, ,

ಮೂಡದಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಮಿನಿ ವಿಧಾನಸೌದದಲ್ಲಿ ಯಾವಾಗ..??

ಮಂಗಳೂರು :ಮಂಗಳೂರು ಮೂಡದಲ್ಲಿ ಯಾವುದೇ ಬ್ರೋಕರ್‌ಗಳು ಬೆಳಗ್ಗೆ ಪ್ರವೇಶಿಸಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿದಾರರು ಸ್ವತಃ ಬರಬೇಕು ಎಂಬ ನಿಯಮವನ್ನು ಪಾಲಿಸಲಾಗುತ್ತಿದ್ದು, ಮಧ್ಯಾಹ್ನದ ನಂತರ ಮಾತ್ರ ಅಪ್ಲಿಕೇಶನ್‌ಗಳನ್ನು ನೀಡುವ ವ್ಯವಸ್ಥೆ ಇದೆ. ಮೂಡ ಕಮಿಷನರ್ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಲಂಚ ಪಡೆಯುವ ವ್ಯವಸ್ಥೆಗೆ ಕಡಿವಾಣ ಬಿದ್ದಿದೆ.ಆದರೆ ಮಂಗಳೂರು ಮಹಾನಗರ ಪಾಲಿಕೆ ಹಾಗು ಕಂದಾಯ ಇಲಾಖೆ ಕಚೇರಿಗಳಲ್ಲಿ ಬ್ರೋಕರ್‌ಗಳ ಗುಂಪುಗಳು ಕಾಣಸಿಗುತ್ತಿವೆ ಎಂಬ ಆರೋಪಗಳಿವೆ. ಹಿಂದೆ ಲೋಕಾಯುಕ್ತ ದಾಳಿಯ ಭಯವಾದರೂ ಇತ್ತು. ಈಗ ಲೋಕಾಯುಕ್ತ ರೈಡ್‌ಗಳು ನಡೆಯದಿರುವುದರಿಂದ ಲಂಚ ಪಡೆಯುವವರಿಗೆ…

ಮಂಗಳೂರು :ಮಂಗಳೂರು ಮೂಡದಲ್ಲಿ ಯಾವುದೇ ಬ್ರೋಕರ್‌ಗಳು ಬೆಳಗ್ಗೆ ಪ್ರವೇಶಿಸಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿದಾರರು ಸ್ವತಃ ಬರಬೇಕು ಎಂಬ ನಿಯಮವನ್ನು ಪಾಲಿಸಲಾಗುತ್ತಿದ್ದು, ಮಧ್ಯಾಹ್ನದ ನಂತರ ಮಾತ್ರ ಅಪ್ಲಿಕೇಶನ್‌ಗಳನ್ನು ನೀಡುವ ವ್ಯವಸ್ಥೆ ಇದೆ.

ಮೂಡ ಕಮಿಷನರ್ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಲಂಚ ಪಡೆಯುವ ವ್ಯವಸ್ಥೆಗೆ ಕಡಿವಾಣ ಬಿದ್ದಿದೆ.ಆದರೆ ಮಂಗಳೂರು ಮಹಾನಗರ ಪಾಲಿಕೆ ಹಾಗು ಕಂದಾಯ ಇಲಾಖೆ ಕಚೇರಿಗಳಲ್ಲಿ ಬ್ರೋಕರ್‌ಗಳ ಗುಂಪುಗಳು ಕಾಣಸಿಗುತ್ತಿವೆ ಎಂಬ ಆರೋಪಗಳಿವೆ. ಹಿಂದೆ ಲೋಕಾಯುಕ್ತ ದಾಳಿಯ ಭಯವಾದರೂ ಇತ್ತು. ಈಗ ಲೋಕಾಯುಕ್ತ ರೈಡ್‌ಗಳು ನಡೆಯದಿರುವುದರಿಂದ ಲಂಚ ಪಡೆಯುವವರಿಗೆ ಅವಕಾಶ ನೀಡಿದಂತಾಗಿದೆ.ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಬ್ರೋಕರ್‌ಗಳಲ್ಲಿ ಕೆಲವರಿಗೆ ಅಗತ್ಯವಾದ ವಿದ್ಯಾಭ್ಯಾಸವೂ ಇಲ್ಲ ಎಂಬ ಆರೋಪಗಳಿದ್ದು, ಮಧ್ಯವರ್ತಿಗಳಿಂದಲೇ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ದೂರಾಗಿದೆ.ಮಂಗಳೂರು ಮಿನಿ ವಿಧಾನಸೌಧದಲ್ಲೂ ಬ್ರೋಕರ್‌ಗಳದ್ದೇ ಹವಾ ಇದೆ ಎಂಬ ಆರೋಪ ಕೇಳಿಬರುತ್ತಿದ್ದು, ಅಲ್ಲಿನ ಪಾರ್ಕಿಂಗ್‌ನಲ್ಲಿ ಬ್ರೋಕರ್‌ಗಳ ವಾಹನಗಳೇ ಹೆಚ್ಚಾಗಿ ಕಾಣಿಸುತ್ತವೆ ಎಂದು ವರದಿಯಾಗಿದೆ. ಡಿಸಿ ಆಫೀಸ್, ರೆಕಾರ್ಡ್ ರೂಮ್, ವಿಎ ಆಫೀಸ್, ಡಿಟಿ ಆಫೀಸ್ ಸೇರಿದಂತೆ ಹಲವು ಕಚೇರಿಗಳಲ್ಲಿ ಬ್ರೋಕರ್‌ಗಳ ಓಡಾಟ ಇದೆ ಎಂಬ ಆರೋಪಗಳಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಮೂಡದಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಮಿನಿ ವಿಧಾನಸೌದದಲ್ಲಿ ಯಾವಾಗ..??

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed