, ,

ಮಂಗಳೂರು: ಪಾಂಡೇಶ್ವರ ಅಮೃತ ನಗರ ಪರಿಸರದಲ್ಲಿ ಅನಧಿಕೃತ ಪಿ.ಜಿ ಮತ್ತು ಸರ್ವಿಸ್ ಸ್ಟೇಷನ್..!! ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ಮಂಗಳೂರು: ನಗರದ ಪಾಂಡೇಶ್ವರ ಅಮೃತ ನಗರ ಎಂಬಲ್ಲಿ ವಾಣಿಜ್ಯ ಕಟ್ಟಡವನ್ನು ಅನಧಿಕೃತ ಪಿ.ಜಿಯಾಗಿ ಬಳಕೆಯಾಗಿದ್ದು ಸುಮಾರು 40 ರಿಂದ 50 ಮಂದಿ ವಾಸ್ತವ್ಯ ಇದ್ದಾರೆ ಎಂದು ಮಾಹಿತಿ ಇದೆ.ಸಾರ್ವಜನಿಕರ ಆರೋಪ ಪ್ರಕಾರ ಈ ಕಟ್ಟಡವನ್ನು ಅಕ್ರಮವಾಗಿ ಮತ್ತು ಯಾವುದೇ ಪಿ‌.ಜಿ ಪರವಾನಿಗೆ ಇಲ್ಲದೇ ನಡೆಸಲಾಗುತ್ತಿದೆ. ಮತ್ತು ಇಲ್ಲಿ ನೀರಿನ ಅಭಾವ ಇರುವ ಕಾರಣ ಈ ಪಿ.ಜಿಗೆ ಅತೀ ಹೆಚ್ಚು ನೀರು ಬಳಕೆಯಾಗುತ್ತಿದೆ. ಮತ್ತು ಸ್ವಚ್ಚತಾ ದೃಷ್ಟಿಯಿಂದಲ್ಲೋ ಇಲ್ಲಿನ ಪರಿಸರ ಮಾಲಿನ್ಯವಾಗಿದ್ದು , ಕಾನೂನು ಪ್ರಕಾರ ಪಿ ಜಿ…

ಮಂಗಳೂರು: ನಗರದ ಪಾಂಡೇಶ್ವರ ಅಮೃತ ನಗರ ಎಂಬಲ್ಲಿ ವಾಣಿಜ್ಯ ಕಟ್ಟಡವನ್ನು ಅನಧಿಕೃತ ಪಿ.ಜಿಯಾಗಿ ಬಳಕೆಯಾಗಿದ್ದು ಸುಮಾರು 40 ರಿಂದ 50 ಮಂದಿ ವಾಸ್ತವ್ಯ ಇದ್ದಾರೆ ಎಂದು ಮಾಹಿತಿ ಇದೆ.
ಸಾರ್ವಜನಿಕರ ಆರೋಪ ಪ್ರಕಾರ ಈ ಕಟ್ಟಡವನ್ನು ಅಕ್ರಮವಾಗಿ ಮತ್ತು ಯಾವುದೇ ಪಿ‌.ಜಿ ಪರವಾನಿಗೆ ಇಲ್ಲದೇ ನಡೆಸಲಾಗುತ್ತಿದೆ. ಮತ್ತು ಇಲ್ಲಿ ನೀರಿನ ಅಭಾವ ಇರುವ ಕಾರಣ ಈ ಪಿ.ಜಿಗೆ ಅತೀ ಹೆಚ್ಚು ನೀರು ಬಳಕೆಯಾಗುತ್ತಿದೆ. ಮತ್ತು ಸ್ವಚ್ಚತಾ ದೃಷ್ಟಿಯಿಂದಲ್ಲೋ ಇಲ್ಲಿನ ಪರಿಸರ ಮಾಲಿನ್ಯವಾಗಿದ್ದು , ಕಾನೂನು ಪ್ರಕಾರ ಪಿ ಜಿ ನಡೆಸಲಿ ಎಂದು ಸ್ಥಳೀಯರ ಅರೋಪ.

ಮಂಗಳೂರು ಮಹಾನಗರಪಾಲಿಕೆಯಲ್ಲಿರುವ ಎಲ್ಲಾ ಪಾವತಿಸುವ ಅತಿಥಿ ಗೃಹಗಳು(ಪೇಯಿಂಗ್ ಗೆಸ್ಟ್ ಪಿಜಿ)ಗಳಿಗೆ ಉದ್ದಿಮೆ ಪರವಾನಿಗೆ ನೀಡುವಾಗ ಕಾನೂನಿನ ಪ್ರಕಾರ ಮಾರ್ಗಸೂಚಿ ಪಾಲನೆಯ ಆದೇಶ
“ಮಂಗಳೂರು ಮಹಾನಗರಪಾಲಿಕೆ ಉದ್ದೇಶಿಸಿರುವ ಹಾಗೂ ವ್ಯಾಪ್ತಿಯಲ್ಲಿ ಹೊಸತಾಗಿ ಪ್ರಾರಂಭಿಸಲು ಪರವಾನಿಗೆ ಈಗಿರುವ ಪೇಯಿಂಗ್ ಗೆಸ್ಟ್‌ಗಳಿಗೆ ಮಂಜೂರಾತಿ/ನವೀಕರಣ ಹಾಗೂ ಈಗಾಗಲೇ ಪರವಾನಿಗೆ ಪಡೆದು ಅಸ್ತಿತ್ವದಲ್ಲಿರುವ ಪೇಯಿಂಗ್ ಗೆಸ್ಟ್‌ಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪೇಯಿಂಗ್ ಗೆಸ್ಟ್‌ಗಳ ಎಲ್ಲಾ ಪ್ರವೇಶ/ನಿರ್ಗಮನ ದ್ವಾರ ಮತ್ತು ಆವರಣದ ಸುತ್ತಮುತ್ತಲಿನ ಘಟನಾವಳಿಗಳನ್ನು ಚಿತ್ರೀಕರಿಸಲು ಸಿಸಿ ಟಿವಿ ಕ್ಯಾಮೆರಾಗಳನ್ನು ಆಳವಡಿಸಿರತಕ್ಕದ್ದು, ಪ್ರತಿಯೊಂದು ಸಿಸಿ ಟಿವಿ ಕ್ಯಾಮೆರಾದ ವಿಡಿಯೋ ಮತ್ತು ಫೂಟೇಜ್‌ಗಳನ್ನು 90 ದಿನಗಳ ವರೆಗೆ ಹಾರ್ಡ್‌ ವೇರ್ ಎಂಡ್ ಸ್ಟಾಫ್ಟ್‌ವೇರ್ ಬ್ಯಾಕ್ ಆಫ್ ಸ್ಟೋರೆಜ್‌ನ್ನು ಸಂರಕ್ಷಿಸಬೇಕು
ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪೇಯಿಂಗ್ ಗೆಸ್ಟ್ಗಳಲ್ಲಿ ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿಗಳ ಕನಿಷ್ಟ ಜಾಗ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಕಟ್ಟಡದಲ್ಲಿ ಒದಗಿಸಲಾದ/ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ಧಿಷ್ಟ ಸಂಖ್ಯೆಗಳ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಿಗೆ ನೀಡಬೇಕು.
ಪೇಯಿಂಗ್ ಗೇಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯತೆ ಹೊಂದಿರುವ ಸ್ನಾನಗ್ರಹಗಳು ಮತ್ತು ಶೌಚಾಲಯಗಳ ಸೇವೆ ಒದಗಿಸಿರಬೇಕು. ನೀರಿನ ಸೌಕರ್ಯ ಕಡ್ಡಾಯವಾಗಿ ಒದಗಿಸಬೇಕು. ಪೇಯಿಂಗ್ ಗೇಸ್ಟ್‌ಗಳಲ್ಲಿ ಉದ್ದಿಮೆದಾರರು ತಮ್ಮದೇ ಅಡಿಗೆ ಮನೆ ಹೊಂದಿದ್ದಲ್ಲಿ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ನೀಡಿದ ಅವಧಿಯೊಳಗೆ
2. ಎಫ್‌ಎಸ್‌ಎಸ್‌ಎಐ ಇಲಾಖೆಯಿಂದ ಲೈಸೆನ್ಸ್ ಪಡೆದುಕೊಳ್ಳಬೇಕು. ಕನಿಷ್ಟ ಒಬ್ಬ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರಬೇಕು. ಪೇಯಿಂಗ್ ಗೆಸ್ಟ್ಗಳಿಗೆ ವಿತರಿಸುವ ಮುನ್ನ ಉದ್ದೇಶಿತ ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಆಳವಡಿಸಿರುವ ಬಗ್ಗೆ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರ ಪಡೆದಿರಬೇಕು. ಪೇಯಿಂಗ್ ಗೆಸ್ಟ್‌ನಲ್ಲಿ ಪ್ರಥಮ ಚಿಕಿತ್ಸೆ ಆಳವಡಿಸಿರಬೇಕು.

ಇದೇ ಪರಿಸರದಲ್ಲಿ ಅನಧಿಕೃತ ವಾಹನ ಸರ್ವಿಸ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಕಾನೂನು ಪ್ರಕಾರ ಸರ್ವಿಸ್ ಸ್ಟೇಷನ್ ಗೆ ಬಾವಿ ಅಥವಾ ಕೊಳವೆ ಬಾವಿ ತೆಗೆದು ಅದರ ನೀರು ಉಪಯೋಗಿಸಬೇಕು ಇಲ್ಲಿ ಅದು ಯಾವುದು ಇಲ್ಲದೇ ದೊಡ್ಡ ಅಂಡರ್ ಸ್ಟೊರೇಜ್ ಮಾಡಿ ಮ.ನ.ಪಾ ನೀರು ಬಳಸಿ ಸರ್ವಿಸ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಮತ್ತು ಇದು ಸಂಪೂರ್ಣ ಅಕ್ರಮವಾಗಿದ್ದು, ವಸತಿ ಪ್ರದೇಶದಲ್ಲಿ ಇಂತಹ ಯಾವುದೇ ವ್ಯಾಪಾರ ವಹಿವಾಟು ಕೇಂದ್ರ ನಡೆಸಲು ಕಾನೂನು ಇಲ್ಲ.
ಇದರ ವಿರುದ್ಧ ಮ.ನ.ಪಾ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸಾರ್ವಜನಿಕರು ಮಾಧ್ಯಮ ಮೂಲಕ ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed