, ,

ಮಂಗಳೂರು: ಸಿಮ್ ಕಾರ್ಡ್ ಅನ್ನು 5G ಗೆ ನವೀಕರಿಸಿಕೊಡುವುದಾಗಿ ನಂಬಿಸಿ 23 ಲಕ್ಷ ಆನ್‌ಲೈನ್ ಮೂಲಕ ಲೂಟಿ..!!

ಮಂಗಳೂರು: ನಿಮ್ಮ 4G ಸಿಮ್ ಕಾರ್ಡ್ ಅನ್ನು 5G ಗೆ ನವೀಕರಿಸಿಕೊಡುವುದಾಗಿ ನಂಬಿಸಿ, ಮೊಬೈಲ್ ನೆಟ್‌ವರ್ಕ್ ಅನ್ನು ಕೆಲ ಗಂಟೆಗಳ ಕಾಲ ನಿಷ್ಕ್ರಿಯಗೊಳಿಸಿ (SIM Swap), ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆ ಹಾಗೂ ಸಾಲದ ರೂಪದಲ್ಲಿ ಒಟ್ಟು ₹ 23,98,138 ಹಣವನ್ನು ಆನ್‌ಲೈನ್ ಮೂಲಕ ಲೂಟಿ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.  ದೂರುದಾರಿಗೆ ಜುಲೈ…

ಮಂಗಳೂರು: ನಿಮ್ಮ 4G ಸಿಮ್ ಕಾರ್ಡ್ ಅನ್ನು 5G ಗೆ ನವೀಕರಿಸಿಕೊಡುವುದಾಗಿ ನಂಬಿಸಿ, ಮೊಬೈಲ್ ನೆಟ್‌ವರ್ಕ್ ಅನ್ನು ಕೆಲ ಗಂಟೆಗಳ ಕಾಲ ನಿಷ್ಕ್ರಿಯಗೊಳಿಸಿ (SIM Swap), ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆ ಹಾಗೂ ಸಾಲದ ರೂಪದಲ್ಲಿ ಒಟ್ಟು ₹ 23,98,138 ಹಣವನ್ನು ಆನ್‌ಲೈನ್ ಮೂಲಕ ಲೂಟಿ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ದೂರುದಾರಿಗೆ ಜುಲೈ 8 ರಂದು ಮೊಬೈಲ್ ಸಂಖ್ಯೆ 9631685269 ದಿಂದ ಕರೆ ಬಂದಿತ್ತು. ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ‘ಏರ್‌ಟೆಲ್ ಕಸ್ಟಮರ್ ಕೇರ್’ (Airtel Customer Care) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದನು. “ನಿಮ್ಮ ಸಿಮ್ ಕಾರ್ಡ್ ಸದ್ಯ 4G ಸೇವೆಯಲ್ಲಿದ್ದು, ಅದನ್ನು ಉಚಿತವಾಗಿ 5G ಗೆ ಅಪ್‌ಗ್ರೇಡ್ ಮಾಡಿಕೊಡಲಾಗುವುದು” ಎಂದು ನಂಬಿಸಿದ್ದಲ್ಲದೆ, ದೂರುದಾರರ ವೈಯಕ್ತಿಕ ವಿವರಗಳನ್ನು ಸರಿಯಾಗಿ ಹೇಳಿ ಅವರ ವಿಶ್ವಾಸ ಗಳಿಸಿದ್ದನು. ಇದನ್ನು ನಿಜವೆಂದು ನಂಬಿದ ದೂರುದಾರರು ನವೀಕರಣಕ್ಕೆ ಒಪ್ಪಿಗೆ ನೀಡಿದ್ದರು.

ಅಪರಿಚಿತ ವ್ಯಕ್ತಿಯು, “ನಿಮ್ಮ ಜಿಮೇಲ್ (Gmail) ಖಾತೆಗೆ ಕಂಪನಿಯಿಂದ ಒಂದು ಅಧಿಕೃತ ಸಂದೇಶ ಬರಲಿದ್ದು, ಅದಕ್ಕೆ ನೀವು ‘YES’ ಎಂದು ಉತ್ತರಿಸಬೇಕು. ನವೀಕರಣ ಪ್ರಕ್ರಿಯೆ ನಡೆಯುವಾಗ ನಿಮ್ಮ ಮೊಬೈಲ್ ನೆಟ್‌ವರ್ಕ್ ಕೆಲವು ಗಂಟೆಗಳ ಕಾಲ ಬಂದ್ ಆಗಿರುತ್ತದೆ” ಎಂದು ತಿಳಿಸಿದ್ದನು. ವಂಚಕ ಸೂಚಿಸಿದಂತೆಯೇ ಜಿಮೇಲ್‌ಗೆ ಬಂದ ಸಂದೇಶದ ಲಿಂಕ್‌ಗಳಲ್ಲಿ ದೂರುದಾರರು ಎಲ್ಲದಕ್ಕೂ ‘YES’ ಒತ್ತಿದ್ದಾರೆ. ಇದಾದ ಬೆನ್ನಲ್ಲೇ ಅವರ ಮೊಬೈಲ್ ಸಿಮ್ ಕಾರ್ಡ್ ಸಿಗ್ನಲ್ ಸಂಪೂರ್ಣವಾಗಿ ಕಟ್ ಆಗಿದೆ. ದೂರುದಾರರು ತಮ್ಮ ಇನ್ನೊಂದು ನಂಬರ್‌ನಿಂದ ವಂಚಕನಿಗೆ ಕರೆ ಮಾಡಿದಾಗ, “ಸರ್ವರ್ ಸಮಸ್ಯೆಯಿದೆ, ಶೀಘ್ರದಲ್ಲೇ ಸರಿಹೋಗುತ್ತದೆ” ಎಂದು ನಂಬಿಸಿದ್ದಾನೆ. ಜುಲೈ ೯ ರ ಸಂಜೆವರೆಗೂ ಸಿಮ್ ಆನ್ ಆಗದಿದ್ದಾಗ ಅನುಮಾನಗೊಂಡು ಏರ್‌ಟೆಲ್ ಕಚೇರಿಗೆ ಭೇಟಿ ನೀಡಿದಾಗ, “ನಮ್ಮ ಕಂಪನಿಯಿಂದ ಇಂತಹ ಯಾವುದೇ ಕರೆ ಮಾಡುವುದಿಲ್ಲ” ಎಂದು ತಿಳಿಸಿದ್ದಾರೆ. ತಕ್ಷಣ ದೂರುದಾರರು ಮೊಬೈಲ್‌ನಿಂದ ಸಿಮ್ ಹೊರತೆಗೆದಿದ್ದಾರೆ. ಜುಲೈ 10 ರಂದು ದೂರುದಾರರು ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ ಸೈಬರ್ ಕಳ್ಳರ ಅಸಲಿ ಆಟ ಬೆಳಕಿಗೆ ಬಂದಿದೆ. ಸಿಮ್ ನಿಷ್ಕ್ರಿಯಗೊಂಡಿದ್ದ ಅವಧಿಯಲ್ಲೇ (ಜುಲೈ 8 ರಿಂದ 9 ರ ಅವಧಿ) ವಂಚಕರು ಇವರ ಬ್ಯಾಂಕ್ ಖಾತೆಗಳಲ್ಲಿದ್ದ ₹2,89,000 ನಗದನ್ನು ಎಗರಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಇವರ ಹೆಸರಿನಲ್ಲಿದ್ದ ವಿವಿಧ ಕ್ರೆಡಿಟ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡು ಆನ್‌ಲೈನ್ ಲೂಟಿ ನಡೆಸಿದ್ದಾರೆ.

ಆಕ್ಸಿಸ್ ಬ್ಯಾಂಕ್ (Axis Bank) ಕ್ರೆಡಿಟ್ ಕಾರ್ಡ್: 9 ಲಕ್ಷ ಭಾರಿ ಮೊತ್ತದ ಲೋನ್ ಪಡೆದು ವಂಚಕನ ಖಾತೆಗೆ ವರ್ಗಾವಣೆ.
ಆಕ್ಸಿಸ್ ಬ್ಯಾಂಕ್‌ನ ಮತ್ತೊಂದು ಕಾರ್ಡ್: 4,06,138 ವರ್ಗಾವಣೆ.
ಐಡಿಎಫ್‌ಸಿ ಬ್ಯಾಂಕ್ (IDFC Bank) ಕ್ರೆಡಿಟ್ ಕಾರ್ಡ್: 3,03,000 ಲೂಟಿ.
ಆರ್‌ಬಿಎಲ್ ಬ್ಯಾಂಕ್ (RBL Bank) ಕ್ರೆಡಿಟ್ ಕಾರ್ಡ್: 5,00,000 ವರ್ಗಾವಣೆ.

ತಮ್ಮ ಗಮನಕ್ಕೆ ಬಾರದಂತೆ ಒಟ್ಟು ₹23,98,138ಹಣವನ್ನು ವರ್ಗಾಯಿಸಿಕೊಂಡು ದ್ರೋಹ ಎಸಗಿರುವ ಅಪರಿಚಿತ ಆನ್‌ಲೈನ್ ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ವಿನಂತಿಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed