Author: News Editor
-

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ ಬಳಿ ಮೊಬೈಲ್ ಪತ್ತೆ..!!
ಮಂಗಳೂರು: ಕೊಡಿಯಾಲಬೈಲಿನ ಜಿಲ್ಲಾ ಕಾರಾಗೃಹದಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ ಬಳಿ ಮೊಬೈಲ್ ಪತ್ತೆಯಾಗಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಹಮ್ಮದ್ ಅಜ್ಮಲ್ ಮತ್ತು ಮೊಹಮ್ಮದ್ ಇಕ್ಬಲ್ ಮೊಬೈಲ್ ಹೊಂದಿದ್ದ ಕೈದಿಗಳು. ಜು.7ರಂದು ರಾತ್ರಿ ಜೈಲಿನ ಅಧೀಕ್ಷಕ ಶರಣ ಬಸಪ್ಪ ಸಿಬಂದಿಯೊಂದಿಗೆ ಜೈಲಿನ ‘ಎ‘ ಬ್ಲಾಕ್ ವಿಭಾಗದ ಕೊಠಡಿ ಸಂಖ್ಯೆ 3ರಲ್ಲಿ ತಪಾಸಣೆ ನಡೆಸಿದ್ದಾರೆ. ಆಗ ಅಜ್ಮಲ್ ಬಳಿ ಮೊಬೈಲ್ ಪತ್ತೆಯಾಗಿದೆ. ಅದೇ ಕೊಠಡಿಯಲ್ಲಿದ್ದ ಇನ್ನೊಬ್ಬ ಇಕ್ಬಾಲ್ ಬಳಿಯಲ್ಲೂ ಮೊಬೈಲ್ ಪತ್ತೆಯಾಗಿದೆ.
-

ಜನನ ಮತ್ತು ಮರಣ ಪ್ರಮಾಣಪತ್ರಕ್ಕಾಗಿ ಮಂಗಳೂರು ಪಾಲಿಕೆಯಲ್ಲಿ ಸಾರ್ವಜನಿಕರ ಪರದಾಟ..!!
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಐಆರ್ ಪ್ರಕ್ರಿಯೆಗೆ ನಿಯೋಜಿಸಿರುವುದರಿಂದ, ಜನನ ಮತ್ತು ಮರಣ ಪ್ರಮಾಣಪತ್ರ ನೋಂದಣಿ ಸೇವೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಸಾಮಾನ್ಯವಾಗಿ ದಿನವಿಡೀ ಲಭ್ಯವಿರುತ್ತಿದ್ದ ಅರ್ಜಿ ಸಲ್ಲಿಕೆ ಇದೀಗ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪಾಲಿಕೆ ಕಚೇರಿಯಲ್ಲಿ ಅಳವಡಿಸಿರುವ ಪ್ರಕಟಣೆಯ ಪ್ರಕಾರ, ಜೂನ್ 30 ರಿಂದ ಜುಲೈ 29 ರವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ಜನನ ಮತ್ತು ಮರಣ…
-

ನಡೆದುಕೊಂಡು ಹೋಗಲು ದಾರಿಯು ಇಲ್ಲದೇ ಭೂ ಅಕ್ರಮ, ಎಷ್ಟೇ ದೂರು ನೀಡಿದರು ಕ್ಯಾರೇ ಅನ್ನದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು
ಉಳ್ಳಾಲ:ಉಳ್ಳಾಲ ನಗರಸಭೆ ವ್ಯಾಪ್ತಿಯ ಕಲ್ಲಾಪುವಿನಲ್ಲಿರುವ ಒಂದು ಕಟ್ಟಡದ ಹಿಂಭಾಗದಲ್ಲಿ ಜೆಸ್ಸಿ ಮತ್ತು ಫಿಲೋಮಿನಾ ಎನ್ನುವವರಿಗೆ ಸೇರಿದ ಜಾಗವಿದ್ದು, ಅಲ್ಲಿನ ಅಗಲವಿರುವ ರಸ್ತೆಯ ಪಕ್ಕದಲ್ಲಿ ಅಕ್ಕಪಕ್ಕದ ಬಿಲ್ಡಿಂಗ್ ಮಾಲಕರು ಪರವಾನಿಗೆ ಪಡೆದು ಕಟ್ಟಡ ನಿರ್ಮಿಸಿದ್ದಾರೆ. ಆದರೆ ಕಟ್ಟಡ ನಿರ್ಮಾಣವಾದ ರೀತಿಯಿಂದಾಗಿ ಸಂಬಂಧಿತ ಜಾಗದ ಮಾಲೀಕರಿಗೆ ನಡೆದು ಹೋಗಲು ಕೂಡ ದಾರಿ ಇಲ್ಲದಂತಾಗಿದೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ, ಅವರ ಹಳೆಯ ಮನೆಯ ಎದುರು ಯಾವುದೇ ಪರವಾನಿಗೆ ಇಲ್ಲದೆ ಅತಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿದೆ ಎನ್ನಲಾಗಿದ್ದು, ಒಂದು ವೇಳೆ ಮಳೆಯ…
-

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ : ಇಬ್ಬರು ಮಹಿಳೆಯರು ಅರೆಸ್ಟ್!
ಮನೆಗಳನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಬಂಧಿಸಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಜು.3ರಂದು ಬೆಂಗಳೂರು ಗಿರಿನಗರ ಠಾಣಾ ವ್ಯಾಪ್ತಿಯ ಎಚ್.ಕೆ.ಹಳ್ಳಿಯ 2ನೇ ಮುಖ್ಯರಸ್ತೆಯ ಹಾಗೂ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ವಿ.ಜಿ ನಗರದ ಬಂಡೆ ಗಣಪತಿ ದೇವಸ್ಥಾನದ ಹತ್ತಿರದ ಮನೆಗಳನ್ನು ಬಾಡಿಗೆಗೆ ಪಡೆದುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ…
-

ಮಂಗಳೂರು RTO ಇಲಾಖೆಯಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ..!! ಕೇವಲ ಗುಮಾಸ್ತ ಕೈಯಲ್ಲಿ ಕಂತೆ ಕಂತೆ ನೋಟು
ಮಂಗಳೂರು RTO ಇಲಾಖೆಯಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ಇಲ್ಲಿಗೆ ತಲೆಹಾಕದೇ ಇರುವುದೇ ಇಲ್ಲಿನ ಮುಖ್ಯ ಸಮಸ್ಯೆ. RTO ಕಛೇರಿಯ ಮೊದಲನೇ ಮಹಡಿಯಲ್ಲಿ ಕಲೆಕ್ಷನ್ ಗೆಂದು ಗುಮಾಸ್ತ ಇದ್ದಾನೆ. ಇವನ ಸುತ್ತ ಮುತ್ತ, ಜೇಬಿನಲ್ಲಿ ಹಣದ ರಾಶಿ ತುಂಬಿ ತುಳುಕುತ್ತಿವೆ. ತಲಾ ಮಹಡಿಯಲ್ಲಿ ಮುಖ್ಯ ಅಧಿಕಾರಿ ಬಳಿ ದಿನದ ಕಲೆಕ್ಷನ್ ಬಗ್ಗೆ ಬರೆಯಲು ಡೈರಿಯೇ ಇದೆ. ದಿನವಿಡೀ ಈ ಗುಮಾಸ್ತನಿಗೆ ಹಣದುಬ್ಬರ ತುಂಬಿ 500, 200,100 ಹೀಗೆ ಬೇರ್ಪಡಿಸುವ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದಾನೆ.ಪೋಲಿಸರು ಗೊಡ್ಸ್ ವಾಹನಕ್ಕೆ…
-

ಉಡುಪಿ: ಬ್ಲ್ಯಾಕ್ಮೇಲ್ ಪ್ರಕರಣ- ವಂಚಕಿ ಝೀನತ್ ವಿರುದ್ಧ ಮತ್ತೊಂದು FIR..!!
ಉಡುಪಿ : ಬ್ಲ್ಯಾಕ್ಮೇಲ್ ಮಾಡಿ 51.84 ಲಕ್ಷಕ್ಕೂ ಅಧಿಕ ಹಣ ಹಾಗೂ ಚಿನ್ನಾಭರಣ ಪಡೆದು ವಂಚನೆ ಎಸಗಿರುವ ಆರೋಪದಡಿ ಇಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರಾದ ಝೀನತ್ ಹಾಗೂ ಗೀತಾರಾವ್ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳ ಪೈಕಿ ಝೀನತ್ ಉದ್ಯಮಿಯೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ಬಂಧಿತಳಾಗಿದ್ದಾಳೆ. ಬನ್ನಂಜೆಯ ತೇಜೇಶ್ವರ್ ರಾವ್ ಅವರು 2018ರಿಂದ 2022ರವರೆಗೆ ಉಡುಪಿಯ ಮಹಾಮಾಯ ಕಾಂಪ್ಲೆಕ್ಸ್ನಲ್ಲಿ ಮೋದಿಕೇರ್ ಸ್ಟಾಕ್ ಪಾಯಿಂಟ್ ಅಂಗಡಿಯನ್ನು ನಡೆಸುತ್ತಿದ್ದರು. ಇದೇ ಅವಧಿಯಲ್ಲಿ ಆರೋಪಿತರಾದ…
-

ರಾಜ್ಯದ ವಿವಿಧೆಡೆ ಲೋಕಾಯುಕ್ತ ರೇಡ್ : ಕುಬೇರರ ಕೋಟಿ ಕೋಟಿ ಆಸ್ತಿ ಕಂಡು ಅಧಿಕಾರಿಗಳೇ ಶಾಕ್..!! ಬರೋಬ್ಬರಿ ₹49.83 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ
ಬೆಂಗಳೂರು: ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟು 10 ಜನ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೃಹತ್ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಚಿತ್ರದುರ್ಗ, ಕಲಬುರಗಿ, ಶಿವಮೊಗ್ಗ, ರಾಯಚೂರು ಮತ್ತು ತುಮಕೂರು ಸೇರಿದಂತೆ ಒಟ್ಟು 53 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಾಚರಣೆ ನಡೆದಿದೆ. ದಾಳಿಯ ವೇಳೆ ಅಧಿಕಾರಿಗಳು ಭಾರಿ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರ-ಚರಾಸ್ತಿಗಳ…
-

ರೆಸಾರ್ಟ್ನಲ್ಲಿ ಜೂಜಾಟ ನಿರತ 26 ಮಂದಿ ಬಂಧನ: 17.81 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ
ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್ನಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದ ಆರೋಪದಡಿ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 7ರಂದು ರಾತ್ರಿ ಖಚಿತ ಮಾಹಿತಿ ಮೇರೆಗೆ ಹಿರಿಯಡಕ ಪೊಲೀಸರು ರೆಸಾರ್ಟ್ನ ಕೊಠಡಿಗೆ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದ 26 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ವೇಳೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ₹1,31,630 ನಗದು, ಇಸ್ಪೀಟ್ ಎಲೆಗಳು, ಅಂದಾಜು ₹2 ಲಕ್ಷ ಮೌಲ್ಯದ 25 ಮೊಬೈಲ್ ಫೋನ್ಗಳು,…
-

ಕರ್ನಾಟಕ ಸೇರಿ ದೇಶಾದ್ಯಂತ ವಿವಿಧೆಡೆ NIA ಅಧಿಕಾರಿಗಳು ದಾಳಿ..!!
ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರಲು ಸಂಚು ರೂಪಿಸಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಬುಧವಾರ ಮಹತ್ವದ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಕರ್ನಾಟಕದ ಗಣಿ ನಾಡು ಬಳ್ಳಾರಿಯಲ್ಲಿಯೂ ಮುಂಜಾನೆಯೇ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿ, ತೀವ್ರ ಶೋಧ ಕಾರ್ಯದಲ್ಲಿ ತೊಡಗಿದೆ. ದೇಶಾದ್ಯಂತ ಪ್ರಮುಖ ನಗರಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಹಾಗೂ ಸಾರ್ವಜನಿಕರಲ್ಲಿ ಭೀತಿ ಮೂಡಿಸಲು ಉಗ್ರ ಸಂಘಟನೆಗಳ ಬೆಂಬಲದೊಂದಿಗೆ ಸಂಚು ರೂಪಿಸಲಾಗಿತ್ತು…
-

ಮಂಗಳಮುಖಿಯ ವೇಷದಲ್ಲಿ ವೇಶ್ಯಾವಾಟಿಕೆ: ನಟೋರಿಯಸ್ ದಲ್ಲಾಳಿ ಚೇತನ್ ಬಂಧನ
ಬೆಂಗಳೂರು: ಹೊರರಾಜ್ಯಗಳ ಯುವತಿಯರನ್ನು ಕರೆತಂದು ಬೆಂಗಳೂರಿನಲ್ಲಿ ಅನೈತಿಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಹಾಗೂ ಹಲವು ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ದಲ್ಲಾಳಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚೇತನ್ ಕುಮಾರ್ ಅಲಿಯಾಸ್ ಮಂಗಳಮುಖಿ ಚೇತನ್ (40) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಚೇತನ್ ವಿರುದ್ಧ ಪೀಣ್ಯ, ಬಾಗಲಗುಂಟೆ, ಸಿಸಿಬಿ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತ, ಪೊಲೀಸರ ಕಣ್ತಪ್ಪಿಸಲು ಮಂಗಳಮುಖಿಯ ವೇಷ ಧರಿಸಿ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











