Category: ಬ್ರೇಕಿಂಗ್ ನ್ಯೂಸ್
-

ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ..!
ಉಡುಪಿ : ಸುದೀಪ್ ಶೆಟ್ಟಿ ಆತ್ಮಹತ್ಯೆ ಸಂಬಂಧ ಪೊಲೀಸ್ ವಶದಲ್ಲಿದ್ದ ಆತನ ಪತ್ನಿ ಸೌಮ್ಯ ಶೆಟ್ಟಿಗೆ ಉಡುಪಿ ಸೆಸನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಮಾ. 22ರಂದು ಸುದೀಪ್ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ಸೌಮ್ಯ ಶೆಟ್ಟಿ ಪ್ರಚೋದನೆ ಕಾರಣ ಎಂದು ಸುದೀಪ್ ತಂದೆ ದಾಮೋದರ್ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸೌಮ್ಯ ಶೆಟ್ಟಿಯನ್ನು ಎ. 11ರಂದು ಉಡುಪಿಯಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿಗಾಗಿ ಸೌಮ್ಯ ಶೆಟ್ಟಿ ಉಡುಪಿ ಸೆಸನ್ಸ್ ನ್ಯಾಯಾಲಯಕ್ಕೆ ಅರ್ಜಿ…
-

ಮಂಗಳೂರಿನಲ್ಲಿಯೂ ಅಲ್ಲಲ್ಲಿ ನಾಯಿಕೊಡೆಗಳಂತೆ ತಲೆಎತ್ತಿ ನಿಂತ ಹೋಂಸ್ಚೇ & ರೆಸಾರ್ಟ್ !! ಇವುಗಳಿಗೆ ಕಾನೂನು ಕ್ರಮ ಯಾವಾಗ??
ಮಂಗಳೂರು: ಕೊಡಗಿನ ಹೋಂಸ್ಚೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಯ ಬಳಿಕ ರಾಜ್ಯದ ಪೊಲೀಸ್ ಇಲಾಖೆ ಹೋಂ ಸ್ಟೇಗಳ ಮೇಲೆ ಹದ್ದಿನ ಕಣ್ಣಿರಿಸಲು ಆರಂಭಿಸಿದೆ. ಉಡುಪಿ ಜಿಲ್ಲೆಯಲ್ಲಿ ನಡೆಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇಗಳು ಪತ್ತೆಯಾಗಿವೆ.ಇದೆ ರೀತಿ ಮಂಗಳೂರಿನಲ್ಲಿಯೂ ಅದೆಷ್ಟೋ ಅಕ್ರಮ ಹೋಂ ಸ್ಟೇಗಳಿವೆ. ಯಾವುದೇ ಕಾನೂನಿನ ಭಯವಿಲ್ಲದೆ, ಕೆಲವು ರಾಜಕೀಯ ಹಾಗೂ ಅಧಿಕಾರಿಗಳ ಪ್ರಭಾವದಿಂದ ರಾಜಾರೋಷವಾಗಿ ಅಕ್ರಮ ಹೋಂ ಸ್ಟೇಗಳು ಕಾರ್ಯಚರಿಸುತ್ತಿದೆ. ಪ್ರಮುಖವಾಗಿ ಮಂಗಳೂರು ನಗರದಲ್ಲಿ ಅಲ್ಲಲ್ಲಿ ನಾಯಿ ಕೊಡೆಗಳಂತೆ…
-

ಉಡುಪಿ: 32 ಅಕ್ರಮ ಹೋಂ ಸ್ಟೇಗಳು ಪತ್ತೆ..!! ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ
ಉಡುಪಿ: ಕೊಡಗಿನ ಹೋಂಸ್ಚೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಯ ಬಳಿಕ ರಾಜ್ಯದ ಪೊಲೀಸ್ ಇಲಾಖೆ ಹೋಂ ಸ್ಟೇಗಳ ಮೇಲೆ ಹದ್ದಿನ ಕಣ್ಣಿರಿಸಲು ಆರಂಭಿಸಿದೆ. ಮಾನ್ಯ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಅವರ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ನಡೆಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಈ 32 ಅಕ್ರಮ ಹೋಂಸ್ಟೇಗಳ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ…
-

ಉಳ್ಳಾಲ: ಮುಕ್ಕಚ್ಚೇರಿ ಕೊಲೆ ಪ್ರಕರಣ- ಆರೋಪಿಗೆ ಜೀವಾವಧಿ ಶಿಕ್ಷೆ
ಮಂಗಳೂರು: ಉಳ್ಳಾಲದ ಮುಕ್ಕಚೇರಿಯಲ್ಲಿ 2017ರ ಅ.4ರಂದು ರಾತ್ರಿ ಝುಬೇರ್ ಎಂಬವರ ಕೊಲೆ ಮತ್ತು ಇಲ್ಯಾಸ್ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮುಕ್ಕಚೇರಿಯ ಅಬ್ದುಲ್ ರಹ್ಮಾನ್ ಸುಹೇಲ್ ಎಂಬಾತನಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಝುಬೇರ್ ಮತ್ತು ಇಲ್ಯಾಸ್ ಮಾತನಾಡುತ್ತಿದ್ದ ವೇಳೆ ತಂಡವೊಂದು ಮಾರಕಾಯುಧದಿಂದ ದಾಳಿ ನಡೆಸಿ ಝುಬೇರ್‌ನನ್ನು ಕೊಲೆ ಮಾಡಿತ್ತು. ತಡೆಯಲು ಹೋದ ಇಲ್ಯಾಸ್ ನಿಗೂ ತಲವಾರಿನಿಂದ ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು. ಈ ಬಗ್ಗೆ ಅಂದಿನ ಇನ್‌ಸ್ಪೆಕ್ಟರ್ ಗೋಪಿಕೃಷ್ಣ…
-

ಸಹೋದರಿ ಮೃತಪಟ್ಟಿರುವುದನ್ನು ಸಾಬೀತುಪಡಿಸಲು ಅಸ್ಥಿಪಂಜರವನ್ನೇ ಬ್ಯಾಂಕಿಗೆ ತಂದ ವ್ಯಕ್ತಿ!
ಸಹೋದರಿ ಮೃತಪಟ್ಟಿರುವುದನ್ನು ಸಾಬೀತುಪಡಿಸಲು ಆಕೆಯ ಅಸ್ಥಿಪಂಜರವನ್ನೇ ವ್ಯಕ್ತಿಯೊಬ್ಬರು ಉರಿ ಬಿಸಿಲಿನಲ್ಲಿ 3 ಕಿಲೋಮೀಟರ್ ದೂರ ಹೊತ್ತುಕೊಂಡು ಬ್ಯಾಂಕಿಗೆ ತಂದ ವಿಲಕ್ಷಣ ಘಟನೆಯೊಂದು ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಸಂಭವಿಸಿದೆ. ಕಿಯೋಂಜಾರ್ ಜಿಲ್ಲೆಯ ಡಯಾನಾಲಿ ಗ್ರಾಮದ ಜಿತು ಮುಂಡಾ ಎಂಬವರ ಸಹೋದರಿ ಕಾಕ್ರಾ ಮುಂಡಾ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಕಾಕ್ರಾ ಅವರ ಪತಿ ಮತ್ತು ಮಗು ಮೊದಲೇ ಮೃತಪಟ್ಟಿದ್ದರಿಂದ ಜಿತು ಅವರೇ ಬದುಕುಳಿದರುವ ಏಕೈಕ ಸಂಬಂಧಿಯಾಗಿದ್ದರು. ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಜಿತು ಬ್ಯಾಂಕ್ ಮ್ಯಾನೇಜರ್ ಅವರನ್ನು…
-

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪರ್ಸ್ ಕಳವು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ನಷ್ಟ
ಬಂಟ್ವಾಳ: ಕೆ.ಎಸ್ .ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೋರ್ವರ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದು ಇರಿಸಿದ್ದ ಪರ್ಸ್ ಕಳವಾಗಿದ ಘಟನೆ ನಡೆದಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಾಗೆಕಾನ ಬಲ್ಯ ನಿವಾಸಿ ಕ್ರಿಸ್ತಿನ್ ವೇಗಸ್ ಅವರ ಪರ್ಸ್ ಕಳವಾಗಿದೆ. ಪರ್ಸ್ ನಲ್ಲಿ ಐದೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರ ಮತ್ತು ನಾಲ್ಕು ಗ್ರಾಂ ತೂಕದ ಚಿನ್ನದ ಉಂಗುರ ಒಟ್ಟು 48 ಗ್ರಾಂ ತೂಕದ ಚಿನ್ನಾಭರಣದ…
-

ಮುಂಡಗೋಡ ಭೀಕರ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸೇರಿ ಐವರ ಬಂಧನ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಜಮೀರ್ ಅಹ್ಮದ್ ದರ್ಗಾವಾಲೆ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಅಡಗಿದ್ದ ಪ್ರಮುಖ ಆರೋಪಿ ಮಂಜುನಾಥ್ ಕಾಜಗಾರ ಸೇರಿದಂತೆ ಐವರನ್ನು ಮುಂಡಗೋಡು ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಸಾಲಗಾಂವ ಗ್ರಾಮದ ಮಂಜುನಾಥ ಕಾಜಗಾರ(35), ಕೊಪ್ಪ ಇಂದಿರಾನಗರದ ಶ್ರೀಕಾಂತ ಕಿರಣ್ಣನವರ(22), ಧಾರವಾಡದ ಕೊಂಡವಾಡ ಓಣಿಯ ಮಂಜುನಾಥ ಬೆಳಗಾಂವ(20), ಧಾರವಾಡ ತಾಲ್ಲೂಕು ಹೆಬ್ಬಳ್ಳಿಯ ಅಭಿಷೇಕ ಬಡಶೆಟ್ಟಿ(22), ಧಾರವಾಡ ಮದರಮಡ್ಡಿಯ ದೀಪಕ ನವಲೆ(22) ಬಂಧಿತರು. ‘ಕೃತ್ಯಕ್ಕೆ ಬಳಸಿದ…
-

ಉಪ್ಪಿನಂಗಡಿಯಲ್ಲಿ ಆತಂಕ: ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ವ್ಯಕ್ತಿ ಸ್ಥಳೀಯರಿಂದ ಬಂಧನ
ಉಪ್ಪಿನಂಗಡಿ: ನೀರು ಕೇಳುವ ನೆಪದಲ್ಲಿ ಹಾಡಹಗಲೇ ಮನೆಗೆ ಬಂದು ಮನೆಯಲ್ಲಿ ಮಹಿಳೆಯರೇ ಇರುವುದನ್ನು ಖಚಿತಪಡಿಸಿಕೊಂಡು ಮನೆಗೆ ನುಗ್ಗಿ ಬಾಗಿಲ ಚಿಲಕ ಹಾಕಿ ಮನೆ ಮಂದಿಯನ್ನು ಭೀತಿಗೊಳಪಡಿಸಿದ್ದ ಅಪರಿಚಿತ ವ್ಯಕ್ತಿಯನ್ನು ಉಪ್ಪಿನಂಗಡಿಯ ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಇಲ್ಲಿನ ಬ್ಯಾಂಕ್ ರಸ್ತೆಯ ಬಳಿ ವೃದ್ದೆಯೋರ್ವರು ಮಾತ್ರ ಮನೆಯಲ್ಲಿದ್ದ ವೇಳೆ ನೀರು ಕೇಳುವ ನೆಪದಲ್ಲಿ ಬಂದ ವ್ಯಕ್ತಿಯು ವೃದ್ದೆ ನೀರು ತರಲೆಂದು ಅಡುಗೆ ಕೋಣೆಗೆ ಹೋದ ವೇಳೆ ನೇರವಾಗಿ ಮನೆಗೆ ನುಗ್ಗಿದವನೇ ಮನೆಯ ಬಾಗಿಲ ಚಿಲಕ ಹಾಕಿದ್ದ ಇದನ್ನು ಕಂಡು…
-

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಾರಿಕ್ ಶಿಕ್ಷೆ ಏಪ್ರಿಲ್ 27ಕ್ಕೆ ಪ್ರಕಟ
ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮೊಹಮ್ಮದ್ ಶಾರಿಕ್‌ಗೆ ಶಿಕ್ಷೆಯ ಪ್ರಮಾಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಏಪ್ರಿಲ್ 27 ರಂದು ಪ್ರಕಟಿಸಲಿದೆ. ಅಪರಾಧಿ ಸಲ್ಲಿಸಿದ್ದ ಮನವಿ ಚೌಕಾಸಿ ಅರ್ಜಿಯನ್ನು ನ್ಯಾಯಾಲಯ ಶನಿವಾರ ಸ್ವೀಕರಿಸಿದೆ. ಶನಿವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರಸನ್ನ ಕುಮಾರ್, ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಅಪರಾಧಿಗೆ ಗರಿಷ್ಠ ಶಿಕ್ಷೆಯನ್ನು ನೀಡುವಂತೆ ನ್ಯಾಯಾಧೀಶರನ್ನು ಒತ್ತಾಯಿಸಿದರು.ಮೂರು ತಿಂಗಳ ಹಿಂದೆ, ಶಾರಿಕ್ ಸ್ಫೋಟದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡು NIA ವಿಶೇಷ…
-

ಇನ್ಫೋಸಿಸ್ ಸಿಬ್ಬಂದಿಗಳೇ ಗುರಿ: ಮುಡಿಪು ಬಾಡಿಗೆ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಕಳ್ಳತನ
ಮಂಗಳೂರು : ನಗರದ ಹೊರವಲಯದ ಮುಡಿಪು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇನ್ಫೋಸಿಸ್ ಕಂಪನಿಯ ಉದ್ಯೋಗಿಗಳ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ದೋಚಿದ್ದಾರೆ. ಮುಡಿಪುವಿನ ಬಾಡಿಗೆ ಮನೆಯಲ್ಲಿ ಇನ್ಫೋಸಿಸ್ ಕಂಪನಿಯ ಹಲವು ಉದ್ಯೋಗಿಗಳು ಒಟ್ಟಾಗಿ ವಾಸವಿದ್ದರು. ಏಪ್ರಿಲ್ 24ರಂದು ಬೆಳಗಿನ ಜಾವ 2 ಗಂಟೆಯವರೆಗೆ ಕೆಲಸ ಮಾಡಿ ಉದ್ಯೋಗಿಗಳು ಮಲಗಿದ್ದರು. ಬೆಳಿಗ್ಗೆ 7 ಗಂಟೆಗೆ ಎದ್ದು ನೋಡಿದಾಗ ಮನೆಯ ಮುಂಭಾಗದ ಬಾಗಿಲು ತೆರೆದಿದ್ದು, ಕೋಣೆಯಲ್ಲಿದ್ದ ಒಟ್ಟು 9 ಲ್ಯಾಪ್‌ಟಾಪ್‌ಗಳ ಪೈಕಿ 4 ಲ್ಯಾಪ್‌ಟಾಪ್‌ಗಳು…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











