, ,

ಬಾಲ್ಕನಿ ಕುಸಿದು ಮೃತಪಟ್ಟ ಶಮ್ಮಾಶ್ ಕುಟುಂಬಕ್ಕೆ ನ್ಯಾಯ ಯಾವಾಗ?

ಮಂಗಳೂರು: ಎಂಆರ್‌ಪಿಎಲ್ ದುರಂತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಿಸಿರುವುದು ಸ್ವಾಗತಾರ್ಹ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಇಂತಹ ನೆರವು ದೊರೆಯುವುದು ಮಾನವೀಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜು ವಿದ್ಯಾರ್ಥಿ ಸಂಘಟನೆಯ ಕಾರ್ಯಕ್ರಮದ ವೇಳೆ ಬಾಲ್ಕನಿ ಕುಸಿದು ಮೃತಪಟ್ಟ ಶಮ್ಮಾಶ್ ಅವರ ಕುಟುಂಬಕ್ಕೆ ಪರಿಹಾರ ಒದಗಿಸುವ ವಿಚಾರದಲ್ಲಿ ಮೌನ ಏಕೆ? ಶಮ್ಮಾಶ್ ಅವರ ಕುಟುಂಬ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದೆ. ತಂದೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ದುಡಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಬಾಡಿಗೆ…

ಮಂಗಳೂರು: ಎಂಆರ್‌ಪಿಎಲ್ ದುರಂತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಿಸಿರುವುದು ಸ್ವಾಗತಾರ್ಹ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಇಂತಹ ನೆರವು ದೊರೆಯುವುದು ಮಾನವೀಯ ದೃಷ್ಟಿಯಿಂದ ಮಹತ್ವದ್ದಾಗಿದೆ.

ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜು ವಿದ್ಯಾರ್ಥಿ ಸಂಘಟನೆಯ ಕಾರ್ಯಕ್ರಮದ ವೇಳೆ ಬಾಲ್ಕನಿ ಕುಸಿದು ಮೃತಪಟ್ಟ ಶಮ್ಮಾಶ್ ಅವರ ಕುಟುಂಬಕ್ಕೆ ಪರಿಹಾರ ಒದಗಿಸುವ ವಿಚಾರದಲ್ಲಿ ಮೌನ ಏಕೆ?

ಶಮ್ಮಾಶ್ ಅವರ ಕುಟುಂಬ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದೆ. ತಂದೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ದುಡಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿರುವ ಈ ಕುಟುಂಬದ ಜವಾಬ್ದಾರಿಯನ್ನು ಮನೆಯ ಹಿರಿಯ ಮಗಳೊಬ್ಬಳೇ ಹೊತ್ತುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕರು ಶಮ್ಮಾಶ್ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಸಾಂತ್ವನದ ಜೊತೆಗೆ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವ ಪ್ರಯತ್ನಗಳೂ ನಡೆಯಬೇಕಲ್ಲವೇ?

ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರು, ಸಂಘಟನೆಗಳು ಮತ್ತು ಜಿಲ್ಲಾ ಮಟ್ಟದ ಮುಸ್ಲಿಂ ಸಮಿತಿಗಳು ಈ ವಿಚಾರದಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಲ್ಲವೇ?

ಸಮುದಾಯದ ಯುವಕನೊಬ್ಬ ದುರಂತದಲ್ಲಿ ಪ್ರಾಣ ಕಳೆದುಕೊಂಡಾಗ, ಆತನ ಬಡ ಕುಟುಂಬಕ್ಕೆ ನ್ಯಾಯ ಮತ್ತು ಆರ್ಥಿಕ ನೆರವು ದೊರಕಿಸಲು ಒಗ್ಗಟ್ಟಿನ ಪ್ರಯತ್ನ ಏಕೆ ಕಾಣಿಸುತ್ತಿಲ್ಲ?

ಮುಸ್ಲಿಂ ಸಮುದಾಯಕ್ಕೆ ಅನ್ಯ ಧರ್ಮದವರು ಅವಹೇಳನ ಇನ್ನಿತರ ವಿಷಯಗಳನ್ನು ಎತ್ತಿ ಸಮುದಾಯದ ಬಾವುಟವನ್ನು ಹಿಡಿದುಕೊಂಡು ನಗರದಲ್ಲಿ ಪ್ರತಿಭಟನೆ ಮಾಡಿ ಮೈಕ್ ನಲ್ಲಿ ನಾಲಗೆ ಹರಿಬಿಡುವ ಸಮುದಾಯದ ನಾಯಕರು ಎಂದು ಎದೆ ಹುಬ್ಬಿಸುವವರಿಗೆ ಈ ಬಡ ವಿದ್ಯಾರ್ಥಿ ಕಾಣಲಿಲ್ಲವೇ..ಅಥವಾ ಇದರಲ್ಲಿ ರಾಜಕೀಯ ಲಾಭ ಇಲ್ಲ ಎಂದು ಮೌನ ತಾಳಿದ್ದಾರೆಯೇ??

ಚುನಾವಣೆಯ ಸಂದರ್ಭದಲ್ಲಿ ಮಾತ್ರ ಸಮುದಾಯದ ಬಗ್ಗೆ ಕಾಳಜಿ ತೋರಿಸುವುದಕ್ಕಿಂತ, ಸಂಕಷ್ಟದ ಸಮಯದಲ್ಲಿ ಕುಟುಂಬದ ಬೆನ್ನಿಗೆ ನಿಲ್ಲುವುದು ಮುಖ್ಯವಲ್ಲವೇ?

ನಮ್ಮ ಆಗ್ರಹವೇನು?

  • ಶಮ್ಮಾಶ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಜನಪ್ರತಿನಿಧಿಗಳು ಮುಂದಾಗಬೇಕು.
  • ಸಂಬಂಧಪಟ್ಟ ಅಧಿಕಾರಿಗಳು ಘಟನೆಯ ಹೊಣೆಗಾರಿಕೆ ಮತ್ತು ಪರಿಹಾರದ ವಿಚಾರವನ್ನು ಪರಿಶೀಲಿಸಬೇಕು.
  • ಮುಸ್ಲಿಂ ಸಮುದಾಯದ ನಾಯಕರು ಹಾಗೂ ಸಂಘಟನೆಗಳು ಈ ಕುಟುಂಬಕ್ಕೆ ನ್ಯಾಯ ದೊರಕಿಸಲು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು.

ನಾಯಕರೇ, ದಯವಿಟ್ಟು ಈ ಬಡ ಕುಟುಂಬದ ನೋವಿಗೆ ಸ್ಪಂದಿಸಿ. ಶಮ್ಮಾಶ್ ಅವರ ಕುಟುಂಬವನ್ನು ಕಡೆಗಣಿಸಬೇಡಿ. ಅವರಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿ.

ನಮ್ಮ ವಾಹಿನಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಕುಟುಂಬದ ಹಿತೈಷಿಗಳು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಬೇಕು ಎಂದು ತಮ್ಮ ಅಳಲು ತೊಡಿಕೊಂದಿದ್ದಾರೆ

ಒಂದು ಕುಟುಂಬಕ್ಕೆ ಸಿಕ್ಕ ನ್ಯಾಯ ಮತ್ತೊಂದು ಕುಟುಂಬಕ್ಕೂ ಸಿಗಬೇಕು. ಬಡವರ ಕಣ್ಣೀರಿಗೆ ಬೆಲೆ ಸಿಗಬೇಕು.

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports