,

ಮುಲ್ಕಿ: ಶಾಲಾ ಬಸ್ ಗೆ ಟೂರಿಸ್ಟ್ ವಾಹನ ಡಿಕ್ಕಿ, ಕಮರಿಗೆ ಉರುಳಿದ ಬಸ್ – ಇಬ್ಬರು ವಿದ್ಯಾರ್ಥಿಗಳು ಗಂಭೀರ, 13 ವಿದ್ಯಾರ್ಥಿಗಳಿಗೆ ಗಾಯ

ಮೂಲ್ಕಿ: ಟೂರಿಸ್ಟ್ ವಾಹನದ ಭೀಕರ ಡಿಕ್ಕಿಗೆ ಶಾಲಾ ಬಸ್‌ ಕಮರಿಗೆ ಉರುಳಿ, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ (ಅ.23) ಸಂಜೆ ಮೂಲ್ಕಿ ಸಮೀಪದ ಕೊಲ್ನಾಡುಗುತ್ತು ಬಳಿ ನಡೆದಿದೆ. ಮಂಗಳೂರಿನ ಕುಳಾಯಿ ಮೂಲದ ಖಾಸಗಿ ಶಾಲೆಗೆ ಸೇರಿದ ಬಸ್‌ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿ 17 ಮಂದಿ ವಿದ್ಯಾರ್ಥಿಗಳಿದ್ದು, ಅಪಘಾತದ ತೀವ್ರತೆಗೆ ಬಸ್‌ ರಸ್ತೆ ಬದಿಯ ಕಮರಿಗೆ ಉರುಳಿ ನಜ್ಜುಗುಜ್ಜಾಗಿದೆ. ಶಾಲಾ ಬಸ್‌ ಕೊಲ್ನಾಡುವಿನಲ್ಲಿ ಯೂಟರ್ನ್ ಪಡೆದು ವಿದ್ಯಾರ್ಥಿನಿಯೊಬ್ಬರನ್ನು ಇಳಿಸಿ ಮುಂದಕ್ಕೆ ಸಾಗುತ್ತಿದ್ದ ವೇಳೆ, ಹಿಂಬದಿಯಿಂದ ಅತಿವೇಗವಾಗಿ ಬಂದ…

ಮೂಲ್ಕಿ: ಟೂರಿಸ್ಟ್ ವಾಹನದ ಭೀಕರ ಡಿಕ್ಕಿಗೆ ಶಾಲಾ ಬಸ್‌ ಕಮರಿಗೆ ಉರುಳಿ, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ (ಅ.23) ಸಂಜೆ ಮೂಲ್ಕಿ ಸಮೀಪದ ಕೊಲ್ನಾಡುಗುತ್ತು ಬಳಿ ನಡೆದಿದೆ.

ಮಂಗಳೂರಿನ ಕುಳಾಯಿ ಮೂಲದ ಖಾಸಗಿ ಶಾಲೆಗೆ ಸೇರಿದ ಬಸ್‌ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿ 17 ಮಂದಿ ವಿದ್ಯಾರ್ಥಿಗಳಿದ್ದು, ಅಪಘಾತದ ತೀವ್ರತೆಗೆ ಬಸ್‌ ರಸ್ತೆ ಬದಿಯ ಕಮರಿಗೆ ಉರುಳಿ ನಜ್ಜುಗುಜ್ಜಾಗಿದೆ.

ಶಾಲಾ ಬಸ್‌ ಕೊಲ್ನಾಡುವಿನಲ್ಲಿ ಯೂಟರ್ನ್ ಪಡೆದು ವಿದ್ಯಾರ್ಥಿನಿಯೊಬ್ಬರನ್ನು ಇಳಿಸಿ ಮುಂದಕ್ಕೆ ಸಾಗುತ್ತಿದ್ದ ವೇಳೆ, ಹಿಂಬದಿಯಿಂದ ಅತಿವೇಗವಾಗಿ ಬಂದ ತಮಿಳುನಾಡು ಮೂಲದ ಟೂರಿಸ್ಟ್ ವಾಹನವೊಂದು ಬಸ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್‌ ರಸ್ತೆ ಬದಿಯ ಕಮರಿಗೆ ಉರುಳಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಬಸ್‌ ಚಾಲಕ ಹಾಗೂ ಟೂರಿಸ್ಟ್ ವಾಹನದ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಶಾಲಾ ಬಸ್‌ನಲ್ಲಿದ್ದ ಇತರ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆಯೂ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಮಾಹಿತಿ ತಿಳಿದು ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports