ಬಂಟ್ವಾಳ: ಆಡಳಿತ ಸೌಧದ ಕಚೇರಿಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಅಳವಡಿಸಲಾಗಿರುವ ಲಿಫ್ಟ್ ನೊಳಗೆ ಇಬ್ಬರು ವ್ಯಕ್ತಿಗಳು ಸುಮಾರು 45 ನಿಮಿಷಗಳ ಕಾಲ ಸಿಲುಕಿಕೊಂಡು, ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ನಡೆದಿದೆ.ಆಡಳಿತ ಸೌಧದ ಮೇಲಿನ ಮೂರು ಅಂತಸ್ತುಗಳಿಗೆ ತೆರಳಲು ಲಿಫ್ಟ್ ನ್ನು ಸಾರ್ವಜನಿಕರು ಬಳಸುತ್ತಿದ್ದು, ಗುರುವಾರ ಮಧ್ಯಾಹ್ನ ಸುಮಾರು 12.45 ರಿಂದ 1.30 ರ ವರೆಗೆ ಕಚೇರಿಗೆ ಬಂದಿದ್ದ ಸಾರ್ವಜನಿಕರಿಬ್ಬರು ಲಿಫ್ಟ್ ನೊಳಗೆ ಸಿಲುಕಿಹಾಕಿಕೊಂಡಿದ್ದಾರೆ. ಬಳಿಕ ಅವರು ಸ್ನೇಹಿತರಿಗೆ ಪೋನ್ ಮೂಲಕ ವಿಚಾರ ತಿಳಿಸಿ, ಅವರು ತಹಶೀಲ್ದಾರ್ ಅವರನ್ನು ಸಂಪರ್ಕ ಮಾಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಲಿಪ್ಟ್ ನೊಳಗೆ ಉಸಿರು ಕಟ್ಟಿ ನಿಂತುಕೊಂಡ ಇವರನ್ನು ಕೊನೆಗೆ ಸಾರ್ವಜನಿಕರು ಸೇರಿ ಯಾವುದೋ ವಿಧಾನ ಬಳಸಿ ಲಿಫ್ಟ್ ನಿಂದ ಹೊರಬರುವಂತೆ ಮಾಡಿ ಜೀವ ಉಳಿಸಿದ್ದಾರೆ. ಇದೇನು ಮೊದಲ ಸಲ ಅಲ್ಲ ಎಂದು ಹೇಳುವ ಸಾರ್ವಜನಿಕರು ಇದರ ಮೊದಲು ಅನೇಕ ಬಾರಿ ಇಂತಹ ಸ್ಥಿತಿ ಉದ್ಭವಿಸಿದೆ ಎಂದಿದ್ದಾರೆ.ಲಿಫ್ಟ್ ಅಳವಡಿಸಿದ ಬಳಿಕ ಎರಡನೇ ದಿನದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮತ್ತೆ ಮತ್ತೆ ಘಟನೆ ಮರುಕಳಿಸಿದ ಬಳಿಕವೂ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ಹಿರಿಯರು ,ಮಕ್ಕಳು ಸಹಿತ ಇತರ ಅನಾರೋಗ್ಯ ಪೀಡಿತ ವ್ಯಕ್ತಿಗಳು ಈ ಲಿಪ್ಟ್ ನಲ್ಲಿ ಹೋಗಿ ಬಾಕಿಯಾದರೆ ಉಸಿರು ಕಟ್ಟಿ ಜೀವಕ್ಕೆ ಅಪಾಯವಾಗುವುದು ನಿಶ್ಚಿತ. ಹಾಗಾಗಿ ಇಂತಹ ಲಿಫ್ಟ್ ನ ಬಗ್ಗೆ ಇಲಾಖೆ ಎಚ್ಚೆತ್ತಕೊಂಡು ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಲಿಫ್ಟ್ ನೊಳಗೆ ಬಂಧಿಯಾಗಿದ್ದ ವ್ಯಕ್ತಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಲಿಫ್ಟ್ ಅವ್ಯವಸ್ಥೆ ಬಯಲು: 45 ನಿಮಿಷ ಒಳಗೇ ಸಿಲುಕಿ ಒದ್ದಾಟ
ಬಂಟ್ವಾಳ: ಆಡಳಿತ ಸೌಧದ ಕಚೇರಿಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಅಳವಡಿಸಲಾಗಿರುವ ಲಿಫ್ಟ್ ನೊಳಗೆ ಇಬ್ಬರು ವ್ಯಕ್ತಿಗಳು ಸುಮಾರು 45 ನಿಮಿಷಗಳ ಕಾಲ ಸಿಲುಕಿಕೊಂಡು, ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ನಡೆದಿದೆ.ಆಡಳಿತ ಸೌಧದ ಮೇಲಿನ ಮೂರು ಅಂತಸ್ತುಗಳಿಗೆ ತೆರಳಲು ಲಿಫ್ಟ್ ನ್ನು ಸಾರ್ವಜನಿಕರು ಬಳಸುತ್ತಿದ್ದು, ಗುರುವಾರ ಮಧ್ಯಾಹ್ನ ಸುಮಾರು 12.45 ರಿಂದ 1.30 ರ ವರೆಗೆ ಕಚೇರಿಗೆ ಬಂದಿದ್ದ ಸಾರ್ವಜನಿಕರಿಬ್ಬರು ಲಿಫ್ಟ್ ನೊಳಗೆ ಸಿಲುಕಿಹಾಕಿಕೊಂಡಿದ್ದಾರೆ. ಬಳಿಕ ಅವರು ಸ್ನೇಹಿತರಿಗೆ ಪೋನ್ ಮೂಲಕ ವಿಚಾರ ತಿಳಿಸಿ, ಅವರು ತಹಶೀಲ್ದಾರ್ ಅವರನ್ನು ಸಂಪರ್ಕ…
Previous Post
Next Post
Leave a Reply
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed












