, ,

ಮಂಗಳೂರು: ಶೇರ್ ಟ್ರೇಡಿಂಗ್‌ನಲ್ಲಿ ದುಪ್ಪಟ್ಟು ಲಾಭದ ಆಮಿಷ- ₹12.87 ಲಕ್ಷ ವಂಚನೆ

ಮಂಗಳೂರು: ವಾಟ್ಸ್‌ಆ್ಯಪ್ ಗ್ರೂಪ್ ಹಾಗೂ ‘JB X One’ ಹೆಸರಿನ ನಕಲಿ ಆ್ಯಪ್ ಮೂಲಕ ಶೇರ್ ಟ್ರೇಡಿಂಗ್‌ನಲ್ಲಿ ದುಪ್ಪಟ್ಟು ಲಾಭಾಂಶ ನೀಡುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ₹12,87,108 ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ 44 ವರ್ಷದ ವ್ಯಕ್ತಿಗೆ ಜೂನ್ 13, 2026 ರಂದು ವಾಟ್ಸ್‌ಆ್ಯಪ್‌ನಲ್ಲಿ ‘Julius Baer Group Ltd’ ಕಂಪನಿಯ ಹೆಸರಿನ ‘B1062 Prime Leaders’ ಎಂಬ ಗ್ರೂಪ್‌ಗೆ ಸೇರಿಸಲಾಗಿತ್ತು. ಅದರಲ್ಲಿ ಅಪರಿಚಿತ ವ್ಯಕ್ತಿಗಳು ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ…

ಮಂಗಳೂರು: ವಾಟ್ಸ್‌ಆ್ಯಪ್ ಗ್ರೂಪ್ ಹಾಗೂ ‘JB X One’ ಹೆಸರಿನ ನಕಲಿ ಆ್ಯಪ್ ಮೂಲಕ ಶೇರ್ ಟ್ರೇಡಿಂಗ್‌ನಲ್ಲಿ ದುಪ್ಪಟ್ಟು ಲಾಭಾಂಶ ನೀಡುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ₹12,87,108 ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ 44 ವರ್ಷದ ವ್ಯಕ್ತಿಗೆ ಜೂನ್ 13, 2026 ರಂದು ವಾಟ್ಸ್‌ಆ್ಯಪ್‌ನಲ್ಲಿ ‘Julius Baer Group Ltd’ ಕಂಪನಿಯ ಹೆಸರಿನ ‘B1062 Prime Leaders’ ಎಂಬ ಗ್ರೂಪ್‌ಗೆ ಸೇರಿಸಲಾಗಿತ್ತು. ಅದರಲ್ಲಿ ಅಪರಿಚಿತ ವ್ಯಕ್ತಿಗಳು ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ಮೇಸೇಜ್ ಮಾಡುತ್ತಿದ್ದರು. ತದನಂತರ ‘ಸೋನಲ್ ಜಗನ್ನಾಥ್’ ಹಾಗೂ ಇತರ ಅಪರಿಚಿತರು ಕರೆ ಮಾಡಿ, ‘JB X One’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಸಿ ಹೂಡಿಕೆಗೆ ಪ್ರಚೋದಿಸಿದ್ದರು.

ಆರಂಭದಲ್ಲಿ ನಂಬಿಕೆ ಬರಲೆಂದು ಜುಲೈ 14 ರಂದು ಸಂತ್ರಸ್ತರು ₹5,000 ಯುಪಿಐ (UPI) ಮಾಡಿದಾಗ, ವಂಚಕರು ಲಾಭಾಂಶದ ಸಮೇತ ₹5,250 ಹಣವನ್ನು ವಾಪಸ್ ನೀಡಿ ಅವರ ನಂಬಿಕೆ ಗಳಿಸಿದ್ದರು. ಇದರಿಂದ ಆಕರ್ಷಿತರಾದ ಅವರು ಹೆಚ್ಚಿನ ಲಾಭದ ಆಸೆಗೆ ಬಿದ್ದು, ಜುಲೈ 14 ರಿಂದ ಆಗಸ್ಟ್ 03 ರವರೆಗಿನ ಅವಧಿಯಲ್ಲಿ ಹಂತ ಹಂತವಾಗಿ NEFT ಹಾಗೂ RTGS ಮೂಲಕ ಒಟ್ಟು ₹12,87,108 ಹಣವನ್ನು ಅಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.

ಬಳಿಕ ಹೂಡಿಕೆ ಮಾಡಿದ ಹಣ ಹಾಗೂ ಲಾಭವನ್ನು ಹಿಂಪಡೆಯಲು ಯತ್ನಿಸಿದಾಗ, ವಂಚಕರು ತೆರಿಗೆ ಮತ್ತು ಇತರೆ ಶುಲ್ಕಗಳ ಹೆಸರಿನಲ್ಲಿ ಇನ್ನಷ್ಟು ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಹಣ ಡ್ರಾ ಮಾಡಲು ಸಾಧ್ಯವಾಗದೇ ಇದ್ದಾಗ ತಾವು ಆನ್‌ಲೈನ್ ವಂಚನೆಗೆ ಒಳಗಾಗಿರುವುದು ಸಂತ್ರಸ್ತರಿಗೆ ಅರಿವಾಗಿದೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed