, ,

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದ ಗಣೇಶ್ ಶೆಟ್ಟಿ ಕೊಲೆ ಪ್ರಕರಣ ಆರೋಪಿಳನ್ನು ಬಿಡುಗಡೆಗೊಳಿಸಿದ ನ್ಯಾಯಾಲಯ

2015 ರಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಭೂಗತ ಜಗತ್ತಿನ ಶಾರ್ಪ್ ಶೂಟರ್ ಗಣೇಶ್ ಶೆಟ್ಟಿ ಮತ್ತು ಮಾಡೂರು ಇಸುಬು ಎಂಬವರ ಬರ್ಬರ ಹತ್ಯೆಯಾಗಿದ್ದು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕ್ರೈಮ್ ನಂಬ್ರ 92/2015 ಮತ್ತು ನಂಬ್ರ 93/2015 ರಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನಾಗಿ ತನಿಖೆ ಮಾಡಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ತನಿಖಾಧಿಕಾರಿಯವರು ಸಲ್ಲಿಸಿರುತ್ತಾರೆ. ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಸುಮಾರು 23 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಸರಕಾರಿ ಅಭಿಯೋಜಕರ ಮತ್ತು ಆರೋಪಿ ಪರ…

2015 ರಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಭೂಗತ ಜಗತ್ತಿನ ಶಾರ್ಪ್ ಶೂಟರ್ ಗಣೇಶ್ ಶೆಟ್ಟಿ ಮತ್ತು ಮಾಡೂರು ಇಸುಬು ಎಂಬವರ ಬರ್ಬರ ಹತ್ಯೆಯಾಗಿದ್ದು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕ್ರೈಮ್ ನಂಬ್ರ 92/2015 ಮತ್ತು ನಂಬ್ರ 93/2015 ರಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನಾಗಿ ತನಿಖೆ ಮಾಡಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ತನಿಖಾಧಿಕಾರಿಯವರು ಸಲ್ಲಿಸಿರುತ್ತಾರೆ.

ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಸುಮಾರು 23 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಸರಕಾರಿ ಅಭಿಯೋಜಕರ ಮತ್ತು ಆರೋಪಿ ಪರ ವಕೀಲರ ವಾದ ಪ್ರತಿವಾದಗಳನ್ನು ಆಳಿಸಿ ಕ್ರೈಮ್ ನಂಬ್ರ 93/2015 ಗಣೇಶ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳನ್ನು ಆರೋಪ ಮುಕ್ತಗೊಳಿಸಿ ತೀರ್ಪನ್ನು ದಿನಾಂಕ 28-09-2026 ರಂದು ನೀಡಿರುತ್ತಾರೆ.

ಆರೋಪಿ 1ನೇ ಯವರಿಗೆ ವಕೀಲರಾದ ಶ್ರೀ ಎನ್. ನರಸಿಂಹ ಹೆಗ್ಡೆಯವರು, ಆರೋಪಿ 2 ಮತ್ತು 3ನೇ ಯವರಿಗೆ ವಕೀಲರಾದ ಶ್ರೀ ವೇಣುಕುಮಾರ್ ಹಾಗೂ ಯುವರಾಜ್, ಆರೋಪಿ ನಂಬ್ರ 5ನೇಯವರಿಗೆ ವಕೀಲರಾದ ಶ್ರೀ ಇಮ್ತಿಯಾಜ್ ಬಂಟ್ವಾಳ ಮತ್ತು ಬೆಂಗಳೂರಿನ ಹಿರಿಯ ವಕೀಲರಾದ ಶ್ರೀ ಶ್ಯಾಮ್ ಸುಂದರ್, ಆರೋಪಿ ನಂಬ್ರ 7ನೇಯವರಿಗೆ ವಕೀಲರಾದ ಶ್ರೀ ನಝಿಫ್, ಆರೋಪಿ ನಂಬ್ರ 10 ಮತ್ತು 11ನೇ ಯವರಿಗೆ ಮಂಗಳೂರಿನ ಹಿರಿಯ ವಕೀಲರಾದ ಶ್ರೀ ವಿಕ್ರಮ್ ಹೆಗ್ಡೆಯವರು ಹಾಗೂ ಅಬ್ದುಲ್ ಅಝೀಜ್ ಮುಟ್ಟಾಜೆ ಹಾಗೂ ಆರೋಪಿ ನಂಬ್ರ 8 ಮತ್ತು 12ನೇಯವರಿಗೆ ರಾಧಕೃಷ್ಣ ಇವರು ವಾದಿಸಿದರು.

4ನೇ ಮತ್ತು 6ನೇ ಆರೋಪಿಗಳು ತಲೆಮರೆಸಿಕೊಂಡಿದ್ದು ವಿಚಾರಣೆ ಬಾಕಿ ಇದೆ. 9ನೇ ಆರೋಪಿ ಮೃತಪಟ್ಟಿರುವುದರಿಂದ ಆತನ ವಿರುದ್ಧದ ನ್ಯಾಯಾಲಯದ ಪ್ರಕ್ರಿಯೆಗಳು ಮುಕ್ತಾಯಗೊಳ್ಳುತ್ತವೆ.

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports