Category: ಕರಾವಳಿ

  • ಉಡುಪಿ : ಕ್ರಿಕೆಟ್‌ ಬೆಟ್ಟಿಂಗ್‌ ಆರೋಪಿ ಭರತ್‌ ಜಯರಾಮ್‌ ದಾಸ್‌ಗೆ ಗಡಿಪಾರು ಆದೇಶ
    ,

    ಉಡುಪಿ : ಕ್ರಿಕೆಟ್‌ ಬೆಟ್ಟಿಂಗ್‌ ಆರೋಪಿ ಭರತ್‌ ಜಯರಾಮ್‌ ದಾಸ್‌ಗೆ ಗಡಿಪಾರು ಆದೇಶ

    ಉಡುಪಿ: ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮೂಡುಬಿರ್ತಿ ನಿವಾಸಿ ಭರತ್‌ ಜಯರಾಮ್‌ ದಾಸ್‌ (34) ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ಗಡಿಪಾರು ಆದೇಶ ಜಾರಿಗೊಳಿಸಿದೆ. ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಹಾಗೂ ವಿಶೇಷ ಕಾರ್ಯಾಂಗ ದಂಡಾಧಿಕಾರಿಗಳು ಮೇ 14ರಂದು ಈ ಆದೇಶ ಹೊರಡಿಸಿದ್ದು, ಆರೋಪಿಯನ್ನು ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಭರತ್‌ ಜಯರಾಮ್‌ ದಾಸ್‌ ವಿರುದ್ಧ ಕೋಟ ಮತ್ತು ಕುಂದಾಪುರ ಪೊಲೀಸ್‌ ಠಾಣೆಗಳಲ್ಲಿ…

    Continue Reading

  • ಸುರತ್ಕಲ್‌ನಲ್ಲಿ ರೌಡಿಶೀಟರ್‌ಗಳ ಮಧ್ಯೆ ರಸ್ತೆ ಮಧ್ಯೆ ಹೊಡೆದಾಟ
    ,

    ಸುರತ್ಕಲ್‌ನಲ್ಲಿ ರೌಡಿಶೀಟರ್‌ಗಳ ಮಧ್ಯೆ ರಸ್ತೆ ಮಧ್ಯೆ ಹೊಡೆದಾಟ

    ಸುರತ್ಕಲ್ : ಸುಭಾಷಿತನಗರದ ಬಂಟರ ಭವನದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಟ ನಡೆಸಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಮಾಡಿದ ಆರೋಪದ ಮೇಲೆ ಇಬ್ಬರು ಸಕ್ರಿಯ ರೌಡಿಶೀಟರ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೋಡಿಕೆರೆ ಲೋಕೇಶ್‌ನ ಸಹಚರ ವಿಶ್ವ ಅಲಿಯಾಸ್ ವಿಶ್ವನಾಥ (43) ಮತ್ತು ದಿನೇಶ್ ಆರ್. ಶೆಟ್ಟಿ ಮುಂಚೂರು (36) ಪ್ರಕರಣ ದಾಖಲಾದ ರೌಡಿಶೀಟರ್‌ಗಳು. ಈ ಇಬ್ಬರೂ ಸುರತ್ಕಲ್ ಪೊಲೀಸ್ ಠಾಣೆಯ ಸಕ್ರಿಯ ರೌಡಿಶೀಟರ್ ಪಟ್ಟಿಯಲ್ಲಿದ್ದು, ಇವರ ವಿರುದ್ಧ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ…

    Continue Reading

  • ನಕಲಿ ಪಾಸ್‌ಪೋರ್ಟ್ ಮೂಲಕ ಇಸ್ರೇಲ್‌ಗೆ ಹಾರಿದ ಮಹಿಳೆ: ಮಂಗಳೂರಿನಲ್ಲಿ ಅಕ್ರಮ ಜಾಲ ಬಯಲು
    , ,

    ನಕಲಿ ಪಾಸ್‌ಪೋರ್ಟ್ ಮೂಲಕ ಇಸ್ರೇಲ್‌ಗೆ ಹಾರಿದ ಮಹಿಳೆ: ಮಂಗಳೂರಿನಲ್ಲಿ ಅಕ್ರಮ ಜಾಲ ಬಯಲು

    ಮಂಗಳೂರು: ಬೇರೊಬ್ಬರ ಅಧಿಕೃತ ದಾಖಲೆಗಳನ್ನು ಬಳಸಿ ನಕಲಿ ಪಾಸ್‌ಪೋರ್ಟ್ ಸೃಷ್ಟಿಸಿ, ಅಕ್ರಮವಾಗಿ ವಿದೇಶಕ್ಕೆ ತೆರಳಿದ ಪ್ರಕರಣವೊಂದನ್ನು ಮಂಗಳೂರು ನಗರದ ಸಿ.ಎಸ್.ಬಿ. ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಪ್ರೀತಾ ಡಿ ಸೋಜಾ ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ನಡೆದಿದ್ದೇನು?: ಉಳ್ಳಾಲ ಬೈಲ್ ನಿವಾಸಿ ಯಶೋಧ ಕೇಶವ ಎಂಬುವವರ ಹೆಸರಿನಲ್ಲಿ ಅನ್ಯ ಮಹಿಳೆಯೊಬ್ಬರು ಪಾಸ್‌ಪೋರ್ಟ್ (ನಂ. ಸಿ4042172) ಹೊಂದಿ ವಿದೇಶಕ್ಕೆ ಪ್ರಯಾಣಿಸಿರುವ ಬಗ್ಗೆ ಪೊಲೀಸರಿಗೆ ಗೌಪ್ಯ ಮಾಹಿತಿ ಲಭಿಸಿತ್ತು. ಪಾಸ್‌ಪೋರ್ಟ್ ಅರ್ಜಿಯನ್ನು (BNX067061521924) ಕೂಲಂಕಷವಾಗಿ ಪರಿಶೀಲಿಸಿದಾಗ,…

    Continue Reading

  • ತಲಪಾಡಿ ಟೋಲ್ ಗೇಟ್ ನಲ್ಲಿ ಗಂಟೆ ಗಟ್ಟಲೆ ವಾಹನಗಳ ಸರಣಿ ಸಾಲು- ಅಧಿಕಾರಿಗಳ ನಿರ್ಲಕ್ಷ
    ,

    ತಲಪಾಡಿ ಟೋಲ್ ಗೇಟ್ ನಲ್ಲಿ ಗಂಟೆ ಗಟ್ಟಲೆ ವಾಹನಗಳ ಸರಣಿ ಸಾಲು- ಅಧಿಕಾರಿಗಳ ನಿರ್ಲಕ್ಷ

    ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಟೋಲ್ ಗೇಟ್ ಇದೀಗ ಟೋಲ್ ವಸೂಲಿ ಕೇಂದ್ರಕ್ಕಿಂತ ವಾಹನ ಸವಾರರಿಗೆ ಹಿಂಸೆ ನೀಡುವ ಸ್ಥಳವಾಗಿದೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳ ಪ್ರಕಾರ, ಟೋಲ್ ಪ್ಲಾಜಾದಲ್ಲಿ ಒಂದು ವಾಹನವು ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ವಾಹನವನ್ನು ಉಚಿತವಾಗಿ ಬಿಡಬೇಕಾಗಿದೆ. ಆದರೆ ತಲಪಾಡಿ ಟೋಲ್ ಗೇಟ್‌ನಲ್ಲಿ ಈ ನಿಯಮಗಳು ಕೇವಲ ಕಾಗದದಲ್ಲೇ ಉಳಿದಿವೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪ್ರಶ್ನೆ ಏನೆಂದರೆ —ವಾಹನಗಳು…

    Continue Reading

  • ಮುಲ್ಕಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ವಿದ್ಯಾರ್ಥಿನಿ ಸೇರಿ ಹೈಡ್ರೊವಿಡ ಗಾಂಜಾ ಜಪ್ತಿ
    ,

    ಮುಲ್ಕಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ವಿದ್ಯಾರ್ಥಿನಿ ಸೇರಿ ಹೈಡ್ರೊವಿಡ ಗಾಂಜಾ ಜಪ್ತಿ

    ಮಂಗಳೂರು: ಗಾಂಜಾ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿತೆಯನ್ನು ಮಂಗಳೂರು ನಗರದ ಮುಲ್ಕಿ ಪೊಲೀಸರು ಬಂಧಿಸಿ 35,00,000 ರೂ. ಮೌಲ್ಯದ ಸುಮಾರು 1 ಕೆಜಿ 42 ಗ್ರಾಮ್ ಹೈಡ್ರೊವಿಡ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಶಿವಮೋಗ್ಗದ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ ಸುಹಾನ (21) ಬಂಧಿತ ಆರೋಪಿತೆ. ಬಂಧಿತೆ ಕುಂದಾಪುರ ಕಾಲೇಜೊಂದರ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ.ಮಂಗಳವಾರ ಮುಲ್ಕಿ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಹೈಡ್ರೊವಿಡ ಗಾಂಜಾ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಸಾಗಾಟ…

    Continue Reading

  • ಮಂಗಳೂರಿನಲ್ಲಿ ವಕೀಲರಿಗೆ ಬೆದರಿಕೆ ಹಾಗೂ ಹಲ್ಲೆ ಯತ್ನ: ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು
    , ,

    ಮಂಗಳೂರಿನಲ್ಲಿ ವಕೀಲರಿಗೆ ಬೆದರಿಕೆ ಹಾಗೂ ಹಲ್ಲೆ ಯತ್ನ: ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು

    ಮಂಗಳೂರು: ತನ್ನ ಕಕ್ಷಿದಾರೆಯ ಪತಿಯ ವಿರುದ್ಧ ಕಳೆದ 9 ವರ್ಷಗಳಿಂದ ನಡೆಯುತ್ತಿರುವ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ಪ್ರಕರಣದಲ್ಲಿ ಕಾನೂನು ಸಹಾಯ ಪಡೆಯಲು ನ್ಯಾಯವಾದಿ ಜೀಶನ್ ಅಲಿ ಅವರನ್ನು ಮಹಿಳೆ ಸಂಪರ್ಕಿಸಿದ್ದ ಘಟನೆಗೆ ಸಂಬಂಧಿಸಿದಂತೆ, ಇದೀಗ ನ್ಯಾಯವಾದಿಯ ಮೇಲೆಯೇ ಹಲ್ಲೆ ಯತ್ನ ನಡೆದಿರುವ ಆರೋಪ ಕೇಳಿಬಂದಿದೆ. ದಿನಾಂಕ 11-05-2026ರಂದು ಸಂಜೆ ಸುಮಾರು 7 ಗಂಟೆಯ ವೇಳೆಗೆ, ನ್ಯಾಯವಾದಿ ಜೀಶನ್ ಅಲಿ ಅವರು ತಮ್ಮ ವೃತ್ತಿ ಕಾರ್ಯ ಮುಗಿಸಿ ಅತ್ತಾವರ ಪ್ರದೇಶದ ಮೂಲಕ ಮನೆಗೆ ತೆರಳುತ್ತಿದ್ದ ವೇಳೆ, ಆರೋಪಿ…

    Continue Reading

  • ಪ್ರಧಾನಿ ಮೋದಿ ಭೇಟಿ ವೇಳೆ ಭದ್ರತಾ ಅಲರ್ಟ್: ರಾಮನಗರದಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆ, ತನಿಖೆ ತೀವ್ರ
    ,

    ಪ್ರಧಾನಿ ಮೋದಿ ಭೇಟಿ ವೇಳೆ ಭದ್ರತಾ ಅಲರ್ಟ್: ರಾಮನಗರದಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆ, ತನಿಖೆ ತೀವ್ರ

    ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರೀ ಭದ್ರತಾ ಲೋಪದ ಶಂಕೆ ವ್ಯಕ್ತವಾಗಿತ್ತು. ಮೋದಿ ಅವರು ಸಂಚರಿಸುವ ಮಾರ್ಗದ ಪಕ್ಕದಲ್ಲೇ ಸ್ಫೋಟಕಗಳು ಪತ್ತೆಯಾಗಿದ್ದು, ಇಡೀ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿತ್ತು. ಏನಾಗಿತ್ತು? ನಿನ್ನೆ (ಮೇ 10) ಪ್ರಧಾನಿ ಮೋದಿ ಅವರು ‘ಆರ್ಟ್ ಆಫ್ ಲಿವಿಂಗ್’ ಆಶ್ರಮಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಅವರು ಬರುವ ಕೇವಲ ಎರಡು ಗಂಟೆಗಳ ಮೊದಲು, ಅಂದರೆ ಬೆಳಿಗ್ಗೆ 9 ಗಂಟೆ ವೇಳೆಗೆ, ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಸಮೀಪ…

    Continue Reading

  • ಅಕ್ರಮ ಮರಳುದಂಧೆ ಪತ್ತೆ: 50-60 ಮೆಟ್ರಿಕ್ ಟನ್ ಮರಳು ವಶ- ಪ್ರಕರಣ ದಾಖಲು
    ,

    ಅಕ್ರಮ ಮರಳುದಂಧೆ ಪತ್ತೆ: 50-60 ಮೆಟ್ರಿಕ್ ಟನ್ ಮರಳು ವಶ- ಪ್ರಕರಣ ದಾಖಲು

    ಅಕ್ರಮವಾಗಿ ನದಿಯಿಂದ ಮರಳು ಕದ್ದು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಸುಳ್ಯ ಪೊಲೀಸ್ ಠಾಣೆ ಪೊಲೀಸರು ಪತ್ತೆಹಚ್ಚಿದ್ದು, ಸುಮಾರು 50-60 ಮೆಟ್ರಿಕ್ ಟನ್ ತೂಕದ ಮರಳನ್ನು ವಶಪಡಿಸಿಕೊಂಡಿದ್ದಾರೆ. ಮೇ 8ರಂದು ಬೆಳಿಗ್ಗೆ ತೋಡಿಕಾನ ಗ್ರಾಮದ ಶೆಟ್ಟಿಯಡ್ಕ ಪ್ರದೇಶದಲ್ಲಿ ಮನು ಪೆರ್ಮುಡ ಹಾಗೂ ಚೆಂಬು ಗ್ರಾಮದ ಆ್ಯಂಟನಿ ಎಂಬವರು ಕಾನೂನು ಬಾಹಿರವಾಗಿ ನದಿಯಿಂದ ಮರಳು ತೆಗೆಯಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ಮೇರೆಗೆ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ. ನೇತೃತ್ವದಲ್ಲಿ ಸುಳ್ಯ ಠಾಣೆಯ…

    Continue Reading

  • ಇನ್‌ಸ್ಟಾಗ್ರಾಮ್ ಪರಿಚಯದಿಂದ ದುರಂತ: ಯುವಕ ನೇಣಿಗೆ ಶರಣು, ಮಹಿಳೆ ನಾಪತ್ತೆ
    ,

    ಇನ್‌ಸ್ಟಾಗ್ರಾಮ್ ಪರಿಚಯದಿಂದ ದುರಂತ: ಯುವಕ ನೇಣಿಗೆ ಶರಣು, ಮಹಿಳೆ ನಾಪತ್ತೆ

    ಬೆಂಗಳೂರು: ನಗರದಲ್ಲಿ ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದವರು ಸಾವಿಗೆ ಶರಣಾಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾದಂತಿದೆ. ಶ್ರೀಗಂಧನಗರದಲ್ಲಿಯೂ ಇಂತದ್ದೇ ಘಟನೆ ನಡೆದಿದ್ದು, ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತನನ್ನು ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಎಂದು ಗುರುತಿಸಲಾಗಿದೆ. ನಡೆದಿದ್ದೇನು? ತಿಪ್ಪೇಸ್ವಾಮಿ ಹಾಗೂ ದಾವಣಗೆರೆ ಮೂಲದ ಮಹಿಳೆಯೊಬ್ಬರಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ಈಕೆ ರೀಲ್ಸ್ ಮಾಡುವುದರಲ್ಲಿ ಸಕ್ರಿಯಳಾಗಿದ್ದು, ಇಬ್ಬರೂ ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಬಂದಿದ್ದ ಈಕೆ, ಕಳೆದ ಎರಡು ತಿಂಗಳಿನಿಂದ ತಿಪ್ಪೇಸ್ವಾಮಿ ಜೊತೆ…

    Continue Reading

  • ಬಂಟ್ವಾಳದಲ್ಲಿ ಮನೆ ಬೀಗ ಮುರಿದು ದರೋಡೆ: ಚಿನ್ನಾಭರಣ, ನಗದು ಹಾಗೂ ಬೆಳ್ಳಿ ವಿಗ್ರಹ ಕಳ್ಳತನ
    ,

    ಬಂಟ್ವಾಳದಲ್ಲಿ ಮನೆ ಬೀಗ ಮುರಿದು ದರೋಡೆ: ಚಿನ್ನಾಭರಣ, ನಗದು ಹಾಗೂ ಬೆಳ್ಳಿ ವಿಗ್ರಹ ಕಳ್ಳತನ

    ಬಂಟ್ವಾಳ: ಇಲ್ಲಿನ ಪಚ್ಚಿನಡ್ಕ ಸಮೀಪದ ಗೋರೆಮಾರ್ ನಿವಾಸಿ ಪ್ರಕಾಶ್ ಎಂಬುವವರ ಮನೆಯ ಮುಂಭಾಗದ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು, ಚಿನ್ನಾಭರಣ, ನಗದು ಹಾಗೂ ಬೆಳ್ಳಿ ವಿಗ್ರಹವನ್ನು ದೋಚಿದ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ. ಮನೆಯ ಕಪಾಟಿನ ಲಾಕರ್‌ನಲ್ಲಿದ್ದ ಸುಮಾರು 16 ಗ್ರಾಂ ತೂಕದ ಮೂರು ಜೋಡಿ ಚಿನ್ನದ ಓಲೆಗಳು ಮತ್ತು ಸುಮಾರು 18 ಗ್ರಾಂ ತೂಕದ ಮೂರು ಚಿನ್ನದ ಉಂಗುರಗಳನ್ನು ಕಳ್ಳರು ದೋಚಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 4.13 ಲಕ್ಷ…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed