, ,

ಕಡಿಮೆ ಬೆಲೆಗೆ ಚಿನ್ನದ ಆಮಿಷ, ರೂ. 12 ಲಕ್ಷ ವಂಚನೆ – ನಕಲಿ ಸನ್ಯಾಸಿ ಸೇರಿ 9 ಮಂದಿ ಬಂಧನ

ಕೊಯಮತ್ತೂರು: ಕಡಿಮೆ ಬೆಲೆಗೆ ಚಿನ್ನದ ಗಟ್ಟಿಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ವ್ಯಾಪಾರಿಯೊಬ್ಬರಿಂದ ರೂ. 12 ಲಕ್ಷ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಸನ್ಯಾಸಿ ಸೇರಿದಂತೆ ಒಂಬತ್ತು ಮಂದಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕಾರುಗಳು ಹಾಗೂ ರೂ. 6 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಕೇರಳದ ಪಾಲಕ್ಕಾಡ್ ಮೂಲದ ಸಂದೀಪ್ (36), ಸಿಜು (35), ಬಿನು (43), ಸತೀಶ್ (37) ಸೇರಿದಂತೆ ತಮಿಳುನಾಡಿನ ವಿವಿಧ ಪ್ರದೇಶಗಳ ಆರೋಪಿಗಳು ಸೇರಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ವೇಲ್ಮುರುಗನ್…

ಕೊಯಮತ್ತೂರು: ಕಡಿಮೆ ಬೆಲೆಗೆ ಚಿನ್ನದ ಗಟ್ಟಿಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ವ್ಯಾಪಾರಿಯೊಬ್ಬರಿಂದ ರೂ. 12 ಲಕ್ಷ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಸನ್ಯಾಸಿ ಸೇರಿದಂತೆ ಒಂಬತ್ತು ಮಂದಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕಾರುಗಳು ಹಾಗೂ ರೂ. 6 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರಲ್ಲಿ ಕೇರಳದ ಪಾಲಕ್ಕಾಡ್ ಮೂಲದ ಸಂದೀಪ್ (36), ಸಿಜು (35), ಬಿನು (43), ಸತೀಶ್ (37) ಸೇರಿದಂತೆ ತಮಿಳುನಾಡಿನ ವಿವಿಧ ಪ್ರದೇಶಗಳ ಆರೋಪಿಗಳು ಸೇರಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ವೇಲ್ಮುರುಗನ್ (83) ಸನ್ಯಾಸಿಯಂತೆ ನಟಿಸಿ ವಂಚನೆಗೆ ನೆರವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈನ ಅರಕ್ಕೋಣಂ ಮೂಲದ ಹಳೆಯ ಕಬ್ಬಿಣದ ವ್ಯಾಪಾರಿ ಜಾನ್ ಪಾಷಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದರು. ವೇಲ್ಮುರುಗನ್‌ನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ ಜಾನ್ ಪಾಷಾಗೆ, ಕೇರಳದಲ್ಲಿ ಕೆಲವರು ಕಡಿಮೆ ಬೆಲೆಗೆ ಚಿನ್ನದ ಗಟ್ಟಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿ ನಂಬಿಸಿದ್ದ ಎನ್ನಲಾಗಿದೆ.

ಬಳಿಕ ಜಾನ್ ಪಾಷಾರನ್ನು ಪಾಲಕ್ಕಾಡ್ ಸಮೀಪದ ಗ್ರಾಮವೊಂದಕ್ಕೆ ಕರೆದೊಯ್ದು, ಗ್ಯಾಂಗ್‌ನ ಬಳಿ ಇರುವುದಾಗಿ ಹೇಳಲಾದ ಚಿನ್ನದ ಗಟ್ಟಿಗಳನ್ನು ತೋರಿಸಲಾಗಿತ್ತು. ಇದನ್ನು ನಂಬಿದ ವ್ಯಾಪಾರಿ, ಚಿನ್ನ ಖರೀದಿಸಲು ಹಣದೊಂದಿಗೆ ಬರುವುದಾಗಿ ಒಪ್ಪಿಕೊಂಡಿದ್ದರು. ಕಳೆದ ಗುರುವಾರ ಜಾನ್ ಪಾಷಾ ಮತ್ತು ವೇಲ್ಮುರುಗನ್ ಕಾರಿನಲ್ಲಿ ಕೇರಳದತ್ತ ತೆರಳಿದ್ದರು. ಆದರೆ, ಆರೋಪಿಗಳು ಅವರನ್ನು ಪೊಲ್ಲಾಚಿ–ಮಣ್ಣೂರು ಪ್ರದೇಶಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಅಲ್ಲಿಂದ ಮತ್ತೊಂದು ಕಾರಿನಲ್ಲಿ ಕೂರಿಸಿ ರಾಮಪಟ್ಟಣಕ್ಕೆ ಕರೆದೊಯ್ದ ಆರೋಪಿಗಳು, ವ್ಯಾಪಾರಿಯಿಂದ ರೂ. 12 ಲಕ್ಷ ಪಡೆದುಕೊಂಡು ಚಿನ್ನ ನೀಡದೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಚಿನ್ನವಿಲ್ಲವೆಂದು ಬೆದರಿಸಿ, ಜಾನ್ ಪಾಷಾರನ್ನು ದಾರಿಯಲ್ಲೇ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ವಂಚನೆಗೆ ಒಳಗಾದ ಜಾನ್ ಪಾಷಾ ಪೊಲ್ಲಾಚಿ ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸಿದರು.

ತನಿಖೆಯ ವೇಳೆ ಸನ್ಯಾಸಿಯಂತೆ ನಟಿಸುತ್ತಿದ್ದ ವೇಲ್ಮುರುಗನ್ ಗ್ಯಾಂಗ್‌ನ ಪ್ರಮುಖ ಕೊಂಡಿ ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಿ, ಅವರಿಂದ ರೂ. 6 ಲಕ್ಷ ನಗದು ಹಾಗೂ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports