,

ಸಾಧನಾ ಶೆಟ್ಟಿ ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಶಾಕಿಂಗ್ ತಿರುವು – ಪತಿಯೇ ಸುಳ್ಳು ಆರೋಪ ಮಾಡಿದನೆಂದ ಪತ್ನಿ

ಬೆಂಗಳೂರು: ಕನ್ನಡದ ಪ್ರಭಾವಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ 1.5 ಕೋಟಿ ರೂ. ಬ್ಲ್ಯಾಕ್‌ಮೇಲ್ಆರೋಪ ಕೇಳಿಬಂದಿತ್ತು. ಆದರೆ ಪ್ರಕರಣವು ಈಗ ಸಿನಿಮಾ ಶೈಲಿಯ ತಿರುವು ಪಡೆದುಕೊಂಡಿದೆ. ತನ್ನ ಪತಿ ಕಾರ್ತಿಕ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಸ್ವತಃ ಆತನ ಪತ್ನಿ ಹರ್ಷಿತಾ ಅವರೇ ಪೊಲೀಸರಿಗೆ ಪತ್ರ ಬರೆಯುವ ಮೂಲಕ ಉದ್ಯಮಿಯ ಅಸಲಿ ಮುಖವನ್ನು ಬಯಲು ಮಾಡಿದ್ದಾರೆ. ನನ್ನ ಪತಿ ಸುಳ್ಳು ಆರೋಪ ಮಾಡಿದ್ದಾರೆಂದ ಪತ್ನಿ ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕನೆಂದು ಹೇಳಿಕೊಂಡಿರುವ…

ಬೆಂಗಳೂರು: ಕನ್ನಡದ ಪ್ರಭಾವಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ 1.5 ಕೋಟಿ ರೂ. ಬ್ಲ್ಯಾಕ್‌ಮೇಲ್ಆರೋಪ ಕೇಳಿಬಂದಿತ್ತು. ಆದರೆ ಪ್ರಕರಣವು ಈಗ ಸಿನಿಮಾ ಶೈಲಿಯ ತಿರುವು ಪಡೆದುಕೊಂಡಿದೆ. ತನ್ನ ಪತಿ ಕಾರ್ತಿಕ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಸ್ವತಃ ಆತನ ಪತ್ನಿ ಹರ್ಷಿತಾ ಅವರೇ ಪೊಲೀಸರಿಗೆ ಪತ್ರ ಬರೆಯುವ ಮೂಲಕ ಉದ್ಯಮಿಯ ಅಸಲಿ ಮುಖವನ್ನು ಬಯಲು ಮಾಡಿದ್ದಾರೆ.

ನನ್ನ ಪತಿ ಸುಳ್ಳು ಆರೋಪ ಮಾಡಿದ್ದಾರೆಂದ ಪತ್ನಿ

ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕನೆಂದು ಹೇಳಿಕೊಂಡಿರುವ ಕಾರ್ತಿಕ್, ತನಗೆ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ನನ್ನ ಖಾಸಗಿ ಫೋಟೋಗಳನ್ನು ಪತ್ನಿ ಹರ್ಷಿತಾಗೆ ಕಳುಹಿಸಿದ್ದಲ್ಲದೆ ನನ್ನ ಬಳಿ ಕೋಟಿಗಟ್ಟಲೆ ಹಣ ಕೇಳಿದ್ದಾಳೆ ಎಂದು ಆರೋಪಿಸಿದ್ದ. ಆದರೆ ಈ ಪ್ರಕರಣಕ್ಕೀಗ ಆತನ ಪತ್ನಿಯಿಂದಲೇ ಸ್ಫೋಟಕ ತಿರುವು ಸಿಕ್ಕಿದೆ. ಹರ್ಷಿತಾ ಜಯನಗರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತನ್ನ ಪತಿ ಸೃಷ್ಟಿಸಿರುವ ಬ್ಲ್ಯಾಕ್‌ಮೇಲ್ ಕಥೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಸಾಧನಾ ಶೆಟ್ಟಿ ಯಾವತ್ತೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ನನ್ನ ಪತಿಯೇ ತನ್ನ ಲೈಂಗಿಕ ಅಕ್ರಮಗಳನ್ನು ಮುಚ್ಚಿಹಾಕಲು ಆಕೆಯನ್ನು ಬ್ಲ್ಯಾಕ್‌ಮೇಲರ್ ಎಂದು ಚಿತ್ರಿಸುತ್ತಿದ್ದಾನೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕಾರ್ತಿಕ್ ಒಬ್ಬ ದೊಡ್ಡ ಉದ್ಯಮಿಯೇನಲ್ಲ, ಆತ ಕೇವಲ ತನ್ನ ಕ್ಲಿನಿಕ್‌ನ ಮಾರ್ಕೆಟಿಂಗ್ ನೋಡಿಕೊಳ್ಳುತ್ತಿದ್ದ ಕೆಲಸಗಾರ ಅಷ್ಟೇ ಎಂದು ಕ್ಲಿನಿಕ್​ನ ನಿರ್ದೇಶಕಿಯೂ ಆಗಿರುವ ಹರ್ಷಿತಾ ಸತ್ಯ ಬಿಚ್ಚಿಟ್ಟಿದ್ದಾರೆ.

ಕಾರ್ತಿಕ್ ಮಾಸ್ಟರ್ ಪ್ಲ್ಯಾನ್

ಸಾಧನಾ ಏನಾದರೂ ಪೊಲೀಸರಿಗೆ ದೂರು ನೀಡಿದರೆ ಕಷ್ಟ ಎಂದು ಅರಿತ ಕಾರ್ತಿಕ್, ಆಕೆಯನ್ನೇ ಸಿಲುಕಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ತನ್ನ ಸ್ನೇಹಿತರ ಸಹಾಯದಿಂದ ಆಕೆಯ ಫೋನ್ ಕಳವು ಮಾಡಿಸಿ, ವಾಪಸ್ ನೀಡಿದ್ದಲ್ಲದೆ ಸಾಧನಾಗೆ ಹಲವು ಬಾರಿ ಬೆದರಿಕೆ ಕರೆಯನ್ನೂ ಮಾಡಿದ್ದ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆಂದು ಕತೆಯನ್ನೂ ಕಟ್ಟಿದ್ದ. ಇಷ್ಟೆಲ್ಲಾ ಆದ ನಂತರ ಪತಿ ಬದಲಾಗಿದ್ದಾನೆಂದು ಹರ್ಷಿತಾ ನಂಬಿದ್ದರು.

ಉದ್ಯಮಿಯ ಕರಾಳ ಮುಖ ಬಯಲು

ಆದರೆ ಸಾಧನಾ ಕಳುಹಿಸಿದ ಸಾಕ್ಷ್ಯಗಳನ್ನು ನೋಡಿದ ಬಳಿಕ ಹರ್ಷಿತಾ ಕೂಡ ಕಂಗಾಲಾಗಿದ್ದರು. ಕಾರ್ತಿಕ್ ಕೇವಲ ಸಾಧನಾ ಮಾತ್ರವಲ್ಲದೆ ಇನ್ನೂ ಹಲವು ಯುವತಿಯರಿಗೆ ಇದೇ ರೀತಿ ವಂಚಿಸಿರುವುದು ಅವರಿಗೆ ಯುವತಿಯಿಂದ ತಿಳಿದುಬಂತು. ನಂತರ ಎರಡು ತಿಂಗಳಿಂದ ಪತಿಯಿಂದ ದೂರವಿದ್ದ ಆಕೆ, ಪ್ರಕರಣ ಸಂಬಂಧ ಮಾಹಿತಿ ಕೇಳಿದ ಪೊಲೀಸರ ಮುಂದೆ ಪತಿಯ ಕರಾಳ ಮುಖ ಬಯಲಿಗೆಳೆದಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಜಯನಗರ ಪೊಲೀಸರು, ಕರ್ನಾಟಕ ಮತ್ತು ತೆಲಂಗಾಣ ಡಿಐಜಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಹರ್ಷಿತಾ ರವಾನಿಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed