್ಯವಾದ ತಿಳಿಸುತ್ತದೆ.















