Category: ಕರಾವಳಿ

  • ಸೈಬರ್ ವಂಚಕರ ಹೊಸ ತಂತ್ರ: ಹೂಡಿಕೆ ಹೆಸರಿನಲ್ಲಿ ಹಿರಿಯಡ್ಕ ಮಹಿಳೆಗೆ ಲಕ್ಷಾಂತರ ನಷ್ಟ
    , ,

    ಸೈಬರ್ ವಂಚಕರ ಹೊಸ ತಂತ್ರ: ಹೂಡಿಕೆ ಹೆಸರಿನಲ್ಲಿ ಹಿರಿಯಡ್ಕ ಮಹಿಳೆಗೆ ಲಕ್ಷಾಂತರ ನಷ್ಟ

    ಹಿರಿಯಡ್ಕ : ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ, ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳೆದ ಎರಡು ತಿಂಗಳ ಹಿಂದೆ ಅಪರಿಚಿತರು ಸಾಮಾಜಿಕ ಜಾಲತಾಣ ಅಥವಾ ಸಂದೇಶದ ಮೂಲಕ ಸಂಪರ್ಕಿಸಿ, ‘Stake JP’ ಎಂಬ ವೆಬ್‌ಸೈಟ್ ಬಗ್ಗೆ ಮಾಹಿತಿ ನೀಡಿದ್ದರು. ಈ ವೆಬ್‌ಸೈಟ್‌ನಲ್ಲಿ ಹಣವನ್ನು ಡಿಪಾಸಿಟ್ ಮಾಡಿದರೆ ಹೆಚ್ಚಿನ ಹಣ ಬರುತ್ತದೆ ಎಂದು ನಂಬಿಕೆ ಬರುವಂತೆ ಮಾತನಾಡಿದ್ದರು.ವಂಚಕರ ಮಾತನ್ನು…

    Continue Reading

  • ದ.ಕ. ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಧನ..!!
    , ,

    ದ.ಕ. ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಧನ..!!

    ಮಂಗಳೂರು: ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್(77) ಇಂದು (ಜೂ.23) ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ಸಮಯದಿಂದ ಅನಾರೋಗಕ್ಕೀಡಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಂದು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ದೀರ್ಘಕಾಲ ಧಾರ್ಮಿಕ ಮಾರ್ಗದರ್ಶನ ನೀಡಿದ ಮುಸ್ಲಿಯಾರ್ ಅವರು ತಮ್ಮ ಜೀವನವನ್ನೆಲ್ಲಾ ಧರ್ಮ, ಶಿಕ್ಷಣ ಹಾಗೂ ಸಮಾಜ…

    Continue Reading

  • ಮದುವೆ ನಿಶ್ಚಯವಾದ ಯುವತಿಯ ಕುಟುಂಬದಲ್ಲಿ ದುರಂತ; ಮೂವರ ಆತ್ಮಹತ್ಯೆ
    , ,

    ಮದುವೆ ನಿಶ್ಚಯವಾದ ಯುವತಿಯ ಕುಟುಂಬದಲ್ಲಿ ದುರಂತ; ಮೂವರ ಆತ್ಮಹತ್ಯೆ

    ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಡೆತ್‌ನೋಟ್ ಬರೆದಿಟ್ಟು ತಂದೆ, ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ತಂದೆ ಶಿವಣ್ಣ (54), ತಾಯಿ ನಾಗರತ್ನ (44) ಹಾಗೂ ಮಗಳು ರಕ್ಷಿತಾ (21) ಆತ್ಮಹತ್ಯೆಗೆ ಶರಣಾದವರು. ಮೂವರ ಸಾವಿಗೂ ಉಲ್ಲಾಸ್ ಗೌಡ ಕಾರಣನೆಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಮೂರು ತಿಂಗಳ ಹಿಂದೆ ಮೃತ ರಕ್ಷಿತಾಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಅವರ ನಿಶ್ಚಿತಾರ್ಥದ ಸಮಯದಲ್ಲಿಯೂ ಉಲ್ಲಾಸ್ ಗೌಡ ಓಡಾಡಿಕೊಂಡಿದ್ದ. ಇದೇ ತಿಂಗಳ 23-24ರಂದು ಮದುವೆ ನಿಗದಿಯಾಗಿತ್ತು.ಆದರೆ…

    Continue Reading

  • ಕೋರ್ಟ್ ಸಂಕೀರ್ಣದಲ್ಲಿ ಬಾಂಬ್ ಶಂಕೆ; ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ
    , ,

    ಕೋರ್ಟ್ ಸಂಕೀರ್ಣದಲ್ಲಿ ಬಾಂಬ್ ಶಂಕೆ; ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

    ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ನ್ಯಾಯಾಲಯದ ಇ-ಮೇಲ್ ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಕೂಡಲೇ ಕಾರ್ಯ ಪ್ರವೃತ್ತರಾದ ಉಡುಪಿ ನಗರ ಪೊಲೀಸರು, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಆಗಮಿಸಿ ನ್ಯಾಯಾಲಯ ಸಂಕೀರ್ಣದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯದಲ್ಲಿ, ಕೋರ್ಟ್ ಆವರಣ ಹಾಗೂ ಕಟ್ಟಡದ…

    Continue Reading

  • 23 ದಿನಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಮಹೇಶ್ ತಳವಾರ್; ಕಾಲಿಗೆ ಗುಂಡು ಹಾರಿಸಿ ಸೆರೆ
    , ,

    23 ದಿನಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಮಹೇಶ್ ತಳವಾರ್; ಕಾಲಿಗೆ ಗುಂಡು ಹಾರಿಸಿ ಸೆರೆ

    ವಿಜಯಪುರ: ಭೀಮಾತೀರದಲ್ಲಿ 6 ಜನರ ಹತ್ಯೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಮುಖ್ಯ ಆರೋಪಿ ಮಹೇಶ್ ತಳವಾರ್ ಮೇಲೆ ಫೈರಿಂಗ್ ನಡೆದಿದೆ. ಕಾಲಿಗೆ ಗುಂಡು ಹಾರಿಸಿ ಚಡಚಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇಟ್ಟಿಂಗಿಹಾಳ ಗ್ರಾಮದ ಹೊರವಲಯದಲ್ಲಿ ಮಹೇಶ್ ಕಾಲಿಗೆ ಫೈರಿಂಗ್ ಮಾಡಲಾಗಿದೆ. ಮಹೇಶನನ್ನ ಬಂಧಿಸಲು ಹೋದಾಗ ಓಡಿ ಹೋಗಲು ಯತ್ನಿಸಿದ ಮಹೇಶ್ ತಳವಾರ್ ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ಮೇಲೆ ಕೂಡ ದಾಳಿಗೆ ಯತ್ನಿಸಿದ್ದಾನೆ. ಆಗ ಎರಡು…

    Continue Reading

  • ಮಂಗಳೂರು ವಕೀಲರ ಸಂಘದ ಪದಗ್ರಹಣ ಸಮಾರಂಭ: ನೂತನ ಅಧ್ಯಕ್ಷರಾಗಿ ಶ್ರೀ ಜಗದೀಶ್ ಕೆ. ಶೇಣವ ಅಧಿಕಾರ ಸ್ವೀಕಾರ
    ,

    ಮಂಗಳೂರು ವಕೀಲರ ಸಂಘದ ಪದಗ್ರಹಣ ಸಮಾರಂಭ: ನೂತನ ಅಧ್ಯಕ್ಷರಾಗಿ ಶ್ರೀ ಜಗದೀಶ್ ಕೆ. ಶೇಣವ ಅಧಿಕಾರ ಸ್ವೀಕಾರ

    ಮಂಗಳೂರು: ಮಂಗಳೂರು ವಕೀಲರ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಮಂಗಳೂರು ನ್ಯಾಯಾಲಯದ ಹಳೆಯ ಕಟ್ಟಡದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಸವರಾಜ್ ಅವರು ವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಅಡಿಷನಲ್ ಅಡ್ವಕೇಟ್ ಜನರಲ್ ಡಾ. ಅರುಣ್ ಶ್ಯಾಮ್ ಮತ್ತು ಕರ್ನಾಟಕ ವಕೀಲ ಪರಿಷತ್ತಿನ ನೂತನ ಸದಸ್ಯರು ಹಾಗೂ ಹೈಕೋರ್ಟ್‌ನ ಹಿರಿಯ ವಕೀಲರಾದ ಶ್ರೀ ಪದ್ಮಪ್ರಸಾದ್…

    Continue Reading

  • ಫುಟ್‌ಪಾತ್ ವ್ಯಾಪಾರಿಗಳ ಮೇಲೆ ಪಾಲಿಕೆ ದಾಳಿ: ‘ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯವೇ?
    , ,

    ಫುಟ್‌ಪಾತ್ ವ್ಯಾಪಾರಿಗಳ ಮೇಲೆ ಪಾಲಿಕೆ ದಾಳಿ: ‘ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯವೇ?

    ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ವ್ಯಾಪಾರವನ್ನು ಮಹಾನಗರ ಪಾಲಿಕೆ ತೆರವುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಹಾನಗರ ಪಾಲಿಕೆ ತೆರವುಗೊಳಿಸುತ್ತಿರುವುದು ಕೇವಲ ಬಡವರ, ಅಂಗವಿಕಲರ ಹಾಗೂ ಊಟಕ್ಕಾಗಿ ವ್ಯಾಪಾರವನ್ನು ಅವಲಂಬಿಸಿರುವರದ್ದನ್ನೇ.ಯಾಕೆಂದರೆ ಅವರಿಗೆ ಯಾವುದೇ ರಾಜಕೀಯ ಇನ್ಫ್ಲುಯೆನ್ಸ್ ಇಲ್ಲ ಹಾಗೂ ಹಣದ ಬಲವೂ ಇಲ್ಲ. ಇದೇ ವೇಳೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿವೆ.ಕಟ್ಟಡ ಪರವಾನಿಗೆ ರೂಲ್ಸ್ ಬ್ರೇಕ್ ಮಾಡಿ ಫುಟ್‌ಪಾತ್‌ನಲ್ಲಿ ಬಿಲ್ಡಿಂಗ್‌ಗಳನ್ನು, ಮಾರ್ಕೆಟ್ ರೋಡ್ಗಳಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಈ ವಿಚಾರಗಳು ಮಹಾನಗರ ಪಾಲಿಕೆ ಕಮಿಷನರ್…

    Continue Reading

  • ಮದುವೆ ಸಂಭ್ರಮಕ್ಕೆ ಹೊರಟಿದ್ದ ಯುವಕನಿಗೆ ದುರಂತ ಅಂತ್ಯ: ಅಪಘಾತದಲ್ಲಿ ಸಾವು
    , ,

    ಮದುವೆ ಸಂಭ್ರಮಕ್ಕೆ ಹೊರಟಿದ್ದ ಯುವಕನಿಗೆ ದುರಂತ ಅಂತ್ಯ: ಅಪಘಾತದಲ್ಲಿ ಸಾವು

    ಕಾಸರಗೋಡು: ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ತೋಕೆ ನಿವಾಸಿ ಯುವಕನೋರ್ವ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಮೃತರನ್ನು ತೋಕೆ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಬದ್ರುಲ್ ಹಫೀಝ್(24) ಎಂದು ಗುರುತಿಸಲಾಗಿದೆ.ಮಲಪ್ಪುರಂನಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದ ಹಫೀಝ್, ಸೋಮವಾರ ನಡೆಯಲಿರುವ ಕುಟುಂಬದ ಮದುವೆಯೊಂದರಲ್ಲಿ ಭಾಗಿಯಾಗುವ ಉದ್ದೇಶದಿಂದ ಶನಿವಾರ ಬೈಕಿನಲ್ಲಿ ಊರಿಗೆ ಹೊರಟಿದ್ದರು. ಈ ಸಂದರ್ಭ ಬೈಕ್ ಸ್ಕಿಡ್ ಆಗಿ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಹಫೀಝ್…

    Continue Reading

  • ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಆರೋಪ; ತಾಯಿಯ ಆತ್ಮಹತ್ಯೆಯಿಂದ ಪ್ರಕರಣಕ್ಕೆ ವಿಷಾದಕರ ತಿರುವು
    , ,

    ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಆರೋಪ; ತಾಯಿಯ ಆತ್ಮಹತ್ಯೆಯಿಂದ ಪ್ರಕರಣಕ್ಕೆ ವಿಷಾದಕರ ತಿರುವು

    ಬೆಳಗಾವಿ : ಎರಡು ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಮಾಜಿ ಸೈನಿಕನನ್ನೇ ಕೊಲೆ ಮಾಡಿದ್ದ ಪತ್ನಿಯ ಕೃತ್ಯಕ್ಕೆ ಮನನೊಂದು, ಆಕೆಯ ತಾಯಿ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ನಡೆದಿದೆ.ಮಾಜಿ ಯೋಧ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಮಾ ಮಂಜರಗಿ ಅವರ ತಾಯಿ ಮಹಾದೇವಿ ಬದಾಮಿ (57) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಗಳು ಪೊಲೀಸರಿಂದ ಬಂಧನಕ್ಕೊಳಗಾಗುತ್ತಿದ್ದಂತೆ ತೀವ್ರ ಆಘಾತಕ್ಕೊಳಗಾಗಿದ್ದ ಮಹಾದೇವಿ ಅವರು, ಮರ್ಯಾದೆಗೆ…

    Continue Reading

  • ಕೆರೆಗೆ ಬಿದ್ದು ಅವಳಿ ಸಹೋದರರ ದಾರುಣ ಸಾವು – ಆಟವಾಡುತ್ತಿದ್ದ ವೇಳೆ ದುರ್ಘಟನೆ
    ,

    ಕೆರೆಗೆ ಬಿದ್ದು ಅವಳಿ ಸಹೋದರರ ದಾರುಣ ಸಾವು – ಆಟವಾಡುತ್ತಿದ್ದ ವೇಳೆ ದುರ್ಘಟನೆ

    ಸುಳ್ಯ: ಮನೆಯ ಸಮೀಪದ ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತಪಟ್ಟ ಘಟನೆ ಸುಳ್ಯ ಸಮೀಪದ ಮುರುಳ್ಯ ಗ್ರಾಮದ ಕಡೀರದಲ್ಲಿ ವರದಿಯಾಗಿದೆ.ಕಡೀರ ನಿವಾಸಿ ವೆಲ್ಡಿಂಗ್ ಕೆಲಸ ಮಾಡುವ ವಸಂತ ಎಂಬವರ ಮಕ್ಕಳಾದ ಯಶ್ವಿನ್ ಹಾಗೂ ಜಶ್ವಿನ್ ಮೃತರು ಎಂದು ತಿಳಿದು ಬಂದಿದೆ. ಮಕ್ಕಳು ಆಟ ವಾಡುತ್ತಿದ್ದಾಗ ಮನೆ ಸಮೀಪದ ಕೆರೆಗೆ ಬಿದ್ದರೆಂದೂ ತಿಳಿದು ಬಂದಿದೆ. ಇದೀಗ ಮೃತದೇಹ ಮೇಲೆತ್ತಿರುವುದಾಗಿ ತಿಳಿದುಬಂದಿದೆ.

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed