,

ಕರ್ನಾಟಕದಲ್ಲಿ ಬೃಹತ್ ನಕಲಿ ಪಿಎಚ್‌ಡಿ ಹಗರಣ ಬಯಲು: 249 ಅತಿಥಿ ಉಪನ್ಯಾಸಕರು ಸೇವೆಯಿಂದ ವಜಾ

ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಕಲಿ ಹಾಗೂ ಅಮಾನ್ಯ ಪಿಎಚ್‌ಡಿ (PhD) ಪ್ರಮಾಣಪತ್ರಗಳನ್ನು ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಬೃಹತ್ ನೇಮಕಾತಿ ಅಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆ ಬಯಲಿಗೆಳೆದಿದೆ. ವಿಶ್ವವಿದ್ಯಾಲಯಗಳ ತನಿಖೆಯಿಂದ ಈ ಅಕ್ರಮ ದೃಢಪಟ್ಟಿದ್ದು, ಅಕ್ರಮ ಎಸಗಿದ ಒಟ್ಟು 249 ಅತಿಥಿ ಉಪನ್ಯಾಸಕರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಲು, ಭವಿಷ್ಯದ ನೇಮಕಾತಿಗಳಿಂದ ಖಾಯಂ ಆಗಿ ಬ್ಲ್ಯಾಕ್‌ಲಿಸ್ಟ್ (ಕಪ್ಪುಪಟ್ಟಿ) ಮಾಡಲು ಹಾಗೂ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರ ಆದೇಶಿಸಿದೆ. ವಿಶ್ವವಿದ್ಯಾಲಯಗಳ ಪರಿಶೀಲನೆಯಲ್ಲಿ ಅಕ್ರಮ ಬಯಲು: 2025-26ನೇ…

ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಕಲಿ ಹಾಗೂ ಅಮಾನ್ಯ ಪಿಎಚ್‌ಡಿ (PhD) ಪ್ರಮಾಣಪತ್ರಗಳನ್ನು ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಬೃಹತ್ ನೇಮಕಾತಿ ಅಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆ ಬಯಲಿಗೆಳೆದಿದೆ.

ವಿಶ್ವವಿದ್ಯಾಲಯಗಳ ತನಿಖೆಯಿಂದ ಈ ಅಕ್ರಮ ದೃಢಪಟ್ಟಿದ್ದು, ಅಕ್ರಮ ಎಸಗಿದ ಒಟ್ಟು 249 ಅತಿಥಿ ಉಪನ್ಯಾಸಕರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಲು, ಭವಿಷ್ಯದ ನೇಮಕಾತಿಗಳಿಂದ ಖಾಯಂ ಆಗಿ ಬ್ಲ್ಯಾಕ್‌ಲಿಸ್ಟ್ (ಕಪ್ಪುಪಟ್ಟಿ) ಮಾಡಲು ಹಾಗೂ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರ ಆದೇಶಿಸಿದೆ.

ವಿಶ್ವವಿದ್ಯಾಲಯಗಳ ಪರಿಶೀಲನೆಯಲ್ಲಿ ಅಕ್ರಮ ಬಯಲು:

2025-26ನೇ ಶೈಕ್ಷಣಿಕ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಸುಮಾರು 10,000 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಈ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಸರ್ಕಾರ ಜಾರಿಗೆ ತಂದ ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ, ಆಯ್ಕೆಯಾದ ಅಭ್ಯರ್ಥಿಗಳ ಸ್ನಾತಕೋತ್ತರ ಪದವಿ, ನೆಟ್ (NET), ಕೆ-ಸೆಟ್ (K-SET), ಎಂ.ಫಿಲ್ ಹಾಗೂ ಪಿಎಚ್‌ಡಿ ಪ್ರಮಾಣಪತ್ರಗಳನ್ನು ಸತ್ಯಾಸತ್ಯತೆ ತನಿಖೆಗಾಗಿ ಆಯಾ ವಿಶ್ವವಿದ್ಯಾಲಯಗಳಿಗೆ ಕಳುಹಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಲಾಗಿತ್ತು. ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ವಿಶ್ವವಿದ್ಯಾಲಯಗಳು, 249 ಅಭ್ಯರ್ಥಿಗಳ ಪಿಎಚ್‌ಡಿ ಸರ್ಟಿಫಿಕೇಟ್‌ಗಳು ನಕಲಿ ಅಥವಾ ಅಮಾನ್ಯವಾಗಿವೆ ಎಂದು ದೃಢಪಡಿಸಿ ವರದಿ ನೀಡಿದ್ದವು. ಈ ವರದಿ ಆಧಾರದ ಮೇಲೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಕ್ರಿಮಿನಲ್ ಎಫ್‌ಐಆರ್, ಬ್ಲ್ಯಾಕ್‌ಲಿಸ್ಟ್ ಮತ್ತು ತಕ್ಷಣದ ವಜಾ:

ಅಕ್ರಮ ಎಸಗಿದ 249 ಅತಿಥಿ ಉಪನ್ಯಾಸಕರ ವಿರುದ್ಧ ತಕ್ಷಣವೇ ಪೊಲೀಸ್ ದೂರು ದಾಖಲಿಸಿ ಎಫ್‌ಐಆರ್ (FIR) ಹಾಕಿ, ಒಂದು ವಾರದೊಳಗೆ ಪಾಲನಾ ವರದಿ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಕಾಲೇಜು ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದ್ದಾರೆ.

ಈ ಉಪನ್ಯಾಸಕರು ಹಾಲಿ ಹುದ್ದೆಯನ್ನು ಕಳೆದುಕೊಳ್ಳುವುದರ ಜೊತೆಗೆ, ಪ್ರಸ್ತುತ ನಡೆಯುತ್ತಿರುವ 2026-27ನೇ ಸಾಲಿನ ಆಯ್ಕೆ ಪ್ರಕ್ರಿಯೆ ಸೇರಿದಂತೆ ಭವಿಷ್ಯದಲ್ಲಿ ನಡೆಯುವ ಯಾವುದೇ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ. 

ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತಿ ಹೆಚ್ಚು ಅಕ್ರಮ:

ವಜಾಗೊಂಡಿರುವ 249 ಉಪನ್ಯಾಸಕರ ಪೈಕಿ ಬರೋಬ್ಬರಿ 148 ಉಪನ್ಯಾಸಕರು ಕಲ್ಯಾಣ ಕರ್ನಾಟಕ ಭಾಗದ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ಜಿಲ್ಲಾವಾರು ಪ್ರಕರಣಗಳ ವಿವರ:

  • ಕಲಬುರಗಿ: 33 ಪ್ರಕರಣಗಳು
  • ಯಾದಗಿರಿ: 31 ಪ್ರಕರಣಗಳು
  • ಬೀದರ್: 28 ಪ್ರಕರಣಗಳು
  • ರಾಯಚೂರು: 24 ಪ್ರಕರಣಗಳು
  • ಕೊಪ್ಪಳ: 13 ಪ್ರಕರಣಗಳು
  • ವಿಜಯನಗರ: 9 ಪ್ರಕರಣಗಳು
  • ಬಳ್ಳಾರಿ: 2 ಪ್ರಕರಣಗಳು

ಕೆಲವು ಕಾಲೇಜುಗಳಲ್ಲಿ ಈ ನಕಲಿ ದಾಖಲೆಗಳ ಹಾವಳಿ ವಿಪರೀತವಾಗಿದ್ದು, ಬೀದರ್‌ನ ಒಂದೇ ಸರ್ಕಾರಿ ಕಾಲೇಜಿನಲ್ಲಿ ಬರೋಬ್ಬರಿ 19 ನಕಲಿ ಪಿಎಚ್‌ಡಿ ಪಡೆದು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದದ್ದು ಬೆಳಕಿಗೆ ಬಂದಿದೆ.

ಹಗರಣ ಪತ್ತೆಯಾಗಿದ್ದು ಹೇಗೆ?

ಅತಿಥಿ ಉಪನ್ಯಾಸಕರ ನೇಮಕಾತಿ ನಂತರ ಕಡ್ಡಾಯವಾಗಿ ನಡೆಸಲಾಗುವ ದಾಖಲೆ ಪರಿಶೀಲನಾ ವ್ಯವಸ್ಥೆಯಿಂದಾಗಿ ಈ ನಕಲಿ ಪ್ರಮಾಣಪತ್ರಗಳ ಹಗರಣ ಬಯಲಿಗೆ ಬಂದಿದೆ ಎಂದು ಇಲಾಖೆ ತಿಳಿಸಿದೆ.

ಮೊದಲ ಹಂತದಲ್ಲಿ ಕಾಲೇಜು ಮಟ್ಟದ ಸಮಿತಿಗಳು ದಾಖಲೆಗಳನ್ನು ಪರಿಶೀಲಿಸಿ, ನಂತರ ದೃಢೀಕರಣಕ್ಕಾಗಿ ವಿಶ್ವವಿದ್ಯಾಲಯಗಳಿಗೆ ಕಳುಹಿಸಿದ್ದವು. ವಿಶ್ವವಿದ್ಯಾಲಯಗಳು ಪ್ರಮಾಣಪತ್ರಗಳು ನಕಲಿ ಎಂದು ಗುರುತಿಸಿದ ನಂತರ, ಇಲಾಖೆಯ ಹಿರಿಯ ಅಧಿಕಾರಿಗಳ ಸಮಿತಿಯು ಪ್ರಕರಣಗಳನ್ನು ಪುನರಾವಲೋಕಿಸಿ ಸೇವೆಯಿಂದ ವಜಾಗೊಳಿಸಲು ಆದೇಶಿಸಿದೆ. ಕೆಲವು ವಿರಳ ಪ್ರಕರಣಗಳಲ್ಲಿ ಪ್ರಮಾಣಪತ್ರಗಳು ಅಸಲಿ ಎಂದು ಪ್ರಾಂಶುಪಾಲರು ಸಮರ್ಥಿಸಿಕೊಂಡಿದ್ದು, ಅಂತಹ ಪ್ರಕರಣಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಮರು ಪರಿಶೀಲನೆಗೆ ಆದೇಶಿಸಲಾಗಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed