,

15,000 ಲಂಚ ಪಡೆಯುತ್ತಿದ್ದಾಗಲೇ ಹೆಸ್ಕಾಂ ಅಧಿಕಾರಿ, ಗುತ್ತಿಗೆದಾರ ಲೋಕಾಯುಕ್ತ ಬಲೆಗೆ

ಜಮೀನಿನಲ್ಲಿರುವ ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ₹15,000 ಲಂಚಕ್ಕೆ ಬೇಡಿಕೆಯಿಟ್ಟು, ಹಣ ಸ್ವೀಕರಿಸುತ್ತಿದ್ದ ಹೆಸ್ಕಾಂ (HESCOM) ಸೆಕ್ಷನ್ ಅಧಿಕಾರಿ ಹಾಗೂ ವಿದ್ಯುತ್ ಗುತ್ತಿಗೆದಾರನನ್ನು ಗದಗ ಲೋಕಾಯುಕ್ತ ಪೊಲೀಸರು ಬುಧವಾರ ರೆಡ್‌ಹ್ಯಾಂಡ್‌ ಆಗಿ ಬಲೆಗೆ ಬೀಳಿಸಿದ್ದಾರೆ. ರೋಣ ಹೆಸ್ಕಾಂ ಕಚೇರಿಯ ಸೆಕ್ಷನ್ ಅಧಿಕಾರಿ ಮೆಹಬೂಬ್ ಸಾಬ್ ಆದಿನ್ (ಎ1) ಹಾಗೂ ವಿದ್ಯುತ್ ಗುತ್ತಿಗೆದಾರ ಮಹದೇವ್ ಸಜ್ಜನ್ (ಎ2) ಲೋಕಾಯುಕ್ತರ ಬಲೆಗೆ ಬಿದ್ದ ಆರೋಪಿಗಳಾಗಿದ್ದಾರೆ. ವಿದ್ಯುತ್ ಸಂಪರ್ಕಕ್ಕೆ ಲಂಚದ ಬೇಡಿಕೆ  ರೋಣ ತಾಲೂಕಿನ ನಿವಾಸಿ ಮೇಘಯ್ಯ ಶೇಖರಯ್ಯ ಹಿರೇಮಠ ಎಂಬುವವರು…

ಜಮೀನಿನಲ್ಲಿರುವ ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ₹15,000 ಲಂಚಕ್ಕೆ ಬೇಡಿಕೆಯಿಟ್ಟು, ಹಣ ಸ್ವೀಕರಿಸುತ್ತಿದ್ದ ಹೆಸ್ಕಾಂ (HESCOM) ಸೆಕ್ಷನ್ ಅಧಿಕಾರಿ ಹಾಗೂ ವಿದ್ಯುತ್ ಗುತ್ತಿಗೆದಾರನನ್ನು ಗದಗ ಲೋಕಾಯುಕ್ತ ಪೊಲೀಸರು ಬುಧವಾರ ರೆಡ್‌ಹ್ಯಾಂಡ್‌ ಆಗಿ ಬಲೆಗೆ ಬೀಳಿಸಿದ್ದಾರೆ.

ರೋಣ ಹೆಸ್ಕಾಂ ಕಚೇರಿಯ ಸೆಕ್ಷನ್ ಅಧಿಕಾರಿ ಮೆಹಬೂಬ್ ಸಾಬ್ ಆದಿನ್ (ಎ1) ಹಾಗೂ ವಿದ್ಯುತ್ ಗುತ್ತಿಗೆದಾರ ಮಹದೇವ್ ಸಜ್ಜನ್ (ಎ2) ಲೋಕಾಯುಕ್ತರ ಬಲೆಗೆ ಬಿದ್ದ ಆರೋಪಿಗಳಾಗಿದ್ದಾರೆ.

ವಿದ್ಯುತ್ ಸಂಪರ್ಕಕ್ಕೆ ಲಂಚದ ಬೇಡಿಕೆ 

ರೋಣ ತಾಲೂಕಿನ ನಿವಾಸಿ ಮೇಘಯ್ಯ ಶೇಖರಯ್ಯ ಹಿರೇಮಠ ಎಂಬುವವರು ತಮ್ಮ ಜಮೀನಿನ ಶೆಡ್‌ಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಹೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕೆಲಸ ಮಾಡಿಕೊಡಲು ಸೆಕ್ಷನ್ ಅಧಿಕಾರಿ ಮೆಹಬೂಬ್ ಸಾಬ್ ₹15,000 ಲಂಚದ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು.

ಅಧಿಕಾರಿಯ ಸೂಚನೆಯ ಮೇರೆಗೆ ಮಧ್ಯವರ್ತಿಯಾಗಿದ್ದ ಗುತ್ತಿಗೆದಾರ ಮಹದೇವ್ ಸಜ್ಜನ್, ಅಕ್ಟೋಬರ್ 1 ರಂದು ಫೋನ್‌ಪೇ (PhonePe) ಮೂಲಕ ದೂರುದಾರರಿಂದ ಮೊದಲ ಕಂತಾಗಿ ₹5,000 ಹಣವನ್ನು ಸ್ವೀಕರಿಸಿದ್ದನು. ಉಳಿದ ₹10,000 ಹಣ ನೀಡುವಂತೆ ಅಧಿಕಾರಿ ಪಟ್ಟು ಹಿಡಿದಿದ್ದ ಹಿನ್ನೆಲೆಯಲ್ಲಿ, ಸಂತ್ರಸ್ತ ಮೇಘಯ್ಯ ಹಿರೇಮಠ ಅವರು ಗದಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿಗಳು 

ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು (ಕ್ರೈಂ ನಂ: 08/2026) ಪಕ್ಕಾ ಕಾರ್ಯಾಚರಣೆ ರೂಪಿಸಿದರು. ಬುಧವಾರ ಅಧಿಕಾರಿಯ ಸೂಚನೆಯಂತೆ ಗುತ್ತಿಗೆದಾರ ಮಹದೇವ್ ಸಜ್ಜನ್ ದೂರುದಾರರಿಂದ ಉಳಿದ ₹10,000 ನಗದು ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗದಗ ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್ ಅವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ (PI) ಶ್ರೀಮತಿ ಎಸ್.ಎಸ್. ತೇಲಿ ಹಾಗೂ ಸಿಬ್ಬಂದಿ ಈ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ.

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports