Author: News Editor

  • 5.50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಎಸಿ ಲೋಕಾಯುಕ್ತ ಬಲೆಗೆ!
    , ,

    5.50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಎಸಿ ಲೋಕಾಯುಕ್ತ ಬಲೆಗೆ!

    ಜಮೀನಿಗೆ ಸಂಬಂಧಿಸಿದ ಕಂದಾಯ ಮೇಲ್ಮನವಿ ಇತ್ಯರ್ಥಪಡಿಸಲು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮೈಸೂರು ಜಿಲ್ಲೆಯ ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. 5.50 ಲಕ್ಷ ರೂಪಾಯಿ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಎಸಿ ಕಾವ್ಯಾರಾಣಿ ಹಾಗೂ ಕಚೇರಿಯ ಗುಮಾಸ್ತ ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ. 10 ಲಕ್ಷ ರೂಪಾಯಿಗೆ ಬೇಡಿಕೆ! ಹೆಚ್.ಡಿ. ಕೋಟೆ ತಾಲೂಕಿನಲ್ಲಿರುವ ನಾಲ್ಕೂವರೆ ಎಕರೆ ಜಮೀನಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಮೇಲ್ಮನವಿಯನ್ನು…

    Continue Reading

  • ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹದ ನಾಟಕ: ಸಲಿಂಗ ಸಂಬಂಧದ ಆಮಿಷವೊಡ್ಡಿ ಯುವಕರ ದರೋಡೆ – 6 ಮಂದಿ ಬಂಧನ
    , ,

    ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹದ ನಾಟಕ: ಸಲಿಂಗ ಸಂಬಂಧದ ಆಮಿಷವೊಡ್ಡಿ ಯುವಕರ ದರೋಡೆ – 6 ಮಂದಿ ಬಂಧನ

    ಬೆಂಗಳೂರು: ಡೇಟಿಂಗ್ ಆ್ಯಪ್‌ಗಳ ಮೂಲಕ ನಕಲಿ ಖಾತೆಗಳನ್ನು ಸೃಷ್ಟಿಸಿ ಸಲಿಂಗ ಸಂಬಂಧದ ಆಮಿಷವೊಡ್ಡಿ ಯುವಕರನ್ನು ನಿರ್ಜನ ಪ್ರದೇಶಗಳಿಗೆ ಕರೆಸಿ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದ ಭೀಕರ ಗ್ಯಾಂಗ್‌ನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ಬಂಧಿತರಿಂದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತ ಆರೋಪಿಗಳನ್ನು ಆನೇಕಲ್ ಮೂಲದ ವಿಶಾಲ್ (18), ಅಜಯ್ (19), ಸೂರ್ಯ (19) ಹಾಗೂ ಸಂಜಯ್ (22)…

    Continue Reading

  • ಚುನಾವಣಾ ಆಯೋಗದ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿ ವೃದ್ಧನಿಗೆ 3.5 ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳ
    ,

    ಚುನಾವಣಾ ಆಯೋಗದ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿ ವೃದ್ಧನಿಗೆ 3.5 ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳ

    ಚುನಾವಣಾ ಆಯೋಗದ (ಇಸಿಐ) ಹಿರಿಯ ಅಧಿಕಾರಿಯಂತೆ ನಟಿಸಿ 82 ವರ್ಷದ ವೃದ್ಧರೊಬ್ಬರಿಗೆ ಬಲೆ ಬೀಸಿದ ಸೈಬರ್ ವಂಚಕರು, ಬರೋಬ್ಬರಿ 3.49 ಲಕ್ಷ ರೂಪಾಯಿ ದೋಚಿರುವ ಆಘಾತಕಾರಿ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅನ್ಯಾಯ ನಡೆದಿದ್ದು, ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಮುಗ್ಧ ನಾಗರಿಕರನ್ನು ಹೇಗೆ ವಂಚಿಸಲಾಗುತ್ತಿದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಆಗಿದ್ದೇನು? ನಗರದ ರುಸ್ತಂ ಬಾಗ್ ನಿವಾಸಿಯಾದ ಪಾರ್ಥಸಾರಥಿ (82) ಎಂಬುವವರೇ ಈ ಸೈಬರ್ ದಾಳಿಗೆ ಒಳಗಾದ…

    Continue Reading

  • ಮನೆಯ ಯಜಮಾನನ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚಿಸಿದ ಹೋಮ್ ನರ್ಸ್‌..!!
    , ,

    ಮನೆಯ ಯಜಮಾನನ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚಿಸಿದ ಹೋಮ್ ನರ್ಸ್‌..!!

    ಹೋಮ್ ನರ್ಸ್‌ವೊಬ್ಬ ಮನೆಯ ಯಜಮಾನರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚಿಸಿರುವ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈಬರಕಟ್ಟೆಯ ಭಾಗ್ಯಲಕ್ಷ್ಮೀ ಎಂಬವರ ಪತಿ ಶ್ರೀನಿವಾಸ ಪೂಜಾರಿ ಎಂಬವರಿಗೆ ತೀವ್ರ ಅನಾರೋಗ್ಯದ ಕಾರಣ ಅವರ ಯೋಗಕ್ಷಮ ನೋಡಿ್ಕೊಳ್ಳಲು ಉಡುಪಿಯ ವಿ ಕೇರ್ ಹೋಮ್ ನರ್ಸ್ ಸಂಸ್ಥೆಯವರೊಂದಿಗೆ ಮಾತುಕತೆ ನಡೆಸಿ ಮುಂಗಡವಾಗಿ 28,000ರೂ. ಹಣವನ್ನು ಪಾವತಿಸಿದ್ದರು. ಜೂ.25ರಂದು ವಿ ಕೇರ್ ಹೋಮ್ ನರ್ಸ್ ಸಂಸ್ಥೆಯಿಂದ ಹೋಮ್ ಬ್ರದರ್ ಸಚಿನ್ ಎಂಬಾತ ಭಾಗ್ಯಲಕ್ಷ್ಮೀ ಅವರ ಮನೆಗೆ ಬಂದಿದ್ದನು. ಬಳಿಕ…

    Continue Reading

  • ಉಪ್ಪಿನಂಗಡಿ: ನೇತ್ರಾವತಿ ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ!! ಮಾಹಿತಿ ನೀಡುವಂತೆ ಪೊಲೀಸರ ಮನವಿ
    , ,

    ಉಪ್ಪಿನಂಗಡಿ: ನೇತ್ರಾವತಿ ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ!! ಮಾಹಿತಿ ನೀಡುವಂತೆ ಪೊಲೀಸರ ಮನವಿ

    ಉಪ್ಪಿನಂಗಡಿ: ಗ್ರಾಮದ ಹಿರ್ತಡ್ಕ ಸಮೀಪ ಹರಿಯುವ ನೇತ್ರಾವತಿ ನದಿ ದಡದಲ್ಲಿ ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದೆ. ಘಟನೆಯ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಗುರುತು ಪತ್ತೆ ಮಾಡುವ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದಾರೆ. ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಪುರುಷ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದ್ದರೆ ಅಥವಾ ಮೃತರ ಬಗ್ಗೆ ಮಾಹಿತಿ ತಿಳಿದಿರುವವರು ತಕ್ಷಣ ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು 9480805362 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ…

    Continue Reading

  • ಕೌಟುಂಬಿಕ ಆಸ್ತಿ ವಿವಾದ ಇತ್ಯರ್ಥಕ್ಕೆ ಕ್ರಿಮಿನಲ್‌ ಕಾನೂನು ಬಳಸುವಂತಿಲ್ಲ- ಹೈಕೋರ್ಟ್
    ,

    ಕೌಟುಂಬಿಕ ಆಸ್ತಿ ವಿವಾದ ಇತ್ಯರ್ಥಕ್ಕೆ ಕ್ರಿಮಿನಲ್‌ ಕಾನೂನು ಬಳಸುವಂತಿಲ್ಲ- ಹೈಕೋರ್ಟ್

     ಕೌಟುಂಬಿಕ ಆಸ್ತಿ ವಿವಾದಗಳ ಇತ್ಯರ್ಥಕ್ಕಾಗಿ ಕ್ರಿಮಿನಲ್ ಕಾನೂನನ್ನು ಒತ್ತಡ ತಂತ್ರವಾಗಿ ಅಥವಾ ಚೌಕಾಸಿಯ ಅಸ್ತ್ರವಾಗಿ ಬಳಸಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 73 ವರ್ಷದ ವೃದ್ಧ ತಾಯಿ ಹಾಗೂ ಅವರ ಹಿರಿಯ ಮಗಳ ವಿರುದ್ಧ ಕಿರಿಯ ಮಗಳು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿರುವ ನ್ಯಾಯಪೀಠ, ಖಾಸಗಿ ಜಗಳಗಳಲ್ಲಿ ಅನುಕೂಲ ಪಡೆಯಲು ಕಾನೂನು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತೀವ್ರವಾಗಿ ತಖ್ಖೆ ಮಾಡಿದೆ. ಅರ್ಜಿದಾರರಾದ 73 ವರ್ಷದ ವೃದ್ಧೆ ಹಾಗೂ ಅವರ ಹಿರಿಯ ಮಗಳು ತಮ್ಮ…

    Continue Reading

  • ಮಂಗಳೂರು : ಫೇಸ್‌ಬುಕ್‌ ಜಾಹೀರಾತು ನಂಬಿ 16.2 ಲಕ್ಷ ಕಳೆದುಕೊಂಡ ಮಹಿಳೆ
    , ,

    ಮಂಗಳೂರು : ಫೇಸ್‌ಬುಕ್‌ ಜಾಹೀರಾತು ನಂಬಿ 16.2 ಲಕ್ಷ ಕಳೆದುಕೊಂಡ ಮಹಿಳೆ

    ಮಂಗಳೂರು: ಆನ್‌ಲೈನ್‌ ಹೂಡಿಕೆ ಹೆಸರಿನಲ್ಲಿ ಸೈಬರ್‌ ವಂಚನೆಗೆ ಮಂಗಳೂರಿನ 61 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದು, ಬರೋಬ್ಬರಿ 16.2 ಲಕ್ಷ ರೂ ಹಣವನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿ ಹೂಡಿಕೆ ಮಾಡಿದ ಮಹಿಳೆ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಸೈಬರ್‌ ಆರ್ಥಿಕ ಮತ್ತು ನಾರ್ಕೋಟಿಕ್ಸ್‌ ಪೊಲೀಸ್‌ ಠಾಣೆಗೆ ನೀಡಿರುವ ದೂರಿನ ಅನುಸಾರ, ಎಪ್ರಿಲ್‌ನಲ್ಲಿ ಮಹಿಳೆ ಫೇಸ್‌ಬುಕ್‌ನಲ್ಲಿ ಹೂಡಿಕೆಗೆ ಕುರಿತು ಬಂದ ಜಾಹೀರಾತು ಲಿಂಕನ್ನು ಕ್ಲಿಕ್‌ ಮಾಡಿ ಟೆಲಿಗ್ರಾಂ ಗ್ರೂಪ್‌ಗೆ ಸೇರಿದ್ದರು. ಯುಕೆ ದೇಶದ ಕೋಡ್‌…

    Continue Reading

  • ಮಣಿಪಾಲದ ಪಬ್ ಹಾಗೂ ಬಾರ್ ಗಳ ಮೇಲೆ ಮಧ್ಯರಾತ್ರಿ ಪೊಲೀಸರ ದಾಳಿ..!!
    , ,

    ಮಣಿಪಾಲದ ಪಬ್ ಹಾಗೂ ಬಾರ್ ಗಳ ಮೇಲೆ ಮಧ್ಯರಾತ್ರಿ ಪೊಲೀಸರ ದಾಳಿ..!!

    ಉಡುಪಿ : ಮಣಿಪಾಲದ ಪಬ್ ಹಾಗೂ ಬಾರ್ ಗಳ ಮೇಲೆ ಮಧ್ಯರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಮಣಿಪಾಲದ ಈಶ್ವರನಗರ, ಟೈಗರ್ ಸರ್ಕಲ್ ಸಮೀಪದ ಬಾರ್ ಗಳಿಗೆ ದಾಳಿ ನಡೆಸಿ, ನಿಯಮ ಉಲ್ಲಂಘನೆ ಮಾಡಿರುವ ಪಬ್ ಹಾಗೂ ಬಾರ್ ಮಾಲಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ವೇಳೆ ಪಬ್ ಹಾಗೂ ಬಾರ್ ಗಳಲ್ಲಿ ಅಪ್ರಾಪ್ತರಿಗೆ ಅನುಮತಿ ನೀಡಿರುವುದು ಕಂಡು ಬಂದಿದ್ದು, ಅಪ್ರಾಪ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಾರ್ ನಲ್ಲಿ ಇದ್ದರು.ಏಳೆಂಟು ಪಬ್, ಬಾರ್ ಗಳಿಗೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಉಡುಪಿ…

    Continue Reading

  • ಕೆಲಸ ಮುಗಿಸಿ ಮನೆಗೆ ಮರಳುವಾಗ ಕಾಡಾನೆ ದಾಳಿ; ವ್ಯಕ್ತಿಯ ದಾರುಣ ಅಂತ್ಯ
    ,

    ಕೆಲಸ ಮುಗಿಸಿ ಮನೆಗೆ ಮರಳುವಾಗ ಕಾಡಾನೆ ದಾಳಿ; ವ್ಯಕ್ತಿಯ ದಾರುಣ ಅಂತ್ಯ

    ಬೆಳ್ತಂಗಡಿ: ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ. ಮೃತರನ್ನು ಇಡ್ಯಾಲು ನಿವಾಸಿ ಬಾಲಕೃಷ್ಣ ಗೌಡ (55) ಎಂದು ಗುರುತಿಸಲಾಗಿದೆ. ಬಾಲಕೃಷ್ಣ ಗೌಡ ಅವರು ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಹಿಂದಿರುಗುವ ವೇಳೆ ಕಾಡಾನೆ ದಾಳಿಗೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ. ಸಂಜೆ ಕಳೆದರೂ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ಆರಂಭಿಸಿದರು. ಹುಡುಕಾಟದ ವೇಳೆ ಅವರು ಧರಿಸಿದ್ದ…

    Continue Reading

  • ಪಡುಬಿದ್ರೆ : ಲಾರಿ ಮಾರಾಟದ ಹಣ ನೀಡದೆ ವಂಚನೆ- ಪ್ರಕರಣ ದಾಖಲು
    ,

    ಪಡುಬಿದ್ರೆ : ಲಾರಿ ಮಾರಾಟದ ಹಣ ನೀಡದೆ ವಂಚನೆ- ಪ್ರಕರಣ ದಾಖಲು

    ಪಡುಬಿದ್ರೆ : ಲಾರಿ ಖರೀದಿಸಿದ ಬಳಿಕ ಒಪ್ಪಂದದಂತೆ ಬಾಕಿ ಹಣ ಪಾವತಿಸದೆ ನಂಬಿಕೆದ್ರೋಹ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಲ್ಕಿ ನಿವಾಸಿ ಬಸವರಾಜ ಜಿ. ಹುನಕುಂಟಿ ಅವರು ತಮ್ಮ ಲಾರಿ ವಾಹನವನ್ನು ಶಾಮೀರ್ ಪಾಶ ಎಂಬವರಿಗೆ ಮಾರಾಟ ಮಾಡಿದ್ದರು. ವ್ಯವಹಾರದ ವೇಳೆ ಆರೋಪಿಯು 35,000 ರೂ. ಮೊತ್ತವನ್ನು ಚೆಕ್ ಮೂಲಕ ಹಾಗೂ 20,000 ರೂ. ನಗದು ರೂಪದಲ್ಲಿ ಪಾವತಿಸಿ, ಉಳಿದ 3.15 ಲಕ್ಷ ಹಣವನ್ನು ಬಳಿಕ ನೀಡುವುದಾಗಿ ಮೌಖಿಕ ಒಪ್ಪಂದ…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed