, ,

ಮಂಗಳೂರು: ನೇಪಾಳ ಮೂಲದ ಮೂವರು ಕುಖ್ಯಾತ ಕಳ್ಳರ ಬಂಧನ..!! 10 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶಕ್ಕೆ

ಮಂಗಳೂರು : ನಗರದ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನೇಪಾಳ ಮೂಲದ ಕುಖ್ಯಾತ ಅಂತರ್ ರಾಷ್ಟ್ರ ಮನೆಗಳ್ಳರನ್ನು ಪೊಲೀಸರು ಬಂಧಿಸಿದ್ದು, 10 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನೇಪಾಳದ ಚೈನ್ಪೂರು ಜಿಲ್ಲೆ ನಿವಾಸಿ ತಿಲಕ್ ಕುಮಾರ್ ಖಡ್ಕ ಯಾನೆ ತಿಲಕ್ ಖಡ್ಕ(36), ನೇಪಾಳದ ಬಜಂಗ್ ಜಿಲ್ಲೆ ನಿವಾಸಿ ಅಶೋಕ್ ರಾಜ್ ಯಾನೆ ಅಶೋಕ್ ಸಿಂಗ್ ಯಾನೆ ಅಶೋಕ್ ಸಿಂಗ್ ಠಾಕುರಿ(33), ನೇಪಾಳದ ಕೈಲಾಲಿ ಜಿಲ್ಲೆ ನಿವಾಸಿ ದಿಪೆಂದರ್ ರಸೈಲಿ(25) ಬಂಧಿತ ಆರೋಪಿಗಳು.ಮಂಗಳೂರು ನಗರದ, ಉರ್ವ…

ಮಂಗಳೂರು : ನಗರದ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನೇಪಾಳ ಮೂಲದ ಕುಖ್ಯಾತ ಅಂತರ್ ರಾಷ್ಟ್ರ ಮನೆಗಳ್ಳರನ್ನು ಪೊಲೀಸರು ಬಂಧಿಸಿದ್ದು, 10 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನೇಪಾಳದ ಚೈನ್ಪೂರು ಜಿಲ್ಲೆ ನಿವಾಸಿ ತಿಲಕ್ ಕುಮಾರ್ ಖಡ್ಕ ಯಾನೆ ತಿಲಕ್ ಖಡ್ಕ(36), ನೇಪಾಳದ ಬಜಂಗ್ ಜಿಲ್ಲೆ ನಿವಾಸಿ ಅಶೋಕ್ ರಾಜ್ ಯಾನೆ ಅಶೋಕ್ ಸಿಂಗ್ ಯಾನೆ ಅಶೋಕ್ ಸಿಂಗ್ ಠಾಕುರಿ(33), ನೇಪಾಳದ ಕೈಲಾಲಿ ಜಿಲ್ಲೆ ನಿವಾಸಿ ದಿಪೆಂದರ್ ರಸೈಲಿ(25) ಬಂಧಿತ ಆರೋಪಿಗಳು.ಮಂಗಳೂರು ನಗರದ, ಉರ್ವ ಮಾರ್ಕೆಟ್ ಬಳಿ ಮಠದಕಣಿಯ ಮನೆಯೊಂದರಲ್ಲಿ ಜು.11 ರಂದು ಸಂಜೆ ಮನೆಯವರು ಮನೆಗೆ ಲಾಕ್ ಮಾಡಿಕೊಂಡು ಬಂಟ್ವಾಳ ತಾಲೂಕಿನ, ವಿಟ್ಲ ಕಡಂಬು ಎಂಬಲ್ಲಿರುವ ಅವರ ಸಂಬಂಧಿಕರ ಮನೆಗೆ ತೆರಳಿದ್ದರು. ಜು.12ರಂದು ಬೆಳಗ್ಗೆ ಹಿಂದಿರುಗಿ ನೋಡಿದಾಗ ಮನೆಯ ಹಿಂಭಾಗದ ಬಾಗಿಲು ಒಡೆದು ಯಾರೋ ಕಳ್ಳರು ಮನೆಗೆ ನುಗ್ಗಿರುವುದು ಬೆಳಕಿಗೆ ಬಂದಿದೆ.ಕಳ್ಳರು ಮನೆಯಲ್ಲಿದ್ದ ಸುಮಾರು 64 ಗ್ರಾಮ್ ತೂಕದ ಚಿನ್ನಾಭರಣ ಹಾಗೂ ರೂ 25,000 ರೂ. ಸೇರಿದಂತೆ ಒಟ್ಟು 8,57,000 ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅ.ಕ್ರ 70/2026 ಕಲಂ:331(4), 305 ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿರುತ್ತದೆ.ಪ್ರಕರಣ ದಾಖಲಾದ ಐದು ದಿನಗಳಲ್ಲಿ ಬರ್ಕೆ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಯವರು ಜು.17 ರ ಬೆಳಗ್ಗಿನ ಜಾವ ನೇಪಾಳ ಮೂಲದ 3 ಜನ ಕುಖ್ಯಾತ ಮನೆಗಳ್ಳರನ್ನು ಬೋಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಿ, ಆರೋಪಿತರ ವಶದಿಂದ ಬರ್ಕೆ ಪೊಲೀಸ್ ಠಾಣಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಚಿನ್ನಾಭರಣಗಳು ಮತ್ತು ಆರೋಪಿತರು ಮಹಾರಾಷ್ಟ್ರ ರಾಜ್ಯದ ನಾಸಿಕ್ ನಗರದಲ್ಲಿ ಕಳ್ಳತನ ಮಾಡಿದ 790 ಗ್ರಾಂ ಬೆಳ್ಳಿ ಆಭರಣಗಳು ಸೇರಿದಂತೆ ಸುಮಾರು 10 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಮಾರ್ಚ್ ತಿಂಗಳಿನಲ್ಲಿ ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಯತ್ನ ಪಟ್ಟಿದ್ದು, ಯಾವುದೇ ವಸ್ತುಗಳು ಕಳವಾಗಿರುವುದಿಲ್ಲ. ಸದರಿ ಠಾಣೆಯಲ್ಲಿ ಅ.ಕ್ರ 44/2026 ಕಲಂ 333(1), 331(4), 305, 62 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣಾ ವೇಳೆಯಲ್ಲಿ ಒಪ್ಪಿಕೊಂಡಿರುತ್ತಾರೆ.ಅಲ್ಲದೆ ಕರ್ನಾಟಕ ರಾಜ್ಯದ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ಹಲವಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 15 ಕ್ಕೂ ಹೆಚ್ಚು ಮನೆ ಕಳ್ಳತನ ಮಾಡಿದ್ದು ಇವರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಅಲ್ಲದೆ ತಮಿಳುನಾಡು, ದೆಹಲಿ, ಹರ್ಯಾಣ ರಾಜ್ಯಗಳಲ್ಲಿ ಆರೋಪಿತರ ಮೇಲೆ ಪ್ರಕರಣ ದಾಖಲಾಗಿದ್ದು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಮುಂದಿನ ತನಿಖೆ ನಡೆಸಲಾಗುವುದು. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.ಈ ಕಾರ್ಯಚರಣೆಯಲ್ಲಿ ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳನ್ನು ಭಾಗವಹಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed