,

ಮಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಭಾರಿ ಅಗ್ನಿ ಅವಘಡ!! ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮ

ಮಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಮನೆಯೊಂದಕ್ಕೆ ಭಾರಿ ಹಾನಿಯಾಗಿದ್ದು, ಓರ್ವನಿಗೆ ಸುಟ್ಟ ಗಾಯಗಳಾಗಿರುವ ಘಟನೆ ಶುಕ್ರವಾರ ತಡರಾತ್ರಿ ಜೋಕಟ್ಟೆಯಲ್ಲಿ ಸಂಭವಿಸಿದೆ. ಈ ದುರ್ಘಟನೆ ದಿ. ಇಜ್ಜಾಕ ಎಂಬುವವರ ಮನೆಯಲ್ಲಿ ನಡೆದಿದ್ದು, ಅವರ ಕಿರಿಯ ಮಗ ಜಾಬಿರ್ ಅವರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯ ಡೈನಿಂಗ್ ಹಾಲ್, ಅಡುಗೆ ಮನೆ, ಒಂದು ಮಲಗುವ ಕೋಣೆ ಹಾಗೂ ಮುಂಭಾಗದ ಹಾಲ್‌ಗೆ…

ಮಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಮನೆಯೊಂದಕ್ಕೆ ಭಾರಿ ಹಾನಿಯಾಗಿದ್ದು, ಓರ್ವನಿಗೆ ಸುಟ್ಟ ಗಾಯಗಳಾಗಿರುವ ಘಟನೆ ಶುಕ್ರವಾರ ತಡರಾತ್ರಿ ಜೋಕಟ್ಟೆಯಲ್ಲಿ ಸಂಭವಿಸಿದೆ.

ಈ ದುರ್ಘಟನೆ ದಿ. ಇಜ್ಜಾಕ ಎಂಬುವವರ ಮನೆಯಲ್ಲಿ ನಡೆದಿದ್ದು, ಅವರ ಕಿರಿಯ ಮಗ ಜಾಬಿರ್ ಅವರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯ ಡೈನಿಂಗ್ ಹಾಲ್, ಅಡುಗೆ ಮನೆ, ಒಂದು ಮಲಗುವ ಕೋಣೆ ಹಾಗೂ ಮುಂಭಾಗದ ಹಾಲ್‌ಗೆ ಭಾರಿ ಹಾನಿಯಾಗಿದೆ. ಬೆಂಕಿಯ ಜ್ವಾಲೆಗೆ ಮನೆಯಲ್ಲಿದ್ದ ಹಲವು ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಘಟನೆ ನಡೆದ ಸಮಯದಲ್ಲಿ ಮನೆಯೊಳಗೆ ಏಳು ಮಂದಿ ನಿದ್ರಿಸುತ್ತಿದ್ದರು. ಮೃತರ ಮಗ ಜಾಬಿರ್, ಅವರ ತಾಯಿ, ಅತ್ತಿಗೆ ಹಾಗೂ ಹಿರಿಯ ಸಹೋದರನ ನಾಲ್ಕು ಮಕ್ಕಳು ಮನೆಯಲ್ಲಿದ್ದರು.

ಬೆಂಕಿ ಕಾಣಿಸಿಕೊಂಡಾಗ ಮುಂಭಾಗದ ಹಾಲ್‌ನಲ್ಲಿ ನಿದ್ರಿಸುತ್ತಿದ್ದ ಜಾಬಿರ್ ಅವರಿಗೆ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವಿಧ ಕೋಣೆಗಳಲ್ಲಿ ನಿದ್ರಿಸುತ್ತಿದ್ದ ಕುಟುಂಬದ ಉಳಿದ ಆರು ಮಂದಿ ಸದಸ್ಯರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ.

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports