,

ಉಳ್ಳಾಲ: ಕಟ್ಟಡಕ್ಕೆ ಹೆಚ್ಚುವರಿಯಾಗಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಉಳ್ಳಾಲ ನಗರಸಭೆ ನೋಟಿಸ್

ಉಳ್ಳಾಲ ನಗರಸಭಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ನಿರ್ಮಿಸುತ್ತಿರುವ ಕಟ್ಟಡಕ್ಕೆ ಹೆಚ್ಚುವರಿಯಾಗಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಉಳ್ಳಾಲ ನಗರಸಭೆಯು ನೋಟಿಸ್ ಹೊರಡಿಸಿದೆ. ಈ ಬಗ್ಗೆ ಕ್ರೈಂ ವಾರ್ತೆಯ ನಿರಂತರವಾಗಿ ವರದಿ ಪ್ರಕಟಿಸಿದ ಹಿನ್ನೆಲೆ ಎಚ್ಚೆತ್ತ ಉಳ್ಳಾಲ ನರಸಭೆಯು ಕಟ್ಟಡ ಮಾಲಿಕರಿಗೆ ನೋಟಿಸ್ ನೀಡಲಾಗಿದೆ. ಉಳ್ಳಾಲ ನಗರಸಭಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸುತ್ತಿರುವುದು ಸರಿಯಷ್ಟೇ, ಪ್ರಸ್ತುತ ನಿವೇಶನದ ಬಲಭಾಗದಲ್ಲಿ ಹಿಂದಿನ ನಿವೇಶನದಾರರಿಗೆ ಹೋಗುವ ರಸ್ತೆಯಿರುತ್ತದೆ. ಆದರೆ ತಾವು ಸದರಿ ಭಾಗದಲ್ಲಿ ತಾತ್ಕಾಲಿಕ ನಿರ್ಮಾಣ ಮಾಡಿದ್ದು ರಸ್ತೆಗೆ ಅಡಚಣೆಯಾಗಿರುತ್ತದೆ…

ಉಳ್ಳಾಲ ನಗರಸಭಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ನಿರ್ಮಿಸುತ್ತಿರುವ ಕಟ್ಟಡಕ್ಕೆ ಹೆಚ್ಚುವರಿಯಾಗಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಉಳ್ಳಾಲ ನಗರಸಭೆಯು ನೋಟಿಸ್ ಹೊರಡಿಸಿದೆ.

ಈ ಬಗ್ಗೆ ಕ್ರೈಂ ವಾರ್ತೆಯ ನಿರಂತರವಾಗಿ ವರದಿ ಪ್ರಕಟಿಸಿದ ಹಿನ್ನೆಲೆ ಎಚ್ಚೆತ್ತ ಉಳ್ಳಾಲ ನರಸಭೆಯು ಕಟ್ಟಡ ಮಾಲಿಕರಿಗೆ ನೋಟಿಸ್ ನೀಡಲಾಗಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸುತ್ತಿರುವುದು ಸರಿಯಷ್ಟೇ, ಪ್ರಸ್ತುತ ನಿವೇಶನದ ಬಲಭಾಗದಲ್ಲಿ ಹಿಂದಿನ ನಿವೇಶನದಾರರಿಗೆ ಹೋಗುವ ರಸ್ತೆಯಿರುತ್ತದೆ. ಆದರೆ ತಾವು ಸದರಿ ಭಾಗದಲ್ಲಿ ತಾತ್ಕಾಲಿಕ ನಿರ್ಮಾಣ ಮಾಡಿದ್ದು ರಸ್ತೆಗೆ ಅಡಚಣೆಯಾಗಿರುತ್ತದೆ ಎಂದು ಪಿಲೋಮಿನಾ ಎಂಬವರು ದೂರು ನೀಡಿರುತ್ತಾರೆ. ಅದರಂತೆ ಸ್ಥಳ ಪರಿಶೀಲನ ನಡೆಸಲಾಗಿದ್ದು ತಾವು ನಿರ್ಮಿಸಿರುವ ನಿರ್ಮಾಣದಿಂದಾಗಿ ರಸ್ತೆಯು ಕಿರಿದಾಗಿರುವುದು ಕಂಡುಬಂದಿದೆ. ಆದ್ದರಿಂದ ತಾವು ಹೆಚ್ಚುವರಿ ನಿರ್ಮಾಣದ ಬಗ್ಗೆ ಸೂಕ್ತ ವಿವರಣೆಯನ್ನು ನೀಡುವುದು ಮತ್ತು ಅನಧಿಕೃತವಾದಲ್ಲಿ ತೆರವುಗೊಳಿಸುವುದು ತಪ್ಪಿದ್ದಲ್ಲಿ ಪುರಸಭಾ ಅಧಿನಿಯಮದಂತೆ ಕ್ರಮಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ವರ್ಷದಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಕುಟುಂಬ

ಕಲ್ಲಾಪುವಿನಲ್ಲಿರುವ ಒಂದು ಕಟ್ಟಡದ ಹಿಂಭಾಗದಲ್ಲಿ ಜೆಸ್ಸಿ ಮತ್ತು ಫಿಲೋಮಿನಾ ಎನ್ನುವವರಿಗೆ ಸೇರಿದ ಜಾಗವಿದ್ದು, ಅಲ್ಲಿನ ಅಗಲವಿರುವ ರಸ್ತೆಯ ಪಕ್ಕದಲ್ಲಿ ಅಕ್ಕಪಕ್ಕದ ಬಿಲ್ಡಿಂಗ್ ಮಾಲಕರು ಪರವಾನಿಗೆ ಪಡೆದು ಕಟ್ಟಡ ನಿರ್ಮಿಸಿದ್ದಾರೆ. ಆದರೆ ಕಟ್ಟಡ ನಿರ್ಮಾಣವಾದ ರೀತಿಯಿಂದಾಗಿ ಸಂಬಂಧಿತ ಜಾಗದ ಮಾಲೀಕರಿಗೆ ನಡೆದು ಹೋಗಲು ಕೂಡ ದಾರಿ ಇಲ್ಲದಂತಾಗಿದೆ ಎಂದು ಆರೋಪಿಸಲಾಗಿದೆ.

ಇದರ ಜೊತೆಗೆ, ಅವರ ಹಳೆಯ ಮನೆಯ ಎದುರು ಯಾವುದೇ ಪರವಾನಿಗೆ ಇಲ್ಲದೆ ಅತಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿದೆ ಎನ್ನಲಾಗಿದ್ದು, ಒಂದು ವೇಳೆ ಮಳೆಯ ಸಮಯದಲ್ಲಿ ಅದು ಕುಸಿದರೆ ನೇರವಾಗಿ ಅವರ ಮನೆಯ ಮೇಲೆಯೇ ಬೀಳುವ ಅಪಾಯವಿದೆ ಎಂದು ಕುಟುಂಬ ಆತಂಕ ವ್ಯಕ್ತಪಡಿಸಿದೆ. ಆ ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳು ಸಹ ವಾಸಿಸುತ್ತಿದ್ದು, ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಅಷ್ಟೇ ಅಲ್ಲದೆ, ಮತ್ತೊಂದು ಭಾಗದಲ್ಲಿಯೂ ತಾತ್ಕಾಲಿಕ (ಟೆಂಪರರಿ) ಸ್ಟ್ರಕ್ಚರ್ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.

ಕೇವಲ ನೋಟಿಸ್ ನೀಡಿದರೆ ಸಾಲದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed