Category: ಕರಾವಳಿ
-

ಎರಡು ವರ್ಷದ ಮಗು ಅನಾಥ: ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣಾದ ಶಂಕೆ
ಕಡಬ: ಪತ್ನಿಯನ್ನು ಕೊಂದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಮಧ್ಯಾಹ್ನ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಕಜೆಯಲ್ಲಿ ನಡೆದಿದೆ.ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಬಜಗೋಳಿಯ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಪತ್ನಿಯನ್ನು ಕೊಂದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ದಂಪತಿ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದರು.ಒಂದು ತಿಂಗಳ ಹಿಂದೆ ಆಲಂಕಾರು ಪೇಟೆಯ ಹೋಟೆಲ್ ಬಿಟ್ಟು ತೆರಳಿದ್ದ ಈ…
-

ಕುಂಬಳೆ ಸಮೀಪ ಕಟ್ಟಡ ಕಾಮಗಾರಿಯಲ್ಲಿ ದುರಂತ; 47 ವರ್ಷದ ಕಾರ್ಮಿಕ ಮೃತ್ಯು
ಕುಂಬಳೆ: ನಿರ್ಮಾಣ ಹಂತದಲ್ಲಿದ್ದ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಕಾಸರಗೋಡಿನ ಕುಂಬಳೆ ಸಮೀಪದ ನಾಯ್ಕಾಪುವಿನಲ್ಲಿ ನಡೆದಿದೆ. ಬೇಳ ಕೊಳಂಬೆ ಯ ಫ್ರಾನ್ಸಿಸ್ ಡಿ’ಸೋಜ (47) ಮೃತರು.ನಾಯ್ಕಾಪು ಮುಂಜಾಂಗಾವು ಎಂಬಲ್ಲಿ ಮನೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಫ್ರಾನ್ಸಿಸ್ ರವರನ್ನು ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
-

ಕರಾವಳಿಯ ಹೆಗ್ಗುರುತು ಅಂತ್ಯ: ಇತಿಹಾಸ ಸೇರಲಿರುವ ಕಡಲತೀರದ ಭಗವತಿ ಪ್ರೇಮ್ ಹಡಗು
ಸುರತ್ಕಲ್: ಸುರತ್ಕಲ್‌ನ ಗುಡ್ಡೆಕೊಪ್ಲ ಕಡಲತೀರದಲ್ಲಿ ಕಳೆದ ಕೆಲವು ವರ್ಷಗಳಿಂದ ಬಂದು ನಿಂತಿದ್ದ “ಭಗವತಿ ಪ್ರೇಮ್” ಎಂಬ ಬೃಹತ್ ಗಾತ್ರದ ಡ್ರೆಡ್ಜರ್ ಹಡಗನ್ನು ಕತ್ತರಿಸಿ ಒಡೆಯುವ ಕಾರ್ಯ ಭರದಿಂದ ಸಾಗಿದ್ದು, ಇಷ್ಟು ದಿನ ಪ್ರವಾಸಿಗರ ಗಮನ ಸೆಳೆಯುತ್ತಿದ್ದ ಕರಾವಳಿಯ ಪ್ರಸಿದ್ಧ ಸೆಲ್ಫಿ ಪಾಯಿಂಟ್ ಇನ್ಮುಂದೆ ಮಾಯವಾಗಲಿದೆ.ಕೆಲವು ವರ್ಷಗಳ ಹಿಂದೆ ಮಳೆಗಾಲದ ಭೀಕರ ಗಾಳಿ-ಮಳೆಗೆ ಸಿಲುಕಿ ಎನ್‌ಎಂಪಿಟಿ (NMPT) ಬಂದರಿನಲ್ಲಿ ಲಂಗರು ಹಾಕಿದ್ದ ಈ ಡ್ರೆಡ್ಜರ್ ಹಡಗು, ಆ್ಯಂಕರ್ ಕಿತ್ತುಕೊಂಡು ಬಂದು ಸುರತ್ಕಲ್‌ನ ಗುಡ್ಡೆಕೊಪ್ಲ ತೀರದಲ್ಲಿ ಹೂತುಕೊಂಡಿತ್ತು. ತಾಂತ್ರಿಕ ಕಾರಣಗಳಿಂದಾಗಿ…
-

ಮಂಗಳೂರು: ಕಲುಷಿತ ನೀರು ದೂರು ಬೆನ್ನಲ್ಲೇ ಪೈಪ್‌ಲೈನ್ ಸೋರಿಕೆ ಪತ್ತೆ, ದುರಸ್ತಿ ಮಾಡಿದ ಎಂಸಿಸಿ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ವ್ಯಾಪ್ತಿಯ ನಿವಾಸಿಗಳಿಗೆ ಪೂರೈಸಲಾಗುವ ಕುಡಿಯುವ ನೀರನ್ನು ಶುದ್ಧೀಕರಣ ಘಟಕಗಳಲ್ಲಿ ಸಂಸ್ಕರಿಸಿದ ಬಳಿಕವೇ ಮನೆಗಳಿಗೆ ಸರಬರಾಜು ಮಾಡಲಾಗುತ್ತದೆ. ರಿನ ಸುರಕ್ಷತೆ ಮತ್ತು ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವಾರ್ಡ್ಗಳಲ್ಲಿ ಕಾಲಕಾಲಕ್ಕೆ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ ಎಂದು ಎಂಸಿಸಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಾರ್ಡ್ ನಂ. 31ರ ಭಟ್ಟಗುಡ್ಡ 5ನೇ ಕ್ರಾಸ್ ರಸ್ತೆಯ ಕೆಲವು ಮನೆಗಳಿಗೆ ಕಲುಷಿತ ನೀರು ಸರಬರಾಜಾಗುತ್ತಿದೆ ಎಂಬ ದೂರುಗಳು ಎಂಸಿಸಿಗೆ ಬಂದಿದ್ದವು. ಈ ದೂರುಗಳ ಹಿನ್ನೆಲೆಯಲ್ಲಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ…
-

ಪ್ರಿಸ್ಕೂಲ್‌ನಿಂದ ಹೊರಬಂದು ಲಾರಿ ಅಡಿಗೆ ಬೀಳಲಿದ್ದ 2.5 ವರ್ಷದ ಬಾಲಕ -ಕೂದಲೆಳೆಯ ಅಂತರದಲ್ಲಿ ಪಾರು
ಅಲುವಾ: ಪ್ರಿಸ್ಕೂಲ್ ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಎರಡೂವರೆ ವರ್ಷದ ಬಾಲಕನೊಬ್ಬ ಜನನಿಬಿಡ ರಸ್ತೆಗೆ ನಡೆದುಕೊಂಡು ಬಂದು, ಮಿನಿ ಲಾರಿಯೊಂದರ ಅಡಿಗೆ ಬೀಳುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ನಾಟಕೀಯ ಘಟನೆ ಕೇರಳದ ಅಲುವಾ ಸಮೀಪದ ಎಡಯಪ್ಪುರಂನಲ್ಲಿ ನಡೆದಿದೆ. ಈ ಇಡೀ ಘಟನೆ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಕ್ಕಳ ಸುರಕ್ಷತೆಯ ಕುರಿತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.ಇಲ್ಲಿನ ಸ್ಥಳೀಯ ಪ್ರಿಸ್ಕೂಲ್ ಒಂದರಲ್ಲಿ ಎಂದಿನಂತೆ ಮಗು ಇತ್ತು. ಆದರೆ ಶಾಲೆಯ ಆವರಣದಲ್ಲಿ ಪೇಂಟಿಂಗ್ (ಬಣ್ಣ ಬಳಿಯುವ) ಕೆಲಸ ನಡೆಯುತ್ತಿದ್ದ ಕಾರಣ ಮುಖ್ಯ…
-

ಪೊಲೀಸರೆಂದು ನಂಬಿಸಿ ₹20 ಲಕ್ಷ ದೋಚಿದ ಗ್ಯಾಂಗ್; ಸೂತ್ರಧಾರ ಸಿಐಡಿ ಇನ್ಸ್‌ಪೆಕ್ಟರ್
ಬೆಂಗಳೂರು: ಬೆಂಗಳೂರಿನಲ್ಲಿ ರಕ್ಷಕರೇ ಭಕ್ಷಕರಾದ ಆಘಾತಕಾರಿ ಘಟನೆಯೊಂದು ನಡೆದಿದೆ. ಸಿಐಡಿ ವಿಭಾಗದ ಇನ್ಸ್‌ಪೆಕ್ಟರ್ ಒಬ್ಬರು ಸ್ವತಃ ತಾವೇ ಗ್ಯಾಂಗ್ ಕಟ್ಟಿಕೊಂಡು, ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕೇರಳ ಮೂಲದ ವ್ಯಕ್ತಿಗಳನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಸಿಐಡಿ ಇನ್ಸ್‌ಪೆಕ್ಟರ್ ದರೋಡೆಯ ಮಾಸ್ಟರ್ ಮೈಂಡ್ ಆಗಿದ್ದು, ಸದ್ಯ ಪೊಲೀಸರ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾರೆ. ಈ ಕುರಿತು ನಗರ ಪೊಲೀಸ್ ಆಯುಕ್ತ (CP) ಸಿಮಂತ್ ಕುಮಾರ್ ಅವರು ಅಧಿಕೃತ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಪಾತ್ರ ಇರುವುದು…
-

ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಯುವಕ ಅಹ್ಮದ್ ಅಸೀರ್ ನಿಧನ
ಬಂಟ್ವಾಳ : ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಜಿಪನಡು ಸಮೀಪದ ದೇರಾಜೆ ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಸಜಿಪನಡು ಸಮೀಪದ ಮಡ್ಯಲಚ್ಚಿಲ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಹ್ಮದ್ ಅಸೀರ್ (22) ಮೃತಪಟ್ಟ ದುರ್ದೈವಿ ಸವಾರ. ಗುರುವಾರ ಸಂಜೆ ವೇಳೆ ಅಹ್ಮದ್ ಅಸೀರ್ ಅವರು ತಮ್ಮ ಆಕ್ಟಿವಾ ಸ್ಕೂಟರ್‌ನಲ್ಲಿ ಸಜಿಪ ಕಡೆಯಿಂದ ಬೇಂಕೆ ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ದೇರಾಜೆ ತಲುಪುತ್ತಿದ್ದಂತೆ ಎದುರಿನಿಂದ ಅತಿ…
-

ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ: 13 ವರ್ಷಗಳ ಬಳಿಕ ಆರೋಪಿಯ ಬಂಧನ
ಉಡುಪಿ: ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮತ್ತು ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೀಡಗಾನಹಳ್ಳಿ ಗ್ರಾಮದ ನಿವಾಸಿ ಮಧು ಅಲಿಯಾಸ್ ಉಮೇಶ್ ಎಂದು ಗುರುತಿಸಲಾಗಿದೆ.ಅಂಬಲಪಾಡಿಯ ಕಪ್ಪೆಟ್ಟು ಸಮೀಪದ ದೇವಸ್ಥಾನವೊಂದರ ಹುಂಡಿಯಿಂದ ಹಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.ಮಲ್ಪೆ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ, ವಾರಂಟ್ ವಿಭಾಗದ ಸಿಬ್ಬಂದಿಗಳಾದ…
-

ಉಡುಪಿ ನಗರಸಭೆಗೆ ಲೋಕಾಯುಕ್ತ ದಿಢೀರ್ ದಾಳಿ: ಬಾಕಿ ಅರ್ಜಿಗಳ ಬಗ್ಗೆ ಅಧಿಕಾರಿಗಳಿಗೆ ಶಾಕ್
ಉಡುಪಿ: ಸಾರ್ವಜನಿಕ ಅರ್ಜಿಗಳನ್ನು ದೀರ್ಘಕಾಲದವರೆಗೆ ವಿಲೇವಾರಿ ಮಾಡದೆ ಬಾಕಿ ಇರಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಗುರುವಾರ ಉಡುಪಿ ನಗರ ಪುರಸಭೆ (ಸಿಎಂಸಿ) ಕಚೇರಿಯಲ್ಲಿ ದಿಢೀರ್ ದಾಳಿ ನಡೆಸಿದರು.ಉಡುಪಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜುನಾಥ್ ಮತ್ತು ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯ ನೇತೃತ್ವವಹಿಸಿದ್ದರು. ಪರಿಶೀಲನೆಯ ಸಮಯದಲ್ಲಿ, ತಂಡವು ಪುರಸಭೆಯ ಕಚೇರಿಯ ವಿವಿಧ ಪ್ರಮುಖ ವಿಭಾಗಗಳು ಮತ್ತು ಇಲಾಖೆಗಳಿಗೆ ಭೇಟಿ ನೀಡಿ ಬಾಕಿ ಇರುವ ಸಾರ್ವಜನಿಕ ಅರ್ಜಿಗಳ ಸ್ಥಿತಿ, ಕಡತ ವಿಲೇವಾರಿಯ ವೇಗ ಮತ್ತು ಒಟ್ಟಾರೆ ಆಡಳಿತಾತ್ಮಕ…
-

ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಎಲ್ಲಾ ಕಾರ್ಯನಿರ್ವಾಹಕ ( Filed officer) ಅಧಿಕಾರಿಗಳು ಚಲನ ವಲನ ವಹಿಯಲ್ಲಿ ದಾಖಲಿಸಬೇಕು
ಮಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನೌಕರರು ಕಚೇರಿಗೆ ಗೈರಾಗಿದ್ದರೂ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ಪದ್ಧತಿಗೆ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ. ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಎಲ್ಲಾ ಕಾರ್ಯನಿರ್ವಾಹಕ ( Filed officer) ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚಲನ ವಲನ ವಹಿಯಲ್ಲಿ ದಾಖಲಿಸಬೇಕು. ಕಛೇರಿಗೆ ಪ್ರವೇಶಿಸುವಾಗ ಮತ್ತು ಹೊರಗಡೆ ತೆರಲುವಾಗ ಮತ್ತೆ ಕಛೇರಿಗೆ ಭೇಟಿ ನೀಡಿದಾಗ ತಮ್ಮಲ್ಲಿ ಎಷ್ಟು ಮೊತ್ತವಿದೆ ಎಂದು ತಿಳಿಯಲು…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











