Author: News Editor
-

ಕಡಬ: ಚಿನ್ನದ ಆಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ ಬ್ಯಾಂಕ್ಗೆ ಮೋಸಕ್ಕೆ ಯತ್ನ? ಇಬ್ಬರ ವಿರುದ್ಧ FIR
ಕಡಬ: ಚಿನ್ನದ ಆಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ ಬ್ಯಾಂಕ್ನಲ್ಲಿ ಅಡವಿಟ್ಟು ಹಣ ಪಡೆಯುವ ಉದ್ದೇಶದಿಂದ ಬಂದಿದ್ದರೆಂದು ಆರೋಪಿಸಿ ಇಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜುಲೈ 3ರ ಸಂಜೆ ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದರು. ಈ ವೇಳೆ ಅವರು ಬ್ಯಾಂಕ್ನಲ್ಲಿ ಸುಮಾರು 120 ಗ್ರಾಂ ಚಿನ್ನವನ್ನು ಅಡವಿಡಲು ಬಂದಿರುವುದಾಗಿ ತಿಳಿಸಿದ್ದಾರೆ.ಅವರ ವರ್ತನೆ ಸಂಶಯಾಸ್ಪದವಾಗಿದ್ದರಿಂದ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದಾಗ, ಉಪ್ಪಿನಂಗಡಿ…
-

ಪುತ್ತೂರು: ಜಿಮ್ ಟ್ರೈನರ್ ಸಚಿನ್ ರೈ ನಿಗೂಢ ಸಾವು..!! ತಾಯಿಯಿಂದ ಪೊಲೀಸ್ ದೂರು
ಪುತ್ತೂರು: ಕಲ್ಲಿಮಾರ್ನಲ್ಲಿ ವಾಸವಿದ್ದ ಜಿಮ್ ಟ್ರೈನರ್ ಸಚಿನ್ ರೈ ಅವರು ಮೃತಪಟ್ಟಿದ್ದು, ಅವರ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿ ತಾಯಿ ಗುಲಾಬಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೂಲತಃ ಮಡಂತ್ಯಾರ್ ನಿವಾಸಿಯಾಗಿದ್ದ ಸಚಿನ್ ರೈ, ಕಳೆದ ಹಲವು ವರ್ಷಗಳಿಂದ ಜಿಮ್ ಟ್ರೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಅವರು ಪುತ್ತೂರಿನ ಕಲ್ಲಿಮಾರ್ನಲ್ಲಿ ವಾಸವಾಗಿದ್ದರು.ಜುಲೈ 5ರಂದು ಬೆಳಿಗ್ಗೆ ಸಚಿನ್ ರೈ ಅವರು ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಅವರು ಮೃತಪಟ್ಟಿರುವುದಾಗಿ…
-

ಟೈಮಿಂಗ್ಸ್ ವಿಚಾರ ಬಸ್ಸುಗಳನ್ನು ಡಿಕ್ಕಿ ಹೊಡೆಸಿಕೊಂಡು ಹುಚ್ಚಾಟ ಮೆರೆದ ಸಿಟಿ ಬಸ್ ಸಿಬಂದಿಗಳು-ಸಾರ್ವಜನಿಕರಲ್ಲಿ ಅತಂಕ
ಉಡುಪಿ : ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿ ನಿಂತಿದ್ದ ಟಿಎಂಟಿ ಬಸ್ಸಿಗೆ ಪಿ ಎಂ ಟಿ ಬಸ್ ಚಾಲಕ ತನ್ನ ಬಸ್ಸನ್ನು ಅಡ್ಡ ತಂದು ನಿಲ್ಲಿಸಿದ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ನಿನ್ನೆ (ಶನಿವಾರ ) ರಾತ್ರಿ ಸಂಭವಿಸಿದೆ. ಈ ಘಟನೆಯಿಂದ ಕೋಪಗೊಂಡ ಟಿ ಎಂ ಟಿ ಚಾಲಕ ಪ್ರಯಾಣಿಕರನ್ನು ಬಸ್ ನಿಂದ ಇಳಿಸಿ ಎರಡೆರಡು ಬಾರಿ ಡಿಕ್ಕಿ ಹೊಡೆದು ಹುಚ್ಚಾಟ ಮೆರೆದಿದ್ದಾನೆ. ಈ ಘಟನೆಯಿಂದ ಬಸ್ ನ ಮುಂಭಾಗದ ಗ್ಲಾಸ್ ಗಳು…
-

ಉಡುಪಿ: ಶಾಲಾ ಬಸ್ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಸುಳ್ಳು ದೂರು ನೀಡಿದ್ದ ಬಸ್ ಕಂಡಕ್ಟರ್ ಬಂಧನ
ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಬಸ್ ಅಪಘಾತ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಿದ್ದು, ಬಸ್ ಚಾಲಕನೆಂದು ತನ್ನ ತಂದೆಯ ವಿರುದ್ಧ ದೂರು ದಾಖಲಿಸಿದ್ದ ಶಾಲಾ ಬಸ್ ಕಂಡಕ್ಟರ್ನೇ ಬಸ್ ಚಲಾಯಿಸಿ ಅಪಘಾತ ಎಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 25ರಂದು ಬೆಳಿಗ್ಗೆ 8:05ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 169(ಎ)ರ ಸಿಂಡಿಕೇಟ್ ಸರ್ಕಲ್ ಡೌನ್ ಸಮೀಪದ ಸೆಂಟ್ರಲ್ ಪಾರ್ಕ್ ಹೋಟೆಲ್ ಎದುರು, ಪೆರಂಪಳ್ಳಿಯ ಅಲ್ ಇಬಾದ್ ಇಂಡಿಯನ್ ಶಾಲೆಗೆ…
-

ಮೂಡುಬಿದಿರೆ: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ!!
ಒಂದು ದಿನದಿಂದ ನಾಪತ್ತೆಯಾಗಿದ್ದ ಅಲಂಗಾರು ಆಶ್ರಯ ಕಾಲೋನಿ ಸಮೀಪದ ಬಂಗೇರಬೆಟ್ಟು ಯುವಕನೋರ್ವನ ಶವ ಮನೆ ಸಮೀಪದ ಹೊರಭಾಗದಲ್ಲಿ ಪತ್ತೆಯಾಗಿದೆ. ಬಂಗೇರಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (34) ಮೃತಪಟ್ಟ ಯುವಕ. ಅವಿವಾಹಿತರಾಗಿದ್ದ ಕಾರ್ತಿಕ್ ಶೆಟ್ಟಿ ಅವರು ಹಿಟಾಚಿ ಹಾಗೂ ಜೆಸಿಬಿ ಯಂತ್ರಗಳ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಒಂದು ದಿನದಿಂದ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದರು. ಶನಿವಾರ ಬೆಳಿಗ್ಗೆ ಮನೆಯ ಸಮೀಪದ ಶೆಡ್ ಹೊರಗೆ ಅವರ ಮೃತದೇಹ ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ…
-

ಉಡುಪಿ: ರಿಯಲ್ ಎಸ್ಟೇಟ್ ಹೂಡಿಕೆ ಹೆಸರಲ್ಲಿ ₹70 ಲಕ್ಷ ವಂಚನೆ..!! ಬ್ಲ್ಯಾಕ್ಮೇಲ್, ಜೀವ ಬೆದರಿಕೆ ಪ್ರಕರಣದಲ್ಲಿ ಮಹಿಳೆ ಬಂಧನ,ಉದ್ಯಮಿಗಳ ಅಶ್ಲೀಲ ವಿಡಿಯೋ ಪತ್ತೆ
ಉಡುಪಿ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಂಟಿ ಹೂಡಿಕೆ ಹೆಸರಿನಲ್ಲಿ ₹70 ಲಕ್ಷ ಪಡೆದು ವಂಚನೆ ಎಸಗಿದ ಆರೋಪದ ಜೊತೆಗೆ ಬ್ಲ್ಯಾಕ್ಮೇಲ್ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಉಡುಪಿ ಮೂಲದ ದೂರುದಾರರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ವೇಳೆ ಆರೋಪಿತೆ ಜೀನತ್ ಇಬ್ರಾಹಿಂ ಅವರ ಪರಿಚಯವಾಗಿತ್ತು. ಬಳಿಕ ಇಬ್ಬರೂ ಸೇರಿ ಉಡುಪಿಯಲ್ಲಿ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ಆರಂಭಿಸಿದ್ದರು. ಈ…
-

ಗಾಂಜಾ ಪೆಡ್ಲರ್ ಮನೆಯಲ್ಲಿ ಸಿಕ್ಕಿತು 230 ಮೊಬೈಲ್, 17 ಮಾರಕಾಸ್ತ್ರ- ಕಾರ್ಯಾಚರಣೆ ವೇಳೆ ಪೊಲೀಸರಿಗೆ ಶಾಕ್
ಬೆಂಗಳೂರು: ರಾಜಧಾನಿಯ ಬ್ಯಾಟರಾಯನಪುರ ಠಾಣೆಯ ಪೊಲೀಸರು ಶುಕ್ರವಾರ ತಡರಾತ್ರಿ ಭರ್ಜರಿ ಕಾರ್ಯಾಚರಣೆಯೊಂದನ್ನು ನಡೆಸಿ, ನಗರದ ಕುಖ್ಯಾತ ಡ್ರಗ್ ಪೆಡ್ಲರ್ ಅಕ್ಬರ್ ಶರೀಫ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಲಭ್ಯವಾದ ಮಾಲುಗಳನ್ನು ಕಂಡು ಸ್ವತಃ ಪೊಲೀಸ್ ಅಧಿಕಾರಿಗಳೇ ಕೆಲಕಾಲ ಬೆಚ್ಚಿಬಿದ್ದಿದ್ದಾರೆ. ದಾಳಿಯ ವೇಳೆ ಬರೋಬ್ಬರಿ 230 ಮೊಬೈಲ್ ಫೋನ್ಗಳು, 17 ಮಾರಕಾಸ್ತ್ರಗಳು ಹಾಗೂ 700 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಜುಲೈ 1 ರಂದು ತಡರಾತ್ರಿ ಸುಮಾರು 10:50 ರ…
-

ಮಂಗಳೂರು: ಸೈಬರ್ ವಂಚನೆಗೆ ಬ್ಯಾಂಕ್ ಖಾತೆಗಳನ್ನು ಒದಗಿಸಿ ಹಣದ ಅಕ್ರಮ ವಹಿವಾಟಿಗೆ ಸಹಕರಿಸುತ್ತಿದ್ದ ಆರೋಪಿ ಅರೆಸ್ಟ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡಿಜಿಟಲ್ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೈಬರ್ ವಂಚನೆಗೆ ಬ್ಯಾಂಕ್ ಖಾತೆಗಳನ್ನು ಒದಗಿಸಿ ಹಣದ ಅಕ್ರಮ ವಹಿವಾಟಿಗೆ ಸಹಕರಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 104/2025ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ-2008ರ 66(C), 66(D)ಹಾಗೂ **ಭಾರತೀಯ ನ್ಯಾಯ ಸಂಹಿತೆ (BNS)**ಯ 126(2), 308(6), 318(4), 319(2) ಮತ್ತು 3(5) ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಕೊಳ್ನಾಡು ಕುಡ್ತಮುಗೇರು ನಿವಾಸಿ ಜುಬೈರ್ (32) ಎಂಬಾತನನ್ನು 2026ರ…
-

ಬಂಟ್ವಾಳ: ಪರವಾನಗಿ ಇಲ್ಲದೆ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ..!! ಪೊಲೀಸರ ದಾಳಿ- ವಾಹನ, ಯಂತ್ರೋಪಕರಣಗಳ ವಶಕ್ಕೆ..!!
ಬಂಟ್ವಾಳ: ಅಕ್ರಮ ಕೆಂಪುಕಲ್ಲು ಹಾಗೂ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿ, ಗಣಿಗಾರಿಕೆಗೆ ಬಳಸಲಾಗುತ್ತಿದ್ದ ವಾಹನಗಳು ಹಾಗೂ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜುಲೈ 2ರಂದು ಸಂಜೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಠಾಣಾ ಸಿಬ್ಬಂದಿಯೊಂದಿಗೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಪ್ರದೇಶಕ್ಕೆ ತೆರಳಿದ ವೇಳೆ, ಪೊಲೀಸ್ ವಾಹನವನ್ನು ಕಂಡ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳ…
-

ಗೋವಾದಲ್ಲಿ ಉಡುಪಿಯ ಸಂದೀಪ್ ಸಾಲಿಯಾನ್ ಕೊಲೆ ಪ್ರಕರಣ: ಯುವತಿಯ ಬಂಧನ!!
ಉಡುಪಿ: ಗೋವಾದ ಕ್ಯಾಲಂಗುಟ್ನ ಅತಿಥಿ ಗೃಹದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ಸಂದೀಪ್ ಸಾಲಿಯಾನ್ (40) ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಕ್ಯಾಲಂಗುಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯನ್ನು ಅಕ್ಷತಾ ಎಂ.ಕೆ. ಎಂದು ಗುರುತಿಸಲಾಗಿದ್ದು, ಮೂಲತಃ ಮಂಗಳೂರಿನವರಾದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮಲ್ಪೆಯ ನಿವಾಸಿಯಾಗಿದ್ದ ಸಂದೀಪ್ ಸಾಲಿಯಾನ್ ಕೆಲ ದಿನಗಳ ಹಿಂದೆ ಪ್ರವಾಸಕ್ಕಾಗಿ ಗೋವಾಗೆ ತೆರಳಿದ್ದರು. ಬಳಿಕ ಕ್ಯಾಲಂಗುಟ್ನ ಅತಿಥಿ ಗೃಹವೊಂದರಲ್ಲಿ ಅವರ ಮೃತದೇಹ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











